ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದ ದೃಶ್ಯಂ ಸಿನಿಮಾ ನಿರ್ದೇಶಕ
ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗವಾಹನಗಳು ಜನಪ್ರಿಯವಾಗುತ್ತಿವೆ. ಕಳೆದ ಒಂದು ವರ್ಷದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮತ್ತು ಕಾರುಗಳು ಬೇಡಿಕೆಯು ದ್ವಿಗುಣವಾಗಿ ಏರಿಕೆಯಾಗಿದೆ. ಇತ್ತೀಚೆಗೆ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ.

ಹಲವಾರು ಸೆಲೆಬ್ರಿಟಿಗಳು ಕೂಡ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುತ್ತಿದ್ದಾರೆ. ಮರ್ಸಿಡಿಸ್ ಬೆಂಝ್ ನಂತಹ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇದರ ನಡುವೆ ಮಲಯಾಳಂ ಚಲನಚಿತ್ರ ನಿರ್ದೇಶಕ ಜೀತು ಜೋಸೆಫ್ ಇತ್ತೀಚೆಗೆ ತಮ್ಮ ಗ್ಯಾರೇಜ್‌ಗೆ ಎರಡು ಎಲೆಕ್ಟ್ರಿಕ್ ವಾಹನಗಳನ್ನು ಸೇರಿಸಿದ್ದಾರೆ ಅವುಗಳಲ್ಲಿ ಒಂದು ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮತ್ತು ಇನ್ನೊಂದು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.

ಜೀತು ಜೋಸೆಫ್ ಮಲಯಾಳಂ ಚಿತ್ರರಂಗದ ಜನಪ್ರಿಯ ಚಲನಚಿತ್ರ ನಿರ್ದೇಶಕ. ಕ್ರೇಜಿಸ್ಟಾರ್ ನಟನೆಯ ದೃಶ್ಯ' ಚಿತ್ರದ ಮೂಲ ಸಿನಿಮಾ ಮಲಯಾಳಂನ ದೃಶ್ಯಂ' ನಿರ್ದೇಶಿಸಿ ದಾಖಲೆ ಮೂಡಿಸಿದವರು ಜೀತು ಜೋಸೆಫ್. ಹಿಂದಿ ಸೇರಿದಂತೆ ಭಾರತದ 5 ಭಾಷೆಗಳಲ್ಲಿ ಯಶಸ್ವಿ ಸರಣಿ ಸಿನಿಮಾ ಎಂದರೆ ದೃಶ್ಯಂ. ಮಲಯಾಳಂನಲ್ಲಿ ದೃಶ್ಯಂ' ಸಿನಿಮಾದ ಮೂರನೇ ಭಾಗ ಕೂಡ ಬರಲಿದೆ ಎಂದು ಹೇಳಲಾಗುತ್ತಿದೆ.

ನಿರ್ದೇಶಕ ಜೀತು ಜೋಸೆಫ್ ಖರೀದಿಸಿದ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ಬ್ರ್ಯಾಂಡ್‌ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 4.4 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ, ಇದನ್ನು 3 ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಜೋಡಿಸಲಾಗಿದೆ.

ಈ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ವಿಎಸ್ ಸ್ಮಾರ್ಟ್ ಕನೆಕ್ಟ್ ಪ್ಲಾಟ್‌ಫಾರ್ಮ್, ಸುಧಾರಿತ ಟಿಎಫ್‌ಟಿ ಕ್ಲಸ್ಟರ್ ಮತ್ತು ಟಿವಿಎಸ್ ಐಕ್ಯೂಬ್ ಅಪ್ಲಿಕೇಶನ್ ಅನ್ನು ಒಳಗೊಂಡಿದೆ. ಈ ಅಪ್ಲಿಕೇಶನ್ ಜಿಯೋ-ಫೆನ್ಸಿಂಗ್, ರಿಮೋಟ್ ಬ್ಯಾಟರಿ ಚಾರ್ಜ್ ಸ್ಟೇಟಸ್, ನ್ಯಾವಿಗೇಷನ್ ಅಸಿಸ್ಟ್, ಲಾಸ್ಟ್ ಪಾರ್ಕ್ ಲೋಕೆಷನ್ ಅನ್ನು ಕಾಲ್, ಎಸ್‌ಎಂಎಸ್ ಅಲರ್ಟ್ ಮತ್ತು ಇನ್ನಿತರ ಫೀಚರ್ಸ್ ಗಳನ್ನು ಒಳಗೊಂಡಿದೆ.

ಈ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಕ್ಯೂ-ಪಾರ್ಕ್ ಅಸಿಸ್ಟ್, ಮಲ್ಟಿ-ಸೆಲೆಕ್ಟ್ ಎಕಾನಮಿ ಮತ್ತು ಪವರ್ ಮೋಡ್, ಡೇ&ನೈಟ್ ಡಿಸ್ ಪ್ಲೇಮ್ ರಿಜನರೇಟಿವ್ ಬ್ರೇಕಿಂಗ್ ಮುಂತಾದ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಗಳು, ಆಲ್-ಎಲ್ಇಡಿ ಟೈಲ್-ಲ್ಯಾಂಪ್ ಗಳು ಮತ್ತು ಪ್ರಕಾಶಮಾನವಾದ ಲೋಗೊವನ್ನು ಹೊಂದಿದೆ.

ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿರುವ ಎಥರ್ 450ಎಕ್ಸ್ , ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಒಕಿನಾವ ಸ್ಕೂಟರ್‌ಗಳಿಗೆ ಪೈಪೋಟಿ ನೀಡುತ್ತಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಇನ್ನು ಇವರು ಖರೀದಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿ ಬಗ್ಗೆ ಹೇಳುವುದಾದರೆ, ಎಂಜಿ ಮೋಟಾರ್ ಇಂಡಿಯಾ ಕಳೆದ ವರ್ಷ ಜನವರಿಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಮಾದರಿಯಾದ ಜೆಡ್ಎಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಆ ಸಮಯದಲ್ಲಿ ದೇಶದಲ್ಲಿ ಬ್ರ್ಯಾಂಡ್‌ನ ಎರಡನೇ ಮಾದರಿಯಾಗಿ ಈ ಜೆಡ್ಎಸ್ ಇವಿ ಮಾದರಿಯನ್ನು ಬಿಡುಗಡೆಗೊಳಿಸಿತ್ತು.

ಈ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ಹ್ಯುಂಡೈ ಕ್ರೆಟಾದಷ್ಟು ದೊಡ್ಡದಾಗಿದೆ, ಇದರ ಉದ್ದ 4,314 ಎಂಎಂ, ಅಗಲ 1,809 ಎಂಎಂ ಮತ್ತು ಎತ್ತರ 1,644 ಎಂಎಂ ಆಗಿದೆ. ಈ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯಲ್ಲಿ 4.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ.

ಇದನ್ನು ಮೂರು-ಹಂತದ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್‌ಗೆ ಜೋಡಿಸಲಾಗಿದೆ. ಇದು ಒಟ್ಟು 142.7 ಬಿಹೆಚ್‍ಪಿ ಮತ್ತು ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ ಝಡ್ಎಸ್ ಇವಿ ಎಸ್‍ಯುವಿಯು 419 ಕಿ.ಮೀ ರೇಂಜ್ ಅನ್ನು ಒದಗಿಸುತ್ತದೆ.

ಈ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ. ಇದರಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಇಬಿಡಿ ಯೊಂದಿಗೆ ಎಬಿಎಸ್, ಹಿಲ್ ಸ್ಟಾರ್ಟ್ ಅಸಿಸ್ಟ್, ರಿಯರ್ ಡಿಸ್ಕ್ ಬ್ರೇಕ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಹೀಟೆಡ್ ಒಆರ್ವಿಎಂ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಕ್ಯಾಮರಾವನ್ನು ಹೊಂದಿದೆ.

ಎಂಜಿ ಕಂಪನಿಯು ಚೀನಾದ SAIC ಮಾಲೀಕತ್ವದ ಜೆಡ್ಎಸ್ ಎಲೆಕಕ್ಟ್ರಿಕ್ ಕಾರಿನ ಒಟ್ಟಾರೆ ರೇಂಜ್ ಅನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು 419 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀಗೆ ಹೆಚ್ಚಿಸಬಹುದು. ಇನ್ನು ಎಂಜಿ ಮೋಟಾರ್ ಇಂಡಿಯಾ ಕಂಪನಿಯು ತನ್ನ ಇವಿ(ಎಲೆಕ್ಟ್ರಿಕ್ ವೆಹಿಕಲ್) ಪೋರ್ಟ್ಫೋಲಿಯೊವನ್ನು ಹೊಸ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ವಿಸ್ತರಿಸಲು ಮುಂದಾಗಿದೆ. ವರದಿಗಳ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಹೊಸ ಎಂಜಿ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.


Click it and Unblock the Notifications