ರ‍್ಯಾಲಿ ಕ್ಯಾಬಿನ್‌ನೊಂದಿಗೆ ಮಾಡಿಫೈಗೊಂಡ ಜಿಪ್ಸಿ ಎಸ್‌ಯುವಿ

ಮಾರುತಿ ಕಂಪನಿಯು ಇದುವರೆಗೂ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುವ ಅಪ್ರತಿಮ ಎಸ್‌ಯುವಿಗಳಲ್ಲಿ ಮಾರುತಿ ಜಿಪ್ಸಿ ಸಹ ಒಂದು. ಮಾರುತಿ ಜಿಪ್ಸಿ ಎಸ್‌ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿವಿಧ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

ರ‍್ಯಾಲಿ ಕ್ಯಾಬಿನ್‌ನೊಂದಿಗೆ ಮಾಡಿಫೈಗೊಂಡ ಜಿಪ್ಸಿ ಎಸ್‌ಯುವಿ

ಜಿಪ್ಸಿ ಯಾವುದೇ ರೀತಿಯ ಭೂಪ್ರದೇಶದಲ್ಲೂ ಚಲಿಸಬಲ್ಲ 4×4 ಎಸ್‌ಯುವಿಯಾಗಿದೆ. ಜಿಪ್ಸಿ ಎಸ್‌ಯುವಿಯನ್ನು ರ‍್ಯಾಲಿ ತಂಡಗಳು ಹಾಗೂ ಆಫ್-ರೋಡ್ ಉತ್ಸಾಹಿಗಳು ಹೆಚ್ಚು ಬಳಸುತ್ತಾರೆ. ಭಾರತದಲ್ಲಿ ಹಲವಾರು ಜಿಪ್ಸಿ ಎಸ್‌ಯುವಿಗಳನ್ನು ಮಾಡಿಫೈಗೊಳಿಸಲಾಗಿದೆ.

ರ‍್ಯಾಲಿ ಕ್ಯಾಬಿನ್‌ನೊಂದಿಗೆ ಮಾಡಿಫೈಗೊಂಡ ಜಿಪ್ಸಿ ಎಸ್‌ಯುವಿ

ಈಗ ಮತ್ತೊಂದು ಜಿಪ್ಸಿ ಎಸ್‌ಯುವಿಯನ್ನು ಮಾಡಿಫೈಗೊಳಿಸಿರುವ ವೀಡಿಯೊವನ್ನು ಸ್ಮಾಲ್ ಟೌನ್ ರೈಡರ್ ಎಂಬ ಯೂಟ್ಯೂಬ್ ಚಾನೆಲ್‌ ಅಪ್‌ಲೋಡ್ ಮಾಡಿದೆ. ಈ ಜಿಪ್ಸಿಯ ಮಾಲೀಕರು ಹಲವಾರು ರ‍್ಯಾಲಿಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ರ‍್ಯಾಲಿ ಕ್ಯಾಬಿನ್‌ನೊಂದಿಗೆ ಮಾಡಿಫೈಗೊಂಡ ಜಿಪ್ಸಿ ಎಸ್‌ಯುವಿ

ಮಾಡಿಫೈಗೊಂಡಿರುವ ಈ ಎಸ್‌ಯುವಿಯು ಬ್ಲಾಕ್ ಇನ್ಸರ್ಟ್'ನೊಂದಿಗೆ ಮಡ್ ಬ್ರೌನ್ ಬಣ್ಣವನ್ನು ಹೊಂದಿದ್ದು, ನೋಡಿದ ತಕ್ಷಣವೇ ಆಕರ್ಷಿಸುತ್ತದೆ. ಮುಂಭಾಗದಲ್ಲಿ ಎಲ್‌ಇಡಿ ರಿಂಗ್'ಗಳನ್ನು ಹೊಂದಿರುವ ಆಫ್ಟರ್ ಮಾರ್ಕೆಟ್ ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ.

ರ‍್ಯಾಲಿ ಕ್ಯಾಬಿನ್‌ನೊಂದಿಗೆ ಮಾಡಿಫೈಗೊಂಡ ಜಿಪ್ಸಿ ಎಸ್‌ಯುವಿ

ಈ ಎಸ್‌ಯುವಿಯಲ್ಲಿ ಹೊಸದಾಗಿ ಟರ್ನ್ ಇಂಡಿಕೇಟರ್'ಗಳನ್ನು ಹೊಂದಿರುವ ಆಫ್ ರೋಡ್ ಬಂಪರ್ ಅಳವಡಿಸಲಾಗಿದೆ. ಮುಂಭಾಗದಲ್ಲಿ ಎಲೆಕ್ಟ್ರಾನಿಕ್ ವಿಂಚ್ ಅನ್ನು ಸಹ ನೀಡಲಾಗಿದೆ.

ರ‍್ಯಾಲಿ ಕ್ಯಾಬಿನ್‌ನೊಂದಿಗೆ ಮಾಡಿಫೈಗೊಂಡ ಜಿಪ್ಸಿ ಎಸ್‌ಯುವಿ

ಈ ಎಸ್‌ಯುವಿಯಲ್ಲಿ ಮಹೀಂದ್ರಾ ಬೊಲೆರೊದಲ್ಲಿರುವಂತಹ ಒಆರ್‌ವಿಎಂ ಅಳವಡಿಸಲಾಗಿದೆ. ಮಾಡಿಫೈಗೊಂಡಿರುವ ಈ ಜಿಪ್ಸಿಯ ಪ್ರಮುಖ ಅಂಶವೆಂದರೆ ಕ್ಯಾಬಿನ್. ಈ ಕ್ಲೋಸ್ಡ್ ಕ್ಯಾಬಿನ್ ಅನ್ನು ಹಿಂಭಾಗದವರೆಗೆ ವಿಸ್ತರಿಸಿಲಾಗಿದೆ.

ರ‍್ಯಾಲಿ ಕ್ಯಾಬಿನ್‌ನೊಂದಿಗೆ ಮಾಡಿಫೈಗೊಂಡ ಜಿಪ್ಸಿ ಎಸ್‌ಯುವಿ

ಈ ರೀತಿಯ ಕ್ಯಾಬಿನ್‌ಗಳನ್ನು ರ‍್ಯಾಲಿ ಕ್ಯಾಬಿನ್‌ಗಳು ಎಂದು ಕರೆಯಲಾಗುತ್ತದೆ. ಈ ಜಿಪ್ಸಿಯಲ್ಲಿದ್ದ ಕಸ್ಟಮ್ ಗ್ರಾಫಿಕ್ಸ್, ಆಫ್ಟರ್ ಮಾರ್ಕೆಟ್ ವ್ಹೀಲ್ ಹಾಗೂ ಆಲ್ ಟೆರೈನ್ ಟಯರ್'ಗಳನ್ನು ಸಹ ಮಾಡಿಫೈಗೊಳಿಸಲಾಗಿದೆ.

ರ‍್ಯಾಲಿ ಕ್ಯಾಬಿನ್‌ನೊಂದಿಗೆ ಮಾಡಿಫೈಗೊಂಡ ಜಿಪ್ಸಿ ಎಸ್‌ಯುವಿ

ಜಿಪ್ಸಿಯನ್ನು ಈ ರೀತಿ ಮಾಡಿಫೈಗೊಳಿಸಲು ಸುಮಾರು ರೂ.5 ಲಕ್ಷದಿಂದ ರೂ.6 ಲಕ್ಷಗಳವರೆಗೆ ಖರ್ಚಾಗುತ್ತದೆ. ಮಾರುತಿ ಜಿಪ್ಸಿ ಎಸ್‌ಯುವಿಯನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತಿತ್ತು.

ಜಿಪ್ಸಿ ಎಸ್‌ಯುವಿಯಲ್ಲಿ ಅಳವಡಿಸಿರುವ 1,298 ಸಿಸಿ ಪೆಟ್ರೋಲ್ ಎಂಜಿನ್ 77 ಬಿ‌ಹೆಚ್‌ಪಿ ಪವರ್ ಹಾಗೂ 103 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜಿಪ್ಸಿ ಎಸ್‌ಯುವಿಯನ್ನು ಮ್ಯಾನುಯಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತಿತ್ತು.

ರ‍್ಯಾಲಿ ಕ್ಯಾಬಿನ್‌ನೊಂದಿಗೆ ಮಾಡಿಫೈಗೊಂಡ ಜಿಪ್ಸಿ ಎಸ್‌ಯುವಿ

ಮಾರುತಿ ಸುಜುಕಿ ಕಂಪನಿಯು ಈಗ ಭಾರತದಲ್ಲಿ ಜಿಪ್ಸಿ ಎಸ್‌ಯುವಿಯ ಉತ್ಪಾದನೆಯನ್ನು ಆರಂಭಿಸಿದೆ. ಶೀಘ್ರದಲ್ಲೇ ಹೊಸ ಜಿಪ್ಸಿ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

Most Read Articles

Kannada
English summary
Maruti Gypsy SUV modified with rally cabin. Read in Kannada.
Story first published: Monday, June 14, 2021, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X