ರೊಚ್ಚಿಗೆದ್ದ ಗೂಳಿ ಆರ್ಭಟಕ್ಕೆ ಪುಡಿಪುಡಿಯಾದ ಮಾರುತಿ ಆಲ್ಟೋ ಕೆ10

ಕರ್ನಾಟಕದಲ್ಲಿ ಮಾರುತಿ ಸುಜುಕಿ ಆಲ್ಟೊ ಕೆ10 ಕಾರೊಂದು ಗೂಳಿಯ ದಾಳಿಗೆ ತುತ್ತಾಗಿದೆ. ಗೂಳಿಯೊಂದು ಹ್ಯಾಚ್‌ಬ್ಯಾಕ್ ಕಾರ್ ಅನ್ನು, ಕಾರಿನ ತೂಕವು ಏನೇನೂ ಅಲ್ಲವೆಂಬಂತೆ ಎಸೆಯುವ ವೀಡಿಯೊ ವೈರಲ್ ಆಗಿದೆ. ಈ ಘಟನೆಯು ಎಲ್ಲಿ ನಡೆದಿದೆ ಎಂಬುದು ಖಚಿತವಾಗದಿದ್ದರೂ, ಕರ್ನಾಟಕದ ಎರಡನೇ ಅಥವಾ ಮೂರನೇ ಹಂತದ ನಗರದಲ್ಲಿ ನಡೆದಿರುವ ಸಾಧ್ಯತೆಗಳಿವೆ.

ರೊಚ್ಚಿಗೆದ್ದ ಗೂಳಿ ಆರ್ಭಟಕ್ಕೆ ಪುಡಿಪುಡಿಯಾದ ಮಾರುತಿ ಆಲ್ಟೋ ಕೆ10

ಪ್ರಕೃತಿಗೆ ಮನುಷ್ಯನ ಮೇಲೆ ಯಾವುದೇ ಕೋಪವಿಲ್ಲ. ಕೆಲವೊಮ್ಮೆ, ಪ್ರಕೃತಿಯು ತನ್ನ ಕೋಪವನ್ನು ಚಂಡಮಾರುತ, ಭೂಕಂಪ ಅಥವಾ ಸುಂಟರಗಾಳಿಯ ರೂಪದಲ್ಲಿ ಹೊರ ಹಾಕುತ್ತದೆ. ಬೇರೆ ಸಂದರ್ಭಗಳಲ್ಲಿ, ಕೆಲವು ಪ್ರಾಣಿಗಳು ಹಾನಿಯನ್ನುಂಟುಮಾಡುತ್ತವೆ, ಮಾನವರು ಪ್ರೀತಿಸುವ ವಸ್ತುಗಳನ್ನು ನಾಶಮಾಡುತ್ತವೆ.

ರೊಚ್ಚಿಗೆದ್ದ ಗೂಳಿ ಆರ್ಭಟಕ್ಕೆ ಪುಡಿಪುಡಿಯಾದ ಮಾರುತಿ ಆಲ್ಟೋ ಕೆ10

ಕೇರಳದಲ್ಲಿ ಆನೆಯೊಂದು ಆಟೋರಿಕ್ಷಾ ಹಾಗೂ ಹಲವು ದ್ವಿಚಕ್ರ ವಾಹನಗಳನ್ನು ನಾಶಗೊಳಿಸಿತ್ತು. ಆದರೆ ಈ ಬಾರಿಯ ಘಟನೆಯು ಜನನಿಬಿಡ ಪ್ರದೇಶದಲ್ಲಿ ನಡೆದಿರುವುದು ವಿಶೇಷ. ಜನಪ್ರಿಯ ಚಲನಚಿತ್ರ ಹಾಗೂ ಅದರಲ್ಲಿನ ಪಾತ್ರದ ಹೆಸರನ್ನು ಉಲ್ಲೇಖಿಸಿ ಕನ್ನಡದಲ್ಲಿ ಬಾಹುಬಲಿ ಎಂಬ ಶೀರ್ಷಿಕೆ ನೀಡಿ, ಎಡಿಟ್ ಮಾಡದ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ರೊಚ್ಚಿಗೆದ್ದ ಗೂಳಿ ಆರ್ಭಟಕ್ಕೆ ಪುಡಿಪುಡಿಯಾದ ಮಾರುತಿ ಆಲ್ಟೋ ಕೆ10

ಈ ವೀಡಿಯೊವನ್ನು 1,700ಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ. ಈ ವೀಡಿಯೊ ಹಿಂಭಾಗದಿಂದ ಕಾರಿನ ಮೇಲೆ ಗೂಳಿ ದಾಳಿ ಮಾಡುವುದರೊಂದಿಗೆ ಆರಂಭವಾಗುತ್ತದೆ. ಆಲ್ಟೊ ಕೆ10 ಕಾರಿಗೆ ಹೆಚ್ಚುವರಿಯಾಗಿ ಕ್ರ್ಯಾಶ್ ಗಾರ್ಡ್ ಅಳವಡಿಸಲಾಗಿದೆ.

ರೊಚ್ಚಿಗೆದ್ದ ಗೂಳಿ ಆರ್ಭಟಕ್ಕೆ ಪುಡಿಪುಡಿಯಾದ ಮಾರುತಿ ಆಲ್ಟೋ ಕೆ10

ಗೂಳಿಯು ತನ್ನ ಕೊಂಬನ್ನು ಕ್ರ್ಯಾಶ್ ಗಾರ್ಡ್‌ಗೆ ಸಿಕ್ಕಿಸಿಕೊಂಡು ಕಾರಿನ ಸಂಪೂರ್ಣ ಹಿಂಭಾಗವನ್ನು ಎತ್ತಿದೆ. ಇಡೀ ಕಾರನ್ನು ಪೂರ್ತಿಯಾಗಿ ತಿರುಗಿಸಿ ಇಳಿಸಿದೆ. ಈ ವೀಡಿಯೊದಲ್ಲಿ ಬಂಪರ್‌ನ ಬಲಭಾಗವು ನೇತಾಡುತ್ತಿರುವುದನ್ನು ಕಾಣಬಹುದು.

ರೊಚ್ಚಿಗೆದ್ದ ಗೂಳಿ ಆರ್ಭಟಕ್ಕೆ ಪುಡಿಪುಡಿಯಾದ ಮಾರುತಿ ಆಲ್ಟೋ ಕೆ10

ಕೋಪಗೊಂಡ ಗೂಳಿಯು ನಂತರ ಕಾರನ್ನು ಉರುಳಿಸುವ ಪ್ರಯತ್ನದಲ್ಲಿ ಈ ಹ್ಯಾಚ್‌ಬ್ಯಾಕ್ ಕಾರ್ ಅನ್ನು ಪಕ್ಕಕ್ಕೆ ಎತ್ತಿದೆ. ಆದರೆ ಸಾಧ್ಯವಾಗಿಲ್ಲ. ಏತನ್ಮಧ್ಯೆ, ಜನರು ಗೂಳಿಯ ಗಮನವನ್ನು ಬೇರೆಡೆ ಸೆಳೆಯಲು ಕಲ್ಲು ಮತ್ತು ಇತರ ಸಣ್ಣ ವಸ್ತುಗಳನ್ನು ಅದರತ್ತ ಎಸೆದಿದ್ದಾರೆ.

MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ರೊಚ್ಚಿಗೆದ್ದ ಗೂಳಿ ಆರ್ಭಟಕ್ಕೆ ಪುಡಿಪುಡಿಯಾದ ಮಾರುತಿ ಆಲ್ಟೋ ಕೆ10

ಕೊನೆಗೆ, ವ್ಯಕ್ತಿಯೊಬ್ಬ ಧೈರ್ಯ ಮಾಡಿ ಮುಂದೆ ಬಂದು ಆ ಗೂಳಿಯ ಮೇಲೆ ಸ್ವಲ್ಪ ನೀರು ಎಸೆದು ಅದರ ಗಮನವನ್ನು ಬೇರೆಡೆ ತಿರುಗಿಸಿದ್ದಾನೆ. ವೀಡಿಯೊ ಅಲ್ಲಿಗೆ ಕೊನೆಯಾಗುತ್ತದೆ. ನಂತರ ಏನಾಯಿತು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳದ ಬಗ್ಗೆಯೂ ತಿಳಿದು ಬಂದಿಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ರೊಚ್ಚಿಗೆದ್ದ ಗೂಳಿ ಆರ್ಭಟಕ್ಕೆ ಪುಡಿಪುಡಿಯಾದ ಮಾರುತಿ ಆಲ್ಟೋ ಕೆ10

ಅಂದಹಾಗೆ ಗೂಳಿಯ ಆಕ್ರೋಶಕ್ಕೆ ತುತ್ತಾದ ಕಾರು ಹಳೆಯ ತಲೆಮಾರಿನ ಮಾರುತಿ ಸುಜುಕಿ ಆಲ್ಟೊ ಕೆ 10 ಆಗಿದೆ. ಈ ಕಾರಿನಲ್ಲಿ 998 ಸಿಸಿ, ಇನ್‍‍ಲೈನ್ ​​-3 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 67 ಬಿಹೆಚ್‌ಪಿ ಪವರ್ ಹಾಗೂ 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್‍‍ನ ಮ್ಯಾನುವಲ್ ಗೇರ್ ಬಾಕ್ಸ್ ಮುಂಭಾಗದ ವ್ಹೀಲ್‍ಗಳನ್ನು ಚಲಾಯಿಸುತ್ತದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಈ ಕಾರು ತನ್ನ ಸೆಗ್‍‍ಮೆಂಟಿನಲ್ಲಿರುವ ಅತ್ಯಂತ ಮೋಜಿನ ಡ್ರೈವ್ ಕಾರುಗಳಲ್ಲಿ ಒಂದಾಗಿದೆ. ಅದರಲ್ಲಿರುವ ಎಂಜಿನ್ ಹಾಗೂ ಕಡಿಮೆ ತೂಕದಿಂದಾಗಿ ಹೆಚ್ಚು ಜನಪ್ರಿಯವಾಗಿದೆ. ಈ ಕಾರಿನ ತೂಕವು 765 ಕೆ.ಜಿಗಳಾಗಿದೆ. ಈ ಕಾರು ಕಡಿಮೆ ತೂಕವನ್ನು ಹೊಂದಿರುವ ಕಾರಣಕ್ಕೆ ಗೂಳಿ ಈ ಕಾರನ್ನು ಎತ್ತಿದೆ.

ರೊಚ್ಚಿಗೆದ್ದ ಗೂಳಿ ಆರ್ಭಟಕ್ಕೆ ಪುಡಿಪುಡಿಯಾದ ಮಾರುತಿ ಆಲ್ಟೋ ಕೆ10

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಗೂಳಿ ಈ ರೀತಿಯಾಗಿ ವರ್ತಿಸಲು ಕಾರಣವೇನೆಂದು ತಿಳಿದು ಬಂದಿಲ್ಲ. ಆದರೆ ಈ ಆಲ್ಟೊ ಕಾರಿನಲ್ಲಿ ಜನರಿಲ್ಲದ ಕಾರಣ ಯಾವುದೇ ಅಪಾಯವು ಸಂಭವಿಸಿಲ್ಲ. ಈ ಪರಿಸ್ಥಿತಿಯಲ್ಲಿ ನೀವು ಸಿಕ್ಕಿಕೊಂಡರೆ, ಸುರಕ್ಷಿತವಾಗಿರಲು ಹಾಗೂ ಪ್ರಾಣಿಯ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುವುದು ಉತ್ತಮ.

Article Published On: Tuesday, November 5, 2019, 18:23 [IST]
English summary
Angry Bull Attacks Maruti Suzuki Alto K10; Lifts The Car And Throws It With - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+