ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

ಭಾರತದಲ್ಲಿ ದಿನಗಳು ಕಳದಂತೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಇನ್ನೂ ಕರ್ನಾಟಕವು ಕಳೆದ ವರ್ಷ ದೇಶದಾದ್ಯಂತ ಅತಿ ಹೆಚ್ಚು ಅಪಘಾತವಾಗುವ ರಾಜ್ಯಗಳ ಪಟ್ಟಿಯಲ್ಲಿ 4 ನೇ ಸ್ಥಾನವನ್ನು ಪಡೆದುಕೊಂಡಿದೆ.

ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

ರಾಜ್ಯದಲ್ಲಿ ಪ್ರತಿ ದಿನವು ಅಪಘಾತಗಳು ಸಂಭವಿಸಿರುವ ಪ್ರಕರಣಗಳು ದಾಖಲಾಗುತ್ತವೆ. ನಮ್ಮ ರಾಜ್ಯದಲ್ಲಿ ಅಪಘಾತ ಸುದ್ದಿಗಳು ಸಾಮಾನ್ಯವಾಗಿವೆ. ಆದರೆ ಇಲ್ಲಿ ಒಂದು ವಿಚಿತ್ರವಾದ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ತನ್ನ ಹೆಂಡತಿಯ ಕಾರಣ ಎಂದು ಪೊಲೀಸ್‍ ಠಾಣೆಯಲ್ಲಿ ದೂರು ನೀಡಿದ್ದಾನೆ ಗಂಡ.

ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

ಆಧುನಿಕ ಭಾರತದಲ್ಲಿ ಹೆಂಡತಿಯರು ಕಾರು ಡ್ರೈವ್ ಮಾಡುವಾಗ ಗಂಡ ಪಕ್ಕ ಕುಳಿತುಕೊಳ್ಳುವುದು ಕಾಮನ್ ಬಿಡಿ. ಆದರೆ ಹೆಂಡತಿ ಡ್ರೈವ್ ಮಾಡುವಾಗ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಕಾರು ಅಪಘಾತಕ್ಕೀಡಾಗಿದಕ್ಕೆ ಗಂಡ ತನ್ನ ಹೆಂಡತಿಯ ವಿರುದ್ದ ದೂರು ನೀಡಿದ್ದಾನೆ.

ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

39 ವರ್ಷದ ನಾಗರಾಜ್ ಎಂಬ ಕಿರಾತಕನೇ ತನ್ನ ಹೆಂಡತಿ ಮಂಜುಳ ಮೇಲೆ ದೂರು ನೀಡಿರುವುದು. ಕಾರಿನಲ್ಲಿ ಮಗ, ಸಹೋದರಿ, ಅವರ ಸೊಸೆ ಹೀಗೆ ಕುಟಂಬ ಸದಸ್ಯರೊಡನೆ ಪ್ರಯಾಣಿಸುವಾಗ ಅಪಘಾತ ಸಂಭವಿಸಿದೆ.

ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

ಕೇಸರಿನಿಂದ ಕೂಡಿದ ಹದಗೆಟ್ಟಿರುವಂತಹ ರಸ್ತೆಯಲ್ಲಿ ಮಂಜುಳ ಅವರು ಡ್ರೈವ್ ಮಾಡುತ್ತಿರುವಾಗ ಅವರ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ 6 ಜನರಿಗೆ ಸಣ್ಣ ಪುಟ್ಟ ಗಾಯಗಳಿವೆ.

ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

ಕಾರಿನಲ್ಲಿದ್ದವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಾಮಚಂದ್ರಪರದಲ್ಲಿ ಮಂಗಳವಾರ ನಡೆದಿದ್ದು, ನಾಗರಾಜ್ ಅವರು ಪತ್ನಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.

ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

ಪತ್ನಿಯ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಪತಿ ದೂರು ನೀಡಿದ್ದಾರೆ. ಕುಟಂಬದ ಸದಸ್ಯರು ಎಲ್ಲರೂ ಕುಂದಾಪುರದಿಂದ ಶಿವಮೊಗ್ಗದ ಸಾಗರದ ಕಡೆಗೆ ಪ್ರಯಾಣ ಬೆಳೆಸಿದ್ದರು. ಧಾರ್ಮಿಕ ಕಾರ್ಯಕ್ರಮ ಪಾಲ್ಗೋಳ್ಳಲು ಕುಟಂಬ ಸಮೇತ ತೆರಳುತ್ತಿದ್ದರು.

ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

ಗಂಡ ನೀಡಿದ ದೂರು ಪೊಲೀಸರು ಸ್ವೀಕರಿಸಿ ಐಪಿಸಿ ಸೆಕ್ಷನ್ 279 ಅಡಿಯಲ್ಲಿ ರ್‍ಯಾಶ್ ಡ್ರೈವಿಂಗ್ ಮತ್ತು ಇತರರ ಜೀವನ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಎಂಬ ಸೆಕ್ಷನ್ 337 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

ತನ್ನ ಪತ್ನಿಯ ವಿರುದ್ದ ದೂರು ನೀಡಿದ್ದ ನಾಗರಾಜ್ ಅವರು ಕಂಪ್ಯೂಟರ್ ಸರ್ವಿಸಿಂಗ್ ಕೆಲಸ ಮಾಡುತ್ತಿದ್ದರೆ, ಪತ್ನಿ ಮಂಜುಳ ಅವರು ಹೆಬ್ರಿ ಸರ್ಕಾರಿ ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತನ್ನ ಸೋದರ ಮಾವನ ಕಾರನ್ನು ಪಡೆದು ನಾಗರಾಜ್ ಅವರು ಶಿವಮೊಗ್ಗಕ್ಕೆ ತೆರಳುತ್ತಿದ್ದರು.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

ಮಂಜುಳ ಅವರು ಚಾಲನೆ ಪರವಾನಿಗೆ ಹೊಂದಿದ್ದರು. ಅವರು ಡ್ರೈವಿಂಗ್ ಮಾಡುತ್ತಿದ್ದರೆ ಪತಿ ನಾಗರಾಜ್ ಅವರು ಮುಂದಿನ ಸೀಟಿನ ಪಕ್ಕದಲ್ಲಿ ಕುಳಿತುಕೊಂಡಿದ್ದರು. ಮುಂದಿನ ಸೀಟಿನಲ್ಲಿ ಕುಳಿತುಕೊಂಡು ಹೆಂಡತಿಗೆ ಹೋಗಬೇಕಾದ ಸ್ಥಳದ ದಾರಿಯನ್ನು ಪತಿ ಹೇಳುತ್ತಿದ್ದರು

ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

ಕಾರು ರಾಮಚಂದ್ರಪುರ ಮಠದ ಬಳಿಯ ಶರಾವತಿ ಸೇತುವೆಯ ಬಳಿ ಬಂದಾಗ ಕೇಸರಿನಿಂದ ಕೂಡಿದ ರಸ್ತೆಯಲ್ಲಿ ಚಾಲಕಿಯ ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ಕಾರು ಕಂದಕಕ್ಕೆ ಮಗುಚಿ ಬಿದ್ದಿದೆ. ಕಾರಿನಿಂದ ನಾಗರಾಜ್ ವಿಂಡೋ ಕಡೆಯಿಂದ ಹೊರಬಂದು ಕಾರಿನಲ್ಲಿ ಉಳಿದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ.

ಅಪಘಾತ ಮಾಡಿದಕ್ಕೆ ಹೆಂಡತಿಯ ವಿರುದ್ಧವೇ ಕೇಸ್ ದಾಖಲಿಸಿದ ಗಂಡ

ತಪ್ಪು ಯಾರು ಮಾಡಿದರು ಅದು ತಪ್ಪೆ, ತನ್ನ ಹೆಂಡತಿಯ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ದೂರು ನೀಡಿರುವುದು ಶ್ಲಾಘನೀಯ. ಪ್ರತಿಯೊಬ್ಬರಿಗೆ ನಾಗರಿಕ ಪ್ರಜ್ಞೆ ಇರಬೇಕು. ಆದರೆ ಅಷ್ಟು ದೂರ ತನ್ನ ಕುಟಂಬದವರ ಜೊತೆ ಪ್ರಯಾಣಿಸುವಾಗ ತನ್ನ ಹೆಂಡತಿಗೆ ಡ್ರೈವ್ ಮಾಡಲು ಕಾರು ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೇ ಕಾಡುತ್ತದೆಪ್ರತಿಯೊಬ್ಬರು ಕೂಡ ದೂರ ಪ್ರಯಾಣ ಮಾಡುವಾಗ ಎಚ್ಚರವಹಿಸಬೇಕು ಮತ್ತು ಕುಟಂಬದವರ ಜೊತೆ ಪ್ರಯಾಣ ಮಾಡುವಾಗ ಅಷ್ಟು ಜನರ ಜೀವ ಚಾಲಕನ ಕೈಯಲ್ಲಿ ಇರುವುದನ್ನು ಮೆರಯಬಾರದು.

Source: TOI

Most Read Articles

Kannada
English summary
Maruti Brezza crashed by wife – Husband files police complaint against her - Read in Kannada
Story first published: Friday, November 29, 2019, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X