ನದಿಯಲ್ಲಿ ಸಿಲುಕಿದ್ದ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಹೊರ ತಂದ ಮಿಟ್ಸುಬಿಷಿ ಪಜೆರೊ

ಮಹೀಂದ್ರಾ ಥಾರ್ ಎಸ್‍ಯುವಿಯು ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಆಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ.

ನದಿಯಲ್ಲಿ ಸಿಲುಕಿದ್ದ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಹೊರ ತಂದ ಮಿಟ್ಸುಬಿಷಿ ಪಜೆರೊ

ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯ ಬೇಡಿಕೆಯ ಹೆಚ್ಚಳದಿಂದಾಗಿ ಕೆಲವು ನಗರಗಳಲ್ಲಿ ಇದರ ವೈಟಿಂಗ್ ಪಿರೇಡ್ ಸುಮಾರು ಒಂದು ವರ್ಷವನ್ನು ತಲುಪಿದೆ, ಭಾರತದಲ್ಲಿ ಆಫ್-ರೋಡ್ ವಾಹನಗಳು ಎಂದಾಗ ಮೊದಲು ನೆನಪಿಗೆ ಬರುವುದು ಥಾರ್ ಎಸ್‍ಯುವಿಯಾಗಿದೆ. ಈ ಥಾರ್ ಎಸ್‍ಯುವಿಯ ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯದಿಂದಾಗಿ ಹೆಚ್ಚಿನ ವಾಹನ ಪ್ರಿಯರು ಥಾರ್ ಎಸ್‍ಯುವಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ನದಿಯಲ್ಲಿ ಸಿಲುಕಿದ್ದ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಹೊರ ತಂದ ಮಿಟ್ಸುಬಿಷಿ ಪಜೆರೊ

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು 2020ರ ಅಕ್ಟೋಬರ್ 2ರಂದು ಬಿಡುಗಡೆಗೊಳಿಸಲಾಯಿತು. ಈ ಎಸ್‌ಯುವಿಯ ವಿತರಣೆಯನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಆರಂಭಿಸಲಾಯಿತು.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ನದಿಯಲ್ಲಿ ಸಿಲುಕಿದ್ದ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಹೊರ ತಂದ ಮಿಟ್ಸುಬಿಷಿ ಪಜೆರೊ

ಇತ್ತೀಚೆಗೆ ಸಣ್ಣ ನದಿಯಲ್ಲಿ ಸಿಲುಕಿದ್ದ ಥಾರ್ ಎಸ್‌ಯುವಿಯನ್ನು ಹೊರ ತರುವ ವಿಡಿಯೋವೊಂದು ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ಇದರಲ್ಲಿ ಹೊಚ್ಚಹೊಸ ಮಹೀಂದ್ರಾ ಥಾರ್‌ ಎಸ್‍ಯುವಿಯನ್ನು ಸಣ್ಣ ನದಿಯಲ್ಲಿ ತುಂಬಾ ದೂರ ತೆಗೆದುಕೊಂಡು ಸಿಲುಕಿಕೊಂಡಿದ್ದಾರೆ. ಆದರೆ ವಿಡಿಯೋದಲ್ಲಿ ನಿಖರವಾದ ಸ್ಥಳವನ್ನು ತಿಳಿಸಿಲ್ಲ.

ನದಿಯಲ್ಲಿ ಸಿಲುಕಿದ್ದ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಹೊರ ತಂದ ಮಿಟ್ಸುಬಿಷಿ ಪಜೆರೊ

ಸಿಲುಕಿಕೊಂಡಿರುವ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಸಣ್ಣ ನದಿಯಿಂದ ಹಳೆಯ ಮಿಟ್ಸುಬಿಷಿ ಪಜೆರೊ ಎಸ್‍ಯುವಿಯ ಮೂಲಕ ಹೊರತೆಗೆಯುವುದರಿಂದ ವಿಡಿಯೋ ಪ್ರಾರಂಭವಾಗುತ್ತದೆ. ಪಜೆರೊ ಎಸ್‍ಯುವಿಗೆ ಟೋ ರೂಪ್ ಅನ್ನು ಕಟ್ಟಿ ಥಾರ್ ಅನ್ನು ಎಳೆಯುತ್ತಿದ್ದಾರೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ನದಿಯಲ್ಲಿ ಸಿಲುಕಿದ್ದ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಹೊರ ತಂದ ಮಿಟ್ಸುಬಿಷಿ ಪಜೆರೊ

ಪಜಿರೋ ಕೂಡ ಅತ್ಯುತ್ತಮ ಆಫ್-ರೋಡ್ ಮತ್ತು ಶಕ್ತಿಶಾಲಿ ಎಸ್‍ಯುವಿಯಾಗಿದೆ. ಇದರಿಂದ ಎಳೆಯುತ್ತಿರುವಾಗ ನಿಧಾನವಾಗಿ ಥಾರ್ ಎಸ್‍ಯುವಿ ಹೊರಗೆ ಬರುತ್ತದೆ. ಥಾರ್ ನೀರಿನಲ್ಲಿ ಆಳವಾಗಿ ಸಿಲುಕಿಕೊಂಡಂತೆ ತೋರುತ್ತದೆ. ಆದರೆ ವಿಡಿಯೋದಲ್ಲಿ ಅದನ್ನು ಸರಿಯಾಗಿ ತೋರಿಸಿಲ್ಲ.

ನದಿಯಲ್ಲಿ ಸಿಲುಕಿದ್ದ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಹೊರ ತಂದ ಮಿಟ್ಸುಬಿಷಿ ಪಜೆರೊ

ಆದರೆ ನದಿಯಿಂದ ಮೇಲೆ ಬಂದ ನಂತರ ಡ್ರೈವರ್ ಹೊರಬರಲು ಡೋರ್ ಓಪನ್ ಮಾಡುತ್ತಿದಂತೆ ಹೊಳೆಯಂತೆ ನೀರು ಹರಿಯುತ್ತದೆ. ಇದನ್ನು ನೋಡಿದರೆ ಥಾರ್ ಹೆಚ್ಚು ಆಳವಾಗಿ ಸಿಲುಕಿಕೊಂಡಿರಬಹುದು.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ನದಿಯಲ್ಲಿ ಸಿಲುಕಿದ್ದ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಹೊರ ತಂದ ಮಿಟ್ಸುಬಿಷಿ ಪಜೆರೊ

ನದಿಯಿಂದ ಹೊರಬರುವಾಗ ಥಾರ್ ಎಸ್‍ಯುವಿಯ ಫಾಗ್ ಲೈಟ್ ಆನ್ ಆಗಿತ್ತು. ಆದರೆ ಇದರ ಎಂಜಿನ್ ಕಾರ್ಯನಿರ್ವಹಿಸುತ್ತಿದೆಯೇ ಎಂಬುವುದು ಖಚಿತವಿಲ್ಲ. ವಾಹನ ಮೇಲೆ ಬಂದ ನಂತರ ಎಂಜಿನ್ ಅನ್ನು ನೋಡಲು ಬಾನೆಟ್ ತೆರೆಯಲು ಪ್ರಯತ್ನಿಸುತ್ತಿರುವುದು ಕೂಡ ವಿಡಿಯೋದಲ್ಲಿ ನೋಡಬಹುದು.

ನದಿಯಲ್ಲಿ ಸಿಲುಕಿದ್ದ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಹೊರ ತಂದ ಮಿಟ್ಸುಬಿಷಿ ಪಜೆರೊ

ಇಲ್ಲಿ ಥಾರ್ ಎಸ್‍ಯುವಿಯು ಸಿಲುಕಿಕೊಂಡಿರುವುದಕ್ಕೆ ಅದರ ಸಾಮರ್ಥ್ಯಗಳ ಬಗ್ಗೆ ಅಲ್ಲ, ಆಫ್-ರೋಡ್ ಚಾಲನೆ ಕೌಶಲ್ಯ ಕೂಡ ಪ್ರಮುಖವಾಗಿದೆ. ಮಹೀಂದ್ರಾ ಥಾರ್ ತನ್ನ ಆಫ್-ರೋಡ್ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಮಾಡಿದ ಎಸ್‍ಯುವಿಯಾಗಿದೆ.

ಕಠಿಣವಾದ ಅಥವಾ ಹೆಚ್ಚು ಜಾರುವ ಸ್ಥಳಗಳಲ್ಲಿ ಎಸ್‍ಯುವಿಯನ್ನು ಡ್ರೈವ್ ಮಾಡುವಾಗ ಹೆಚ್ಚಿನ ಕೌಶಲ್ಯವನ್ನು ಹೊಂದಿರಬೇಕು. ಎಷ್ಟೇ ಆಫ್-ರೋಡ್ ಸಾಮರ್ಥ್ಯವಿರುವ ವಾಹನವಾದರೂ ಅದಕ್ಕೆ ಗ್ರಿಪ್ ಸಿಗದಿರುವ ಜಾರುವ ಸ್ಥಳದ ಕಡೆ ಡ್ರೈವ್ ಮಾಡಿದರೆ ದೇ ರೀತಿಯ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು.

ನದಿಯಲ್ಲಿ ಸಿಲುಕಿದ್ದ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಹೊರ ತಂದ ಮಿಟ್ಸುಬಿಷಿ ಪಜೆರೊ

ಕಠಿಣವಾದ ದಾರಿಯಲ್ಲಿ ವಾಹನವನ್ನು ಸಾಗಿಸುವ ಅದರ ಸಾಮರ್ಥ್ಯದ ಬಗ್ಗೆ ತಿಳಿದಿರಬೇಕು. ನೀರಿನಲ್ಲಿ ಕೂಡ ಇಳಿಸುವ ಮುನ್ನ ವಾಹನದ ಮಿತಿಗಳನ್ನು ತಿಳಿದುಕೊಳ್ಳಬೇಕು. ಹೊಸ ಥಾರ್ 650 ಎಂಎಂ ವಾಟರ್ ವೇಡಿಂಗ್ ಹೊಂದಿದೆ, ಆಫ್-ರೋಡ್ ಹೋಗುವಾಗ ಡ್ರೈವರ್ ಉತ್ತಮ ಕೌಶಲ್ಯವನ್ನು ಹೊಂದಿರಬೇಕು ಮತ್ತು ವಾಹನದ ಸಾಮರ್ಥ್ಯವನ್ನು ತಿಳಿದಿರಬೇಕು.

Most Read Articles

Kannada
English summary
Mitsubishi Pajero Pulls Out Brand-New Mahindra Thar From A Lake. Read In Kannada.
Story first published: Wednesday, May 26, 2021, 15:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X