ಮನಸೆಳೆದ ಸ್ಟೈಲಿಷ್ ಮಹೀಂದ್ರ ಬೊಲೆರೊ

Written By:

ಆಧುನಿಕ ಕಾರುಗಳ ಪ್ರವೇಶದ ಬಳಿಕವೂ ಕಳೆದೊಂದು ದಶಕದಿಂದಲೂ ಮಹೀಂದ್ರ ಬೊಲೆರೊ ಮಾರಾಟಕ್ಕೆ ಕಿಂಚಿತ್ತು ಘಾಸಿ ಸಂಭವಿಸಿಲ್ಲ. ಇದು ಆಫ್ ಹಾಗೂ ಆನ್ ರೋಡ್ ಗಳಲ್ಲಿ ಈಗಲೂ ಮಿಂಚಿಂಗ್ ನಡೆಸುತ್ತಿದೆ.

ಭಾರತೀಯ ಕ್ರೀಡಾ ಬಳಕೆಯ ವಾಹನಕ್ಕೆ ಹೊಸ ಸ್ವರೂಪ ನೀಡಿರುವ ಮಹೀಂದ್ರ ಬೊಲೆರೊ ಯಶಸ್ಸಿನಲ್ಲಿ ಅನೇಕ ಘಟಕಗಳು ನಿರ್ಣಾಯಕ ಪಾತ್ರ ವಹಿಸಿದೆ. ನಿರ್ಮಾಣ ಗುಣಮಟ್ಟ, ವಿಶ್ವಸಾರ್ಹತೆ, ಎಂಜಿನ್, ನಿರ್ವಹಣೆ, ಸರ್ವೀಸ್ ಸೇರಿದಂತೆ ಸ್ಪರ್ಧಾತ್ಮಕ ಬೆಲೆಗಳು ಮಹೀಂದ್ರ ಬೊಲೆರೊಗೆ ವರದಾನವಾಗಿ ಪರಿಣಮಿಸಿದೆ.

To Follow DriveSpark On Facebook, Click The Like Button
ಮಹೀಂದ್ರ ಬೊಲೆರೊ

ಕ್ರೀಡಾ ವಾಹನ ಪ್ರೇಮಿಗಳು ತಮ್ಮ ವಾಹನ ಇತರಗಿಂತಲೂ ವಿಭಿನ್ನವಾಗಿ ಗೋಚರಿಸಲು ಅನೇಕ ಮಾರ್ಪಾಡುಗಳನ್ನು ತರುತ್ತಾರೆ. ಈಗ ಈ ಸಾಲಿಗೆ ಮಹೀಂದ್ರ ಬೊಲೆರೊ ಸೇರ್ಪಡೆಗೊಂಡಿದೆ.

ಇಲ್ಲಿ ಇತರ ಕಾರುಗಳಿಗಿಂತಲೂ ಭಿನ್ನವಾಗಿ ಕೈಯಿಂದಲೇ ಮಹೀಂದ್ರ ಬೊಲೆರೊ ಕಾರನ್ನು ವಿಶೇಷವಾಗಿ ವಿನ್ಯಾಸಗೊಳಿಸಿರುವುದು ಹೆಚ್ಚು ಆಕರ್ಷಣೆಗೆ ಪಾತ್ರವಾಗಿದೆ.

ಗ್ರಿಜ್ಲಿ ಎಂಬ ಆಟೋಮೋಟಿವ್ ಸಂಸ್ಥೆಯು ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಒಟ್ಟಾರೆ ವಿನ್ಯಾಸವು ಹಿರಿಯ ಸೋದರ ಮಹೀಂದ್ರ ಎಕ್ಸ್ ಯುವಿ 500 ಕಾರನ್ನು ಹೋಲುತ್ತಿದೆ.

ಮಹೀಂದ್ರ ಬೊಲೆರೊ ಕಾರಿನ ಹೊರಗಡೆ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಮುಂಭಾಗದಲ್ಲಿ ಎಕ್ಸ್ ಯುವಿ500 ಗೆ ಹೋಲುವಂತಹ ವಿನ್ಯಾಸದ ಹೊರತಾಗಿ ರೂಫ್ ಮೇಲ್ಗಡೆ ವಿಶಿಷ್ಟ ಲೈಟ್ ಗಳನ್ನು ಪ್ರದಾನ ಮಾಡಲಾಗಿದೆ.

ಡೇ ಟೈಮ್ ರನ್ನಿಂಗ್ ಲೈಟ್ಸ್, ಫ್ರಂಟ್ ಬಂಪರ್ ನಲ್ಲಿ ತ್ರಿ ಡಿ ಎಲ್ ಇಡಿ ಲ್ಯಾಂಪ್, ರಿಯರ್ ಬಂಪರ್ ಇಂಟೇಗ್ರೇಟಡ್ ರಿಫ್ಲೆಕ್ಟರ್ ಜೊತೆಗೆ ರಿವರ್ಸ್ ಲೈಟ್ಸ್ ಗಳ ಸೇವೆಯಿರಲಿದೆ.

ಬದಿಯಲ್ಲಿ ರಿಫ್ಲೆಕ್ಟರ್, ಮಾರ್ಕರ್ ಲೈಟ್ಸ್, ಎಲ್ ಇಡಿ ಡ್ಯುಯಲ್ ವಿಂಗ್ ವಿಧದ ಇಂಡಿಕೇಟರ್, ಎಲ್ ಇಡಿ ವ್ರಾಂಗ್ಲರ್ ಟೈಲ್ ಲೈಟ್ ಗಳು ಇರಲಿದೆ.

ಮೆಟ್ಯಾಲಿಕ್ ಬಣ್ಣ, ಕಾರಿನೊಳಗೆ ಟು ಟೋನ್ ಹೋದಿಕೆ, ಫ್ಲೋರ್ ಲ್ಯಾಮಿನೇಷನ್, ಆಕರ್ಷಕ ಡ್ಯಾಶ್ ಬೋರ್ಡ್, ಡಿವಿಡಿ ಪ್ಲೇಯರ್, ಹೆಡ್ ರೆಸ್ಟ್ ಸ್ಕ್ರಿನ್, ರಿಯರ್ ವ್ಯೂ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ ಸೌಲಭ್ಯಗಳು ಇರಲಿದೆ.

English summary
Here Is A Chiseled, Hand Crafted Mahindra Bolero By Grizzly — Ugly or Attractive?
Story first published: Thursday, August 18, 2016, 11:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X