ಶೋರೂಂನಲ್ಲೂ ಇಷ್ಟು ಬೈಕ್ ಇರಲ್ಲ: ಧೋನಿಯ ಬೈಕ್ ಕಲೆಕ್ಷನ್‌ಗೆ ಮತ್ತೊಂದು ಹೊಸ ಅತಿಥಿಯ ಆಗಮನ
ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ ಆಟಗಾರರಿಗೆ ಹೊಂದಿರುವ ಕಾರುಗಳ ವಿಷಯಕ್ಕೆ ಬಂದರೆ, ಸೆಲೆಬ್ರಿಟಿಗಳ ಬಳಿ ಹಲವು ಐಷಾರಾಮಿ ಕಾರುಗಳನ್ನು ಕಾಣಬಹುದು. ಆದರೆ ಕೆಲವು ಸೆಲೆಬ್ರಿಟಿಗಳಿಗೆ ಬೈಕ್ ಗಳ ಮೇಲೆ ಕ್ರೇಜ್ ಹೆಚ್ಚು ಇರುತ್ತದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರ ವಾಹನಗಳ ಕ್ರೇಜ್ ಎಷ್ಟೇದೆ ಎಂದು ಎಲ್ಲರಿಗೂ ಗೂತ್ತಿರುವ ವಿಚಾರವಾಗಿದೆ.
ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಕ್ರಿಕೆಟ್ನಷ್ಟ ಕಾರು-ಬೈಕ್ ಗಳನ್ನು ಕೂಡ ಪ್ರೀತಿಸುತ್ತಾರೆ. ಅವರ ಬಳಿಯಿರುವ ಕಾರು ಮತ್ತು ಬೈಕ್ ಸಂಗ್ರಹ ಎಂತವರಿಗೂ ಅಚ್ಚರಿ ಮೂಡಿಸುತ್ತದೆ. ಮಹೇಂದ್ರ ಸಿಂಗ್ ಧೋನಿ 2020 ರಲ್ಲಿ ಎಲ್ಲಾ ರೀತಿಯ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಅವರು ಅಪರೂಪದ ಹಳೆಯ ಕಾರುಗಳನ್ನು ಸೇರಿಸುವ ಮೂಲಕ ತಮ್ಮ ಕ್ಲಾಸಿಕ್ ಕಾರುಗಳ ಗ್ಯಾರೇಜ್ ಅನ್ನು ವಿಸ್ತರಿಸಿದರು.

ಧೋನಿಯ ಬೈಕ್ ಗ್ಯಾರೇಜ್‌ಗೆ ಹೊಸ ಅತಿಥಿಯ ಪ್ರವೇಶವಾಗಿದ್ದು, ಇದು ಜಾವಾ 42 ಬಾಬರ್ (Jawa 42 Bobber) ಬೈಕ್ ಆಗಿದೆ. ಈ ಹೊಸ ಜಾವಾ 42 ಬಾಬರ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.25 ಲಕ್ಷವಾಗಿದೆ. ಇದು ಭಾರತದಲ್ಲಿನ ಅತ್ಯಂತ ಕೈಗೆಟುಕುವ ಬಾಬರ್ ಶೈಲಿಯ ಬೈಕ್ ಗಳಲ್ಲಿ ಒಂದಾಗಿದೆ. ಇದು ಜಾವಾ 42 ಬಾಬರ್ ಸಾಮಾನ್ಯ ಮಾದರಿಯಲ್ಲ ಕಸ್ಟಮೈಸ್ ಮಾಡಲ್ಪಟ್ಟಿದೆ.
ಈ ಜಾವಾ 42 ಬಾಬರ್ ಬೈಕ್ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿವೆ. ಈ ಬೈಕಿನಲ್ಲಿ ವಿಶೇಷವಾದ ಬಾಟಲ್ ಗ್ರೀನ್ ಪೇಂಟ್, ಗೋಲ್ಡನ್ ಸ್ಟ್ರೈಪ್ಸ್, ಕಸ್ಟಮೈಸ್ ಮಾಡಿದ ಸೀಟ್ ಮತ್ತು ಹಳದಿ ಬಣ್ಣದ ಹೆಡ್‌ಲೈಟ್ ಅನ್ನು ಒಳಗೊಂಡಿವೆ. ಚಿತ್ರಗಳನ್ನು ನೋಡಿದಾಗ, ಈ ವಿಶೇಷ ಬಾಟಲ್ ಗ್ರೀನ್ ಜಾವಾ 42 ಬಾಬರ್ ಬೈಕ್ ಪಾಲಿಮರ್ ಪೈಪ್‌ಗಳು ಮತ್ತು ಫಿಟ್ಟಿಂಗ್ ಕಂಪನಿಯಾದ ಸ್ಕಿಪ್ಪರ್ ಪೈಪ್ಸ್‌ನಿಂದ ಉಡುಗೊರೆಯಾಗಿ ಕಾಣುತ್ತದೆ.

ಈ ಹಿಂದೆ, ಈ ಕಂಪನಿಯು ಕ್ರಿಸ್ ಗೇಲ್ ಜೊತೆಗೆ ಎಂಎಸ್ ಧೋನಿಯನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಘೋಷಿಸಿತು. ಜಾವಾ 42 ಬಾಬರ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 334cc, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 29.49 bhp ಪವರ್ ಮತ್ತು 32.7Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಆರಾಮದಾಯಕ ಸವಾರಿಯನ್ನು ಖಚಿತಪಡಿಸಿಕೊಳ್ಳಲು ಈ ಜಾವಾ 42 ಬಾಬರ್‌ನ ಸಸ್ಪೆನ್ಶನ್ ಸೆಟಪ್‌ನಲ್ಲಿ ಕೆಲಸ ಮಾಡಿದೆ ಎಂದು ಜಾವಾ ಹೇಳಿಕೊಂಡಿದೆ ಆದರೆ ಎಬಿಎಸ್ ಸೆಟಪ್ ಅನ್ನು ಉತ್ತಮ ಪ್ರತಿಕ್ರಿಯೆಗಾಗಿ ಟ್ಯೂನ್ ಮಾಡಲಾಗಿದೆ. ಜಾವಾ 42 ಬಾಬರ್ ಸಹ ಸ್ಪೋಕ್ಡ್ ವೀಲ್‌ಗಳನ್ನು ಹೊಂದಿದ್ದು ಅದು ಟ್ಯೂಬಿಡ್ ಟೈರ್‌ಗಳನ್ನು ಒಳಗೊಂಡಿದೆ.

ಜಾವಾ 42 ಬಾಬರ್ ವಿನ್ಯಾಸವು ಸಾಮಾನ್ಯ 42 ಮತ್ತು ಪೆರಾಕ್ ಬಾಬರ್ ಎರಡರ ಅಂಶಗಳನ್ನು ತನ್ನದೇ ಆದ ಕೆಲವು ವಿಶಿಷ್ಟ ವಿನ್ಯಾಸದ ಅಂಶಗಳೊಂದಿಗೆ ಮಿಶ್ರಣ ಮಾಡುತ್ತದೆ. 42 ಬಾಬರ್ ತನ್ನ ಹೆಸರಿಗೆ ಅನುಗುಣವಾಗಿರುತ್ತದೆ ಮತ್ತು ಸರಿಹೊಂದಿಸಬಹುದಾದ ಒಂದೇ ಸೀಟ್ ಸೆಟಪ್‌ನೊಂದಿಗೆ ಬಂದಿದೆ. ಈ ಜಾವಾ 42 ಬಾಬರ್ ಬೈಕಿನಲ್ಲಿ ಸಂಪೂರ್ಣ ಎಲ್ಇಡಿ ಲೈಟಿಂಗ್ ಸೆಟಪ್ ಅನ್ನು ಹೊಂದಿದೆ. ಜೊತೆ ಎಲ್ಸಿಡಿ ಕ್ಲಸ್ಟರ್ ಅನ್ನು ಹೊಂದಿದೆ.
ಈ ಜಾವಾ 42 ಬಾಬರ್ ಮುಂಭಾಗದ ಫೆಂಡರ್ ಅನ್ನು ಸಹ ಹೊಂದಿದೆ, ಈ ಹೊಸ ಬೈಕಿನಲ್ಲಿ ಫ್ಯೂಯಲ್ ಟ್ಯಾಂಕ್, ಡ್ರಾಪ್-ಡೌನ್, ಬಾರ್-ಎಂಡ್, ರಿಯರ್ ವ್ಯೂ ಮಿರರ್‌ಗಳೊಂದಿಗೆ ಹೊಸ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಈ ಹೊಸ 42 ಬಾಬರ್ ತನ್ನ ಹೆಸರನ್ನು 42 ನಿಯೋ-ರೆಟ್ರೋ ರೋಡ್‌ಸ್ಟರ್‌ನಿಂದ ಎರವಲು ಪಡೆದಿದೆ. ಇದರ ಎಂಜಿನ್ ಅನ್ನು ಜಾವಾದ ಇತರ ಬಾಬರ್ ಕೊಡುಗೆ ಪೆರಾಕ್ ಬೈಕಿನಿಂದ ಎರವಲು ಪಡೆದುಕೊಂಡಿದೆ.
ಧೋನಿ ಬಳಿ 90ರ ದಶಕದಲ್ಲಿ ತಾವು ಬಳಕೆ ಮಾಡುತ್ತಿದ್ದ ಯಮಹಾ ರಾಜ್‌ದೂತ್ 350 ಬೈಕ್‌ನಿಂದ ತಮ್ಮ ಬೈಕ್ ಕಲೆಕ್ಷನ್ ಆರಂಭಿಸಿದ ಧೋನಿ, ಇದೀಗ ವಿಂಟೇಜ್ ಬೈಕ್‌ಗಳು, ಜನಪ್ರಿಯ ಮಾದರಿಯ ಬೈಕ್‌ಗಳು, ವಿದೇಶಿ ಸ್ಪೋರ್ಟ್ಸ್ ಬೈಕ್‌ಗಳು ಮತ್ತು ಸ್ಕೂಟರ್ಸ್ ಎಲ್ಲವನ್ನೂ ಸಂಗ್ರಹಾಲಯದದೆ. ಕ್ರಿಕೆಟಿಗ ಎಂಎಸ್ ಧೋನಿ ಅವರು ಅವರು ವಾಹನಗಳನ್ನು ಸಂಗ್ರಹ ಮಾಡಿ ಕೇವಲ ಸಂಗ್ರಹಾಲಯದಲ್ಲಿಟ್ಟುಕೊಂಡಿರುವುದು ಮಾತ್ರವಲ್ಲದೇ ಅದನ್ನು ತಮ್ಮ ಬಿಡುವಿನ ಸಮಯದಲ್ಲಿ ತಮಗೆ ಬಯಕೆಯಾದ ವಾಹನದಲ್ಲಿ ರಾಂಚಿಯಲ್ಲಿ ಸುತ್ತುಡುತ್ತಾರೆ.


Click it and Unblock the Notifications








