ಒಬಿರಾಯನ ಕಾಲದ ರೋಲ್ಸ್ ರಾಯ್ಸ್ ಕಾರಿನಲ್ಲಿ ಸುತ್ತಾಡಿದ ಮಹೇಂದ್ರ ಸಿಂಗ್ ಧೋನಿ
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಾಹನಗಳ ಕ್ರೇಜ್ ಎಷ್ಟೇದೆ ಎಂದು ಎಲ್ಲರಿಗೂ ಗೂತ್ತಿರುವ ವಿಚಾರ. ಕ್ರಿಕೆಟ್ನಷ್ಟೇ ಧೋನಿ ಅವರು ಕಾರು-ಬೈಕ್ ಗಳನ್ನು ಕೂದ ಪ್ರೀತಿಸುತ್ತಾರೆ. ಅವರ ಬಳಿಯಿರುವ ಕಾರು ಮತ್ತು ಬೈಕ್ ಸಂಗ್ರಹ ಎಂತವರಿಗೂ ಅಚ್ಚರಿ ಮೂಡಿಸುತ್ತದೆ.
ಮಹೇಂದ್ರ ಸಿಂಗ್ ಧೋನಿ 2020 ರಲ್ಲಿ ಎಲ್ಲಾ ರೀತಿಯ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಅವರು ಅಪರೂಪದ ಹಳೆಯ ಕಾರುಗಳನ್ನು ಸೇರಿಸುವ ಮೂಲಕ ತಮ್ಮ ಕ್ಲಾಸಿಕ್ ಕಾರ್ ಗ್ಯಾರೇಜ್ ಅನ್ನು ವಿಸ್ತರಿಸಿದರು. ಮಾಜಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಧೋನಿ ಅವರು ಇತ್ತೀಚೆಗೆ ರಾಂಚಿಯ ರಸ್ತೆಗಳಲ್ಲಿ 1980ರ ದಶಕದ ಅತ್ಯಂತ ಅಪರೂಪದ ರೋಲ್ಸ್ ರಾಯ್ಸ್ ಕಾರನ್ಮು ಡ್ರೈವಿಂಗ್ ಮಾಡುವಾಗ ಕಾಣಿಸಿಕೊಂಡಿದ್ದಾರೆ.

ಕುಶ್ಮಾಹಿ7 ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಬಳಕೆದಾರರು ಎಂಎಸ್ ಧೋನಿ (MS Dhoni) ಡ್ಯುಯಲ್-ಟೋನ್ ರೋಲ್ಸ್ ರಾಯ್ಸ್ ಕಾರನು ಡ್ರೈವ್ ಮಾಡುತ್ತೀರುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಇದು ರೋಲ್ಸ್ ರಾಯ್ಸ್ ಸಿವರ್ ವ್ರೈತ್ II ಕಾರ್ ಆಗಿರಬಹುದು. 80ರ ದಶಕದಿಂದ ಐಷಾರಾಮಿ ಸೆಡಾನ್ ಅನ್ನು ಚಾಲನೆ ಮಾಡುತ್ತಿರುವ ಧೋನಿಯನ್ನು ಬೈಕರ್‌ಗಳು ಹಿಂಬಾಲಿಸಿ ವೀಡಿಯೊ ಶೋಟ್ ಮಾಡಿದ್ದಾರೆ.
80ರ ದಶಕದಿಂದ ಐಷಾರಾಮಿ ಸೆಡಾನ್ ರೂಫ್, ಹುಡ್ ಮತ್ತು ಬೂಟ್ ಮೇಲೆ ತಿಳಿ ನೀಲಿ ಬಣ್ಣದೊಂದಿಗೆ ಡ್ಯುಯಲ್ ಟೋನ್ ಪೇಂಟ್ ಅನ್ನು ಹೊಂದಿದೆ. ಇನ್ನು ಈ ಕಾರಿನ ಡೋರ್ ಒಳಗೊಂಡಂತೆ ಬಾಡಿಯ ಉಳಿದ ಭಾಗಗಳಲ್ಲಿ ಕಡು ನೀಲಿ ಬಣ್ಣವನ್ನು ಹೊಂದಿದೆ. ಕ್ಯಾಪ್ಟನ್ ಕೂಲ್ ಇತರ ಕ್ರಿಕೆಟಿಗರಂತೆ ಆಧುನಿಕ, ಐಷಾರಾಮಿ ಕಾರುಗಳಿಗಿಂತ ಹೆಚ್ಚಾಗಿ ರಿಸ್ಟೂರ್ ಮಾಡಿದ ವಿಂಟೇಜ್ ವಾಹನಗಳ ಅಭಿಮಾನಿಯಾಗಿದ್ದಾರೆ.

ರೋಲ್ಸ್ ರಾಯ್ಸ್ ಸಿಲ್ವರ್ ವ್ರೈತ್ II ಕಾರನ್ನು ಸಿಲ್ವರ್ ವ್ರೈತ್ ಎಂಬ ಮಾದರಿಯಾಗಿ ರಿಸ್ಟೂರ್ ಮಾಡಿದ್ದಾರೆ. ಈ ರೋಲ್ಸ್ ರಾಯ್ಸ್ ಸಿಲ್ವರ್ ವ್ರೈತ್ II ಕಾರು 1976 ರಲ್ಲಿ ಬಿಡುಗಡೆಗೊಂಡಿತು.ಸಿಲ್ವರ್ ವ್ರೈತ್ II ಎಂಬುದು ರೋಲ್ಸ್ ರಾಯ್ಸ್ ಸಿಲ್ವರ್ ಶ್ಯಾಡೋ II ಮಾದರಿಯ ಲಾಂಗ್ ವ್ಹೀಲ್ಸ್ ಬೇಸ್ ಮಾದರಿಯ ಹೆಸರಾಗಿದ್ದು, ಇದು 980 ರವರೆಗೆ ಉತ್ಪಾದನೆಯಲ್ಲಿತ್ತು.
ಟೀಮ್ ಇಂಡಿಯಾ ಮಾಜಿ ನಾಯಕನಿಗೆ ಕಾರುಗಳು ಮತ್ತು ಬೈಕ್‌ಗಳು ಎಂದರೆ ಬಲು ಪ್ರೀತಿ ಇರುವುದರಿಂದ ನೂರಾರು ಬಗೆಬಗೆಯ ಬೈಕ್‌ಗಳು ಮತ್ತು ಕಾರುಗಳ ವಿಶೇಷ ಸಂಗ್ರಹಾಲಯವನ್ನೇ ನಿರ್ಮಿಸಿದ್ದಾರೆ. ಎಂಎಸ್ ಧೋನಿ ಬಳಿ 90ರ ದಶಕದಲ್ಲಿ ತಾವು ಬಳಕೆ ಮಾಡುತ್ತಿದ್ದ ಯಮಹಾ ರಾಜ್‌ದೂತ್ 350 ಬೈಕ್‌ನಿಂದ ತಮ್ಮ ಬೈಕ್ ಕಲೆಕ್ಷನ್ ಆರಂಭಿಸಿದ ಧೋನಿ, ಇದೀಗ ವಿಂಟೇಜ್ ಬೈಕ್‌ಗಳು, ಜನಪ್ರಿಯ ಮಾದರಿಯ ಬೈಕ್‌ಗಳು, ವಿದೇಶಿ ಸ್ಪೋರ್ಟ್ಸ್ ಬೈಕ್‌ಗಳು ಮತ್ತು ಸ್ಕೂಟರ್ಸ್ ಎಲ್ಲವನ್ನೂ ಸಂಗ್ರಹಾಲಯದದೆ.
ಎಂಎಸ್ ಧೋನಿ ಅವರು ಅವರು ವಾಹನಗಳನ್ನು ಸಂಗ್ರಹ ಮಾಡಿ ಕೇವಲ ಸಂಗ್ರಹಾಲಯದಲ್ಲಿಟ್ಟುಕೊಂಡಿರುವುದು ಮಾತ್ರವಲ್ಲದೇ ಅದನ್ನು ತಮ್ಮ ಬಿಡುವಿನ ಸಮಯದಲ್ಲಿ ತಮಗೆ ಬಯಕೆಯಾದ ವಾಹನದಲ್ಲಿ ರಾಂಚಿಯಲ್ಲಿ ಸುತ್ತುಹಾಕುತ್ತಾರೆ. ಇನ್ನು ಬೈಕ್‌ಗಳ ಜೊತೆಗೆ ವಿಂಟೇಜ್ ಕಾರು, ಅಂಬಾಸೆಡರ್ ಕಾರುಗಳು ಹೀಗೆ ಮೊದಲಾದ ಭಾರತೀಯ ಬ್ರಾಂಡ್‌ಗಳ ಕಾರುಗಳನ್ನು ಧೋನಿ ಹೊಂದಿದ್ದಾರೆ.
ಧೋನಿ ಅವರ ಸಂಗ್ರಹಾಲಯದಲ್ಲಿ ಸಾಲು ಬೈಕುಗಳನ್ನು ನಿಲ್ಲಿಲಾಗಿದೆ. ಗ್ಯಾರೇಜ್ ನಲ್ಲಿ ಎರಡು ಹಂತದ ಬೈಕ್ ಪಾರ್ಕಿಂಗ್ ಹೊಂದಿದೆ. ಅವರ ಸಂಗ್ರಹಾಲಯದಲ್ಲಿ ಹಲವು ಎಕ್ಸೊಟಿಕ್ಸ್ ದ್ವಿಚಕ್ರ ವಾಹನಗಳಿವೆ. ಅವರ ಬಳಿ ಇರುವ ಅಪರೂಪದ ಮತ್ತು ದುಬಾರಿ ಬೈಕ್ ಕವಾಸಕಿ ಹೆಚ್2, ಯಮಹಾ ವೈಜೆಡ್-ಆರ್ 1, ಕವಾಸಕಿ ನಿಂಜಾ ಝಡ್ಎಕ್ಸ್ 14 ಆರ್, ಹೋಂಡಾ ಫೈರ್‌ಬ್ಲೇಡ್, ಹಾರ್ಲೆ-ಡೇವಿಡ್ಸನ್ ಬೈಕ್‌ಗಳು ಮತ್ತು ಯಮಹಾ ಆರ್‌ಡಿ 350 ಸಹ ಬೈಕ್ ಸ್ಥಾನ ಪಡೆದಿದೆ.
ಇನ್ನು ಧೋನಿ ವಾಹನ ಸಂಗ್ರಹಾಲಯದಲ್ಲಿ ಅತ್ಯಂತ ಅಪರೂಪದ ಕಾನ್ಫೆಡರೇಟ್ ಎಕ್ಸ್ 132 ಹೆಲ್ ಕ್ಯಾಟ್ ಕೂಡ ಸೇರಿದೆ. ಎಂಎಸ್ ಧೋನಿ ಒಡೆತನದ ಐಕಾನಿಕ್ ಕಾರುಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ, ಲ್ಯಾಂಡ್ ರೋವರ್ ಡಿಸ್ಕವರಿ, ಹಮ್ಮರ್ ಎಚ್2 ಮತ್ತು ಇತ್ತೀಚೆಗಿನ ನಿಸ್ಸಾನ್ ಜೊಂಗಾ ಸೇರಿವೆ. ಧೋನಿಯ ಜೊಂಗಾ ವಾಹನ ಒಳಗೆ ಮತ್ತು ಹೊರಗೆ ಹೆಚ್ಚು ಕಸ್ಟಮೈಸ್ ಮಾಡಲಾಗಿದೆ.


Click it and Unblock the Notifications








