ಹೊಸ ದೊಡ್ಡ ಕಾರು ಖರೀದಿಸುತ್ತೀರಾ? GST ಕೌನ್ಸಿಲ್ ಭಾರೀ ಸೆಸ್ ವಿಧಿಸುವ ಸಾಧ್ಯತೆ!
ಜುಲೈ 11 ರಂದು, GST ಕೌನ್ಸಿಲ್ ಭಾರತದಲ್ಲಿ SUV ಗಳು ಮತ್ತು MUV ಗಳ ಮೇಲೆ 22 ಶೇಕಡಾ GSTಯ ಮೇಲೆ 22 ಶೇಕಡಾ ಸೆಸ್ ವಿಧಿಸಲು ಸಮಾಲೋಚನೆ ನಡೆಸುತ್ತದೆ. ಈ ತೆರಿಗೆ ವಿಧಿಸಿದರೆ ಭಾರತದಲ್ಲಿ ಎಸ್‍ಯುವಿ ಮತ್ತು ಎಕ್ಸ್‌ಯುವಿಗಳ ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ. ಇದರ ಕುರಿತು ಸಮಗ್ರವಾದ ಮಾಹಿತಿ ಇಲ್ಲಿದೆ.
ಪ್ರಸ್ತುತ ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ ನೀತಿಯನ್ನು ಅನುಸರಿಸಲಾಗುತ್ತಿದೆ. ಅದರಂತೆ, ಪ್ರತಿಯೊಂದು ಸರಕುಗಳ ಮೇಲೆ ವಿವಿಧ ಹಂತದಲ್ಲಿ ತೆರಿಗೆಗಳನ್ನು ವಿಧಿಸಲಾಗುತ್ತದೆ. ಭಾರತದಲ್ಲಿ ವಾಹನಗಳ ತೆರಿಗೆಯನ್ನು ಅವುಗಳ ಮೌಲ್ಯಕ್ಕೆ ಅನುಗುಣವಾಗಿ ಅನುಸರಿಸಲಾಗುತ್ತದೆ. ಹೀಗಾಗಿ ಐಷಾರಾಮಿ ಕಾರುಗಳಿಗೆ ಗರಿಷ್ಠ ಶೇ.28 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಕೆಲ ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ಎಸ್‍ಯುವಿ ಎಂದರೇನು ಎಂಬ ವಿವರಣೆ ನೀಡಿತ್ತು. ಅದರಂತೆ, ಆ ವಾಹನವು 4 ಮೀಟರ್‌ಗಿಂತ ಹೆಚ್ಚು ಉದ್ದವಿರಬೇಕು. ಇನ್ನೂ 1500 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವನ್ನು ಹೊಂದಿರಬೇಕು. ಅಲ್ಲದೇ ವಾಹನದ ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂಗಿಂತ ಹೆಚ್ಚಿರಬೇಕು.
ಈ ಎಲ್ಲಾ ಮಾದರಿಯ ಕಾರುಗಳು ಎಸ್‍ಯುವಿಗಳು ಎಂದು ಕೇಂದ್ರ ಸರ್ಕಾರ ವಿವರಿಸಿತ್ತು. ಪ್ರಸ್ತುತ, ಈ ಕಾರುಗಳ ಮೇಲೆ 28 ಪ್ರತಿಶತ GST ವಿಧಿಸಲಾಗುತ್ತದೆ. ಈ ತೆರಿಗೆಯೊಂದಿಗೆ ಹೆಚ್ಚುವರಿ 22 ಪ್ರತಿಶತ ಸೆಸ್ ವಿಧಿಸುವ ಸಾಧ್ಯತೆಗಳಿದೆ. ಈ ವೇಳೆ ಕೆಲವು ರಾಜ್ಯಗಳಲ್ಲಿ ಎಂಯುವಿ ಕಾರಿಗೆ ವಿವರಣೆ ಬೇಕು ಎಂದು GST ಕೌನ್ಸಿಲ್ ಮುಂದೆ ಮನವಿ ಸಲ್ಲಿಸಲಾಗಿತ್ತು
ಸಾಮಾನ್ಯವಾಗಿ ಎಂಯುವಿ, SUV ಮತ್ತು XUV ಕಾರುಗಳ ನಡುವೆ ವ್ಯತ್ಯಾಸವಿದೆ. ಈ ಮೂರು ವಾಹನಗಳಿಗೆ ಯಾವ ರೀತಿ ಸೆಸ್ ವಿಧಿಸಬೇಕೆಂದು ಎಂದು ರಾಜ್ಯ ಸರ್ಕಾರಗಳು ವಿವರಣೆ ಕೇಳಿದ್ದವು. ಎಸ್‍ಯುವಿಗಳು ಸ್ಪೋರ್ಟ್ಸ್ ಬಳಕೆಯ ವಾಹನಗಳಾಗಿವೆ, ಮತ್ತು ಈ ವಾಹನಗಳು ಎತ್ತರದ ಹಿಂಭಾಗ ಮತ್ತು ದೊಡ್ಡ ಬೂಟ್ ಅನ್ನು ಹೊಂದಿವೆ.
ಇನ್ನು ದೊಡ್ಡ ಎಸ್‍ಯುವಿ ಮಾದರಿಯ ವಾಹನಗಳಲ್ಲಿ ಬೂಟ್ ಸೌಲಭ್ಯ ಕಡಿಮೆ. ಇನ್ನು ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಲು ಮೂರು ಸಾಲು ಸೀಟ್ ಗಳನ್ನು ನೀಡಲಾಗುತ್ತದೆ. ಇನ್ನೂ ಯುಟಿಲಿಟಿ ವೆಹಿಕಲ್ ಆಗಿದ್ದರೆ ಮತ್ತು SUV ಅಲ್ಲ, ಆಗ ವಾಹನವನ್ನು ಕ್ರಾಸ್ಒವರ್ UV ಅಂದರೆ XUV ಎಂದು ಕರೆಯಲಾಗುತ್ತದೆ. MUV ಕಾರುಗಳನ್ನು MPV ಕಾರುಗಳು ಎಂದೂ ಕರೆಯುತ್ತಾರೆ.
ಇದು ಹೆಚ್ಚು ಪ್ರಯಾಣಿಕರನ್ನು ಸಾಗಿಸಬಹುದು. ಇನ್ನು ಮುಂದೆ MUV, XUV, SUV ನಂತಹ ಎಲ್ಲಾ ರೀತಿಯ ಕಾರುಗಳನ್ನು SUV ಎಂಬ ಸಾಮಾನ್ಯ ಹೆಸರಿನಿಂದ ಕರೆಯಬಹುದು. ಅದೇ ಸಮಯದಲ್ಲಿ, MUV ಗಳು ಮತ್ತು SUV ಗಳು 28% ಜಿಎಸ್ಟಿ ಮತ್ತು 22% ಸೆಸ್ಗೆ ಒಳಪಟ್ಟಿರೆ ಕಾರುಗಳ ಬೆಲೆಯನ್ನು ಗಣನೀಯವಾಗಿ ಹೆಚ್ಚಲಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್, ಜುಲೈ 11 ರಂದು ತನ್ನ ಸಭೆಯಲ್ಲಿ, 4 ಮೀಟರ್‌ಗಿಂತ ಹೆಚ್ಚು ಉದ್ದ, 1,500 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿರುವ ಎಲ್ಲಾ ಬಹು-ಬಳಕೆಯ ವಾಹನಗಳಿಗೆ (ಎಂಯುವಿ) 22 ಪ್ರತಿಶತದಷ್ಟು ಸೆಸ್ ಅನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ ಎಲ್ಲಾ ಎಸ್‌ಯುವಿಗಳು ಮತ್ತು ಮಲ್ಟಿ ಯುಟಿಲಿಟಿ ವಾಹನಗಳು ಶೇಕಡಾ 28 ಜಿಎಸ್‌ಟಿ ಸ್ಲ್ಯಾಬ್ ದರದಲ್ಲಿವೆ.


Click it and Unblock the Notifications