ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಈಗ ದೆಹಲಿಯಲ್ಲಿ ವಾಹನವನ್ನು ಖರೀದಿಸುವವರು ನೋಂದಣಿ ಪ್ರಮಾಣಪತ್ರಕ್ಕಾಗಿ (ಆರ್‌ಸಿ) ಹೆಚ್ಚು ಸಮಯ ಕಾಯಬೇಕಾಗಿಲ್ಲ. ಅವರು ಆರ್‌ಟಿಒಗೂ ಹೋಗಬೇಕಾಗಿಲ್ಲ. ಇನ್ನು ಮುಂದೆ ದೆಹಲಿಯ ವಾಹನ ವಿತರಕರೇ ತಮ್ಮ ಗ್ರಾಹಕರಿಗೆ ವಾಹನ ನೋಂದಣಿ ಸಂಖ್ಯೆಗಳನ್ನು ನೀಡಲಿದ್ದಾರೆ. ದೆಹಲಿಯ ವಾಹನ ವಿತರಕರು ಸ್ಥಳದಲ್ಲೇ ನೋಂದಣಿ ಪ್ರಮಾಣಪತ್ರಗಳನ್ನು ಒದಗಿಸುವ ಸೌಲಭ್ಯವನ್ನು ಆರಂಭಿಸಿದ್ದಾರೆ.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಮಂಗಳವಾರ ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ರವರು ವಾಹನ ಶೋರೂಂಗೆ ಭೇಟಿ ನೀಡಿ ಸ್ಥಳದಲ್ಲೇ ವಾಹನ ನೋಂದಣಿ ಪ್ರಮಾಣಪತ್ರ ನೀಡುವ ಪ್ರಯೋಜನಗಳನ್ನು ವಿವರಿಸಿದರು. ಈಗ ಹೊಸ ಆರ್‌ಸಿಯನ್ನು ಹೈಟೆಕ್ ಮಾಡಲಾಗಿದೆ. ಹೊಸ ಆರ್‌ಸಿಯಲ್ಲಿ ಹಳೆಯ ಚಿಪ್ ಬದಲಿಸಿ ಹೊಲೊಗ್ರಾಮ್ ನೀಡಲಾಗುತ್ತದೆ. ಈ ಹಾಲೋಗ್ರಾಮ್‌ನಿಂದ ನಕಲಿ ಆರ್‌ಸಿಗಳನ್ನು ನಕಲು ಮಾಡುವ ಸಮಸ್ಯೆಯೂ ಕೊನೆಗೊಳ್ಳುತ್ತದೆ.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಹೊಸ ಆರ್‌ಸಿಯಲ್ಲಿ ಕ್ಯೂಆರ್ ಕೋಡ್ ನೀಡಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿ ಚಾಲಕ ಹಾಗೂ ಅವರ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಬಹುದು. ಈ ವರ್ಷದ ಮಾರ್ಚ್ 17ರಂದು ದೆಹಲಿಯಲ್ಲಿ ಹೊಸ ಆರ್‌ಸಿ ನೀಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಯಿತು ಎಂದು ಅಲ್ಲಿಯ ಸಾರಿಗೆ ಸಚಿವರಾದ ಕೈಲಾಶ್ ಗೆಹ್ಲೋಟ್ ಮಾಹಿತಿ ನೀಡಿದರು.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಈ ಪ್ರಾಯೋಗಿಕ ಯೋಜನೆಯಲ್ಲಿ 1.4 ಲಕ್ಷಕ್ಕೂ ಹೆಚ್ಚು ಚಾಲಕರಿಗೆ ಆರ್‌ಸಿ ನೀಡಲಾಗಿದೆ ಎಂದು ಅವರು ಹೇಳಿದರು. ದೆಹಲಿಯ ಜನತೆಗೆ ಅತ್ಯುತ್ತಮ ಸಾರಿಗೆ ಸೌಲಭ್ಯ ಒದಗಿಸಲು ಬದ್ಧವಾಗಿದ್ದೇವೆ ಎಂದು ಅವರು ತಿಳಿಸಿದರು. ದೆಹಲಿಯಲ್ಲಿ ಪ್ರತಿ ವರ್ಷ 6 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಖರೀದಿಸಲಾಗುತ್ತದೆ. ಈ ಹಿಂದೆ ವಾಹನದ ಆರ್‌ಸಿ ಪಡೆಯಲು ಜನರು ಆರ್‌ಟಿಒ ಕಚೇರಿಗಳಿಗೆ ತೆರಳಬೇಕಾಗಿತ್ತು.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಈ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವು ದಿನಗಳು ಬೇಕಾಗುತ್ತವೆ. ಆದರೆ ಈಗ ಹೊಸ ವ್ಯವಸ್ಥೆಯ ಮೂಲಕ ವಾಹನ ಡೀಲರ್ ಗಳು ವಾಹನ ಖರೀದಿಸಿದವರಿಗೆ ತಕ್ಷಣವೇ ಆರ್‌ಸಿ ವಿತರಿಸುತ್ತಿದ್ದಾರೆ. ಇನ್ನು ದೆಹಲಿ ಸಾರಿಗೆ ಇಲಾಖೆಯು ಆಗಸ್ಟ್ 7 ರಿಂದ ತನ್ನ ಬಹುತೇಕ ಎಲ್ಲಾ ಸೇವೆಗಳನ್ನು ಆನ್ ಲೈನ್ ಮೂಲಕ ನೀಡುತ್ತಿದೆ. ಇಲಾಖೆಯು ಒಟ್ಟು 33 ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡುತ್ತಿದೆ.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಇವುಗಳಲ್ಲಿ ಕಲಿಯುವವರ ಪರವಾನಗಿ, ನಕಲಿ ಚಾಲನಾ ಪರವಾನಗಿ, ವಿಳಾಸ ಬದಲಾವಣೆ, ನೋಂದಣಿ ಪ್ರಮಾಣಪತ್ರ, ಎನ್‌ಒಸಿ, ಪರವಾನಗಿಗಳು ಸೇರಿದಂತೆ ಇತರ ಸೇವೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಫೇಸ್ ಲೆಸ್ ಸೇವೆ ಆರಂಭವಾದ ನಂತರ ಚಾಲನಾ ಪರವಾನಗಿ ಅರ್ಜಿದಾರರು ಖಾಯಂ ಚಾಲನಾ ಪರವಾನಗಿ ಹಾಗೂ ಫಿಟ್ ನೆಸ್ ಪರೀಕ್ಷೆ ಪ್ರಮಾಣ ಪತ್ರ ಪಡೆಯಲು ಮಾತ್ರ ಸಾರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಬೇಕಾಗಿದೆ.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವಾಗ, ಆನ್‌ಲೈನ್ ಪರೀಕ್ಷೆಯ ದಿನಾಂಕ ಹಾಗೂ ಸಮಯದ ಸ್ಲಾಟ್ ಬಗ್ಗೆ ಅರ್ಜಿದಾರರಿಗೆ ತಿಳಿಸಲಾಗುತ್ತದೆ. ಇದರ ನಂತರ, ಅರ್ಜಿದಾರರು ಆನ್‌ಲೈನ್ ಮೂಲಕ ಮನೆಯಲ್ಲೇ ಕುಳಿತು ನಿಗದಿತ ಸಮಯದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದು ಆಧಾರ್ ಸಕ್ರಿಯಗೊಳಿಸಿದ ವೇದಿಕೆಯಾಗಿದ್ದು, ಇದರಲ್ಲಿ ಅರ್ಜಿದಾರರ ಬಯೋಮೆಟ್ರಿಕ್ ಮಾಹಿತಿಯನ್ನು ಸಾಫ್ಟ್‌ವೇರ್ ಗುರುತಿಸುತ್ತದೆ.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಇದು ಅರ್ಜಿದಾರರು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ತೋರಿಸುತ್ತದೆ. ಈ ಆನ್‌ಲೈನ್ ಪರೀಕ್ಷೆಯ ನಂತರ, ಅರ್ಜಿದಾರರು ಶಾಶ್ವತ ಪರವಾನಗಿಗಾಗಿ ಆರ್‌ಟಿಒಗೆ ಬಂದು ಡ್ರೈವಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ದೆಹಲಿ ಸರ್ಕಾರವು 2020ರ ಫೆಬ್ರವರಿ ಹಾಗೂ 2021ರ ನವೆಂಬರ್ ನಡುವೆ ಮುಕ್ತಾಯಗೊಳ್ಳುವ ಕಲಿಕಾ ಪರವಾನಗಿಯ ಮಾನ್ಯತೆಯನ್ನು 2022ರ ಜನವರಿ 31ರವರೆಗೆ ವಿಸ್ತರಿಸಿದೆ.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಕೋವಿಡ್ 19 ಸಾಂಕ್ರಾಮಿಕ ರೋಗ ಹಾಗೂ ಡ್ರೈವಿಂಗ್ ಪರೀಕ್ಷೆಗೆ ಸ್ಲಾಟ್‌ಗಳನ್ನು ಪಡೆಯಲು ಜನರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೆಹಲಿ ಸಾರಿಗೆ ಇಲಾಖೆಯು ತನ್ನ ಆದೇಶದಲ್ಲಿ ವಿವಿಧ ಆರ್‌ಟಿಒ ಕಚೇರಿಗಳು ಹಾಗೂ ಫಿಟ್‌ನೆಸ್ ಕೇಂದ್ರಗಳಲ್ಲಿ ಭಾರೀ ಜನದಟ್ಟಣೆ ಉಂಟಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಇಲಾಖೆಯು ಇದನ್ನು ಅರ್ಜಿದಾರರು ಹಾಗೂ ಸಾರ್ವಜನಿಕ ಸೇವಾ ನೌಕರರ ಭದ್ರತೆಯ ಕಾಳಜಿ ಎಂದು ಕರೆದಿದೆ. ಈ ವರ್ಷದ ಆರಂಭದಲ್ಲಿ ಮೊದಲ ಹಂತದ ಫೇಸ್ ಲೆಸ್ ಸೇವೆಯನ್ನು ಆರಂಭಿಸಿದಾಗಿನಿಂದ, ವಾಹನ ಸಂಬಂಧಿತ ಸೇವೆಗಳಿಗಾಗಿ 2,16,835 ಅರ್ಜಿಗಳು ಹಾಗೂ ಚಾಲನಾ ಪರವಾನಗಿ ಸಂಬಂಧಿತ ಸೇವೆಗಳಿಗಾಗಿ 2,08,224 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿಕೊಂಡಿದೆ.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಈ ಅರ್ಜಿಗಳ ಪೈಕಿ ಸೆಪ್ಟೆಂಬರ್ 27ರವರೆಗೆ 92% ನಷ್ಟು ಚಾಲನಾ ಪರವಾನಗಿ ಹಾಗೂ 79.9% ನಷ್ಟು ಇತರೆ ವಾಹನ ಸಂಬಂಧಿತ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ದೆಹಲಿಯ ನಂತರ ಕರ್ನಾಟಕ ಸರ್ಕಾರವು ಸಹ ನಮ್ಮ ಬೆಂಗಳೂರಿನ ಸಾರಿಗೆ ಕಚೇರಿಗಳಲ್ಲಿ ಫೇಸ್ ಲೆಸ್ ಹಾಗೂ ಕಾಂಟ್ಯಾಕ್ಟ್ ಲೆಸ್ ಸೇವೆಗಳನ್ನು ಜಾರಿಗೆ ತಂದಿದೆ. ಆದರೆ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಜನರು ಪರದಾಡುವಂತಾಗಿದೆ.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಇನ್ನು 2021ರ ನವೆಂಬರ್ ತಿಂಗಳ ವಾಹನ ಮಾರಾಟ ಅಂಕಿ ಅಂಶಗಳು ಬಿಡುಗಡೆಯಾಗಿವೆ. ಕಳೆದ ತಿಂಗಳು ವಾಹನಗಳ ಎಲ್ಲಾ ವಿಭಾಗಗಳು ಕುಸಿತವನ್ನು ದಾಖಲಿಸಿವೆ. ಆದರೆ ವಾಹನಗಳ ರಫ್ತಿನಲ್ಲಿ ಹೆಚ್ಚಳ ಕಂಡು ಬಂದಿದೆ. ನವೆಂಬರ್ ತಿಂಗಳಿನಲ್ಲಿ ಪ್ರಯಾಣಿಕ ವಾಹನ ವಿಭಾಗದಲ್ಲಿ 2,15,626 ಯುನಿಟ್‌, ತ್ರಿಚಕ್ರ ವಾಹನ ವಿಭಾಗದಲ್ಲಿ 22,471 ಯುನಿಟ್‌, ದ್ವಿಚಕ್ರ ವಾಹನ ವಿಭಾಗದಲ್ಲಿ 10,50,616 ಯುನಿಟ್‌ಗಳು ಮಾರಾಟವಾಗಿವೆ.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಒಟ್ಟಾರೆಯಾಗಿ ಕಳೆದ ತಿಂಗಳು 12,88,759 ಯುನಿಟ್ ವಾಹನಗಳು ಮಾರಾಟವಾಗಿವೆ. ಪ್ರಯಾಣಿಕ ವಾಹನಗಳ ದೇಶಿಯ ಮಾರಾಟದ ಬಗ್ಗೆ ಹೇಳುವುದಾದರೆ, ನವೆಂಬರ್ ತಿಂಗಳಲ್ಲಿ 2,15,626 ಯುನಿಟ್‌ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಿವೆ. ಈ ಮಾರಾಟ ಪ್ರಮಾಣವು ಕಳೆದ ವರ್ಷದ ನವೆಂಬರ್ ತಿಂಗಳಿಗಿಂತ ಕಡಿಮೆಯಾಗಿದೆ. 2020ರ ನವೆಂಬರ್ ತಿಂಗಳಿನಲ್ಲಿ 2,64,898 ಯುನಿಟ್‌ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಹೊಸ ವಾಹನ ಖರೀದಿಸುವವರಿಗೆ ಸ್ಥಳದಲ್ಲೇ ದೊರೆಯಲಿದೆ ಆರ್‌ಸಿ

ಇನ್ನು ಕಳೆದ ತಿಂಗಳ ರಫ್ತು ಬಗ್ಗೆ ಹೇಳುವುದಾದರೆ ನವೆಂಬರ್‌ನಲ್ಲಿ 44,265 ಯುನಿಟ್‌ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ 38,300 ಯುನಿಟ್‌ ವಾಹನಗಳನ್ನು ರಫ್ತು ಮಾಡಲಾಗಿತ್ತು. ನವೆಂಬರ್‌ನಲ್ಲಿ 2,66,552 ಯುನಿಟ್ ವಾಹನಗಳನ್ನು ಉತ್ಪಾದಿಸಲಾಗಿದೆ. 2020ರ ನವೆಂಬರ್ ತಿಂಗಳಿನಲ್ಲಿ 2,94,596 ಯುನಿಟ್‌ ವಾಹನಗಳನ್ನು ಉತ್ಪಾದಿಸಲಾಗಿತ್ತು.

Article Published On: Wednesday, December 15, 2021, 10:09 [IST]
English summary
New vehicle buyers in delhi to get rc on spot details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+