ನೇಮಾರ್ ಜೂನಿಯರ್ ವಾಹನ ಕಲೆಕ್ಷನ್ ಬಲು ಜೋರು

Written By:

ನೀವೊಬ್ಬ ಫುಟ್ಬಾಲ್ ಪ್ರೇಮಿಯಾಗಿದ್ದಲ್ಲಿ ಬಹುಶ: ನೇಮಾರ್ ಯಾರೆಂಬುದು ಹೇಳಿಕೊಡುವ ಅಗತ್ಯವಿಲ್ಲ. ಬ್ರೆಜಿಲ್‌ನ ಉದಯೋನ್ಮುಖ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡಿರುವ ನೇಮಾರ್ ಡ ಸಿಲ್ವ ಸ್ಯಾಂಟೋಸ್ ಜೂನಿಯರ್ ಪ್ರಸ್ತುತ ಸಾಗುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ.

ಕಾರುಗಳ ದೊಡ್ಡ ಸಂಗ್ರಹವನ್ನೇ ಬಿಟ್ಟು ತೆರಳಿದ ಮೈಕಲ್ ಜಾಕ್ಸನ್

ನೇಮಾರ್ ಜೂನಿಯರ್ ಎಂದೇ ಪ್ರಖ್ಯಾತಿ ಗಿಟ್ಟಿಸಿಕೊಂಡಿರುವ ಈ 22ರ ಹರೆಯದ ಬ್ರೆಜಿಲ್ ಆಟಗಾರ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಇವುಗಳಲ್ಲಿ '2011ರ ವರ್ಷದ ದಕ್ಷಿಣ ಅಮೆರಿಕ ವರ್ಷದ ಫುಟ್ಬಾಲಿಗ' ಪ್ರಶಸ್ತಿ ಪ್ರಮುಖವಾಗಿದೆ.

ನೇಮಾರ್ ಜೂನಿಯರ್ ವಾಹನ ಕಲೆಕ್ಷನ್ ಬಲು ಜೋರು

ಬ್ರೆಜಿಲ್ ಹಾಗೂ ಸ್ಪೇನ್‌ನ ಎಫ್‌ಸಿ ಬಾರ್ಸಿಲೋನಾ ಕ್ಲಬ್ ಪರ ಮುನ್ನಡೆಯ ಹಾಗೂ ವಿಂಗರ್ ಆಟಗಾರನಾಗಿ ಗಮನ ಸೆಳೆದಿರುವ ನೇಮಾರ್ ಓರ್ವ ಪಕ್ಕಾ ವಾಹನ ಪ್ರೇಮಿ ಅಂದರೆ ತಪ್ಪಾಗಲಾರದು. ಅವರ ಬಳಿ ಕಾರುಗಳು ಮಾತ್ರವಲ್ಲ ಹೆಲಿಕಾಪ್ಟರ್, ವಿಹಾರ ದೋಣಿಗಳಂತಹ ದೊಡ್ಡ ಸಂಗ್ರಹವೇ ಇದೆ.

ಫೋಕ್ಸ್‌ವ್ಯಾಗನ್ ಟೋರೆಗ್ ವಿ8 ಎಫ್‌ಎಸ್‌ಐ

ಫೋಕ್ಸ್‌ವ್ಯಾಗನ್ ಟೋರೆಗ್ ವಿ8 ಎಫ್‌ಎಸ್‌ಐ

ನೇಮಾರ್ ಬಳಿಯಿರುವ ಕಾರುಗಳ ಪೈಕಿ ಫೋಕ್ಸ್‌ವ್ಯಾಗನ್ ಟೋರೆಗ್ ವಿ8 ಎಫ್‌ಎಸ್‌ಐ ಪ್ರಮುಖವಾಗಿದೆ. ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, 2002ನೇ ಇಸವಿಯಿಂದಲೇ ಕ್ರೀಡಾ ಬಳಕೆಯ ವಾಹನಗಳನ್ನು ಉತ್ಪಾದಿಸುತ್ತಿದೆ. ಇದು ನೇಮಾರ್ ಅವರ ಅತ್ಯಂತ ಪ್ರಿಯ ವಾಹನಗಳಲ್ಲಿ ಒಂದಾಗಿದೆ.

ಫೋಕ್ಸ್‌ವ್ಯಾಗನ್ ಟೋರೆಗ್ ವಿ8 ಎಫ್‌ಎಸ್‌ಐ

ಫೋಕ್ಸ್‌ವ್ಯಾಗನ್ ಟೋರೆಗ್ ವಿ8 ಎಫ್‌ಎಸ್‌ಐ

ತಮ್ಮ ಬಿಡುವಿನ ಸಮಯವನ್ನು ಸ್ನೇಹಿತರ ಜೊತೆಗೂಡಿ ಆಫ್ ರೋಡಿಂಗ್ ಸಾಹಸಮಯ ಚಾಲನೆಯನ್ನು ನೇಮಾರ್ ಇಷ್ಟಪಡುತ್ತಾರೆ. ಇಲ್ಲಿ ಎಸ್‌ಯುವಿ ಖರೀದಿಯ ಹಿಂದೆ ನೇಮಾರ್ ಉದ್ದೇಶವೂ ಇದೇ ಆಗಿತ್ತು ಅಂದರೆ ತಪ್ಪಾಗಲಾರದು.

ಆಡಿ ಆರ್8 ಜಿಟಿ

ಆಡಿ ಆರ್8 ಜಿಟಿ

ನೇಮಾರ್ ಪ್ರಿಯ ವಾಹನಗಳಲ್ಲಿ ಆಡಿ ಆರ್8 ಜಿಟಿ ಕೂಡಾ ಸೇರಿಕೊಂಡಿದೆ. ವಿಶೇಷವೆಂದರೆ ಎಲ್ಲ ಕ್ರೀಡಾಪಟುಗಳು ತಮ್ಮ ಗ್ಯಾರೇಜ್‌ನಲ್ಲಿ ಸ್ಪೋರ್ಟ್ಸ್ ಕಾರೊಂದನ್ನು ಹೊಂದಿರಲು ಬಯಸುತ್ತಾರೆ. ಅಂತವರಲ್ಲಿ ನೇಮಾರ್ ಸಹ ಓರ್ವರು. ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಚಾಲನಾ ಮಗ್ನವಾಗಿರುವ ನೇಮಾರ್ ತಮ್ಮ ಸೂಪರ್ ಕಾರಲ್ಲಿ ಜಾಲಿ ರೈಡ್ ಇಷ್ಟಪಡುತ್ತಾರೆ.

ಆಡಿ ಆರ್8 ಜಿಟಿ

ಆಡಿ ಆರ್8 ಜಿಟಿ

ಅಂದ ಹಾಗೆ ಆಡಿ ಆರ್ ಜಿಟಿ ಸ್ಪೋರ್ಟ್ಸ್ ಕಾರು, 5.3 ಲೀಟರ್ ಎಫ್‌ಎಸ್‌ಐ ಕ್ವಾಟ್ರೊ ಎಂಜಿನ್ ಹೊಂದಿದ್ದು, 552 ಅಶ್ವಶಕ್ತಿ ಉತ್ಪಾದಿಸುತ್ತದೆ. ಇದು ಕೇವಲ 3.6 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಹಾಗೆಯೇ ಗರಿಷ್ಠ 320 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದು ಬರೋಬ್ಬರಿ ಒಂದು ವರೆ ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ಪೋರ್ಷೆ ಪನಮೆರ

ಪೋರ್ಷೆ ಪನಮೆರ

ಇನ್ನುಳಿದಂತೆ ದೀರ್ಘ ಪಯಣದ ವೇಳೆ ಪೋರ್ಷೆ ಪನಮೆರ ಕಾರು ಬಳಕೆಯನ್ನು ನೇಮಾರ್ ಜೂನಿಯರ್ ಅತ್ಯಂತ ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಕಾರಣ ಇಷ್ಟೇ - ಪೋರ್ಷೆ ಪನಮೆರ ಐಷಾರಾಮಿ ಗ್ರ್ಯಾನ್ ಟರಿಸ್ಮೊ ವಾಹನವಾಗಿದ್ದು, ಡೀಸೆಲ್ ಜೊತೆಗೆ ಹೈಬ್ರಿಡ್ ಆವೃತ್ತಿಯನ್ನು ಹೊಂದಿದೆ. ಜರ್ಮನಿಯ ಈ ವಾಹನ ತಯಾರಕ ಸಂಸ್ಥೆಯು 2009ನೇ ಇಸವಿಯಲ್ಲಿ ಆರಂಭಿಸಿದ್ದ ಇದರ ಉತ್ಪಾದನೆಯು ಈಗಲೂ ನಡೆಯುತ್ತಿದೆ. ನಿಜವಾಗ್ಲೂ ಸ್ಟೈಲಿಶ್ ಯುವ ಆಟಗಾರಿಗೆ ಮಾಡಿದ ಸ್ಟೈಲಿಷ್ ಕಾರಾಗಿದೆ ಪನಮೆರ.

ಹೆಲಿಕಾಪ್ಟರ್

ಹೆಲಿಕಾಪ್ಟರ್

ನೇಮಾರ್ ಜೂನಿಯರ್ ವಾಹನ ಕ್ರೇಜ್ ಎಷ್ಟರ ಮಟ್ಟಿಗಿದೆ ಅಂದರೆ ಹೋಗಿ ಹೋಗಿ ಅತ್ತ ಹೆಲಿಕಾಪ್ಟರನ್ನೇ ಖರೀದಿಸಿ ಬಿಟ್ಟಿದ್ದಾರೆ. ಎಷ್ಟೇ ಆದರೂ ಕಾರುಗಳಿಗೆ ವಾಹನ ದಟ್ಟಣೆಯ ಕಿರಿಕಿರಿ ತಪ್ಪಿದ್ದಲ್ಲ. ಇದೇ ಕಾರಣಕ್ಕಾಗಿ ಅತಿ ಶೀಘ್ರದಲ್ಲೇ ನಿಗದಿತ ಗುರಿ ಮುಟ್ಟುವ ನಿಟ್ಟಿನಲ್ಲಿ ಹೆಲಿಕಾಪ್ಟರ್‌ವೊಂದನ್ನು ನೇಮಾರ್ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ವಿಹಾರ ನೌಕೆ

ವಿಹಾರ ನೌಕೆ

ಇವೆಲ್ಲ ಓಕೆ ಎನ್ನಬಹುದು. ಆದರೆ ಇದ್ಯಾಕೆ ವಿಹಾರ ನೌಕೆ ಎಂಬ ಸಂಶಯ ನಿಮ್ಮನ್ನು ಕಾಡುತ್ತಿದೆಯೇ? ಇದಕ್ಕುತ್ತರ ಇಲ್ಲಿದೆ ನೋಡಿ. ಮೋಜಿನ ಜೀವನ ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ ನೋಡೋಣ? ಇನ್ನು ಯುವ ಮನಸ್ಕರಿಗಂತೂ ನೀರಲ್ಲಿ ಹಾಯಾಗಿ ದೋಣಿಯಲ್ಲಿ ಪಯಣಿಸುವುದು ತುಂಬಾನೇ ಖುಷಿ ನೀಡುತ್ತದೆ. ಇದೇ ಕಾರಣಕ್ಕಾಗಿ ತಮ್ಮ ಬಳಿ ವಿಹಾರ ನೌಕೆಯೊಂದನ್ನು ನೇಮಾರ್ ಇಟ್ಟುಕೊಂಡಿದ್ದಾರೆ.

ನೇಮಾರ್ ಜೂನಿಯರ್ ವಾಹನ ಕಲೆಕ್ಷನ್ ಬಲು ಜೋರು

ಈ ಎಲ್ಲ ವಿಷಯಗಳು ಒಂದೆಡೆಯಾದರೆ ವಿಶ್ವ ವಿಖ್ಯಾತ ಮಾಜಿ ಆಟಗಾರ ಪೆಲೆ ಜೊತೆ ನೇಮಾರ್ ಜೂನಿಯರ್ ಅವರನ್ನು ಹೋಲಿಸಲಾಗುತ್ತದೆ. ಈ ನಿಟ್ಟಿನಲ್ಲಿ ಆಕರ್ಷಕ ವೀಡಿಯೋವನ್ನು ಮುಂದಿನ ಪುಟದಲ್ಲಿ ಹಂಚಲಾಗಿದೆ.

ವೀಡಿಯೋ ವೀಕ್ಷಣೆಯ ಬಳಿಕ ನೇಮಾರ್ ಜೂನಿಯರ್ ಬಗೆಗಿನ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

English summary
Neymar Jr is passionate about his Football, however, he is also passionate about the motor vehicles that he possesses. He has a long list of vehicles, we will today show you a few of his most cherished vehicles.
Story first published: Saturday, July 5, 2014, 6:02 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more