ನೈಟ್ ಕರ್ಫ್ಯೂ: ರಾತ್ರಿ ಅವಧಿಯಲ್ಲಿನ ವಾಹನ ಸಂಚಾರಕ್ಕೆ ಏನೆಲ್ಲಾ ರೂಲ್ಸ್?

ಇಂಗ್ಲೆಂಡ್‌ನಲ್ಲಿ ಕಂಡುಬಂದಿರುವ ಕೊರೊನಾ ವೈರಸ್‌ನ ಹೊಸ ಸೋಂಕಿನಿಂದ ಇಡೀ ವಿಶ್ವವೇ ಆತಂಕದಲ್ಲಿದ್ದು, ಹೊಸ ವೈರಸ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ನೈಟ್ ಕರ್ಫ್ಯೂ: ರಾತ್ರಿ ಅವಧಿಯಲ್ಲಿನ ವಾಹನ ಪ್ರಯಾಣಕ್ಕೆ ಏನೆಲ್ಲಾ ರೂಲ್ಸ್?

ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಕರ್ನಾಟಕ ಸರ್ಕಾರವು ಕೂಡಾ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ರಾತ್ರಿ ವೇಳೆ ಜನಸಂಪರ್ಕ ತಪ್ಪಿಸುವುದಕ್ಕಾಗಿ ಕಫ್ಯೂ ಜಾರಿಗೆಗೊಳಿಸಿದೆ. ನೈಟ್ ಕರ್ಫ್ಯೂ ಇಂದಿನಿಂದಲೇ ಜಾರಿಗೆಯಾಗಲಿದ್ದು, ರಾತ್ರಿ 10ರಿಂದ ಆರಂಭವಾಗಿ ಮುಂಜಾನೆ 6 ಗಂಟೆಯ ತನಕ ಕರ್ಫ್ಯೂ ಅನ್ವಯವಾಗುತ್ತದೆ.

ನೈಟ್ ಕರ್ಫ್ಯೂ: ರಾತ್ರಿ ಅವಧಿಯಲ್ಲಿನ ವಾಹನ ಪ್ರಯಾಣಕ್ಕೆ ಏನೆಲ್ಲಾ ರೂಲ್ಸ್?

ತುರ್ತು ಸೇವೆಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸೇವೆಗಳು ನಿಗದಿತ ಅವಧಿಯೊಳಗೆ ಮಾತ್ರ ಲಭ್ಯವಿರಲಿದ್ದು, ಕರ್ಫ್ಯೂ ಸಂದರ್ಭದಲ್ಲಿ ವಾಹನ ಸಂಚಾರವೂ ಕೂಡಾ ಸಂಪೂರ್ಣವಾಗಿ ನಿಷೇಧವಾಗಿರುತ್ತದೆ.

ನೈಟ್ ಕರ್ಫ್ಯೂ: ರಾತ್ರಿ ಅವಧಿಯಲ್ಲಿನ ವಾಹನ ಪ್ರಯಾಣಕ್ಕೆ ಏನೆಲ್ಲಾ ರೂಲ್ಸ್?

ಅಗತ್ಯ ಸೇವೆಗಳಿಗಾಗಿ ಬಳಕೆಯಾಗುವ ವಾಹನ ಸಂಚಾರವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಗಳ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ತುರ್ತು ಪ್ರಯಾಣದ ಅವಶ್ಯಕತೆಯಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಿಂದ ಎಮರ್ಜೆನ್ಸಿ ಪಾಸ್ ವಿತರಿಸುವ ಸಾಧ್ಯತೆಗಳಿವೆ.

ನೈಟ್ ಕರ್ಫ್ಯೂ: ರಾತ್ರಿ ಅವಧಿಯಲ್ಲಿನ ವಾಹನ ಪ್ರಯಾಣಕ್ಕೆ ಏನೆಲ್ಲಾ ರೂಲ್ಸ್?

ಇಂದು ಸಂಜೆಗೊಳಗೆ ರಾತ್ರಿ ಪ್ರಯಾಣದ ಕುರಿತು ಹೊಸ ಮಾರ್ಗಸೂಚಿ ಪ್ರಕಟಿಸುವುದಾಗಿ ಹೇಳಿರುವ ಕರ್ನಾಟಕ ಸರ್ಕಾರವು ಅನಗತ್ಯ ಸಂಚಾರಕ್ಕೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದ್ದು, ರಾತ್ರಿ ವೇಳೆಯ ಕಫ್ಯೂ ಮುಂದಿನ 2021ರ ಜನವರಿ 2ರ ತನಕವು ಜಾರಿಯಲ್ಲಿರುತ್ತದೆ. ಒಂದು ವೇಳೆ ಕರ್ಫ್ಯೂ ನಿಯಮ ಪಾಲನೆ ಮಾಡದೆ ಇದ್ದಲ್ಲಿ ಕಠಿಣ ಕ್ರಮ ಜರುಗಿಸಲಿದ್ದು, ವಾಹನಗಳನ್ನು ಕೂಡಾ ಜಪ್ತಿ ಮಾಡಲಾಗುತ್ತದೆ.

ನೈಟ್ ಕರ್ಫ್ಯೂ: ರಾತ್ರಿ ಅವಧಿಯಲ್ಲಿನ ವಾಹನ ಪ್ರಯಾಣಕ್ಕೆ ಏನೆಲ್ಲಾ ರೂಲ್ಸ್?

ಹೀಗಾಗಿ ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ರಾತ್ರಿ ಅವಧಿಯ ಪ್ರಯಾಣವನ್ನು ಹಗಲಿನ ವೇಳೆ ಕೈಗೊಳ್ಳುವುದು ಒಳಿತು. ಇಲ್ಲವಾದಲ್ಲಿ ಕಠಿಣ ಕ್ರಮಗಳನ್ನು ಎದುರಿಸಬೇಕಲ್ಲದೆ ದುಬಾರಿ ಮೊತ್ತದ ದಂಡ ತೆತ್ತಬೇಕಾದ ಸಂದರ್ಭ ಎದುರಾಗಬಹುದು.

MOST READ: ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ನೈಟ್ ಕರ್ಫ್ಯೂ: ರಾತ್ರಿ ಅವಧಿಯಲ್ಲಿನ ವಾಹನ ಪ್ರಯಾಣಕ್ಕೆ ಏನೆಲ್ಲಾ ರೂಲ್ಸ್?

ಜೊತೆಗೆ ರಾತ್ರಿ ಅವಧಿಯಲ್ಲಿ ಕಫ್ಯೂ ಬೆಂಗಳೂರಿನಲ್ಲಿ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಜಾರಿಗೆ ತರಲಾಗಿದ್ದು, ಆರೋಗ್ಯ ಸಮಿತಿಯಲ್ಲಿನ ತಜ್ಞರ ಸಲಹೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ನೈಟ್ ಕರ್ಫ್ಯೂ: ರಾತ್ರಿ ಅವಧಿಯಲ್ಲಿನ ವಾಹನ ಪ್ರಯಾಣಕ್ಕೆ ಏನೆಲ್ಲಾ ರೂಲ್ಸ್?

ಈ ಕುರಿತಂತೆ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಕಫ್ಯೂ ಸಂದರ್ಭದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಇರಲಿದ್ದು, ಉಳಿದ ಎಲ್ಲ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದರು.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ನೈಟ್ ಕರ್ಫ್ಯೂ: ರಾತ್ರಿ ಅವಧಿಯಲ್ಲಿನ ವಾಹನ ಪ್ರಯಾಣಕ್ಕೆ ಏನೆಲ್ಲಾ ರೂಲ್ಸ್?

ನೈಟ್ ಕಫ್ಯೂ ಹೊರತುಪಡಿಸಿ ಹಗಲಿನ ವೇಳೆಯ ವಾಹನ ಸಂಚಾರವು ಎಂದಿನಂತೆ ಮುಂದುವರಿದ್ದು, ಮುಂದಿನ 10 ದಿನಗಳ ಕಾಲ ಹೊಸ ವರ್ಷದ ಪಾರ್ಟಿ ಮತ್ತು ಇತರೆ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ನೈಟ್ ಕಫ್ಯೂ ಜಾರಿಗೊಳಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿರುವ ಸರ್ಕಾರವು ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆ ಆಗದಂತೆ ಕರ್ಫ್ಯೂ ಜಾರಿಗೆ ತರಲಾಗಿದೆ ಎಂದಿದೆ.

Most Read Articles

Kannada
English summary
Night Curfew In Karnataka From Today. Read in Kannada.
Story first published: Wednesday, December 23, 2020, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X