ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಬೈಕ್ ಸವಾರರ ಸವಾರರ ಜೊತೆಗೆ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿದ್ದರೂ ದಂಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಳಪೆ ಹೆಲ್ಮೆಟ್‌ಗಳ ಬಳಕೆಯು ಹೆಚ್ಚಳವಾಗಿದ್ದು, ಇವು ಬೈಕ್ ಸವಾರರಿಗೆ ರಕ್ಷಣೆ ನೀಡುವ ಬದಲಾಗಿ ಪ್ರಾಣಕ್ಕೆ ಕುತ್ತು ತರುತ್ತಿವೆ ಎಂದರೆ ತಪ್ಪಾಗುವುದಿಲ್ಲ.

ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ಭಾರತದಲ್ಲಿ ಬೈಕ್ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಬಳಕೆಯನ್ನು ಜಾರಿಗೆ ತರುವಲ್ಲಿ ಆಯಾ ರಾಜ್ಯಗಳ ಸಾರಿಗೆ ಇಲಾಖೆಗಳು ಉತ್ತಮ ಬದಲಾವಣೆ ತರುವಲ್ಲಿ ಯಶಸ್ವಿಯಾಗುತ್ತಿದ್ದರೂ ಕಳಪೆ ಹೆಲ್ಮೆಟ್ ಬಳಕೆಯನ್ನು ತಡೆಯುವಲ್ಲಿ ವಿಫಲವಾಗುತ್ತಿವೆ. ವಾಹನ ಸವಾರರು ದುಬಾರಿ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಗುಣಮಟ್ಟದ ಬಗ್ಗೆ ತಡೆಕೆಡಿಸಿಕೊಳ್ಳದೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಬಳಸುತ್ತಿರುವುದು ವಾಹನ ಸವಾರರ ಪ್ರಾಣ ಹಾನಿಗೆ ಕಾರಣವಾಗುತ್ತಿವೆ.

ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ಇದೇ ವಿಚಾರವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಕೇಂದ್ರ ಸಾರಿಗೆ ಇಲಾಖೆಯು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, 2021ರ ಜೂನ್‌ 1 ರಿಂದ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಮಾತ್ರ ಬಳಕೆ ಮಾಡಬೇಕು ಎಂಬ ಆದೇಶ ಹೊರಡಿಸಿದೆ.

ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ಈ ಹಿಂದೆ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್ ಮಾತ್ರ ಮಾರಾಟ ಮಾಡಬೇಕೆಂಬ ನಿಯಮವನ್ನು ಜಾರಿಗೆ ತಂದಿರುವ ಸಾರಿಗೆ ಇಲಾಖೆ ಇದೀಗ ಬಳಕೆದಾರರಿಗೂ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಐಎಸ್ಐ ಪ್ರಮಾಣೀಕೃತವಲ್ಲದ ಹೆಲ್ಮೆಟ್ ಬಳಕೆ ಮಾಡುವ ವಾಹನ ಸವಾರರಿಗೂ ನಿಗದಿತ ಮಟ್ಟದ ದಂಡ ವಿಧಿಸಲಿದೆ.

ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ಭಾರತದಲ್ಲಿ ಹೊಸ ವಾಹನ ಸಂಖ್ಯೆ ಹೆಚ್ಚುತ್ತಿರುವಂತೆ ಅಪಘಾತ ಪ್ರಕಣಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಹಲವಾರು ಅಪಘಾತ ಪ್ರಕರಣಗಳಲ್ಲಿ ಬೈಕ ಸವಾರರು ಪ್ರಾಣಕಳೆದುಕೊಂಡಿದ್ದಾರೆ. ಜೊತೆಗೆ ಅಪಘಾತದಲ್ಲಿ ಪ್ರಾಣಕಳೆದಕೊಂಡ ಹಲವಾರು ಬೈಕ್ ಸವಾರರು ಹೆಲ್ಮೆಟ್ ಬಳಕೆ ಮಾಡಿದ್ದರೂ ಕೂಡಾ ಕಳೆಪೆ ಹೆಲ್ಮೆಟ್‌ನಿಂದಾಗಿ ಜೀವಕಳೆದುಕೊಂಡ ಸಾವಿರಾರು ಪ್ರಕರಣಗಳನ್ನು ಪತ್ತೆಯಾಗಿದ್ದು, ಬೈಕ್ ಸವಾರರ ಸುರಕ್ಷತೆ ಕುರಿತಂತೆ ಸಾರಿಗೆ ಇಲಾಖೆಯು ಕೈಗೊಂಡಿರುವ ಕ್ರಮಗಳ ಕುರಿತು ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತ್ತು.

ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ಜೊತೆಗೆ ಬೈಕ್ ಸವಾರರ ಗರಿಷ್ಠ ಸುರಕ್ಷತೆಗಾಗಿ ಯಾವೆಲ್ಲಾ ಕ್ರಮಕೈಗೊಳ್ಳಬಹುದೆಂಬ ಕುರಿತು ಅಧ್ಯಯನ ನಡೆಸುವುದಕ್ಕಾಗಿ ಸಲಹಾ ಸಮಿತಿಯೊಂದನ್ನು ರಚಿಸುವಂತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಯಲಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ಸುಪ್ರೀಂಕೋರ್ಟ್ ನಿರ್ದೆಶನದಂತೆ ಬಿಎಸ್ಐ ಮತ್ತು ಏಮ್ಸ್ ವೈದ್ಯರನ್ನು ಒಳಗೊಂಡ ಸಮಿತಿಯು ಬೈಕ್ ಸವಾರರಿಗೆ ಸುರಕ್ಷತೆಗೆ ಯಾವೆಲ್ಲಾ ಕ್ರಮಕೈಗೊಳ್ಳಬಹುದು ಎಂಬ ಕುರಿತು ಸುಪ್ರೀಂಕೋರ್ಟ್‌ಗೆ ವರದಿ ಒಪ್ಪಿಸಿದ್ದು, ಸಮಿತಿಯ ಶಿಫಾರಸ್ಸಿನಂತೆ ಹೊಸ ನಿಯಮ ಜಾರಿ ತರುವಂತೆ ಸುಪ್ರೀಂಕೋರ್ಟ್ ಸಾರಿಗೆ ಇಲಾಖೆಗೆ ಆದೇಶ ನೀಡಿತ್ತು.

ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ಈ ಹಿನ್ನಲೆ ಸುಪ್ರೀಂಕೋರ್ಟ್ ಆದೇಶದಂತೆ ಜೂನ್ 1ರಿಂದಲೇ ಅನ್ವಯವಾಗುವಂತೆ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಮಾತ್ರ ಬಳಸಬೇಕೆಂಬ ಆದೇಶ ನೀಡಿದ್ದು, ಸಾರಿಗೆ ಇಲಾಖೆಯ ಹೊಸ ನಿರ್ಣಯವನ್ನು ಇಂಟರ್ನ್ಯಾಷನಲ್ ರೋಡ್ ಫೆಡರೇಶನ್ ಕೂಡಾ ಸ್ವಾಗತಿಸಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ಹೊಸ ನಿಯಮದಿಂದ ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿನ ಸಾವಿನ ಪ್ರಮಾಣವು ಗಣನೀಯವಾಗಿ ಇಳಿಕೆಯಾಗುವ ವಿಶ್ವಾಸ ವ್ಯಕ್ತಪಡಿಸಲಾಗಿದ್ದು, ಕಳಪೆ ಹೆಲ್ಮೆಟ್ ಉತ್ಪಾದನೆಗೆ ಮಾತ್ರವಲ್ಲ ಬಳಕೆಗೂ ಕಡಿವಾಣ ಹಾಕಲು ಹೊಸ ಆದೇಶ ಸಹಕಾರಿಯಾಗಿಲಿದೆ.

ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ಇದಲ್ಲದೆ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್ ಬಳಕೆ ವಿಚಾರವಾಗಿ ಕೆಲವು ಮಹತ್ವದ ಬದಲಾವಣೆ ತಂದಿರುವ ಬಿಎಸ್ಐ ಸಂಸ್ಥೆಯು ಪ್ರತಿ ಹೆಲ್ಮೆಟ್ ತೂಕವು 1.2 ಕೆಜಿ ಮಿರಬಾರದು ಎಂಬ ಕಠಿಣ ನಿಲುವನ್ನ ಸಡಿಲಿಸಿದ್ದು, ಹಗುರವಾದ ಮತ್ತು ಸುಧಾರಿತ ಗುಣಮಟ್ಟದ ಹೆಲ್ಮೆಟ್‌ಗಳ ಉತ್ಪಾದನೆಗೆ ಅವಕಾಶ ನೀಡಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಬೈಕ್ ಚಾಲನೆ ವೇಳೆ ಕಳಪೆ ಹೆಲ್ಮೆಟ್ ಬಳಕೆಯನ್ನು ತಪ್ಪಿಸಲು ಹೊಸ ರೂಲ್ಸ್ ಜಾರಿಗೆ ತಂದ ಸಾರಿಗೆ ಇಲಾಖೆ

ಇನ್ನು ಕೆಲವು ಬೈಕ್ ಸವಾರರು ದಂಡದಿಂದ ತಪ್ಪಿಸಲುಕೊಳ್ಳಲು ಮಾತ್ರವಲ್ಲದೆ ನಮ್ಮದೆ ರಕ್ಷಣೆಗಾಗಿ ಅಗ್ಗದ ಬೆಲೆಯ ಹೆಲ್ಮೆಟ್‌ ಬಳಕೆ ಮಾಡುವ ಬದಲು ಒಂದು ಉತ್ತಮ ಗುಣಮಟ್ಟದ ಹೆಲ್ಮೆಟ್ ಬಳಕೆ ಮಾಡುವುದು ಉತ್ತಮ. ಯಾಕೆಂದ್ರೆ ಒಂದು ಕೆಜಿ ತರಕಾರಿ ಖರೀದಿಸುವಾಗಿನ ಜಾಣ್ಮೆಯನ್ನ ಒಂದು ಹೆಲ್ಮೆಟ್ ಖರೀದಿಸುವ ಬಳಕೆ ಮಾಡದ್ದಿಲ್ಲಿ ಮುಂದೆ ಆಗಬಹುದಾದ ದುರಂತಗಳನ್ನು ಈಗಲೇ ತಡೆಯಬಹುದು ಅಲ್ಲವೇ?

Most Read Articles

Kannada
English summary
ISI Mark On Two-Wheeler Helmets Being Mandatory From June 2021. Read in Kannada.
Story first published: Saturday, November 28, 2020, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X