170 ಟನ್ ಭಾರದ ವಿಮಾನ ಎಳೆಯುವ ಮೂಲಕ ಗಿನ್ನೆಸ್ ಸೇರಿದ ನಿಸ್ಸಾನ್

Written By:

ಜಗತ್ತಿನ ಪ್ರಖ್ಯಾತ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಜಪಾನ್‌ನ ನಿಸ್ಸಾನ್ ಬಗ್ಗೆ ಎಲ್ಲರೂ ತಿಳಿದುಕೊಂಡಿರುವೀರಿ. ತಂತ್ರಜ್ಞಾನದಲ್ಲಿ ಎಂದೂ ಮುಂಚೂಣಿಯಲ್ಲಿರುವ ನಿಸ್ಸಾನ್ ಇದೀಗ ಇನ್ನೊಂದು ವಿಶ್ವದಾಖಲೆ ತನ್ನ ಹೆಗಲ ಮೇಲೆರಿಸಿಕೊಂಡಿದೆ.

170 ಟನ್ ಭಾರವುಳ್ಳ ಜಗತ್ತಿನ ಅತಿ ಭಾರದ ವಿಮಾನವನ್ನು ಎಳೆದೊಯ್ಯುವ ಮೂಲಕ ನಿಸ್ಸಾನ್ ಪ್ಯಾಟ್ರೋಲ್ (Nissan Patrol) ಎಸ್‌ಯುವಿ ಗಿನ್ನೆಸ್ ಪುಟ ಸೇರಿಕೊಂಡಿದೆ. 1,70,000 ಕೆ.ಜಿ ತೂಕದ Ilyushin Il-76 ಕಾರ್ಗೊ ವಿಮಾನವನ್ನು 50 ಮೀಟರ್‌ ವರೆಗೂ ಎಳೆದಿರುವ ನಿಸ್ಸಾನ್ ಪ್ಯಾಟ್ರೋಲ್ ಎಸ್‌ಯುವಿ, ಅತ್ಯಂತ ಹೆಚ್ಚು ಭಾರವುಳ್ಳ ವಸ್ತುವನ್ನು ಎಳೆದೊಯ್ದ ಉತ್ಪಾದಕಾ ವರ್ಷನ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಹಿಂದೆ 2006ರಲ್ಲಿ ಫೋಕ್ಯ್‌ವ್ಯಾಗನ್ Touareg, 155 ಟನ್ ಭಾರವುಳ್ಳ ಬೋಯಿಂಗ್ 747 ವಿಮಾನವನ್ನು 150 ಮೀಟರ್‌ ವರೆಗೆ ಎಳೆದೊಯ್ದಿರುವುದು ಈ ವರೆಗಿನ ದಾಖಲೆಯಾಗಿ ಪರಿಗಣಿಸಲ್ಪಟ್ಟಿತ್ತು. ಈದೀಗ ಈ ದಾಖಲೆಯನ್ನು ನಿಸ್ಸಾನ್ ಮುರಿದಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 22 ಈ ನೂತನ ದಾಖಲೆ ಸ್ಥಾಪಿಸಲಾಗಿದೆ. ಅಂದ ಹಾಗೆ ನಿಸ್ಸಾನ್ ಪ್ಯಾಟ್ರೋಲ್ 5.6 ಲೀಟರ್ ವಿ8 ಎಂಜಿನಿಂದ ನಿಯಂತ್ರಿಸಲ್ಪಡುತ್ತಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.

<center><iframe width="600" height="450" src="//www.youtube.com/embed/cJXlMKGRtZo" frameborder="0" allowfullscreen></iframe></center>

English summary
Nissan Patrol, an all-wheel drive SUV set a new Guinness World Record for ‘the heaviest object pulled by a production car' by pulling a 170 tonne (1,70,000 kg) Ilyushin Il-76 cargo plane over a Distance of 50 meters.
Story first published: Sunday, August 25, 2013, 9:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark