ಆಪ್ ರೋಡಿಂಗ್ ಕೌಶಲ್ಯ ತರಬೇತಿ ಅಕಾಡೆಮಿ ಆರಂಭಿಸಿದ ಮಹೀಂದ್ರಾ

Written By:

ಇತ್ತೀಚೆಗೆ ಭಾರತದಲ್ಲೂ ಆಪ್ ರೋಡಿಂಗ್ ಕೌಶಲ್ಯ ಪ್ರದರ್ಶನಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಉದಯೋನ್ಮುಖ ಪ್ರತಿಭೆಗಳಗೆ ಅತ್ಯುತ್ತಮ ಕೌಶಲ್ಯ ತರಬೇತಿ ನೀಡುವ ಉದ್ದೇಶದೊಂದಿದೆ ಮಹೀಂದ್ರಾ ಸಂಸ್ಥೆಯು ಅಕಾಡೆಮಿ ಒಂದನ್ನು ಆರಂಭಗೊಳಿಸಿದೆ.

To Follow DriveSpark On Facebook, Click The Like Button
ಆಪ್ ರೋಡಿಂಗ್ ಕೌಶಲ್ಯ ತರಬೇತಿ ಅಕಾಡೆಮಿ ಆರಂಭಿಸಿದ ಮಹೀಂದ್ರಾ

ದೇಶಿಯ ಮಾರುಕಟ್ಟೆ ವಿವಿಧ ಮಾದರಿಯ ಕಾರುಗಳ ಉತ್ಪಾದನೆಯಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಮಹೀಂದ್ರಾ ಸಂಸ್ಥೆಯು ಪ್ರತಿ ಕಾರು ಆವೃತ್ತಿಯಲ್ಲೂ ಆಪ್ ರೋಡಿಂಗ್ ಸಾಮರ್ಥ್ಯ ಒದಗಿಸುತ್ತಿದ್ದು, ಈ ನಡುವೆ ಆಪ್ ರೋಡಿಂಗ್ ಕಲಿಯಲು ಬಯಸುವವರಿಗೆ ಟ್ರೈನಿಂಗ್ ಅಕಾಡೆಮಿ ಪ್ರಾರಂಭ ಮಾಡಲಾಗಿದೆ.

ಆಪ್ ರೋಡಿಂಗ್ ಕೌಶಲ್ಯ ತರಬೇತಿ ಅಕಾಡೆಮಿ ಆರಂಭಿಸಿದ ಮಹೀಂದ್ರಾ

ಮಹಾರಾಷ್ಟ್ರದ ಇಗತ್ಪುರಿಯಲ್ಲಿ ಟ್ರೈನಿಂಗ್ ಸೆಂಟರ್ ಆರಂಭಗೊಂಡಿದ್ದು, ಇದು ದೇಶದಲ್ಲೇ ಮೊದಲ ಆಪ್ ರೋಡಿಂಗ್ ತರಬೇತಿ ಅಕಾಡೆಮಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಆಪ್ ರೋಡಿಂಗ್ ಕೌಶಲ್ಯ ತರಬೇತಿ ಅಕಾಡೆಮಿ ಆರಂಭಿಸಿದ ಮಹೀಂದ್ರಾ

ಆಪ್ ರೋಡಿಂಗ್ ಉತ್ಸಾಹಿಗಳಿಗೆ ವೃತ್ತಿಪರ ಕೌಶಲ್ಯಗಳನ್ನು ಹೊಂದಿರುವ ಟ್ರೈನರ್‌ಗಳಿಂದ ತರಬೇತಿ ನೀಡಲಾಗುತ್ತಿದ್ದು, 4x4 ಥಾರ್, ಸ್ಕಾರ್ಪಿಯೋ ಮತ್ತು ಹಳೇ ಮಾದರಿಯ ಜೀಪ್‌ಗಳನ್ನು ತರಬೇತಿಗಾಗಿ ಬಳಕೆ ಮಾಡಲಾಗುತ್ತಿದೆ.

Recommended Video
Tata Tiago XTA AMT Launched In India | In Kannada - DriveSpark ಕನ್ನಡ
ಆಪ್ ರೋಡಿಂಗ್ ಕೌಶಲ್ಯ ತರಬೇತಿ ಅಕಾಡೆಮಿ ಆರಂಭಿಸಿದ ಮಹೀಂದ್ರಾ

ಇನ್ನೊಂದು ಮುಖ್ಯ ವಿಚಾರವೆಂದರೇ ಇದೊಂದು ಸಂಘಟಿತ ಸಂಸ್ಥೆಯಾಗಿದ್ದು, ಆಪ್ ರೋಡಿಂಗ್ ಉತ್ಸಾಹಿಗಳಿಗೆ ನಾಲ್ಕು ವಿಭಾಗಗಳಲ್ಲಿ ತರಬೇತಿ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಲ್ಲಿ ಪ್ರಥಮ ಬಾರಿಗೆ ಸೇರಬಯಸುವವರು ಪ್ರಾಥಮಿಕ ಹಂತದ 'ಗೆಟ್ಟಿಂಗ್ ಡರ್ಟಿ' ತರಬೇತಿ ಕಡ್ಡಾಯವಾಗಿರುತ್ತದೆ.

ಆಪ್ ರೋಡಿಂಗ್ ಕೌಶಲ್ಯ ತರಬೇತಿ ಅಕಾಡೆಮಿ ಆರಂಭಿಸಿದ ಮಹೀಂದ್ರಾ

ತದನಂತರ ಬೇಡಿಕೆ ಅನುಗುಣವಾಗಿ ಟ್ರಯಲ್ ಸರ್ವೈವರ್, ಗ್ಲೋಬಲ್ ಎಕ್ಸ್ಪೋರರ್ ಮತ್ತು ಅಂತಿಮ ಹಂತದ 'ಮಹೀಂದ್ರಾ ಸರ್ಟಿಫೈಡ್ ಆಫ್-ರೋಡ್ ಟ್ರೇನರ್' ಕೋರ್ಸ್ ಲಭ್ಯವಿದ್ದು, ಆಫ್-ರೋಡಿಂಗ್‌ನಲ್ಲಿ ನುರಿತ ಬೋಧಕರಿಂದಲೇ ತರಬೇತಿ ಒದಗಿಸಲಾಗುತ್ತದೆ.

ಆಪ್ ರೋಡಿಂಗ್ ಕೌಶಲ್ಯ ತರಬೇತಿ ಅಕಾಡೆಮಿ ಆರಂಭಿಸಿದ ಮಹೀಂದ್ರಾ

ಹೀಗಾಗಿ ಪ್ರತಿ ಅಭ್ಯರ್ಥಿಗೆ ಗೆಟ್ಟಿಂಗ್ ಡರ್ಟಿ ಕೋರ್ಸ್‌ಗೆ ಸೆೇರಲು ರೂ.7,500, ಟ್ರಯಲ್ ಸರ್ವೈವರ್ ಕೋರ್ಸ್‌ಗೆ ರೂ.17,500 ಮತ್ತು ಗ್ಲೊಬಲ್ ಗ್ಲೋಬಲ್ ಎಕ್ಸ್ಪೋರರ್ ಕೋರ್ಸ್‌ಗೆ ರೂ.25,000 ನಿಗದಿ ಮಾಡಲಾಗಿದ್ದು, ಮೂರನೇ ಹಂತವನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉಚಿತವಾಗಿ 'ಮಹೀಂದ್ರಾ ಸರ್ಟಿಫೈಡ್ ಆಫ್-ರೋಡ್ ಟ್ರೇನರ್' ಕೋರ್ಸ್ ನೀಡಲಾಗುತ್ತದೆ.

ಆಪ್ ರೋಡಿಂಗ್ ಕೌಶಲ್ಯ ತರಬೇತಿ ಅಕಾಡೆಮಿ ಆರಂಭಿಸಿದ ಮಹೀಂದ್ರಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಆಪ್ ರೋಡಿಂಗ್ ಉತ್ಸಾಹಿಗಳು ತಮ್ಮ ಕೌಶಲ್ಯವನ್ನು ಮೋಟಾರ್ ಸ್ಪೋರ್ಟ್‌ಗೆ ತೆರೆದುಕೊಳ್ಳಲು ಇದೊಂದು ಉತ್ತಮ ಮಾರ್ಗವಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಸಂಪರ್ಕಿಸಬಹುದಾಗಿದೆ. ಜೊತೆಗೆ 28 ಎಕರೆ ವಿಶಾಲ ಪ್ರದೇಶದಲ್ಲಿ ಸ್ಥಾಪಿತವಾಗಿರೋ ಮಹೀಂದ್ರಾ ಆಪ್ ರೋಡಿಂಗ್ ಟ್ರೈನಿಂಗ್ ಸೆಂಟರ್ ಸುಧಾರಿತ ಸೌಲಭ್ಯಗೊಂದಿಗೆ ಹಲವು ವಿಶೇಷತೆ ಕಾರಣವಾಗಿದೆ ಎಂದು ಹೇಳಬಹುದು.

English summary
Read in Kannada about Mahindra Started Off-Road Training Academy in Igatpuri, Maharashtra.
Story first published: Tuesday, August 29, 2017, 13:29 [IST]
Please Wait while comments are loading...

Latest Photos