ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಬಹುತೇಕ ಭಾರತೀಯ ಯುವಕರು ದ್ವಿಚಕ್ರ ವಾಹನಗಳಲ್ಲಿ ಲಾಂಗ್ ರೈಡ್'ಗಳಿಗೆ ತೆರಳಲು ಇಷ್ಟಪಡುತ್ತಾರೆ. ಇನ್ನೂ ಕೆಲ ಯುವಕರು ದೇಶಾದ್ಯಂತ ಬೈಕ್ ಮೂಲಕವೇ ಪ್ರಯಾಣಿಸಲು ಇಷ್ಟ ಪಡುತ್ತಾರೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಆದರೆ ವಯೋವೃದ್ಧ ದಂಪತಿಗಳು ತಮ್ಮ ದ್ವಿಚಕ್ರ ವಾಹನದಲ್ಲಿ ದೇಶಾದ್ಯಂತ ಸಂಚರಿಸಿರುವ ಸಂಗತಿ ಬಹುತೇಕ ಜನರಿಗೆ ತಿಳಿದಿಲ್ಲ. ಈ ದಂಪತಿಗಳು ರಾಯಲ್ ಎನ್‌ಫೀಲ್ಡ್ ಕಂಪನಿ ಆಯೋಜಿಸಿದ್ದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇತ್ತೀಚಿಗೆ ರಾಯಲ್ ಎನ್‌ಫೀಲ್ಡ್ ಕಂಪನಿಯ ಏರ್ಪಡಿಸಿದ್ದ ರೈಡರ್ ಮೆನಿಯಾ ಕಾರ್ಯಕ್ರಮದಲ್ಲೂ ಈ ದಂಪತಿ ಭಾಗಿಯಾಗಿದ್ದರು ಎಂಬುದು ಗಮನಾರ್ಹ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಈ ದಂಪತಿಗಳು ಕರೋನಾ ವೈರಸ್ ಸೋಂಕು ತಗುಲಿ ಪ್ರಾಣ ಕಳೆದು ಕೊಂಡಿದ್ದಾರೆ. ಈ ಮಹಾಮಾರಿ ವೈರಸ್ ಈ ವೃದ್ಧ ದಂಪತಿಗಳ ಬಲಿ ಪಡೆದಿದೆ. ಬೆಂಗಳೂರಿನ ಜಯನಗರದಲ್ಲಿ ವಾಸಿಸುತ್ತಿದ್ದ 71 ವರ್ಷದ ಓಂಪ್ರಕಾಶ್ ಸಿದ್ಧನಂಜಪ್ಪ ಹಾಗೂ ಅವರ ಪತ್ನಿ 66 ವರ್ಷದ ಸಾವಿತ್ರಿ ಒಂಪ್ರಕಾಶ್ ಎಂಬುವವರೇ ಕರೋನಾ ವೈರಸ್'ನಿಂದ ಪ್ರಾಣ ಕಳೆದುಕೊಂಡ ದಂಪತಿ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಕಳೆದ ವರ್ಷ ಕರೋನಾ ವೈರಸ್ ಮೊದಲ ಅಲೆ ಕಾಣಿಸಿಕೊಂಡ ಸಂದರ್ಭದಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಕರೋನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ವಯಸ್ಸಾದವರಿಗೆ ಮನೆಯಿಂದ ಹೊರ ಬರದಂತೆ ಸೂಚಿಸಲಾಗಿತ್ತು.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಆದರೂ ಈ ದಂಪತಿಗಳು ರಾಯಲ್ ಎನ್‌ಫೀಲ್ಡ್ ಬೈಕಿನಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದರು ಎಂದು ಹೇಳಲಾಗಿದೆ. ಇತ್ತೀಚಿಗೆ ಈ ದಂಪತಿಗಳು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದರು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಕಳೆದ ಬುಧವಾರ ಓಂಪ್ರಕಾಶ್'ರವರು ಮೃತಪಟ್ಟಿದ್ದರು. ಕಳೆದ ಶುಕ್ರವಾರ ಸಾವಿತ್ರಿರವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅವರ ಬೈಕರ್ ಸ್ನೇಹಿತರಾದ ಮೈಸೂರಿನ ಸನ್ನಿ ಎಂಬುವವರು ಮಾಹಿತಿ ನೀಡಿದ್ದಾರೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ದ್ವಿಚಕ್ರ ವಾಹನದಲ್ಲಿ ದೇಶಾದ್ಯಂತ ಪ್ರಯಾಣ ಬೆಳೆಸಿದ್ದ ದಂಪತಿಗಳ ಸಾವು ಅವರ ಸಂಬಂಧಿಕರಿಗೆ ಮಾತ್ರವಲ್ಲದೆ ಬೈಕರ್ ತಂಡಕ್ಕೂ ಆಘಾತವನ್ನುಂಟು ಮಾಡಿದೆ.ಬೆಂಗಳೂರು ರಾಯಲ್ ಎನ್‌ಫೀಲ್ಡ್ ಬೈಕರ್ ತಂಡವು ದಂಪತಿಗಳ ಸಾವಿನ ಬಗ್ಗೆ ಸಂತಾಪ ಸೂಚಿಸಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಓಂ ಪ್ರಕಾಶ್'ರವರು ತಮ್ಮ 16ನೇ ವಯಸ್ಸಿನಲ್ಲಿಯೇ ಪ್ರಯಾಣಿಸುವುದನ್ನು ಆರಂಭಿಸಿದ್ದರು. ಪ್ರವಾಸದ ಬಗ್ಗೆ ಅವರಲ್ಲಿದ್ದ ಕುತೂಹಲವೇ ಕರೋನಾ ಹರಡುವಿಕೆಯ ನಡುವೆಯೂ ಅವರನ್ನು ಹೊರಗೆ ತಿರುಗಾಡುವಂತೆ ಮಾಡಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಓಂ ಪ್ರಕಾಶ್ ಭಾರತೀಯ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ಸೇವೆಗಳ ನಿವೃತ್ತ ಉಪ ಅಕೌಂಟೆಂಟ್ ಎಂಬುದು ಗಮನಾರ್ಹ. ಪ್ರಯಾಣ ಮಾಡುವುದು ಅವರ ಮೊದಲ ಪ್ರೀತಿಯಾಗಿತ್ತು ಎಂದು ಹೇಳಲಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಸದಾ ಕಾಲ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದ ದಂಪತಿ ಎರಡು ದಿನಗಳ ಅಂತರದಲ್ಲಿ ಮೃತಪಟ್ಟಿದ್ದಾರೆ. ಈ ದಂಪತಿಗಳು ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ವಿಶೇಷ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಪ್ರವಾಸಕ್ಕೆ ಬೇಕಾದ ಟೆಂಟ್ ಹಾಗೂ ಇತರ ಅಗತ್ಯ ವಸ್ತುಗಳನ್ನು ದಂಪತಿಗಳು ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿನಲ್ಲಿಯೇ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Most Read Articles

Kannada
English summary
Old couples who loved travelling succumbs to Covid 19. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X