ಸೈಕಲ್ ರಿಕ್ಷಾದಲ್ಲೇ ಲಡಾಕ್ ಕಣಿವೆ ಏರಲಿರುವ 'ರಿಕ್ಷಾವಾಲಾ'

Written By:

ಜಗತ್ತಿನ ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಜಮ್ಮು ಮತ್ತು ಕಾಶ್ಮೀರದ ಕಣಿವ ರಾಜ್ಯವಾಗಿರುವ ಲಡಾಕ್‌ ಸದಾ ಸಾಹಸಿಗರನ್ನು ಕೈಬೀಸಿ ಕರೆಯುತ್ತಿದೆ.

ಈ ಎಲ್ಲ ವಿಚಾರಗಳು ಒಂದೆಡೆಯಾದರೆ ಸತ್ಯೇನ್ ದಾಸ್ ಎಂಬ 40ರ ಹರೆಯದ ಸಾಹಸಿಗ, ತಮ್ಮ ಸೈಕಲ್ ರಿಕ್ಷಾದಲ್ಲೇ ಜಗತ್ತಿನ ಅತ್ಯಂತ ಎತ್ತರದ ಮೋಟಾರು ಸಂಚಾರಿ ಪ್ರದೇಶವಾಗಿರುವ ಲಡಾಕ್‌ನ ಖರ್ದುಂಗ್‌ ಲಾ ಪಾಸ್ (Khardung La pass) ಮುಟ್ಟುವ ಸಾಹಸಕ್ಕೆ ಮುಂದಾಗಿದ್ದಾರೆ.

ಸೈಕಲ್ ರಿಕ್ಷಾದಲ್ಲೇ ಲಡಾಕ್ ಕಣಿವೆ ಏರಲಿರುವ 'ರಿಕ್ಷಾವಾಲಾ'

ಇಲ್ಲಿ ವಿಶೇಷ ಅಂಶವೆಂದರೆ ಸತ್ಯೇನ್ ತಮ್ಮ ಪಯಣವನ್ನು ಕೋಲ್ಕತ್ತಾದಿಂದ ಆರಂಭಿಸಿದ್ದರು. ಅಂದರೆ ಸರಿ ಸುಮಾರು 3,000 ಕೀ.ಮೀ. ದೂರದ ಹಾದಿಯನ್ನು ತಮ್ಮ ಸೈಕಲ್ ರಿಕ್ಷಾದಲ್ಲೇ ಕ್ರಮಿಸಲಿದ್ದಾರೆ.

ಸೈಕಲ್ ರಿಕ್ಷಾದಲ್ಲೇ ಲಡಾಕ್ ಕಣಿವೆ ಏರಲಿರುವ 'ರಿಕ್ಷಾವಾಲಾ'

ದಕ್ಷಿಣ ಕೋಲ್ಕತ್ತಾದ ಓರ್ವ ಸಾಮಾನ್ಯ ಸೈಕಲ್ ರಿಕ್ಷಾ ಸವಾರರಾಗಿರುವ ಸತ್ಯೇನ್ ತಮ್ಮ ದೈನಂದಿನ ಸಂಪಾದನೆಯಲ್ಲಿ ಮಿಕ್ಕಿದನ್ನು ಸಂಗ್ರಹಿಸಿಡುತ್ತಿದ್ದರು. ಅಂತೆಯೇ ಕೆಲವೊಂದು ಕ್ಲಬ್ ದಾನಿಗಳ ನೆರವಿನಿಂದ ಲಡಾಕ್ ಪ್ರಯಾಣ ಹಮ್ಮಿಕೊಂಡಿದ್ದಾರೆ.

ಸೈಕಲ್ ರಿಕ್ಷಾದಲ್ಲೇ ಲಡಾಕ್ ಕಣಿವೆ ಏರಲಿರುವ 'ರಿಕ್ಷಾವಾಲಾ'

ಕೋಲ್ಕತ್ತಾದಿಂದ ಪ್ರಯಾಣ ಆರಂಭಿಸಿದ್ದ ಸತ್ಯೇನ್ ಬಳಿಯೀಗ ಮಾರ್ಗ ನಕಾಶೆ ಹಾಗೂ ಅಗತ್ಯ ಸಾಮಾಗ್ರಿಗಳು ಮಾತ್ರವಿದೆ. ಆರಂಭದಲ್ಲಿ ತಮ್ಮ ಗಾಡಿಗೆ 15,000 ರು.ಗಳನ್ನು ಖರ್ಚು ಮಾಡಿದ್ದ ಸತ್ಯೇನ್, ಹೆಚ್ಚುವರಿ ಬ್ರೇಕ್, ಚಕ್ರಗಳನ್ನು ಲಗತ್ತಿಸಿದ್ದರಲ್ಲದೆ ವಾಹನದ ಭಾರ ಕಡಿಮೆ ಮಾಡುವ ನಿಟ್ಟಿನಲ್ಲಿ ತಮ್ಮ ಸೈಕಲ್ ರಿಕ್ಷಾವನ್ನು ಪರಿಷ್ಕರಿಸಿದ್ದರು.

ಸೈಕಲ್ ರಿಕ್ಷಾದಲ್ಲೇ ಲಡಾಕ್ ಕಣಿವೆ ಏರಲಿರುವ 'ರಿಕ್ಷಾವಾಲಾ'

ಅಂದ ಹಾಗೆ ಸತ್ಯೇನ್ ಅವರಿಗೆ ಇದೇನು ಹೊಸ ಅನುಭವವೇನಲ್ಲ. ಈ ಹಿಂದೆ ತಮ್ಮ ಪತ್ನಿ ಹಾಗೂ ಮಗಳ ಜೊತೆಗೆ ಹಿಮಾಚ ಪ್ರದೇಶದ ಪನಲಿಯಿಂದ 51 ಕೀ.ಮೀ. ದೂರದಲ್ಲಿರುವ ರೋಟ್ಯಾಂಗ್ ಪಾಸ್ ( Rohtang Pass) ಸಹ ಏರಿದ್ದರು.

ಸೈಕಲ್ ರಿಕ್ಷಾದಲ್ಲೇ ಲಡಾಕ್ ಕಣಿವೆ ಏರಲಿರುವ 'ರಿಕ್ಷಾವಾಲಾ'

ದಿನವೊಂದರಲ್ಲಿ 40ರಿಂದ 50 ಕೀ.ಮೀ. ಸಂಚರಿಸುವುದು ಸತ್ಯೇನ್ ಗುರಿಯಾಗಿದ್ದು, ಅಂದಾಜು 80,000 ರು. ವೆಚ್ಚ ತಗಲುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಹಾಯಾರ್ಥಿಗಳು ಎಟಿಎಂ ಕಾರ್ಡ್ ಸಹ ನೀಡಿದ್ದಾರೆ. ಈಗಾಗಲೇ ಉತ್ತರ ಪ್ರದೇಶ ಪ್ರವೇಶಿಸಿರುವ ಅವರು ಐದು ತಿಂಗಳ ಅವಧಿಯಲ್ಲಿ ತಮ್ಮ ಗುರಿ ಮುಟ್ಟುವ ನಿರೀಕ್ಷೆಯಲ್ಲಿದ್ದಾರೆ.

ಸೈಕಲ್ ರಿಕ್ಷಾದಲ್ಲೇ ಲಡಾಕ್ ಕಣಿವೆ ಏರಲಿರುವ 'ರಿಕ್ಷಾವಾಲಾ'

ಈ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ 17,582 ಅಡಿ ಎತ್ತರದ ಖರ್ದುಂಗ್ ಲಾ ಪಾಸ್ ಮುಟ್ಟಿದ ಸಾಧನೆ ಮಾಡಲಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಈ ಸಾಧನೆ ಗಿನ್ನೆಸ್ ಪುಟ ಸೇರುವ ನಿರೀಕ್ಷೆಯನ್ನು ಹೊಂದಿದ್ದಾರೆ.

English summary
A rickshaw 'walla' has set out on a daring 3,000-km expedition from Kolkata to the famous Khardung La pass in Ladakh, which has one of the world's highest motorable road.
Story first published: Wednesday, July 9, 2014, 6:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark