ಕ್ರಾಶ್ ಟೆಸ್ಟ್ ಗಾಗಿ ಚೀನಿ ಸಂಶೋಧಕರು ಮಾಡಿದ್ದೇನು ಗೊತ್ತಾ?

ವಾಹನಗಳು ತಯಾರಿಕೆಯ ಹಂತದಲ್ಲಿರುವಾಗ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ಕಾರಣಕ್ಕೆ, ವಾಹನಗಳನ್ನು ಕ್ರಾಶ್ ಟೆಸ್ಟ್ ಗಳಿಗೆ ಒಳಪಡಿಸಲಾಗುತ್ತದೆ. ಯಾವುದೇ ವಾಹನಗಳನ್ನು ಕ್ರಾಶ್ ಟೆಸ್ಟ್ ಗಳಿಗೆ ಒಳಪಡಿಸುವಾಗ ಡಮ್ಮಿ ವಸ್ತುಗಳನ್ನು ಅದರಲ್ಲಿಟ್ಟು ಪರೀಕ್ಷಿಸಲಾಗುತ್ತದೆ.

ಕ್ರಾಶ್ ಟೆಸ್ಟ್ ಗಾಗಿ ಚೀನಿ ಸಂಶೋಧಕರು ಮಾಡಿದ್ದೇನು ಗೊತ್ತಾ?

ಆದರೆ ಚೀನಿಯರು ಮಾತ್ರ ಡಮ್ಮಿ ವಸ್ತುಗಳನ್ನಿಡದೇ ಜೀವಂತ ಹಂದಿಗಳನ್ನು ಈ ಕ್ರಾಶ್ ಟೆಸ್ಟ್ ವಾಹನಗಳಲ್ಲಿಟ್ಟು ಪರೀಕ್ಷಿಸಿದ್ದಾರೆ. ಈ ವಾಹನಗಳಲ್ಲಿದ್ದ ಜೀವಂತ ಹಂದಿಗಳ ಪೈಕಿ ಕೆಲವು ಗಾಯ ಗೊಂಡಿದ್ದರೆ ಇನ್ನು ಕೆಲವು ಸಾವನ್ನಪ್ಪಿವೆ. 30 ಮೈಲಿ ವೇಗದಲ್ಲಿ ಈ ವಾಹನಗಳು ಗೋಡೆಗೆ ಡಿಕ್ಕಿ ಹೊಡೆದ ನಂತರ ಅದರಲ್ಲಿದ್ದ ಏಳು ಹಂದಿಗಳು ಸಾವನ್ನಪ್ಪಿವೆ.

ಕ್ರಾಶ್ ಟೆಸ್ಟ್ ಗಾಗಿ ಚೀನಿ ಸಂಶೋಧಕರು ಮಾಡಿದ್ದೇನು ಗೊತ್ತಾ?

ಇತರ ಎಂಟು ಹಂದಿಗಳು ರಕ್ತಸ್ರಾವ, ಮೂಳೆ ಮುರಿತ, ಮೂಗೇಟುಗಳು ಸೇರಿದಂತೆ ಹಲವು ರೀತಿಯ ಗಾಯಗಳನ್ನು ಅನುಭವಿಸಿವೆ. ಈ ಹಂದಿಗಳ ದೇಹಗಳನ್ನು ಪರೀಕ್ಷಿಸಿದ ಸಂಶೋಧಕರು ಶ್ವಾಸಕೋಶ, ಹಾಗೂ ಯಕೃತ್ತುಗಳಿಗೆ ಗಾಯವಾಗಿರುವುದನ್ನು ಕಂಡು ಹಿಡಿದಿದ್ದಾರೆ. ಕ್ರಾಶ್ ಟೆಸ್ಟ್ ಮಾಡುವ ಮುನ್ನ ಈ ಹಂದಿಗಳಿಗೆ 24 ಗಂಟೆಗಳ ಕಾಲ ಊಟ ನೀಡಿರಲಿಲ್ಲ.

ಕ್ರಾಶ್ ಟೆಸ್ಟ್ ಗಾಗಿ ಚೀನಿ ಸಂಶೋಧಕರು ಮಾಡಿದ್ದೇನು ಗೊತ್ತಾ?

ಪರೀಕ್ಷೆಗೆ ಆರು ಗಂಟೆಗಳ ಮೊದಲು ನೀರನ್ನು ಸಹ ನೀಡಲಾಗಿರಲಿಲ್ಲ. ಈ ಬಗ್ಗೆ ಮಾತನಾಡಿರುವ ಚೀನಾದ ವಿಜ್ಞಾನಿಗಳು ಮಕ್ಕಳಿಗೆ ಸೀಟ್‌ಬೆಲ್ಟ್‌ಗಳನ್ನು ಅಭಿವೃದ್ಧಿಪಡಿಸಲು ಎಳೆಯ ಹಂದಿಗಳನ್ನು ಬಳಸಿದ್ದಾಗಿ ತಿಳಿಸಿದ್ದಾರೆ. ಪ್ರಾಣಿಗಳ ಅಂಗರಚನಾ ರಚನೆಯು ಮಾನವನ ಆರು ವರ್ಷದ ಮಕ್ಕಳಂತೆಯೇ ಇರುವ ಕಾರಣ ಹಂದಿಗಳನ್ನು ಬಳಸಿದ್ದಾಗಿ ಹಾಗೂ ಮುಂಬರುವ ದಿನಗಳಲ್ಲಿ ಇದೇ ರೀತಿಯ ಪ್ರಯೋಗಗಳನ್ನು ಮಾಡುವುದಾಗಿ ತಿಳಿಸಿದರು. ಆದರೆ ಬ್ರಿಟಿಷ್ ತಜ್ಞರು ಈ ಪ್ರಯೋಗಗಳನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕ್ರಾಶ್ ಟೆಸ್ಟ್ ಗಾಗಿ ಚೀನಿ ಸಂಶೋಧಕರು ಮಾಡಿದ್ದೇನು ಗೊತ್ತಾ?

ಈ ಬಗ್ಗೆ ಮಾತನಾಡಿರುವ ಯುಕೆ ಮೂಲದ ಅಂಡರ್ಸ್ಟ್ಯಾಂಡಿಂಗ್ ಅನಿಮಲ್ ರಿಸರ್ಚ್ ಗ್ರೂಪ್‍‍ನ ಕ್ರಿಸ್ ಮ್ಯಾಗೀರವರು, ಇಂತಹ ಪರೀಕ್ಷೆಗಳನ್ನು ಯಾವುದೇ ದೇಶದಲ್ಲೂ ನಡೆಸಬಾರದು. ಈಗಾಗಲೇ ಸಾಕಷ್ಟು ಕ್ರ್ಯಾಶ್-ಟೆಸ್ಟ್ ಡಮ್ಮಿಗಳು ಅಸ್ತಿತ್ವದಲ್ಲಿವೆ. ಹಂದಿಗಳನ್ನು ಕ್ರಾಶ್ ಟೆಸ್ಟ್ ಗಳಿಗೆ ಏಕೆ ಬಳಸುತ್ತಾರೆಂದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಕ್ರಾಶ್ ಟೆಸ್ಟ್ ಗಾಗಿ ಚೀನಿ ಸಂಶೋಧಕರು ಮಾಡಿದ್ದೇನು ಗೊತ್ತಾ?

ಇಂಟರ್‍‍ನ್ಯಾಷನಲ್ ಜರ್ನಲ್ ಆಫ್ ಕ್ರ್ಯಾಶ್‌ವರ್ಥಿನೆಸ್‌ನಲ್ಲಿ ವರದಿಯಾದ ಈ ಸಂಶೋಧನೆಯು ಮೂರು ವಿಭಿನ್ನ ಸೀಟ್‌ಬೆಲ್ಟ್ ಮಾರ್ಪಾಡುಗಳ ಪರೀಕ್ಷೆಯನ್ನು ಒಳಗೊಂಡಿತ್ತು. ಎದೆ ಹಾಗೂ ಹೊಟ್ಟೆಗೆ ಗಾಯವಾಗುವುದನ್ನು ತಡೆಯುವ ಎರಡು ಪ್ಯಾರಲೆಲ್ ಬೆಲ್ಟ್ ಗಳು, ಒಂದು ಡಯಾಗ್ನಲ್ ಬೆಲ್ಟ್ ಹಾಗೂ ಲ್ಯಾಪ್ ಬೆಲ್ಟ್ ಮತ್ತು ಡಯಾಗ್ನಲ್ ಬೆಲ್ಟ್ ಗಳನ್ನು ಒಳಗೊಂಡಿದ್ದವು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕ್ರಾಶ್ ಟೆಸ್ಟ್ ಗಾಗಿ ಚೀನಿ ಸಂಶೋಧಕರು ಮಾಡಿದ್ದೇನು ಗೊತ್ತಾ?

ಪ್ರಾಣಿಗಳ ಹಕ್ಕುಗಳಿಗಾಗಿಯೇ ಇರುವ ಪೆಟಾ ಸಂಸ್ಥೆಯ ಪ್ರಕಾರ, ಉತ್ಸಾಹ ಮತ್ತು ಒತ್ತಡವನ್ನು ಕಡಿಮೆ ಮಾಡಲು ಅನೇಸ್ತೆಶಿಯಾ ನೀಡಲಾದ ಪ್ರಾಣಿಗಳ ಹೊಟ್ಟೆಯಲ್ಲಿ ಎಲೆಕ್ಟ್ರೊಡ್‍‍ಗಳನ್ನು ಸೇರಿಸಲಾಗಿತ್ತು. ಈ ಟೆಸ್ಟ್ ನಲ್ಲಿ ಉಂಟಾದ ಗಾಯಗಳಿಂದ ಏಳು ಹಂದಿಗಳು ಮೃತಪಟ್ಟವು. ಈ ಗಾಯಗಳಲ್ಲಿ ರಕ್ತಸ್ರಾವ ಹಾಗೂ ಮೂಳೆ ಮುರಿತಗಳು ಸೇರಿದ್ದವು ಎಂದು ಜರ್ನಲ್‌ನ ವರದಿ ತಿಳಿಸಿದೆ.

MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಕ್ರಾಶ್ ಟೆಸ್ಟ್ ಗಾಗಿ ಚೀನಿ ಸಂಶೋಧಕರು ಮಾಡಿದ್ದೇನು ಗೊತ್ತಾ?

ಪೆಟಾ ಈ ಪರೀಕ್ಷೆಗಳನ್ನು ಅನಾಗರಿಕವೆಂದು ಖಂಡಿಸಿದ್ದು, ಇದರಿಂದಾಗಿ ಹಂದಿಗಳು ರಕ್ತಸಿಕ್ತ, ಮೂಗೇಟಿಗೊಳಗಾದವು ಎಂದು ಹೇಳಿದೆ. ಕಂಪನಿಗಳು ಇಂದು ಕ್ರ್ಯಾಶ್ ಟೆಸ್ಟ್ ಗಾಗಿ ಕ್ಲಿನಿಕಲ್ ಹ್ಯೂಮನ್ ಸ್ಟಡೀಸ್, ಅಡ್ವಾನ್ಸ್ಡ್ ಕಂಪ್ಯೂಟರ್ ಮಾಡೆಲಿಂಗ್, 3 ಡಿ ಮೆಡಿಕಲ್ ಇಮೇಜಿಂಗ್ ಹಾಗೂ ಅತ್ಯಾಧುನಿಕ ಮನುಷ್ಯಾಕೃತಿಗಳಂತಹ ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತವೆ ಎಂದು ಹೇಳಲಾಗಿದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಕ್ರಾಶ್ ಟೆಸ್ಟ್ ಗಾಗಿ ಚೀನಿ ಸಂಶೋಧಕರು ಮಾಡಿದ್ದೇನು ಗೊತ್ತಾ?

ಇತರ ಕೆಲವರು ಮಾನವ ಶವ ಹಾಗೂ ವರ್ಚುವಲ್ ರಿಯಾಲಿಟಿ (ಡಿಜಿಟಲ್ ಕ್ರ್ಯಾಶ್ ಡಮ್ಮೀಸ್) ಗಳನ್ನು ಸಹ ಈ ಕ್ರಾಶ್ ಟೆಸ್ಟ್ ಗಳಿಗಾಗಿ ಬಳಸುತ್ತಾರೆ. 21ನೇ ಶತಮಾನದಲ್ಲಿ, ಪ್ರತಿಯೊಂದು ಕಾರ್ ಕಂಪನಿಗಳು ಈ ವಿಧಾನಗಳನ್ನು ಅಳವಡಿಸಿಕೊಂಡಿವೆ. ಈ ಮುಂಚೆ ಅಮೇರಿಕಾದಲ್ಲಿ ನಾಯಿ ಹಾಗೂ ಇತರ ಪ್ರಾಣಿಗಳನ್ನು ಈ ರೀತಿಯ ಕ್ರಾಶ್ ಟೆಸ್ಟುಗಳಿಗಾಗಿ ಬಳಸಲಾಗುತ್ತಿತ್ತು.

Most Read Articles

Kannada
English summary
Pigs used as crash test dummies in china - Read in Kannada
Story first published: Monday, November 4, 2019, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X