ಕಾರಿನಲ್ಲಿ ಪ್ರಯಾಣಿಸುವಾಗ ಅಡುಗೆ ಮಾಡಿ ಬಿಸಿಬಿಸಿಯಾಗಿ ತಿನ್ನಿ: ಈ ಕಾರಿನಲ್ಲಿದೆ ಅಡುಗೆ ಮನೆ

ಚೈನೀಸ್ ಸ್ಟಾರ್ಟ್-ಅಪ್ ಕಾರು ತಯಾರಕ ಕಂಪನಿಯಾದ ಪೋಲೆಸ್ಟೋನ್ಸ್ ಆಟೋಮೊಬೈಲ್ಸ್ ಅದರ ಮೊದಲ ಐಷಾರಾಮಿ ಮತ್ತು ಅತ್ಯಾಧುನಿಕ ಸೌಂಕರ್ಯ ಹೊಂದಿರುವ ಎಸ್‍ಯುವಿ ಬಿಡುಗಡೆ ಮಾಡಿದೆ. ಹೆಚ್ಚು ಅಡ್ವೆಂಚರ್ ಕಾರುಗಳನ್ನು ಇಷ್ಟಪಡುವರಿಗಾಗಿ ಈ ಪೋಲೆಸ್ಟೋನ್ಸ್ 01 ಎಸ್‍ಯುವಿಯ ಎಸ್‍ಯುವಿ ಕಸ್ಟಮ್-ನಿರ್ಮಿತವಾಗಿದೆ. ಪೋಲೆಸ್ಟೋನ್ಸ್ 01 ಎಸ್‌ಯುವಿಯು ಇಟಾಲಿಯನ್ ಬ್ರಾಂಡ್ ಪಿನಿನ್‌ಫರಿನಾದಿಂದ ವಿನ್ಯಾಸಗೊಳಿಸಲ್ಪಟ್ಟಿದೆ.

ಈ ಹೊಸ ಪೋಲೆಸ್ಟೋನ್ಸ್ ಐಷಾರಾಮಿ 4X4 ವಾಹನವಾಗಿದ್ದು, ಇದು ಲೆವೆಲ್-2 ಆಟೋನೊಮಸ್ ಬರುತ್ತದೆ. ಇದು ಟರ್ಬೋಚಾರ್ಜ್ಡ್ 1.5-ಲೀಟರ್ ಗ್ಯಾಸೋಲಿನ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು ಒಂದು ಜೋಡಿ ಎಲೆಕ್ಟ್ರಿಕ್ ಮೋಟಾರ್‌ಗಳಿಗೆ ಪವರ್ ಉತ್ಪಾದಿಸುತ್ತದೆ. ಆದರೆ ಈ ಎಸ್‍ಯುವಿಯ ಅತ್ಯಂತ ವಿಶಿಷ್ಟ ಅಂಶಗಳನ್ನು ಹಿಂಭಾಗದಲ್ಲಿ ಕಾಣಬಹುದು. ಪೋಲೆಸ್ಟೋನ್ಸ್ ಆಟೋಮೊಬೈಲ್ ಚೈನೀಸ್ ಸ್ಟಾರ್ಟ್ಅಪ್ ಆಗಿದ್ದು, ಇಟಾಲಿಯನ್ ಡಿಸೈನರ್ ಪಿನಿನ್ಫರಿನಾ ಅವರ ಸಹಾಯದಿಂದ 01 ಎಂಬ ಹೊಸ ಐಷಾರಾಮಿ ಎಸ್‍ಯುವಿಯನ್ನು ಅಭಿವೃದ್ಧಿಪಡಿಸಿದೆ.

Polestones 01

ಈ ಎಸ್‍ಯುವಿ ಅಂತರ್ನಿರ್ಮಿತ ಅಡುಗೆಮನೆ ಮತ್ತು ಸಾಹಸ ಪ್ರಿಯರಿಗೆ ಒಂದು ಗೆಝೆಬೊದೊಂದಿಗೆ ಬರುತ್ತದೆ. ಈ ಹೊಸ ಪೋಲೆಸ್ಟೋನ್ಸ್ 01 (Polestones 01) ಲೈಫ್ ಸ್ಟೈಲ್ ಎಸ್‍ಯುವಿಯು ಟೈಕ್ಲ್ ಗೇಟ್ ನಲ್ಲಿ ಸಂಯೋಜಿತವಾದ ಕ್ಯಾಂಪರ್-ಶೈಲಿಯ ಅಡುಗೆಮನೆಯೊಂದಿಗೆ ಬರುತ್ತದೆ. ಅಡುಗೆಮನೆಯು ಇಂಡಕ್ಷನ್ ಕುಕ್ಕರ್, ನೀರಿನ ವಿತರಕ, ಸಂಗ್ರಹಣೆ ಮತ್ತು ಕಾರ್ಯಸ್ಥಳದಂತಹ ವಿವಿಧ ಅಗತ್ಯ ಅಂಶಗಳನ್ನು ಒದಗಿಸುತ್ತದೆ.

ಹೊರಾಂಗಣ ಚಟುವಟಿಕೆಗಳಿಗೆ ವ್ಯಾಪಕ ವ್ಯಾಪ್ತಿಯನ್ನು ನೀಡಲು 270 ಡಿಗ್ರಿಗಳವರೆಗೆ ತೆರೆದುಕೊಳ್ಳಬಹುದಾದ ಸಂಯೋಜಿತ ಗೆಜೆಬೋ ಕೂಡ ಇದೆ. ಗೆಝೆಬೋ ಜೋಡಣೆ ಮಾಡಲು ಕೇವಲ ಐದು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಾರು ತಯಾರಕರು ಹೇಳುತ್ತಾರೆ. ಈ ಕಸ್ಟಮೈಸ್ ಕಾರಿನಲ್ಲಿ ಪ್ರಯಾಣಿಸಲು ಇಷ್ಟಪಡುವ ಬಹಳಷ್ಟು ಅಡ್ವೆಂಚರ್ ಪ್ರೇಮಿಗಳಿಗೆ ಈ ಎಸ್‍ಯುವಿಯು ಇಷ್ಟವಾಗುತ್ತದೆ.

Polestones 01

ಪೋಲೆಸ್ಟೋನ್ಸ್ 01 ಎಸ್‍ಯುವಿಯಲ್ಲಿ ಆರು ಅಥವಾ ಏಳು ಸೀಟುಗಳ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಇದು ಏರ್‌ಲೈನ್-ಶೈಲಿಯ ಒರಗಿರುವ ಸೀಟ್ ಆಯ್ಕೆಗಳೊಂದಿಗೆ ಬರುತ್ತದೆ. ಏಳು-ಸೀಟುಗಳ ಆವೃತ್ತಿಯು ಎರಡನೇ ಮತ್ತು ಮೂರನೇ ಸಾಲಿನ ಸೀಟುಗಳನ್ನು ಕಿಂಗ್-ಸೈಜ್ ಹಾಸಿಗೆಯ ರೀತಿಯಲ್ಲಿ ಮಡಚಲು ಸಾಧ್ಯವಾಗುತ್ತದೆ. ಮೊದಲ ಸಾಲಿನ ಬ್ಯಾಕ್‌ರೆಸ್ಟ್‌ಗಳ ಮೇಲೆ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಂ ಇದೆ.

ಒಮ್ಮೆ ಸಂಪೂರ್ಣವಾಗಿ ಒರಗಿಕೊಂಡ ನಂತರ, ಮನರಂಜನಾ ಡಿಸ್ ಪ್ಲೇಯನ್ಬ್ನು ತೆರೆದಾಗ ಎರಡನೇ ಮತ್ತು ಮೂರನೇ ಸಾಲನ್ನು ಒಂದು ರೀತಿಯ ಥಿಯೇಟರ್ ಆಗಿ ಪರಿವರ್ತಿಸಬಹುದು. ಕಾರ್ಯಕ್ಷಮತೆಯ ವಿಷಯದಲ್ಲಿ, ಚೈನೀಸ್ ಪೋಲೆಸ್ಟೋನ್ಸ್ 01 ಎಸ್‍ಯುವಿಯಲ್ಲಿ ಯಾವುದೇ ಪುಶ್ಓವರ್ ಅಲ್ಲ. ವರದಿಗಳ ಪ್ರಕಾರ, ಇದರ ಎಂಜಿನ್ 469 hp ಪವರ್ ಮತ್ತು 740 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Polestones 01

ಇನ್ನು ಈ ಹೊಸ ಎಸ್‍ಯುವಿಯು ಕೇವಲ 5.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದರ ಗಾತ್ರವನ್ನು ಪರಿಗಣಿಸಿ, 5 ಮೀಟರ್‌ಗಿಂತಲೂ ಹೆಚ್ಚು ಉದ್ದ, ಸುಮಾರು 2 ಮೀಟರ್ ಅಗಲ ಮತ್ತು ಎತ್ತರವನ್ನು ಹೊಂದಿದೆ. ಇದರ ಗಾತ್ರ ಮತ್ತು ಅದರ ಕೆಲವು ವಿನ್ಯಾಸದ ಅಂಶಗಳ ವಿಷಯದಲ್ಲಿ, ಎಸ್‍ಯುವಿ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ನೆನಪಿಸಬಹುದು.

ಈ ಎಸ್‍ಯುವಿಯಲ್ಲಿ CATL ನಿಂದ ತಯಾರಿಸಲ್ಪಟ್ಟ 56 kWh ಲಿಥಿಯಂ-ಐಯಾನ್ ಸ್ವಯಂ ಚಾರ್ಜಿಂಗ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇನ್ನು ಇದರ ಬ್ಯಾಟರಿಯು ಇವಿ ಮೋಡ್‌ನಲ್ಲಿ ಮಾತ್ರ 235 ಕಿ.ಮೀ ರೇಂಜ್ ಅನ್ನು ನೀಡುತ್ತ ನೀಡುತ್ತದೆ ಎಂದು ಹೇಳಲಾಗುತ್ತದೆ. ಪೆಟ್ರೋಲ್ ಇಂಜಿನ್‌ನ ಮೈಲೇಜ್ ಸೇರಿಸಿದಾಗ, ಒಂದು ಸಲ ಪೆಟ್ರೋಲ್ ಮತ್ತು ಚಾರ್ಜ ಮಾಡಿದರೆ, ಇಂಧನ ತುಂಬಲು ಅಥವಾ ರೀಚಾರ್ಜ್ ಮಾಡಲು ನಿಲ್ಲಿಸುವ ಅಗತ್ಯವಿಲ್ಲದೆ 1,100 ಕಿಮೀಗಳಿಗಿಂತ ಹೆಚ್ಚು ಓಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮತ್ತು ಶೇರ್ ಮಾಡಲು ಮರೆಯದಿರಿ.

Article Published On: Thursday, August 31, 2023, 18:00 [IST]
English summary
Pininfarina designed built in kitchen polestones 01 suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+