ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ಕೋವಿಡ್ ಪರಿಣಾಮ ಕಳೆದ ಒಂದು ವರ್ಷದಿಂದ ವಿದೇಶಿ ಪ್ರವಾಸಗಳಿಂದ ಮೊಟಕುಗೊಳಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಬಹುದಿನಗಳ ನಂತರ ಇಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾರೆ. ಬಾಂಗ್ಲಾ ಸ್ವಾತಂತ್ರ್ಯ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ ಪ್ರವಾಸದಲ್ಲಿ ಹೊಸದಾಗಿ ಪರಿಚಯಿಸಲಾದ ಏರ್‌ ಇಂಡಿಯಾ ಒನ್‌ ಗಮನಸೆಳೆಯುತ್ತಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರ ಅಧಿಕೃತ ಪ್ರವಾಸಗಳಿಗಾಗಿ ವಿಶೇಷವಾಗಿ ತಯಾರಿಸಲ್ಪಟ್ಟ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಈಗಾಗಲೇ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರು ಅಧಿಕೃತವಾಗಿ ಚಾಲನೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಹೊಸ ವಿಮಾನಯಾನ ಸೇವೆಗಳನ್ನು ವಿದೇಶಿ ಪ್ರವಾಸಕ್ಕೆ ಬಳಕೆ ಮಾಡಿದ್ದಾರೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗರಿಷ್ಠ ಸುರಕ್ಷತೆ ಹೊಂದಿರುವ ಏರ್ ಇಂಡಿಯಾ ಒನ್-ಬಿ 777 ವಿಮಾನವು ಅಮೆರಿಕಾ ಅಧ್ಯಕ್ಷರು ಅಧಿಕೃತವಾಗಿ ಬಳಸುವ ಏರ್ ಫೋರ್ಸ್ ಒನ್ ಮಾದರಿಯಲ್ಲಿಯೇ ನಿರ್ಮಾಣಗೊಂಡಿದ್ದು, ಹೊಸ ವಿಮಾನವನ್ನು ಕಳೆದ ಬೋಯಿಂಗ್ ಕಂಪನಿಯು ಅಕ್ಟೋಬರ್‌ ಮೊದಲ ವಾರದಲ್ಲೇ ಭಾರತಕ್ಕೆ ಹಸ್ತಾಂತರಗೊಳಿಸಿತ್ತು.

ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರು ದೆಹಲಿಯಿಂದ ತಿರುಪತಿಗೆ ಮೊದಲ ಬಾರಿಗೆ ಪ್ರಯಾಣ ಬೆಳೆಸುವ ಮೂಲಕ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು. ತದನಂತರ ಹೊಸ ವಿಮಾನಯಾನದಲ್ಲಿ ನರೇಂದ್ರ ಮೋದಿ ಒಂದೇರಡು ಬಾರಿ ವಿವಿಧ ರಾಜ್ಯಗಳ ಭೇಟಿಗಾಗಿ ಬಳಕೆ ಮಾಡಿದ್ದರು.

ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ಇದೀಗ ಮೊದಲ ಬಾರಿಗೆ ಹೊಸ ವಿಮಾನಯಾನ ಸೇವೆಯನ್ನು ವಿದೇಶಿ ಪ್ರವಾಸಕ್ಕೆ ಬಳಕೆ ಮಾಡಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಏರ್ ಇಂಡಿಯಾ ಒನ್-ಬಿ 777 ವಿಮಾನವು ಗರಿಷ್ಠ ಮಟ್ಟದ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರ ಅಧಿಕೃತ ಪ್ರವಾಸಗಳಿಗೆ ಇದುವರೆಗೆ ಬೋಯಿಂಗ್-747 ವಿಮಾನವನ್ನು ಬಳಕೆ ಮಾಡುತ್ತಿದ್ದ ಏರ್ ಇಂಡಿಯಾ ಕಂಪನಿಯು ಇದೀಗ ಏರ್ ಇಂಡಿಯಾ ಒನ್-ಬಿ 777 ವಿಮಾನ ಬಳಕೆಗೆ ಚಾಲನೆ ನೀಡಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (ಎಐಇಎಸ್ಎಲ್) ವಿಭಾಗವು ಏರ್ ಇಂಡಿಯಾ ಒನ್-ಬಿ 777 ವಿಮಾನವನ್ನು ನಿರ್ವಹಣೆ ಮಾಡುತ್ತಿದ್ದು, ಬರೋಬ್ಬರಿ ರೂ. 1,300 ಕೋಟಿ ವೆಚ್ಚದಲ್ಲಿ ಈ ಅಲ್ಟ್ರಾ ಸೂಪರ್ ವಿಮಾನವನ್ನು ಸಿದ್ದಪಡಿಸಲಾಗಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ಕೇಂದ್ರ ಸರ್ಕಾರವು ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರ ಅಧಿಕೃತ ಪ್ರವಾಸಗಳಿಗೆ ಒಟ್ಟು ಎರಡು ಏರ್ ಇಂಡಿಯಾ ಒನ್-ಬಿ 777 ವಿಮಾನವನ್ನು ಖರೀದಿ ಮಾಡಿದ್ದು, ಸದ್ಯ ಒಂದನ್ನು ಮಾತ್ರ ಹಸ್ತಾಂತರ ಮಾಡಲಾಗಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ಮತ್ತೊಂದು ಬೋಯಿಂಗ್ 777 ವಿಮಾನವು ಮುಂದಿನ ಕೆಲವೇ ದಿನಗಳಲ್ಲಿ ಭಾರತಕ್ಕೆ ತಲುಪಲಿದ್ದು, ಎರಡೂ ಬೋಯಿಂಗ್ 777 ವಿಮಾನಗಳಲ್ಲೂ ಎಸ್‌ಪಿಎಸ್ (ಸೆಲ್ಫ್ ಪ್ರೊಟೇಕ್ಷನ್ ಸೂಟ್‌) ಸೌಲಭ್ಯಗಳನ್ನು ಹೊಂದಿವೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ಎರಡೂ ವಿಮಾನಗಳು ಎಲ್ಎಐಆರ್ ಸಿಎಂ(ಲೈಟ್ ಏರ್ ಕ್ರಾಫ್ಟ್ ಇನ್ಫ್ರಾರೆಡ್ ಕೌಂಟರ್‌ ಮೆಶರ್) ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ವಿವಿಐಪಿಗಳು ಪ್ರಯಾಣಿಸುವ ಈ ಎರಡು ಬೋಯಿಂಗ್ 777 ವಿಮಾನಗಳನ್ನು ಏರ್ ಇಂಡಿಯಾ ಪೈಲಟ್‌‌ಗಳ ಬದಲಿಗೆ ಭಾರತೀಯ ವಾಯುಪಡೆಯ ಪೈಲಟ್‌ಗಳೇ ನಿರ್ವಹಣೆ ಮಾಡುತ್ತಾರೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ಬೋಯಿಂಗ್ 777 ವಿಮಾನಗಳಲ್ಲಿ ವಿವಿಐಪಿಗಳು ಕಚೇರಿ ರೀತಿಯಲ್ಲಿ ಬಳಸುವಂತಹ ಸೌಲಭ್ಯಗಳನ್ನು ನೀಡಲಾಗಿದ್ದು, ಈ ವಿಮಾನವು ಮೀಟಿಂಗ್ ರೂಂ ಹಾಗೂ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಗಳನ್ನು ಸಹ ಹೊಂದಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ಹಾಗೆಯೇ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಪ್ರತ್ಯೇಕ ಘಟಕವನ್ನು ಜೋಡಣೆ ಮಾಡಲಾಗಿದ್ದು, ಬ್ಯುಸಿನೆಸ್ ಕ್ಲಾಸ್ ಆಸನಗಳು, ವಿಡಿಯೋ ಮತ್ತು ಆಡಿಯೋ ಸಂವಹನ ವ್ಯವಸ್ಥೆ ಸೇರಿದಂತೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಬಳಕೆ ಮಾಡಲಾಗಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಅತ್ಯಾಧುನಿಕ ಸೌಲಭ್ಯವುಳ್ಳ ಬೋಯಿಂಗ್ 777 ಮೂಲಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರಯಾಣ

ಮತ್ತೊಂದು ವಿಶೇಷತೆಯೆಂದರೆ ಏರ್ ಇಂಡಿಯಾ ಒನ್-ಬಿ 777 ವಿಮಾನವು ಹಾರಾಟ ಆರಂಭಿಸಿದ ನಂತರ ನಿರಂತರವಾಗಿ ಯಾವುದೇ ನಿಲುಗಡೆಯಿಲ್ಲದೆ 17 ಗಂಟೆಗಳ ಕಾಲ ಹಾರಾಡುವ ಸಾಮಥ್ಯ ಹೊಂದಿದ್ದು, ಈ ಹಿಂದಿನ ಬೋಯಿಂಗ್-747 ವಿಮಾನವನ್ನು ವಾಣಿಜ್ಯ ಕಾರ್ಯಾಚರಣೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

More from DriveSpark

Article Published On: Friday, March 26, 2021, 21:00 [IST]
English summary
Prime Minister Narendra Modi Takes His First International Flight On New Air India One.
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+