ಗರ್ಭಿಣಿ ಮಹಿಳೆಯರಿಂದ ಅತಿ ಹೆಚ್ಚು ಕಾರು ಅಪಘಾತ?
ಬಸಿರಾದಾಗ ಮಹಿಳೆಯರು ವಾಹನ ಚಾಲನೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಬೇಕು ಬಹುಶ: ಇದಕ್ಕಾಗಿರಬಹುದು ವೈದ್ಯರು ಸಲಹೆ ಕೊಡುವುದು. ಸಂಶೋಧಕರ ಅಧ್ಯಯನ ವರದಿಯ ಪ್ರಕಾರ ಗರ್ಭಿಣಿ ಮಹಿಳೆಯರು ಅತಿ ಹೆಚ್ಚು ಅಪಘಾತ ಘಟಿಸಲು ಕಾರಣವಾಗುತ್ತಾರಂತೆ!
ಸಾಮಾನ್ಯ ಮಹಿಳೆಯನ್ನು ಪರಿಗಣಿಸಿದಾಗ ಬಸಿರಾದವರು ಅತಿ ಹೆಚ್ಚು ಅಪಘಾತಕ್ಕೆ ಕಾರಣವಾಗುತ್ತರೆ. ವರದಿಯ ಪ್ರಕಾರ ಶೇಕಡಾ 42ರಷ್ಟು ಗರ್ಭಿಣಿ ಮಹಿಳೆಯರು ಅಪಘಾತದಲ್ಲಿ ಭಾಗಿಯಾಗುತ್ತಾರೆ. ಗರ್ಭಧಾರಣೆಯ ಮೊದಲ ಹಾಗೂ ಎರಡನೇ ತಿಂಗಳಲ್ಲಿ ಅಪಘಾತದ ಪ್ರಮಾಣ ಜಾಸ್ತಿಯಾಗಿದೆ ಎಂಬುದನ್ನು ಸಹ ವರದಿ ಉಲ್ಲೇಖಿಸಿದೆ.

ಕೆನಡಾದ ಕ್ಲಿನಿಕಲ್ ಮೌಲ್ಯಮಾಪನ ವಿಜ್ಞಾನ ಸಂಸ್ಥೆಯು ಈ ಅಧ್ಯಯನವನ್ನು ಕೈಗೊಂಡಿತ್ತು. ಕಳೆದ ಐದು ವರ್ಷಗಳಲ್ಲಿ ಅರ್ಧ ದಶಲಕ್ಷಗಳಷ್ಟು ಗರ್ಭಿಣಿ ಮಹಿಳೆಯರ ಮೇಲೆ ನಿಗಾ ವಹಿಸಿದ ಬಳಿಕ ವರದಿ ಬಿಡುಗಡೆ ಮಾಡಿದೆ.
ಹಾಗಿದ್ದರೂ ಗರ್ಭಿಣಿ ಮಹಿಳೆಯರು ಅಪಘಾತ ಮಾಡಲಿಕ್ಕಿರುವ ಕಾರಣವೇನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಹಾಗಿದ್ದರೂ ಗರ್ಭ ಧರಿಸುವ ಗ್ರಂಥಿಯಲ್ಲಾಗುವ ಹಾಮೋನ್ ಏರುಪೇರುಗಳಿಂದಾಗಿ ಅಪಘಾತಗಳಿಗೆ ಕಾರಣವಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಮನಗಂಡಿದ್ದಾರೆ.
ಒಟ್ಟಿನಲ್ಲಿ ಗರ್ಭಧಾರಣೆ ವೇಳೆ ಮಹಿಳೆಯರು ಸ್ವಯಂ ಆಗಿ ಕಾರು ಚಾಲನೆಯಿಂದ ಸಂಪೂರ್ಣಾಗಿ ದೂರವಿರುವುದು ಒಳಿತು. ಈ ನಿಟ್ಟಿನಲ್ಲಿ ವೈದ್ಯರು ಸಹ ಸೂಕ್ತ ಸಲಹೆಯನ್ನು ನೀಡಬೇಕಾಗಿದೆ.


Click it and Unblock the Notifications








