Just In
- 18 min ago
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- 2 hrs ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 4 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 14 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ ರಫೇಲ್ ಯುದ್ದ ವಿಮಾನಗಳು
ಕಳೆದ ವರ್ಷ ರಫೇಲ್ ಜೆಟ್ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿತ್ತು. ಈ ವಿಮಾನಗಳನ್ನು ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಗುತ್ತದೆ. ಈ ರಫೇಲ್ ಜೆಟ್ ವಿಮಾನಗಳು ವರ್ಟಿಕಲ್ ಚಾರ್ಲಿ ಫೋರಂ ಹಾಗೂ ಫ್ಲೈಪಾಸ್ಟ್ ಪ್ರದರ್ಶನ ನೀಡಲಿವೆ.

ಜನವರಿ 26ರ ಪೆರೇಡ್'ನಲ್ಲಿ ಒಟ್ಟು 38 ಏರ್ ಕ್ರಾಫ್ಟ್ ಹಾಗೂ 4 ವಿಮಾನಗಳು ಭಾಗವಹಿಸಲಿವೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಐದು ರಫೇಲ್ ಜೆಟ್ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು. ಈ ವಿಮಾನಗಳನ್ನು ಫ್ರಾನ್ಸ್‌ನಿಂದ ಭಾರತಕ್ಕೆ ತಂದು ಅಂಬಾಲಾ ವಾಯುನೆಲೆಯಲ್ಲಿ ಇರಿಸಲಾಗಿತ್ತು.

ಈಗ ಮೊದಲ ಬಾರಿಗೆ ಪೆರೇಡ್'ನಲ್ಲಿ ಸಾರ್ವಜನಿಕರ ಮುಂದೆ ಪ್ರದರ್ಶಿಸಲಾಗುತ್ತಿದೆ. ವಿಮಾನವು ಕಡಿಮೆ ಎತ್ತರಕ್ಕೆ ಹಾರಿ ಲಂಬವಾಗಿ ಮಾರ್ಪಟ್ಟು, ಹೆಚ್ಚಿನ ಎತ್ತರಕ್ಕೆ ಚಲಿಸುವ ಮೊದಲು ಹಲವಾರು ಬಾರಿ ತಿರುಗಿದಾಗ, ಅವುಗಳನ್ನು ವರ್ಟಿಕಲ್ ಚಾರ್ಲಿ ಫೋರಂ ಎಂದು ಕರೆಯಲಾಗುತ್ತದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ರೀತಿಯ ಫೋರಂಗಳು ತುಂಬಾ ಅಪಾಯಕಾರಿ. ಈ ಹಿಂದೆ ಹಲವು ಬಾರಿ ಈ ರೀತಿ ಮಾಡಲಾಗಿದೆ. ಇದರ ಬಗ್ಗೆ ದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಎಎಫ್ ವಕ್ತಾರ ವಿಂಗ್ ಕಮಾಂಡರ್ ಇಂದ್ರಾಣಿ ನಂದಿ, ವರ್ಟಿಕಲ್ ಚಾರ್ಲಿ ಫೋರಂ ಜೊತೆಗೆ ಅದೇ ರಾಫೆಲ್ ವಿಮಾನಗಳಿಂದ ಫ್ಲೈಪಾಸ್ಟ್ ಇರಲಿದೆ ಎಂದು ಹೇಳಿದರು.

ಈ ಫ್ಲೈಪಾಸ್ಟ್ ಅನ್ನು ಎರಡು ಬ್ಲಾಕ್'ಗಳಾಗಿ ವಿಂಗಡಿಸಲಾಗುತ್ತದೆ. ಈ ಪೆರೇಡ್'ನಲ್ಲಿ ಮೊದಲ ಬ್ಲಾಕ್ 10.04ರಿಂದ 10.20ರವರೆಗೆ ಹಾಗೂ ಎರಡನೇಯ ಬ್ಲಾಕ್ 11.20ರಿಂದ 11.45ರವರೆಗೆ ಇರಲಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮೊದಲ ಬ್ಲಾಕ್‌ನಲ್ಲಿ ಮೂರು ಫೋರಂಗಳನ್ನು ಮಾಡಲಾಗುವುದು. ಮೊದಲನೆಯ ನಿಶಾನ್ ಫೋರಂನಲ್ಲಿ ನಾಲ್ಕು ಮಿ 17 ವಿ 5 ವಿಮಾನಗಳು ಭಾಗವಹಿಸಲಿವೆ. ಇದರ ನಂತರ ಧ್ರುವ್ ಫೋರಂ ನಡೆಯಲಿದೆ.

ಇದರಲ್ಲಿ ಸೇನಾ ವಿಮಾನಯಾನ ದಳದ ನಾಲ್ಕು ಹೆಲಿಕಾಪ್ಟರ್‌ಗಳು ಭಾಗವಹಿಸಲಿವೆ. ಇದರ ನಂತರ ಮೂರನೇಯದಾದ ರುದ್ರ ಫೋರಂ ನಡೆಯಲಿದೆ. ಈ ಫೋರಂ ಅನ್ನು ಭಾರತದ 1971ರ ಯುದ್ಧದ 50ನೇ ವಾರ್ಷಿಕೋತ್ಸವಕ್ಕೆ ಸಮರ್ಪಿಸಲಾಗುವುದು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನಂತರ ಎರಡನೇ ಬ್ಲಾಕ್‌ನಲ್ಲಿ ಒಟ್ಟು ಒಂಬತ್ತು ಫೋರಂಗಳು ನಡೆಯಲಿವೆ. ಇದರಲ್ಲಿ ಸುದರ್ಶನ್, ರಕ್ಷಕ್, ಭೀಮಾ, ನೇತ್ರ, ಗರುಡ, ಏಕಲವ್ಯ, ತ್ರಿನೇತ್ರ, ವಿಜಯ್, ಬ್ರಹ್ಮಾಸ್ತ್ರಗಳು ಸೇರಿವೆ. ಇದರ ಮುಖ್ಯಸ್ಥರಾದ ಲೆಫ್ಟಿನೆಂಟ್ ತಾನಿಕ್ ಶರ್ಮಾ ಪೆರೇಡ್'ನಲ್ಲಿ ಸಾಗಲಿದ್ದಾರೆ.

ರಕ್ಷಣಾ ಒಪ್ಪಂದದಡಿಯಲ್ಲಿ 36 ರಫೇಲ್ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸಲಾಗಿದೆ. ಈ ಪೈಕಿ ಜುಲೈ 29ರಂದು 5 ವಿಮಾನಗಳ ವಿತರಣೆಯನ್ನು ಪಡೆಯಲಾಗಿದೆ. ರಫೇಲ್ ಯುದ್ಧ ವಿಮಾನವು ಹಲವು ಯುದ್ಧಗಳಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.