ಸೆಲೆಬ್ರಿಟಿಗಳನ್ನು ಸೆಳೆಯುತ್ತಿದೆ ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ ಪರ್ಫಾರ್ಮೆನ್ಸ್ ಎಲೆಕ್ಟ್ರಿಕ್ ಬೈಕ್

ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್ ಅಲ್ಟ್ರಾವೈಲೆಟ್ ಕಂಪನಿಯ ಮೊದಲ ಮಾದರಿಯಾಗಿದೆ. ಅಲ್ಟ್ರಾವೈಲೆಟ್ ಎಫ್77 (Ultraviolette F77) ಎಲೆಕ್ಟ್ರಿಕ್ ಬೈಕ್ ಸಾಮಾನ್ಯ ಜನರನ್ನು ಮಾರವಲ್ಲದೇ ಸೆಲೆಬ್ರಿಟಿಗಳನ್ನು ಸೆಳೆಯುತ್ತಿದೆ. ಇತ್ತೀಚೆಗೆ ಜನಪ್ರಿಯ ವೀಡಿಯೋ ಜಾಕಿ (ವಿಜೆ) ರಣ್ವಿಜಯ್ ಸಿಂಘಾ (Rannvijay Singha) ಅವರು ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕಿನ ಲಿಮಿಟೆಡ್ ಎಡಿಷನ್ ಪಡೆದುಕೊಂಡಿದ್ದಾರೆ.

ವಿಜೆ ರಣ್ವಿಜಯ್ ಸಿಂಘಾ ಅವರು ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕಿನ ಲಿಮಿಟೆಡ್ ಎಡಿಷನ್ ಮಾದರಿಯನ್ನು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಅಲ್ಟ್ರಾವೈಲೆಟ್ ಎಫ್77 ಲಿನಿಟೆಡ್ ಎಡಿಷನ್ ಉತ್ಪಾದಿಸಲಾಗುವ ಒಟ್ಟು 77 ಯುನಿಟ್ ಗಳಲ್ಲಿ ಮಾದರಿ ಸಂಖ್ಯೆ 16 ಅನ್ನು ವಿಜೆ ರಣ್ವಿಜಯ್ ಸಿಂಘಾ ಪಡೆದುಕೊಂಡಿದ್ದಾರೆ.

Ultraviolette F77 Electric Bike

ಈ ಬೈಕಿನ ಎಲ್ಲಾ ಯುನಿಟ್‌ಗಳು ಬುಕ್ಕಿಂಗ್ ಪ್ರಾರಂಭ ಆದ ಕೇವಲ ಎರಡು ಗಂಟೆಗಳಲ್ಲಿ ಮಾರಾಟವಾಗಿವೆ ಎಂದು ಕಂಪನಿ ಘೋಷಿಸಿದೆ. ಈ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕಿನ ಪ್ರಾರಂಭಿಕ ಬೆಲೆಯು ರೂ.3.8 ಲಕ್ಷವಾಗಿದೆ. ಇನ್ನು ಈ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಬೈಕಿನ ಲಿಮಿಟೆಡ್ ಎಡಿಷನ್ ಬೆಲೆಯಬೆಲೆಗಳನ್ನು ಘೋಷಿಸಲಾಗಿಲ್ಲವಾದರೂ, ಇದು ರೆಕಾನ್ ರೂಪಾಂರಗಿಂತ ದುಬಾರಿಯಾಗಿರುತ್ತದೆ.

ಪ್ರತಿಯೊಂದು ಲಿಮೆಟಿಡ್ ಎಡಿಷನ್ F77 ಎಲೆಕ್ಟ್ರಿಕ್ ಸ್ಪೋರ್ಟ್ ಬೈಕು ವಿಶಿಷ್ಟ ಸಂಖ್ಯೆ ಮತ್ತು ವಿಶೇಷ ಪೇಂಟ್ ಸ್ಕೀಮ್ ಅನ್ನು ಪಡೆಯುತ್ತದೆ. ಈ ಪರ್ಫಾರ್ಮೆನ್ಸ್ ಬೈಕ್ ಎಲೆಕ್ಟ್ರಿಕ್ ಬೈಕ್‌ನ ಕಾರ್ಯಕ್ಷಮತೆಯ ಅಂಕಿಅಂಶಗಳು PMS ಎಲೆಕ್ಟ್ರಿಕ್ ಮೋಟಾರ್ 40.2 bhp ಅಥವಾ 30.2 kW ಪವರ್ ಮತ್ತು 100 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಲೆಕ್ಟ್ರಿ ಬೈಕ್ 7.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್ ಲಿಮೆಟಿಡ್ ಎಡಿಷನ್ ಅದೇ 10.3 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಪವರ್ ಅನ್ನು ಪಡೆಯುತ್ತದೆ. ಇದು ಭಾರತದ ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ದೊಡ್ಡದಾಗಿದೆ ಮತ್ತು ಒಂದೇ ಚಾರ್ಜ್‌ನಲ್ಲಿ 307 ಕಿಲೋಮೀಟರ್ ರೇಂಜ್ ಭರವಸೆ ನೀಡುತ್ತದೆ.

ಸ್ಪೋರ್ಟ್ಸ್ ಎಲೆಕ್ಟ್ರಿಕ್ ಬೈಕ್‌ನ ಇತರ ಗಮನಾರ್ಹ ಫೀಚರ್ಸ್ ಗಳೆಂದರೆ, 5-ಇಂಚಿನ TFT ಸ್ಕ್ರೀನ್, 41 mm USD ಮುಂಭಾಗದ ಫೋರ್ಕ್‌ಗಳು ಹಿಂಭಾಗದಲ್ಲಿ ಮೊನೊಶಾಕ್, 320 mm ಮುಂಭಾಗ ಮತ್ತು 230 mm ಡಿಸ್ಕ್ ಬ್ರೇಕ್‌ಗಳು, ಬಾಷ್‌ನಿಂದ ಪಡೆದ ಡ್ಯುಯಲ್-ಚಾನೆಲ್ ABS, ಮೂರು ರೈಡಿಂಗ್ ಮೋಡ್‌ಗಳು - ಗ್ಲೈಡ್, ಕಾಂಬ್ಯಾಟ್ ಮತ್ತು ಬ್ಯಾಲಿಸ್ಟಿಕ್, ಮತ್ತು ಇನ್ನಷ್ಟನ್ನು ಹೊಂದಿವೆ.

ಅಲ್ಟ್ರಾವೈಲೆಟ್ ಎಲೆಕ್ಟ್ರಿಕ್ ಬೈಕ್ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ವಿಶೇಷವಾಗಿವೆ. ಸ್ಪೋರ್ಟ್ಸ್‌ಬೈಕ್‌ನಲ್ಲಿ ಮೊದಲನೆಯದು ಅದರ ವಿನ್ಯಾಸವಾಗಿದೆ. ಇದು ಅತ್ಯಂತ ಅಗ್ರೇಸಿವ್, ಫ್ಯೂಚರಿಸ್ಟಿಕ್ ಮತ್ತು ರೇಸಿಂಗ್ ಬೈಕ್‌ನಂತೆ ಕಾಣುತ್ತದೆ. ಇನ್ನು ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ದುಲ್ಕರ್​ ಸಲ್ಮಾನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವೀಡಿಯೊವೊಂದರಲ್ಲಿ ಅವರು ಅಲ್ಟ್ರಾವೈಲೆಟ್ ಎಫ್ 77 ಹೈ-ಪರ್ಫಾರ್ಮೆನ್ಸ್ ಎಲೆಕ್ಟ್ರಿಕ್ ಬೈಕ್ ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಬರೆದುಕೊಂಡಿದ್ದರು.

ಜ್ಜನಪ್ರಿಯ ನಟ ದುಲ್ಕರ್ ಸಲ್ಮಾನ್ ಅವರು ಕೆಲವು ತಿಂಗಳುಗಳ ಹಿಂದೆ ತನ್ನ ಸೀಮಿತ ಆವೃತ್ತಿಯ F77 ಎಲೆಕ್ಟ್ರಿಕ್ ಸ್ಪೋರ್ಟ್ಸ್‌ಬೈಕ್ ಅನ್ನು ವಿತರಣೆ ಪಡೆದುಕೊಂಡಿದ್ದಾರೆ. ಅಲ್ಟ್ರಾವೈಲೆಟ್ ಆಟೋಮೊಟಿವ್ ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ಮೊದಲ ಡೀಲರ್‌ಶಿಪ್ ಅನ್ನು ಉದ್ಘಾಟಿಸಿದೆ, ಅದನ್ನು ಅವರು UVH-01 ಎಂದು ಕರೆಯುತ್ತಾರೆ.

More from DriveSpark

Article Published On: Monday, July 24, 2023, 16:45 [IST]
English summary
Rannvijay singha buys new ultraviolette f77 electric sports bike details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+