ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ರ‍್ಯಾಂಪ್ ಸಾಂಗ್‌ಗಳ ಮೂಲಕ ಭಾರೀ ಜನಪ್ರಿಯತೆ ಜನಪ್ರಿಯತೆ ಗಳಿಸುತ್ತಿರುವ ಗಾಯಕ ಬಾದ್ ಶಾ ಇತ್ತೀಚೆಗೆ ಹೊಸ ಐಷಾರಾಮಿ ಕಾರು ಮಾದರಿಯೊಂದನ್ನು ಖರೀದಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಾದ್ ಶಾ ಹೊಸ ಕಾರು ಖರೀದಿಯು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

'ಟಾಪ್ ಟಕ್ಕರ್' ಹಾಡಿನ ಮೂಲಕ ಭಾರೀ ಜನಪ್ರಿಯತೆ ಗಳಿಸಿದ ಗಾಯಕ ಬಾದ್ ಶಾ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ಅನೇಕ ಹಿಟ್ ಹಾಡುಗಳೊಂದಿಗೆ ಅವರು ಐಷಾರಾಮಿ ವಸ್ತುಗಳ ಖರೀದಿಯಲ್ಲೂ ಭಾರೀ ಕ್ರೇಜ್ ಹೊಂದಿದ್ದಾರೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ದುಬಾರಿ ಬೆಲೆಯ ಐಷರಾಮಿ ಜಾಕೆಟ್, ಶೂ ಗಳ ಮೂಲಕ ಸ್ಟೈಲಿಶ್ ಐಕಾನ್ ಎಂದೇ ಬಿಂಬಿತವಾಗಿರುವ ಗಾಯಕ ಬಾದ್ ಶಾ ಇತ್ತೀಚೆಗೆ ಮೂರು ಹೊಸ ಐಷಾರಾಮಿ ಕಾರುಗಳನ್ನು ಖರೀದಿದ್ದಾರೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಆಡಿ, ಮರ್ಸಿಡಿಸ್ ನಿರ್ಮಾಣದ ದುಬಾರಿ ಕಾರುಗಳ ಸಂಗ್ರಹ ಹೊಂದಿರುವ ಬಾದ್ ಶಾ ಇದೀಗ ಬಹುಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಐಷಾರಾಮಿ ಎಸ್‌ಯುವಿ ಖರೀದಿಸಿದ್ದು, ಹೊಸ ಕಾರು ಆನ್ ರೋಡ್ ಪ್ರಕಾರ ರೂ. 3.94 ಕೋಟಿ ಬೆಲೆ ಹೊಂದಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಲ್ಯಾಂಬೋರ್ಗಿನಿ ಉರುಸ್ ಐಷಾರಾಮಿ ಎಸ್‌ಯುವಿಯು ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಮತ್ತು ಪರ್ಲ್ ಕ್ಯಾಪ್ಸಲ್ ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಐಷಾರಾಮಿ ಎಸ್‌ಯುವಿ ಕಾರು ಖರೀದಿದಾರರಲ್ಲಿ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಭಾರತದಲ್ಲಿ ಲ್ಯಾಂಬೋರ್ಗಿನಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಉರುಸ್ ಕಾರು ಮಾದರಿಯು ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, 2018ರಲ್ಲಿ ಬಿಡುಗಡೆಯಾದ ಹೊಸ ಕಾರು ಇದುವರೆಗೆ ಭಾರತದಲ್ಲಿ 200 ಯುನಿಟ್ ಮಾರಾಟಗೊಂಡಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಸೆಲೆಬ್ರಿಟಿಗಳು, ಉದ್ಯಮಿಗಳ ಪ್ರಮುಖ ಆಕರ್ಷಣೆಯಾಗಿರುವ ಹೊಸ ಕಾರನ್ನು ಕನ್ನಡದ ಜನಪ್ರಿಯ ನಟರಾದ ದಿ. ಪುನೀತ್ ರಾಜ್‍ಕುಮಾರ್ ಸಹ 2021ರಲ್ಲಿ ಖರೀದಿ ಮಾಡಿದ್ದರು. ಪತ್ನಿ ಅಶ್ವಿನಿಯವರಿಗೆ ಮಹಿಳಾ ದಿನಾಚರಣೆಯೆಂದೆ ಹೊಸ ಕಾರುನ್ನು ಖರೀದಿಸಿ ಉಡುಗೊರೆ ನೀಡಿದ್ದರು.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ತದನಂತರ ಮತ್ತೊಬ್ಬ ಸ್ಟಾರ್ ನಟರಾದ ದರ್ಶನ್ ಕೂಡಾ ಉರುಸ್ ಎಸ್‌ಯುವಿ ಖರೀದಿಸಿದ್ದು, ಸೆಲೆಬ್ರಿಟಿ ಕಾರುಗಳ ಸಂಗ್ರಹದಲ್ಲಿ ಉರುಸ್ ಎಸ್‌ಯುವಿಯು ಭಾರೀ ಸದ್ದು ಮಾಡುತ್ತಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

2018ರ ಜನವರಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಉರುಸ್ ಎಸ್‌ಯುವಿ ಕಾರು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಲ್ಯಾಂಬೋರ್ಗಿನಿ ಕಂಪನಿಯು ಹೊಸ ಕಾರಿನ ಉತ್ಪಾದನಾ ಪ್ರಮಾಣದಲ್ಲಿ ಹಲವು ಮೈಲಿಗಲ್ಲು ಸಾಧಿಸಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಉರುಸ್ ಕಾರು ಇದುವರೆಗೆ 20 ಸಾವಿಕ್ಕೂ ಹೆಚ್ಚು ಯುನಿಟ್‌ಗಳು ವಿಶ್ವಾದ್ಯಂತ ಮಾರಾಟಗೊಂಡಿದ್ದು, ಲಂಬೋರ್ಗಿನಿ ಕಂಪನಿಗೆ ಹೊಸ ಕಾರು ಭಾರೀ ಪ್ರಮಾಣದ ಆದಾಯ ತಂದುಕೊಟ್ಟಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ಎಂಜಿನ್ ಆಯ್ಕೆಯನ್ನು ಹೊಂದಿರುವ ಉರುಸ್ ಐಷಾರಾಮಿ ಎಸ್‌ಯುವಿ ಕಾರು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು, ಲ್ಯಾಂಬೋರ್ಗಿನಿ ನಿರ್ಮಾಣದ ಮೊದಲ ಎಸ್‌ಯುವಿ ಕಾರು ಮಾದರಿ ಇದಾಗಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಸೂಪರ್ ಕಾರುಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಲ್ಯಾಂಬೋರ್ಗಿನಿ ಕಂಪನಿಯು ಮೊದಲ ಬಾರಿಗೆ ಉರುಸ್ ಮೂಲಕ ಐಷಾರಾಮಿ ಎಸ್‌ಯುವಿ ವಿಭಾಗಕ್ಕೆ ಹೆಜ್ಜೆಯಿರಿಸಿದ್ದು, ಉರುಸ್ ಎಸ್‌ಯುವಿ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 4.0-ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಈ ಮೂಲಕ ಪ್ರತಿ ಗಂಟೆಗೆ 305 ಕಿ.ಮಿ ಟಾಪ್ ಸ್ಪೀಡ್‌ನಲ್ಲಿ ಕ್ರಮಿಸಬಲ್ಲ ಶಕ್ತಿ ಹೊಂದಿರುವ ಉರುಸ್ ಎಸ್‌ಯುವಿಯು ಕೇವಲ 3.6 ಸೇಕೆಂಡ್‌ಗಳಲ್ಲಿ 100 ಕಿಮಿ ವೇಗ ಪಡೆಯಬಲ್ಲದು. ಜೊತಗೆ ವಿವಿಧ ಡ್ರೈವಿಂಗ್ ಮೂಡ್‌ಗಳನ್ನು ಹೊಂದಿರುವ ಹೊಸ ಕಾರು ಲೈಫ್‌ಸ್ಟೈಲ್ ಜೊತೆಗೆ ಅಡ್ವೆಂಚರ್ ಡ್ರೈವ್‌ನಲ್ಲೂ ಮುಂಚೂಣಿ ಹೊಂದಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಸ್ಟ್ರೀಟ್, ಟ್ರ್ಯಾಕ್ ಮತ್ತು ಆಫ್ ರೋಡಿಂಗ್ ಮೋಡ್‌ಗಳಾದ ಸ್ಯಾಂಡ್, ಗ್ರಾವೆಲ್, ಸ್ನೋ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲೂ ಸುಲಭ ಚಾಲನೆ ಮಾಡುವಂತಹ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಇದು ಐಷಾರಾಮಿ ಕಾರು ಪ್ರಿಯರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದ್ದು, ಹಲವು ವಿಶೇಷ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಸೂಪರ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಹೊಂದಿರುವ ಲ್ಯಾಂಬೋರ್ಗಿನಿ ಕಂಪನಿಯು ಕಳೆದ 25 ವರ್ಷಗಳ ಹಿಂದೆಯೇ ಸೂಪರ್ ಕಾರುಗಳ ಜೊತೆಗೆ ಪ್ರಮುಖ 2 ಎಸ್‌ಯುವಿಗಳನ್ನು ಪರಿಚಯಿಸಿತ್ತು. ಆದ್ರೆ ಮಾರಾಟದಲ್ಲಿ ಆದ ಹಿನ್ನಡೆಯಿಂದಾಗಿ ಎಸ್‌ಯುವಿ ಮಾರಾಟವನ್ನು ಕೆಲ ವರ್ಷಗಳ ಹಿಂದೆ ಕೈಬಿಟ್ಟಿತ್ತು. ಆದ್ರೆ ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಉರುಸ್ ಮೂಲಕ ಕಂಪನಿಯು ಹೊಸ ದಾಖಲೆಗೆ ಕಾರಣವಾಗಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಸೂಪರ್ ಸ್ಪೋರ್ಟಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಉರುಸ್ ಕಾರು ಆಲ್ ವೀಲ್ಹ್ ಡ್ರೈವ್ ಸಿಸ್ಟಂ, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 8-ಏರ್‌ಬ್ಯಾಗ್‌ಗಳು, ಅತ್ಯಾಧುನಿಕ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ 85-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಸೌಲಭ್ಯ ಹೊಂದಿದೆ.

ಬಹು ಕೋಟಿ ಮೌಲ್ಯದ ಹೊಸ ಐಷಾರಾಮಿ ಎಸ್‌ಯುವಿ ಖರೀದಿಸಿದ ಗಾಯಕ ಬಾದ್ ಶಾ

ಸದ್ಯ ಹೊಸ ಕಾರು ಯುಎಸ್ಎ ಮಾರುಕಟ್ಟೆಗಿಂತಲೂ ಹೆಚ್ಚಿನ ಮಟ್ಟದ ಬೇಡಿಕೆಯನ್ನು ಯುರೋಪ್ ಮತ್ತು ಏಷಿಯನ್ ಮಾರುಕಟ್ಟೆಗಳಿಂದ ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

More from DriveSpark

Article Published On: Friday, July 29, 2022, 14:32 [IST]
English summary
Rapper and singer badshah purchased new lamborghini urus details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+