ಒಬಾಮಾಗೆ ಸರ್ಪಗಾವಲು; ಭಾರತಕ್ಕೆ ಬರುತ್ತಾ 'ಬೀಸ್ಟ್' ?

By Nagaraja

2015 ಜನವರಿ 26 ಗಣರಾಜ್ಯೋತ್ಸವದ ಅಂಗವಾಗಿ ಭಾರತಕ್ಕೆ ಭೇಟಿ ಕೊಡುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಮಾಬಾಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗರಿಷ್ಠ ಭದ್ರತಾ ವಲಯ ಏರ್ಪಡಿಸಲಾಗಿದೆ. ಆದರೆ ಒಬಾಮಾ ಜೊತೆಗೆ ಹೈಟೆಕ್ ಭದ್ರತಾ ಕಾರು 'ದೀ ಬೀಸ್ಟ್' ಆಗಮಿಸಲಿದೆಯೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಇವನ್ನೂ ಓದಿ: ರಾಷ್ಟ್ರಪತಿ ಪ್ರಣಬ್ ಹಾಗೂ ವಿಶ್ವದ ಪ್ರಥಮ ಪ್ರಜೆಗಳು ಕಾರುಗಳು

ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮುಖ್ಯ ಆತಿಥಿಯಾಗಿ ಭಾಗವಹಿಸಲಿರುವ ಒಬಾಮಾ ಹಾಗೂ ವಿವಿಐಪಿ ವೇದಿಕೆಯ ಸುತ್ತಲೂ ಏಳು ಸ್ತರದ ಭದ್ರತೆಯನ್ನು ಏರ್ಪಡಿಸಲಾಗಿದೆ. ಇನ್ನು ರಾಡಾರ್ ಮುಖಾಂತರ ವಾಯುಸೇನೆಯು ಸರ್ಪಗಾವಲನ್ನು ನೀಡಲಾಗುತ್ತಿದೆ. ಅಲ್ಲದೆ ಒಂದು ಲಕ್ಷಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನೇಮಕಗೊಳಿಸಲಾಗಿದೆ. ಹಾಗಿದ್ದರೂ ಅಮೆರಿಕ ಅಧ್ಯಕ್ಷರು ಶ್ವೇತ ಭವನದ ತಮ್ಮ ಅಧಿಕೃತ ಕಾರು 'ದಿ ಬೀಸ್ಟ್' ಕಾರಿನಲ್ಲೇ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆಯೇ ಎಂಬುದು ಬಹಳ ಕುತೂಹಲಕ್ಕೆ ಕಾರಣವಾಗಿದೆ. ಜನವರಿ 25ರಂದು ಅಮೆರಿಕದ ಮೊದಲ ಮಹಿಳೆ ಹಾಗೂ ಪತ್ನಿ ಮಿಚೆಲ್ ಜೊತೆಗೂಡಿ ಆಗಮಿಸಲಿರುವ ಒಬಾಮಾ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬರಾಕ್ ಒಬಾಮಾ ಹೈಟೆಕ್ ಕಾರು 'ದಿ ಬೀಸ್ಟ್'

ಅಮೆರಿಕ ಅಧ್ಯಕ್ಷರೊಬ್ಬರು ಭಾರತದ ಗಣರಾಜ್ಯೋತ್ಸವ ದಿನದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲಾಗಿದೆ. ಇನ್ನೊಂದೆಡೆ ಭಯೋತ್ಪಾದನೆ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ರಾಜಧಾನಿಯ ಸುತ್ತಮುತ್ತಲಿನಲ್ಲಿ 15,000ಗಳಷ್ಟು ಸಿಸಿಟಿವಿಗಳನ್ನು ಆಳವಡಿಸಲಾಗಿದೆ.

ಬರಾಕ್ ಒಬಾಮಾ ಹೈಟೆಕ್ ಕಾರು 'ದಿ ಬೀಸ್ಟ್'

ವಿಶೇಷವೆಂದರೆ ಅಮೆರಿಕ ಕಮಾಂಡೋಗಳೇ ಒಬಾಮಾಗೆ ಹೈ ಸೆಕ್ಯೂರಿಟಿ ನೀಡಲಿದ್ದಾರೆ. ಇವರಿಗೆ ದೇಶದ ಎನ್‌ಎಸ್‌ಜಿ ಕಮಾಂಡೋ ಹಾಗೂ ಮಿಲಿಟರಿ ಪಡೆ ಭದ್ರತೆ ನೀಡಲಿದೆ. ಅಮೆರಿಕ ಅಧ್ಯಕ್ಷರು ಭಾರತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಜೊತೆ ರಾಜಪಥದಲ್ಲಿ ಬಹಿರಂಗ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.

ಬರಾಕ್ ಒಬಾಮಾ ಹೈಟೆಕ್ ಕಾರು 'ದಿ ಬೀಸ್ಟ್'

ಒಬಾಮಾ ಬೀಸ್ಟ್ ಕಾರಿನಲ್ಲೇ ಸಂಚರಿಸುವ ಸಾಧ್ಯತೆ ಹೆಚ್ಚಾಗಿದ್ದು, ಇದರಲ್ಲಿ ಎರಡು ರಾಷ್ಟ್ರಗಳ ಧ್ವಜಗಳು ಹಾರಾಡಲಿದೆ. ಒಂದು ವೇಳೆ ಒಬಾಮಾ ತಮ್ಮದೇ ಕಾರಿನಲ್ಲಿ ಬಂದರೆ ರಾಷ್ಟ್ರಪತಿ ಪ್ರಮುಬ್ ಮುಖರ್ಜಿ ಕೂಡಾ ಲಿಮೋ ಬೀಸ್ಟ್ ಕಾರಿನಲ್ಲೇ ಸಂಚರಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇಂತಹದೊಂದು ಪ್ರಸಂಗ ಎದುರಾದ್ದಲ್ಲಿ ಇದು ದೇಶದ ಭದ್ರತೆಯ ಪಾಲಿಗೆ ಭಾರಿ ಹಿನ್ನಡೆಯಾಗಲಿದೆ.

 ಒಬಾಮಾ ದೀ ಬೀಸ್ಟ್ ಕಾರಿನ ವಿಶಿಷ್ಟತೆಗಳೇನು?

ಒಬಾಮಾ ದೀ ಬೀಸ್ಟ್ ಕಾರಿನ ವಿಶಿಷ್ಟತೆಗಳೇನು?

ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡ ಒಬಾಮಾ ಕಾರಿನ ಬಗ್ಗೆ ಮಾಹಿತಿ ನೀಡುವ ಪ್ರಯತ್ನವನ್ನು ಡ್ರೈವ್‌ಸ್ಪಾರ್ಕ್ ಇಲ್ಲಿ ಮಾಡಲಿದೆ. ಇದು ಬುಲೆಟ್ ಫ್ರೂಫ್, ಬಾಂಬ್ ಫ್ರೂಫ್ ಜೊತೆಗೆ ಇನ್ನಿತರ ಹತ್ತು ಹಲವು ರಕ್ಷಣಾತ್ಮಕ ಫೀಚರುಗಳನ್ನು ಹೊಂದಿದೆ.

ಬರಾಕ್ ಒಬಾಮಾ ಹೈಟೆಕ್ ಕಾರು 'ದಿ ಬೀಸ್ಟ್'

ಒಬಾಮಾ ಪ್ರಯಾಣಿಸುವ ಲಿಮೊಸಿನ್ ಕಾರಿನಂತಹ ಹೈಟೆಕ್ ತಂತ್ರಜ್ಞಾನ ಜಗತ್ತಿನ ಇನ್ನಿತರ ಯಾವ ಕಾರಿನಲ್ಲೂ ಇಲ್ಲ. ಇದನ್ನು ಅಮೆರಿಕ ಅಧ್ಯಕ್ಷರ ಬೇಡಿಕೆಗೆ ತಕ್ಕಂತೆ ಮಾರ್ಪಾಡುಗೊಳಿಸಲಾಗಿದೆ. ಅಲ್ಲದೆ ರಾಕೆಟ್ ದಾಳಿಯಿಂದಲೂ ಪಾರಾಗುವ ಶಕ್ತಿ ಇದಕ್ಕಿದೆ.

ಬರಾಕ್ ಒಬಾಮಾ ಹೈಟೆಕ್ ಕಾರು 'ದಿ ಬೀಸ್ಟ್'

ಅಮೆರಿಕ ಅಧ್ಯಕ್ಷರ ಕ್ಯಾಡಿಲಕ್ ಕಾರನ್ನು ಸ್ವೀಟಾಗಿ "ದಿ ಬೀಸ್ಟ್" ಎಂದು ಹೆಸರಿಡಲಾಗಿದೆ. ಇದು ಷೆವರ್ಲೆ ಕಂಪನಿಯ ಕ್ಯಾಡಿಲಾಕ್‌ನ ಮೋಡಿಪೈಡ್ ಕಾರಾಗಿದ್ದು, ಟ್ರಕ್ ಹಾಗೂ ಲಾರಿಯ ಬಿಡಿಭಾಗಗಳನ್ನು ಬಳಕೆ ಮಾಡಲಾಗಿದೆ.

ಬರಾಕ್ ಒಬಾಮಾ ಹೈಟೆಕ್ ಕಾರು 'ದಿ ಬೀಸ್ಟ್'

ಇದರಲ್ಲಿ ಗನ್, ಗ್ರೇನೆಡ್, ಬಾಂಬ್ ದಾಳಿಗಳಿಂದ ಪಾರಾಗುವಂತಹ ಬುಲೆಟ್ ಪ್ರೂಫ್ ಕಿಟಕಿಗಳನ್ನು ಲಗ್ಗತ್ತಿಸಲಾಗಿದೆ. ಹಾಗೆಯೇ ಇದರ ಬಾಡಿ ಎಂಟು ಇಂಚು ದಪ್ಪದ ರಕ್ಷಣಾತ್ಮಕ ವ್ಯವಸ್ಥೆಯನ್ನು ಹೊಂದಿದೆ. ಕಾರಿನ ಟೈರ್ ಬ್ಲಾಸ್ಟ್ ಆದರೂ ಚಕ್ರಗಳ ಮೂಲಕವೇ ಸಾಗಬಹುದಾಗಿದೆ.

ಬರಾಕ್ ಒಬಾಮಾ ಹೈಟೆಕ್ ಕಾರು 'ದಿ ಬೀಸ್ಟ್'

ಲಿಮೊ ಕಾರಿನ ತೂಕ ಮೂರು ಟನ್. ಇದರ ಡೋರಿನ ತೂಕವೇ ಬೋಯಿಂಗ್ 757 ವಿಮಾನದ ಕ್ಯಾಬಿನ್ ಡೋರಿನ ತೂಕದಷ್ಟಿದೆಯಂತೆ. ಗಂಟೆಗೆ ಇದು ಗರಿಷ್ಠ 60 ಮೈಲು ವೇಗದಲ್ಲಿ ಸಾಗುತ್ತದೆ.

ಬರಾಕ್ ಒಬಾಮಾ ಹೈಟೆಕ್ ಕಾರು 'ದಿ ಬೀಸ್ಟ್'

ಪರಿಣಿತ ಸಿಐಎ ಏಜೆಂಟ್ ಈ ಕಾರಿಗೆ ಚಾಲಕ. ತುರ್ತು ಅಗತ್ಯಕ್ಕೆ ಕಾರಿನೊಳಗೆ ಬರಾಕ್ ಒಬಾಮಾರ ಬ್ಲಡ್ ಗ್ರೂಪಿನ ರಕ್ತ ಸಂಗ್ರಹವಿದೆ. ಒಂದು ಬಟನ್ ಕ್ಲಿಕ್ ಮಾಡಿದರೆ ಡೋರ್ ಸೈಡಿನಿಂದ ಲ್ಯಾಪ್ ಟಾಪ್ ಹೊರಬರುತ್ತದೆ. ಕಾರಿನೊಳಗೆ ಸ್ಯಾಟಲೈಟ್ ಫೋನಿದೆ. ವೇಟ್ ಹೌಸಿಗೆ ನೇರ ಸಂಪರ್ಕವಿರುವ ಮತ್ತೊಂದು ಫೋನ್ ಕಾರಿನೊಳಗೆ ಇದೆ.

ಬರಾಕ್ ಒಬಾಮಾ ಹೈಟೆಕ್ ಕಾರು 'ದಿ ಬೀಸ್ಟ್'

ಕಾರಿನೊಳಗೆ ಬೋರಾಗದೆ ಇರುವಂತೆ ಐಪ್ಯಾಡ್ ಸೇರಿದಂತೆ ಎಂಟರ್ ಟೇನ್ ಮೆಂಟ್ ಸಿಸ್ಟಮ್ ಇದೆ. ಯಾವುದೇ ಸಮಯದಲ್ಲೂ ಪಾರಾಗುವಂತೆ ಈ ಕಾರು 180 ಡಿಗ್ರಿಯಲ್ಲಿ ಟರ್ನ್ ಆಗುವ ಸಾಮರ್ಥ್ಯ ಹೊಂದಿದೆ. ಭದ್ರತೆಯ ಕಾರಣದಿಂದ ಬರಾಕ್ ಒಬಾಮಾ ಬಳಸುವ ಲಿಮೊ ಕಾರಿನ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ಕಾರಲ್ಲಿ ವಿಶೇಷ ನೈಟ್ ವಿಷನ್ ಸಿಸ್ಟಮ್ ಇದೆ. ಜೈವಿಕ ರಾಸಾಯನಿಕ ದಾಳಿಯಿಂದಲೂ ಪಾರಾಗುವ ಫೀಚರುಗಳನ್ನು ಲಿಮೊ ಹೊಂದಿದೆ.

ಬರಾಕ್ ಒಬಾಮಾ ಹೈಟೆಕ್ ಕಾರು 'ದಿ ಬೀಸ್ಟ್'

ಈ ಕಾರಲ್ಲಿ ಒಟ್ಟು ಏಳು ಜನರು ಕುಳಿತುಕೊಳ್ಳಬಹುದಾಗಿದೆ. ಮುಂಭಾಗದಲ್ಲಿ ಎರಡು ಸೀಟಿದೆ. ಮುಂಭಾಗ ಮತ್ತು ಹಿಂಭಾಗದ ಸೀಟಿನ ನಡುವೆ ಗಾಜಿನ ಗೋಡೆಯಿದೆ. ಹಿಂಭಾಗದ ಎರಡು ಸೀಟುಗಳು ಅಮೆರಿಕದ ಅಧ್ಯಕ್ಷರಿಗೆ ಮತ್ತು ಸಹ ಪ್ರಯಾಣಿಕರಿಗೆ ಮೀಸಲು.

ಬರಾಕ್ ಒಬಾಮಾ ಹೈಟೆಕ್ ಕಾರು 'ದಿ ಬೀಸ್ಟ್'

ಒಟ್ಟಿನಲ್ಲಿ ಬರಕ್ ಒಬಾಮಾ ಭಾರತದ ಭೇಟಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೋಟಿಗಟ್ಟಲೆ ವೆಚ್ಚ ವ್ಯಯ ಮಾಡುತ್ತಿದೆ. ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಿರಿ.

Most Read Articles

Kannada
English summary
Republic Day Parade: Barack Obama May Travel in the 'Beast' 
Story first published: Tuesday, January 20, 2015, 8:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X