ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ಬಹುಶ: ರಾಯಲ್ ಎನ್‍‍ಫೀಲ್ಡ್ ಬೈಕುಗಳು ಭಾರತದಲ್ಲಿಯೇ ಹೆಚ್ಚು ಜನಪ್ರಿಯವಾಗಿರುವ ಬೈಕುಗಳಾಗಿವೆ. ಆದರೂ ಈ ಜನಪ್ರಿಯ ಬೈಕುಗಳನ್ನು ಮಾಡಿಫೈಗೊಳಿಸಲು ಹೆಚ್ಚಿನ ಜನರು ಬಯಸುತ್ತಾರೆ. ಈ ಹಿಂದೆಯೂ ಹಲವಾರು ರಾಯಲ್ ಎನ್‍‍ಫೀಲ್ಡ್ ಬೈಕುಗಳನ್ನು ಮಾಡಿಫೈಗೊಳಿಸಿರುವುದನ್ನು ಕಾಣಲಾಗಿತ್ತು.

ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ರಾಯಲ್ ಎನ್‍‍ಫೀಲ್ಡ್ ಬೈಕುಗಳನ್ನು ಮಾಡಿಫೈಗೊಳಿಸಲೆಂದೇ ದೇಶಾದ್ಯಂತ ಹಲವು ಮಾಡಿಫೈ ಗ್ಯಾರೇಜ್‍‍ಗಳಿವೆ. ಈಗ ಪಂಜಾಬ್‍‍ನಲ್ಲಿ ಮತ್ತೊಂದು ರಾಯಲ್ ಎನ್‍ಫೀಲ್ಡ್ ಬೈಕ್ ಅನ್ನು ಮಾಡಿಫೈಗೊಳಿಸಲಾಗಿದೆ.

ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ಈ ರಾಯಲ್ ಎನ್‍‍ಫೀಲ್ಡ್ ಬೈಕ್ ಅನ್ನು ಬೃಹತ್ ಗಾತ್ರದ ಟಯರ್‍‍ಗಳಿಂದ ಮಾಡಿಫೈಗೊಳಿಸಿರುವುದು ವಿಶೇಷ. ಮಾಡಿಫೈಗೊಳಿಸಲಾಗಿರುವ ಈ ಬೈಕಿನ ವೀಡಿಯೊವನ್ನು ಪಂಜಾಬ್ ಮೂಲದ ದರ್ಶನ್ ಟಿವಿ ತನ್ನ ಯೂಟ್ಯೂಬ್ ಚಾನೆಲ್‍‍ನಲ್ಲಿ ಅಪ್‍‍ಲೋಡ್ ಮಾಡಿದೆ.

ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ಈ ಬೈಕ್ ಅನ್ನು ಪಂಜಾಬ್‍‍ನ ಕಪುರ್ತಲಾ ಜಿಲ್ಲೆಯ ಸುಲ್ತಾನ್‍‍ಪುರ್ ಲೋಧಿ ಎಂಬ ಪ್ರದೇಶದಲ್ಲಿ ಮಾಡಿಫೈಗೊಳಿಸಲಾಗಿದೆ. ಮಾಡಿಫೈಗೊಳಿಸಲಾಗಿರುವ ಈ ಬುಲೆಟ್‍‍ನ ವಿಶೇಷತೆ ಎಂದರೆ ಬೃಹತ್ ಗಾತ್ರದ ಟಯರ್‍‍ಗಳು.

ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ಈ ಟಯರ್‍‍ಗಳು ಬೈಕಿಗೆ ವಿಶೇಷ ಲುಕ್ ನೀಡುತ್ತವೆ. ಶೋರೂಂನಲ್ಲಿ ಮಾರಾಟ ಮಾಡುವುದಕ್ಕಿಂತ ದೊಡ್ಡ ಗಾತ್ರದ ಹ್ಯಾಂಡಲ್ ಬಾರ್ ಅನ್ನು ಅಳವಡಿಸಲಾಗಿದೆ. ಬೈಕಿನ ಮುಂಭಾಗದಲ್ಲಿ ಅಗಲವಾಗಿರುವ ಮಡ್‍‍ಗಾರ್ಡ್ ಹಾಗೂ ಹೆಚ್ಚು ಬೆಳಕಿಗಾಗಿ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ.

ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ಈ ಬೈಕಿನ ಹಿಂಭಾಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂಭಾಗದಲ್ಲಿ ಮಾಡಲಾಗಿರುವ ಪ್ರಮುಖ ಬದಲಾವಣೆಯೆಂದರೆ ಹೊಸ ಮಡ್‍‍ಗಾರ್ಡ್ ಹಾಗೂ ಸಿಂಗಲ್ ಸೀಟ್ ಸೆಟ್‍ಅಪ್. ಇದರ ಜೊತೆಗೆ ಹಿಂಭಾಗದಲ್ಲಿ ಟೇಲ್‍‍ಲೈಟ್ ಅಳವಡಿಸಲಾಗಿದೆ.

ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ಸುಲ್ತಾನ್‍‍ಪುರ್ ಲೋಧಿ ನಗರದಲ್ಲಿ ಗುರು ನಾನಕ್‍‍ರವರ 550ನೇ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಈ ಬೈಕಿನ ಫ್ಯೂಯಲ್ ಟ್ಯಾಂಕ್ ಮೇಲೆ ಅದನ್ನು ನಮೂದಿಸಲಾಗಿದೆ. ಸರ್ದಾರ್ ಮಲ್ಬಿರ್ ಸಿಂಗ್ ಎಂಬುವವರು ಈ ಬೈಕಿನ ಮಾಲೀಕರಾಗಿದ್ದಾರೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ಬೈಕ್ ಪ್ರಿಯರಾಗಿರುವ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಅವರ ಮಕ್ಕಳು ಈ ಬೈಕ್ ಅನ್ನು ಮಾಡಿಫೈ ಮಾಡಿದ್ದಾರೆ. ಈ ಮಾಡಿಫೈಗೊಳಿಸಲು ಬೇಕಾಗಿರುವ ವಸ್ತುಗಳನ್ನೆಲ್ಲಾ ಅವರ ಮಕ್ಕಳೇ ನೀಡಿದ್ದಾರೆ. ಈ ಬೈಕಿನಲ್ಲಿರುವ ಬಹುತೇಕ ಬಿಡಿಭಾಗಗಳನ್ನು ಸ್ಥಳೀಯವಾಗಿ ತಯಾರಿಸಲಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ಮಿಕ್ಕ ಬಿಡಿಭಾಗಗಳನ್ನು ದೆಹಲಿಯಿಂದ ತಂದು ಅಳವಡಿಸಲಾಗಿದೆ. ಈ ಬೈಕ್ ಅನ್ನು ಮಾಡಿಫೈಗೊಳಿಸುವ ಸಂದರ್ಭದಲ್ಲಿ ರಿಮ್‍‍‍ಗಳನ್ನು ಬದಲಿಸುವ ವೇಳೆಯಲ್ಲಿ ಪ್ರಮುಖವಾದ ಸವಾಲನ್ನು ಎದುರಿಸಿದ್ದಾರೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ಈ ಸವಾಲನ್ನು ಪರಿಹರಿಸಲು ಸ್ಥಳೀಯ ಬುಲೆಟ್ ಮೆಕಾನಿಕ್ ಹಾಗೂ ಎಂಜಿನಿಯರ್ ಸಹಾಯವನ್ನು ಪಡೆಯಲಾಗಿದೆ. ಈ ಇಬ್ಬರೂ ಎರಡು ಪ್ರತ್ಯೇಕವಾದ ರಿಮ್‍‍ಗಳನ್ನು ತಂದು ಅದನ್ನು ಒಂದೇ ರಿಮ್ ಆಗಿ ಮಾಡಿದ್ದಾರೆ.

ಬೈಕ್ ಅನ್ನು ಆರಾಮಾಗಿ ನಿಲ್ಲಿಸುವ ಸಲುವಾಗಿ ಈ ಬೈಕಿನ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ. ಈ ಬೈಕ್ ಅನ್ನು ಪೂರ್ತಿಯಾಗಿ ಮಾಡಿಫೈ ಮಾಡಲು ಸುಮಾರು 3 ತಿಂಗಳ ಕಾಲ ತಗುಲಿದ್ದು, ಮಾಡಿಫೈಗಾಗಿ ರೂ.4 ಲಕ್ಷ ಖರ್ಚು ಮಾಡಲಾಗಿದೆ.

ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ಮಾಡಿಫೈ ಮಾಡಿದ ನಂತರ ಪವರ್ ಅಂಕಿ ಅಂಶಗಳಲ್ಲಿ ಬದಲಾವಣೆಗಳಾಗಿದೆಯೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ. ಮಾಡಿಫೈಗೊಂಡಿರುವ ಈ ಬೈಕ್ ಆ ಪ್ರದೇಶದಲ್ಲಿ ಈಗ ಬಹಳ ಜನಪ್ರಿಯವಾಗಿದೆ. ಈ ಬೈಕಿನ ಸವಾರರನ್ನು ಬುಲೆಟ್ ವಾಲ ಬಾಬಾ ಎಂದು ಕರೆಯಲಾಗುತ್ತಿದೆ.

ಭಾರೀ ಗಾತ್ರದ ಮಾಡಿಫೈ ಬುಲೆಟ್ ಅಭಿವೃದ್ಧಿಪಡಿಸಿದ ಅಪ್ಪ- ಮಗ

ಈ ಬೈಕಿನಲ್ಲಿ 346 ಸಿಸಿಯ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 19.8 ಬಿ‍‍ಹೆಚ್‍‍ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ.

Image Courtesy: Darshan TV/YouTube

Most Read Articles

Kannada
English summary
Royal enfield modified big tyres custom built father son in punjab - Read in Kannada
Story first published: Monday, November 25, 2019, 11:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X