ಜಾಸ್ತಿ ಸೌಂಡ್ ಮಾಡಿದ್ದಕ್ಕೆ ಬಿತ್ತು ಜಾಸ್ತಿ ಫೈನ್

ಈಗ ಎಲ್ಲೆಲ್ಲೂ ಭಾರೀ ಪ್ರಮಾಣದ ದಂಡ ವಿಧಿಸುತ್ತಿರುವುದರ ಬಗ್ಗೆಯೇ ಸುದ್ದಿ. ಹೊಸ ಕಾಯ್ದೆಯನ್ವಯ ಈಗ ರಾಯಲ್ ಎನ್‍‍ಫೀಲ್ಡ್ ಬೈಕ್ ಸವಾರನಿಗೆ ದಂಡ ವಿಧಿಸಲಾಗಿದೆ. ಹಲವು ನಿಯಮಗಳನ್ನು ಉಲ್ಲಂಘಿಸಿದ ಜೊತೆಗೆ ಬೈಕ್ ಸೈಲೆನ್ಸರ್ ವಿಪರೀತ ಶಬ್ದ ಮಾಡಿದ ಕಾರಣಕ್ಕೆ ದೆಹಲಿ- ಎನ್‍‍ಸಿ‍ಆರ್ ಬಳಿಯಲ್ಲಿರುವ ಫರೀದಾಬಾದ್‍‍‍ನಲ್ಲಿ ರಾಯಲ್ ಎನ್‍‍ಫೀಲ್ಡ್ ಸವಾರನಿಗೆ ರೂ.35,000 ದಂಡ ವಿಧಿಸಲಾಗಿದೆ.

ಜಾಸ್ತಿ ಸೌಂಡ್ ಮಾಡಿದ್ದಕ್ಕೆ ಬಿತ್ತು ಜಾಸ್ತಿ ಫೈನ್

ಆ ವೇಳೆಯಲ್ಲಿ ಕರ್ತವ್ಯದಲ್ಲಿದ್ದ ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿ ದಂಡ ವಿಧಿಸಿದ್ದಾರೆ. ನಮ್ಮ ದೇಶದ ರಸ್ತೆಗಳಲ್ಲಿ ಸಾಮಾನ್ಯವಾಗಿ ಈ ದೃಶ್ಯವನ್ನು ಕಾಣುತ್ತಲೇ ಇರುತ್ತೇವೆ. ಮೂವರು ಯುವಕರು ತನ್ನ ನೆಚ್ಚಿನ ಬುಲೆಟ್ ಬೈಕಿನಲ್ಲಿ ಜಾಲಿ ರೈಡ್ ಹೊರಟಿದ್ದಾರೆ. ಅವರಿಗೆ ಮುಂದೆ ಎದುರಾಗುವ ಸನ್ನಿವೇಶದ ಅರಿವಿರಲಿಲ್ಲ.

ಜಾಸ್ತಿ ಸೌಂಡ್ ಮಾಡಿದ್ದಕ್ಕೆ ಬಿತ್ತು ಜಾಸ್ತಿ ಫೈನ್

ಬಹುಶಃ ಅವರಿಗೆ ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಹೊಸ ನಿಯಮದ ಬಗ್ಗೆಯೂ ತಿಳಿದಿಲ್ಲ. ಆದ ಕಾರಣ ಬೈಕ್ ಚಾಲನೆ ಮಾಡುವಾಗ ಏನೆಲ್ಲಾ ಮಾಡಬಾರದು ಎಂದು ತಿಳಿಯದೇ ಹಲವಾರು ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಜಾಸ್ತಿ ಸೌಂಡ್ ಮಾಡಿದ್ದಕ್ಕೆ ಬಿತ್ತು ಜಾಸ್ತಿ ಫೈನ್

ಸಂಚಾರಿ ಪೊಲೀಸರು ಅವರನ್ನು ತಡೆದು ನಿಲ್ಲಿಸಿದಾಗಲೇ ಅವರಿಗೆ ತಾವು ಒಂದೇ ಬಾರಿಗೆ ಹಲವು ನಿಯಮಗಳನ್ನು ಉಲ್ಲಂಘಿಸಿರುವುದು ತಿಳಿದು ಬಂದಿದೆ. ಹೆಲ್ಮೆಟ್ ಧರಿಸದೇ ಬೈಕಿನಲ್ಲಿ ಟ್ರಿಪಲ್ ರೈಡಿಂಗ್ ಹೋಗುತ್ತಿದ್ದ ಕಾರಣಕ್ಕೆ ಬೈಕ್ ಅನ್ನು ತಡೆದು ನಿಲ್ಲಿಸಲಾಗಿದೆ.

ಜಾಸ್ತಿ ಸೌಂಡ್ ಮಾಡಿದ್ದಕ್ಕೆ ಬಿತ್ತು ಜಾಸ್ತಿ ಫೈನ್

ತಪಾಸಣೆಯ ನಂತರ ಬೈಕ್ ಚಾಲನೆ ಮಾಡುತ್ತಿದ್ದ ಸವಾರನ ಬಳಿ ಅಗತ್ಯವಾಗಿದ್ದ ದಾಖಲೆಗಳು ಇಲ್ಲದಿರುವುದು ಕಂಡು ಬಂದಿದೆ. ಬೈಕ್ ಸವಾರನ ಬಳಿ ಡ್ರೈವಿಂಗ್ ಲೈಸೆನ್ಸ್, ಆರ್‍‍ಸಿ ಬುಕ್, ಥರ್ಡ್ ಪಾರ್ಟಿ ಇನ್ಶೂರೆನ್ಸ್, ಎಮಿಷನ್ ಸರ್ಟಿಫಿಕೇಟ್ ಸೇರಿದಂತೆ ಯಾವುದೇ ದಾಖಲೆಗಳು ಕಂಡು ಬಂದಿರುವುದಿಲ್ಲ.

ಜಾಸ್ತಿ ಸೌಂಡ್ ಮಾಡಿದ್ದಕ್ಕೆ ಬಿತ್ತು ಜಾಸ್ತಿ ಫೈನ್

ಇದೆಲ್ಲದರ ಜೊತೆಗೆ ಬೈಕ್ ಸವಾರನು ತನ್ನ ಬೈಕಿನಲ್ಲಿದ್ದ ಸೈಲೆನ್ಸರ್ ಅನ್ನು ಮಾಡಿಫೈಗೊಳಿಸಿದ್ದಾನೆ. ಇದರಿಂದ ಬೈಕ್ ದೊಡ್ಡ ಗಾತ್ರದ ಪಟಾಕಿಯಂತೆ ಶಬ್ದ ಮಾಡುತ್ತಿತ್ತು. ಈ ಎಲ್ಲಾ ನಿಯಮಗಳ ಉಲ್ಲಂಘನೆಗಾಗಿ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಒಟ್ಟು ರೂ.35,000 ದಂಡ ವಿಧಿಸಿದ್ದಾರೆ.

ಜಾಸ್ತಿ ಸೌಂಡ್ ಮಾಡಿದ್ದಕ್ಕೆ ಬಿತ್ತು ಜಾಸ್ತಿ ಫೈನ್

ಈಗ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಸಂಚಾರಿ ಪೊಲೀಸರಿಗೆ ತೋರಿಸಿ, ದಂಡವನ್ನು ಪೂರ್ತಿಯಾಗಿ ಪಾವತಿಸಿದ ನಂತರ ಬೈಕ್ ಅನ್ನು ಚಾಲಕನಿಗೆ ನೀಡಲಾಗುವುದು. ಬೈಕ್ ಸವಾರನು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತೋರಿಸಿದ ನಂತರ ಈಗ ವಿಧಿಸಲಾಗಿರುವ ದಂಡವನ್ನು ಸಹ ಕಡಿಮೆ ಮಾಡಲಾಗುವುದು.

MOST READ: ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಜಾಸ್ತಿ ಸೌಂಡ್ ಮಾಡಿದ್ದಕ್ಕೆ ಬಿತ್ತು ಜಾಸ್ತಿ ಫೈನ್

ಸೆಪ್ಟೆಂಬರ್ 1ರಿಂದ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಜನರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಹೊಸ ನಿಯಮದಲ್ಲಿನ ದಂಡದ ಮೊತ್ತದ ಬಗ್ಗೆ ಅರಿವಿರದ ಜನರು ದಂಡ ಕಟ್ಟಲು ಪರದಾಡುತ್ತಿದ್ದಾರೆ.

MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಜಾಸ್ತಿ ಸೌಂಡ್ ಮಾಡಿದ್ದಕ್ಕೆ ಬಿತ್ತು ಜಾಸ್ತಿ ಫೈನ್

ಸರಿಯಾದ ದಾಖಲೆಗಳನ್ನು ಹೊಂದಿರುವುದು ಮಾತ್ರವಲ್ಲದೇ, ವಾಹನ ಚಲಾಯಿಸುವಾಗ ಹೊಂದಿರುವ ಹಳೆ ಅಭ್ಯಾಸ ಹಾಗೂ ಮನಸ್ಥಿತಿಯನ್ನು ಸಹ ಬದಲಿಸಿಕೊಳ್ಳಬೇಕಿದೆ. ಇವೆಲ್ಲಾ ಬದಲಾವಣೆಗಳಿಗೆ ಕೆಲ ಸಮಯ ಹಿಡಿಯಲಿದೆ.

MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಜಾಸ್ತಿ ಸೌಂಡ್ ಮಾಡಿದ್ದಕ್ಕೆ ಬಿತ್ತು ಜಾಸ್ತಿ ಫೈನ್

ಒಂದೇ ಬಾರಿ ದೊಡ್ಡ ಪ್ರಮಾಣದ ದಂಡವನ್ನು ವಿಧಿಸುವ ಬದಲಿಗೆ, ನಿಧಾನವಾಗಿ ದಂಡದ ಮೊತ್ತವನ್ನು ಏರಿಸಬಹುದಿತ್ತು. ಇದರಿಂದಾಗಿ ಜನರೂ ಸಹ ಹೊಸ ಬದಲಾವಣೆಗೆ ಹೊಂದಿಕೊಳ್ಳಲು ಸಾಧ್ಯವಿತ್ತು. ಈಗ ಹೊಸ ನಿಯಮಗಳಿಗೆ ಹೊಂದಿಕೊಳ್ಳಲಾಗದೇ ಭಾರೀ ಪ್ರಮಾಣದ ದಂಡವನ್ನು ತೆರುವಂತಾಗಿದೆ.

More from DriveSpark

Article Published On: Thursday, September 12, 2019, 12:58 [IST]
English summary
Royal Enfield owner fined Rs 35,000 – For loud exhaust, no helmet, etc - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+