ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

By Manoj B.k

ಕ್ಲಾಸಿಕ್ ಕಾರು ಅಂದಾಕ್ಷಣವೇ ಬಹುತೇಕರ ಮನಸ್ಸಲ್ಲಿ ಮೊದಲಿಗೆ ಬರುವುದೇ ಅಂಬಾಸಿಡರ್ ಕಾರಿನ ಕಲ್ಪನೆ. ಅದಕ್ಕೆ ಕಾರಣ ಹಲವು. ಭಾರತದ ರಸ್ತೆಗಳನ್ನಾಳಿದ ರಾಜ ಎಂದೇ ಖ್ಯಾತಿ ಹೊಂದಿದ್ದ ಅಂಬಾಸಿಡರ್ ಕಾರುಗಳು ಇದೀಗ ಉತ್ಪಾದನೆ ಮತ್ತು ಮಾರಾಟ ಇಲ್ಲದಿದ್ದರೂ ಕಾರು ಪ್ರೇಮಿಗಳ ಮನಸ್ಸಿನಿಂದ ದೂರವಾಗಲು ಸಾಧ್ಯವೇ ಇಲ್ಲ.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ಕಾರು ಪ್ರಿಯರಲ್ಲಿ ಒಂದು ರೀತಿಯ ಭಾವನಾತ್ಮಕ ನಂಟನ್ನು ಹೊಂದಿದ್ದ ಅಂಬಾಸಿಡರ್ ಕಾರುಗಳು ಕಾಲಘಟ್ಟದಲ್ಲಿ ಬೇಡಿಕೆಯಲ್ಲಿ ಕುಸಿತ, ಹಣಕಾಸಿನ ಮುಗ್ಗಟ್ಟಿನಿಂದಾಗಿ ಉತ್ಪಾದನೆ ಸ್ಥಗಿತಗೊಂಡಿದ್ದು ಬಹುತೇಕರಿಗೆ ಗೊತ್ತಿರುವ ವಿಚಾರ. ಆಧುನಿಕ ವಾಹನಗಳಿಗೆ ತನ್ನ ಹಾದಿ ಬಿಟ್ಟು ಕೊಟ್ಟಿರುವ ದಶಕಗಳ ಹೀರೊ ಅಂಬಾಸಿಡರ್ ಮುಂದೊಂದು ದಿನ ಮರಳಿ ಬರಲಿ ಎಂಬುವುದೇ ಬಹುತೇಕರ ಪ್ರಾರ್ಥನೆ ಎಂದ್ರೆ ತಪ್ಪಾಗುವುದಿಲ್ಲ.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿದ್ದ ಹಿಂದೂಸ್ತಾನ್ ಮೋಟಾರ್ಸ್ ಸಂಸ್ಥೆಯು ತನ್ನ ಐಕಾನಿಕ್ ಅಂಬಾಸಿಡರ್ ನಿರ್ಮಾಣವನ್ನು ಪ್ರಕ್ರಿಯೆಯನ್ನು 2014ರಿಂದಲೇ ಸಂಪೂರ್ಣವಾಗಿ ಬಂದ್ ಮಾಡಿದೆ. ಬೆಲೆ, ನಿರ್ವಹಣೆ, ನಿರ್ಮಾಣ ಗುಣಮಟ್ಟ, ಆರಾಮದಾಯಕ, ಅನುಕೂಲ ಹೀಗೆ ಒಂದು ಕಾರಿನ ಎಲ್ಲ ವಿಭಾಗದಲ್ಲೂ ಸೈ ಎನಿಸಿಕೊಂಡಿರುವ ಅಂಬಾಸಿಡರ್ ಬಗ್ಗೆ ಮರೆಯಲಾಗದ 10 ಸತ್ಯಗಳನ್ನು ನಾವಿಲ್ಲಿ ಬಹಿರಂಗಪಡಿಸಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ಬ್ರಿಟನ್‌ನ ಮೋರಿಸ್ ಆಕ್ಸ್‌ಫರ್ಡ್ 3 ಕಾರಿನ ಮೂಲ ವಿನ್ಯಾಸದೊಂದಿಗೆ ನಿರ್ಮಾಣಗೊಂಡಿರುವ ಅಂಬಾಸಿಡರ್ ಕಾರುಗಳು 1957ರಿಂದ 2014ರ ತನಕ ದೇಶದಲ್ಲಿ ಮಾರಾಟದಲ್ಲಿದ್ದವು. ಜೊತೆಗೆ ಕಾರಿನ ಗುಣಮಟ್ಟ ಮತ್ತು ಬೆಲೆ ವಿಚಾರವಾಗಿ ಅತ್ಯಂತ ವಿಶ್ವಾಸಾರ್ಹ ಕಾರೆಂದು ಗುರುತಿಸಿಕೊಂಡಿತ್ತು.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ಹಿಂದೂಸ್ತಾನ್ ಮೋಟಾರ್ಸ್ ಅದರ ಜೋಡಣಾ ಕಾರ್ಖಾನೆಯನ್ನು ಗುಜರಾತ್ ನಲ್ಲಿರುವ ಪೋರ್ಟ್ ಓಕಾ ದಿಂದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ಉತ್ತರಪಾರಾಕ್ಕೆ 1948 ರಲ್ಲಿ ಬದಲಾಯಿಸಿತ್ತು. ಅಲ್ಲದೇ ಮೋಟಾರು ಕಾರಿನ ವಿಭಾಗದಲ್ಲಿ ಇದರ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಾಗಿತ್ತು.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ಬಿರ್ಲಾ, ಮೋರಿಸ್ ಆಕ್ಸ್ ಫರ್ಡ್ ಸೀರಿಸ್ II ರ (ಹಿಂದೂಸ್ತಾನ್ ಲ್ಯಾಂಡ್ ಮಾಸ್ಟರ್ ) ಮಾದರಿಯಲ್ಲಿ ತಯಾರಿಸಲಾಗಿದ್ದ ಹಳೆಯ ಹಿಂದೂಸ್ತಾನ್ ಮಾದರಿಯನ್ನು ಬದಲಾಯಿಸಬೇಕೆಂದಾಗ, ಅನಂತರದ ಹೊಸ ಮೋರಿಸ್ ಆಕ್ಸ್ ಫರ್ಡ್ ಸೀರಿಸ್ III ಅನ್ನು ಪರಿಚಯಿಲಾಗಿತ್ತು.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ಮೋರಿಸ್ ಆಕ್ಸ್ ಫರ್ಡ್ ಸರಣಿ II ರ ಮಾದರಿಯನ್ನು ಭಾರತದಲ್ಲಿ ತಯಾರಿಸಲು 1954 ರಲ್ಲಿ ಅನುಮತಿ ದೊರೆಯಿತು. ಅಲ್ಲದೆ ಇಂಗ್ಲೆಂಡ್ ನಲ್ಲಿ ಈ ಕಾರನ್ನು ಪ್ರಥಮ ಬಾರಿಗೆ ನಿರ್ಮಿಸಿದ ಮೂರು ವರ್ಷಗಳ ನಂತರ, ಇದನ್ನು ಪಶ್ಚಿಮ ಬಂಗಾಳದ ಉತ್ತರಪಾರದಲ್ಲಿ ನಿರ್ಮಿಸಲಾಯಿತು.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ಅಂಬಾಸಿಡರ್ ದೇಶದ ಮೊದಲ ಡೀಸೆಲ್ ಕಾರಾಗಿದ್ದು, 1489 ಸಿಸಿ, ಬಿಎಂಸಿ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸ್ಪಟ್ಟಿತ್ತು. ಬಳಿಕ 1.5 ಲೀಟರ್ ಬದಲು 1900ರ ಪೂರ್ವಾರ್ಧದಲ್ಲಿ ಇಸುಝು 1.8 ಲೀಟರ್ ಬಳಸಲಾಯಿತು. ಇದಾದ ಬಳಿಕ 1.8 ಲೀಟರ್ (75 ಬಿಎಚ್ ಪಿ) ಎಂಪಿಎಫ್ ಐ ಪೆಟ್ರೋಲ್ ಹಾಗೂ ಇಸುಝು 2.0 ಲೀಟರ್ (50 ಬಿಎಚ್ ಪಿ) ಡೀಸೆಲ್ ಎಂಜಿನ್ ಗಳು ಜೋಡಣೆಯಾಗಿತ್ತು.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳ ನೆಚ್ಚಿನ ಕಾರೆನಿಸಿಕೊಂಡಿದ್ದ ಐಕಾನಿಕ್ ಅಂಬಾಸಿಡರ್ ಕಾರುಗಳ ಮಾರಾಟದೊಂದಿಗ ಶೇಕಡಾ 16ರಷ್ಟು ಆದಾಯ ಸರಕಾರದಿಂದಲೇ ಹರಿದುಬರುತ್ತಿತ್ತು.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, 2013ರಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್, ರಷ್ಯಾ ಲಿಮೊಸಿನ್ ಹಾಗೂ ಬ್ಲ್ಯಾಕ್ ಲಂಡನ್ ಕ್ಲಾಬ್ ಗಳನ್ನು ಹಿಂದಿಕ್ಕಿದ್ದ ಹಿಂದೂಸ್ತಾನ್ ಮೋಟಾರ್ಸ್ ಸಂಸ್ಥೆಯು ಅಂಬಾಸಿಡರ್ ಕಾರುಗಳ ನಿರ್ಮಾಣಕ್ಕೆ 2013ರ ವಿಶ್ವದ ಅತ್ಯುತ್ತಮ ಟ್ಯಾಕ್ಸಿ ಪ್ರಶಸ್ತಿಗೆ ಪಾತ್ರವಾಗಿತ್ತು.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ದೃಢವಾದ ನಿರ್ಮಾಣ, ಗುಣಮಟ್ಟತೆಯನ್ನು ಕಾಯ್ದುಕೊಂಡಿರುವ ಅಂಬಾಸಿಡರ್ ಈಗಲೂ ಅತ್ಯಂತ ಸುರಕ್ಷಿತ ಕಾರೆನಿಸಿಕೊಂಡಿದ್ದು, ಕಾರಿನೊಳಗೆ ಹೆಚ್ಚು ಸ್ಥಳಾವಕಾಶ ಕಲ್ಪಿಸಿರುವುದು ಆರಾಮ ಹಾಗೂ ಹೆಚ್ಚು ಅನುಕೂಲದ ಪಯಣವನ್ನು ಖಾತ್ರಿಪಡಿಸುತ್ತದೆ.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

50 ವರ್ಷಕ್ಕೂ ಹೆಚ್ಚು ಕಾಲ ಭಾರತೀಯ ರಸ್ತೆಗಳಲ್ಲಿ ರಾರಾಜಿಸಿರುವ ಅಂಬಾಸಿಡರ್, ದೇಶದ ಅತ್ಯಂತ ಜನಪ್ರಿಯ ಕಾರಾಗಿದೆ. ಕಾಲ ಕಾಲಕ್ಕೆ ತನ್ನ ವಿನ್ಯಾಸದಲ್ಲಿ ಬದಲಾವಣೆ ಪಡೆದುಕೊಳ್ಳುತ್ತಿದ್ದ ಅಂಬಾಸಿಡರ್, 1957ರಲ್ಲಿ ಮಾರ್ಕ್ I, 1962ರಲ್ಲಿ ಮಾರ್ಕ್-II, 1977ರಲ್ಲಿ ಮಾರ್ಕ್- III, 1979ರಲ್ಲಿ ಮಾರ್ಕ್ IV, 1990ರಲ್ಲಿ ಹೆಚ್ಚು ಪ್ರೀಮಿಯಂ ಸೌಲಭ್ಯಗಳುಳ್ಳು ಅಂಬಾಸಿಡರ್ ನೋವಾ, 1992ರಲ್ಲಿ ಅಂಬಾಸಿಡರ್ 1800 ಐಎಸ್ ಝಡ್ ವಷನ್‌ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡಿತ್ತು.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ಆಧುನಿಕ ಕಾಲಘಟ್ಟದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೆಚ್ಚು ಪರಿಷ್ಕೃತ ಅಂಬಾಸಿಡರ್ ಕ್ಲಾಸಿಕ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. 2003ರಲ್ಲಿ ಇದು ಅಂಬಾಸಿಡರ್ ಗ್ರಾಂಡ್, 2004 ಅವಿಗೊ, 2013ರಲ್ಲಿ ಅಂಬಾಸಿಡರ್ ಎನ್ ಕೋರ್ ಪರಿಚಯವಾಗಿತ್ತು. ಇದಲ್ಲದೆ ವಿಸೃತ ಆವೃತ್ತಿ ಹಾಗೂ ದಿಲೀಪ್ ಛಾಬ್ರಿಯಾ ಅವರ ಕಸ್ಟಮೈಸ್ಡ್ ವರ್ಷನ್ ರೂಪವನ್ನು ಕಂಡಿತ್ತು.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ಹೀಗಿದ್ದರೂ ನಿರ್ದಿಷ್ಟ ಮಟ್ಟದ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾದ ಹಿಂದೂಸ್ತಾನ್ ಮೋಟಾರ್ಸ್ ಸಂಸ್ಥೆಯು 2001ರಿಂದ ಇಚೆಗೆ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದಲ್ಲದೇ ಆರ್ಥಿಕ ಮುಗ್ಗಟ್ಟನಿಂದಾಗಿ ನೌಕರರ ವೇತನಕ್ಕೂ ಕಷ್ಟವಾಗಿತ್ತು.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ಅಂತಿಮವಾಗಿ 2014ರಲ್ಲಿ ಅಂಬಾಸಿಡರ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಹಿಂದೂಸ್ತಾನ್ ಮೋಟಾರ್ಸ್ ಸಂಸ್ಥೆಯು ಸದ್ಯ ತನ್ನ ಐನಾನಿಕ್ ಕಾರುಗಳ ಮರು ಉತ್ಪಾದನೆಗಾಗಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳೊಂದಿಗೆ ಮಹತ್ವದ ಮಾತುಕತೆ ನಡೆಸಿದೆ.

MOST READ: ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ವರದಿಗಳ ಪ್ರಕಾರ, ಫ್ರೆಂಚ್ ಜನಪ್ರಿಯ ಆಟೋ ಉತ್ಪಾದನಾ ಸಂಸ್ಥೆಯಾದ ಪ್ಯೂಜೊ ಮೋಟಾರ್ಸ್ ಜೊತೆಗೆ ಕೈ ಜೊಡಿಸಲಿದೆ ಎನ್ನಲಾಗಿದ್ದು, ಫ್ಯೂಜೊ ಕಾರ್ ಬ್ರಾಂಡ್‌ಗಳ ಅಡಿಯಲ್ಲಿ ಅಂಬಾಸಿಡರ್ ಕಾರುಗಳು ಹೊಸ ತಂತ್ರಜ್ಞಾನ ಮತ್ತು ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ರೀ ಎಂಟ್ರಿ ನೀಡಲಿವೆ ಎಂದು ಹೇಳಲಾಗುತ್ತಿದೆ.

More from DriveSpark

Article Published On: Tuesday, July 3, 2018, 16:54 [IST]
English summary
Secrets of hindustan ambassador cars.
Read more on ambassador off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+