ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ಬಾಲಿವುಡ್ ಸಿನಿಮಾ ರಂಗ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿ ಇರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಇದರಲ್ಲಿ ಬಹುತೇಕ ನಟ, ನಟಿಯರಿಗೆ ಕಾರು ಹಾಗೂ ಬೈಕ್‌ಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಅದೇ ರೀತಿ ನಟ ಇಶಾನ್​ ಖಟ್ಟರ್ ಅವರು ಬ್ರೇಕ್ ಕ್ರೇಜ್ ಅನ್ನು ಹೊಂದಿದ್ದಾರೆ.

ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ಬಾಲಿವುಡ್ ನಟ, ಇಶಾನ್ ಖಟ್ಟರ್ ಅವರು ಐಷಾರಾಮಿ ಟ್ರಯಂಫ್ ಬೊನೆವಿಲ್ಲೆ ಸ್ಪೀಡ್ ಟ್ವಿನ್ ಬೈಕ್ ಅನ್ನು ಖರೀದಿಸಿದ್ದಾರೆ. ನಟ ಖಾಲಿ ಪೀಲಿ, ಧಡಕ್‌ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಇಶಾನ್ ಕಟ್ಟರ್ ಮುಂಬೈ ಸುತ್ತಾಡಲು, ಶಾಪಿಂಗ್ ಹಾಗೂ ಇತರ ಕೆಲಸಗಳಿಗಾಗಿ ಬೈಕನ್ನೇ ಹೆಚ್ಚಾಗಿ ಬಳಸುತ್ತಾರೆ. ನಟ ಖರೀದಿಸಿದ ಹೊಸ ಟ್ರಯಂಫ್ ಬೊನೆವಿಲ್ಲೆ ಸ್ಪೀಡ್ ಟ್ವಿನ್ ಬೈಕಿನ ಬೆಲೆಯು ಎಕ್ಸ್ ಶೊರೂಂ ಪ್ರಕಾರ ರೂ.11 ಲಕ್ಷವಾಗಿದೆ. ಈ ಬೈಕಿನ ಆನ್ ರೋಡ್ ಬೆಲೆ ರೂ.13 ಲಕ್ಷವಾಗಿದೆ.

ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ನಟ ಇಶಾನ್ ಅವರು ರೆಡ್ ಹಾಪರ್ ಬಣ್ಣವನ್ನು ಆರಿಸಿಕೊಂಡರು, ಸ್ಪೀಡ್ ಟ್ವಿನ್ ಅನ್ನು ಜೆಟ್ ಬ್ಲಾಕ್ ಮತ್ತು ಮ್ಯಾಟ್ ಸ್ಟಾರ್ಮ್ ಗ್ರೇ ಬಣ್ಣಗಳಲ್ಲಿಯೂ ನೀಡಲಾಗುತ್ತದೆ. ಇಶಾನ್ ಖಟ್ಟರ್ ಅವರಿಗೆ ಸಹೋದರ ಶಾಹಿದ್ ಕಪೂರ್ ಹೆಲ್ಮೆಟ್ ಉಡುಗೊರೆಯಾಗಿ ನೀಡಿದ್ದಾರೆ. ಟ್ರಯಂಫ್ ಕಳೆದ ವರ್ಷ ಸ್ಪೀಡ್ ಟ್ವಿನ್‌ನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿತು.

ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್ ಇದೀಗ ಹೆಚ್ಚಿನ ಪರ್ಫಾಮೆನ್ಸ್ ಅನ್ನು ಹೊಂದಿದೆ. ಜೊತೆಗೆ ಚಾಸಿಸ್ ಮತ್ತು ಎಲೆಕ್ಟ್ರಾನಿಕ್ಸ್ ಸೂಟ್‌ಗೆ ನವೀಕರಣಗಳನ್ನು ಒಳಗೊಂಡಿದೆ. ಇನ್ನು ಈ ಬೈಕ್ ಹೊಸ ಕಾಸ್ಮೆಟಿಕ್ ಬದಲಾವಣೆಗಳಿವೆ, ಇನ್ನು ಈ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕಿನಲ್ಲಿ 1,200 ಸಿಸಿ 'ಹೈ ಪವರ್' ಎಂಜಿನ್ ಅನ್ನು ಅಳವಡಿಸಲಾಗಿದೆ.

ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ಇದರ ಹೊಸ ಬ್ಯಾಲೆನ್ಸರ್ ಶಾಫ್ಟ್, ಹೊಸ ಕ್ಯಾಮ್ ಪ್ರೊಫೈಲ್, ಪರಿಷ್ಕೃತ ಪೋರ್ಟ್ಸ್ ಮತ್ತು ಹೆಚ್ಚಿನ ಕಂಪರೇಷನ್ ಪಿಸ್ಟನ್‌ಗಳು ಈ ನವೀಕರಣಗಳನ್ನು ಪಡೆದುಕೊಂಡಿದೆ. ಟ್ರಯಂಫ್ ಸ್ಪೀಡ್ ಟ್ವಿನ್ ಬೈಕಿನಲ್ಲಿ ನೀಡಿರುವ 1,200 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ 7,250 ಆರ್‌ಪಿಎಂನಲ್ಲಿ 99 ಬಿಹೆಚ್‌ಪಿ ಪವರ್ ಮತ್ತು 4,250 ಆರ್‌ಪಿಎಂನಲ್ಲಿ 112 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕಿನ ಒಟ್ಟಾರೆ ಸಿಲೂಯೆಟ್ ಒಂದೇ ಆಗಿರುತ್ತದೆ, ಆದರೆ ಕೆಲವು ವಿಶಿಷ್ಟವಾದ ಬದಲಾವಣೆಗಳಿವೆ, ಹೆಚ್ಚು ಪ್ರೀಮಿಯಂ ಶೈಲಿಯನ್ನು ಮತ್ತು ವಿವರಗಳನ್ನು ನೀಡುತ್ತವೆ. ಈ ಬೈಕ್ 14.5 ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದ್ದು, ಇದು ಹೊಸ ಗ್ರಾಫಿಕ್ಸ್ ಹೊಂದಿದೆ.

ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ಈ ಬೈಕಿನಲ್ಲಿ ಹೊಸ ಹೆಡ್‌ಲ್ಯಾಂಪ್, ಸೈಲೆನ್ಸರ್‌ಗಳು ಬ್ರಷ್ಡ್ ಅಲ್ಯೂಮಿನಿಯಂ ಫಿನಿಶ್ ಪಡೆಯುತ್ತವೆ, ಇದರೊಂದಿಗೆ ಇತರ ಪ್ರೀಮಿಯಂ ಬಿಟ್‌ಗಳಲ್ಲಿ ಕ್ಲಾಸಿಕ್ ಮೊನ್ಜಾ ಫ್ಯೂಯಲ್ ಕ್ಯಾಪ್ ಮತ್ತು ಆನೊಡೈಸ್ಡ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಸೇರಿವೆ. ಇನ್ನು ಹೊಸ ಟ್ರಯಂಫ್ ಸ್ಪೀಡ್ ಟ್ವಿನ್‌ ಬೈಕಿನ ಮುಂಭಾಗ ಮತ್ತು ಹಿಂಭಾಗದ ಮಡ್‌ಗಾರ್ಡ್‌ಗಳು ಹೊಸ ಮೌಂಟಡ್ ಗಳನ್ನು ಹೊಂದಿವೆ. ಇದರ ಹೀಲ್ ಗಾರ್ಡ್‌ಗಳ ಜೊತೆಗೆ ಅಲ್ಯೂಮಿನಿಯಂ ಫಿನಿಷ್ಡ್ ಬ್ರಷ್ ಮಾಡಿದೆ..

ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ಈ ಹೊಸ ಬೈಕಿನಲ್ಲಿ ರೈನ್, ರೋಡ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇನ್ನು ಇದರಲ್ಲಿ ಥ್ರೊಟಲ್ ರೆಸ್ಪಾನ್ಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಸೆಟ್ಟಿಂಗ್‌ಗಳೆರಡನ್ನೂ ಸವಾರರ ಆದ್ಯತೆಗೆ ಸರಿಹೊಂದಿಸಬಹುದು. ಬೈಕ್ ಚಲಿಸುವಾಗ ರೈಡಿಂಗ್ ಮೋಡ್ ಗಳನ್ನು ಬದಲಾಯಿಸಿದೆ.

ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ಇನ್ನು ಈ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಕಾರ್ಟ್ರಿಡ್ಜ್ ಡ್ಯಾಂಪಿಂಗ್‌ನೊಂದಿಗೆ 43 ಎಂಎಂ ಮಾರ್ಜೋಚಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪ್ರಿ-ಲೋಡಡ್ ಟ್ವಿನ್ ಶಾಕ್ ಸಸ್ಪೆಂಕ್ಷನ್ ಯುನಿಟ್ ಅನ್ನು ಒಳಗೊಂಡಿದೆ.

ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ಪ್ರಮುಖವಾಗಿ ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ ಬ್ರೆಂಬೊ ಫೋರ್-ಪಿಸ್ಟನ್ ಎಂ 50 ರೇಡಿಯಲ್ ಮೊನೊಬ್ಲೋಕ್ ಕ್ಯಾಲಿಪರ್‌ಗಳು ಟ್ವಿನ್ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಹೊಂದಿರುವ ನಿಸ್ಸಿನ್ ಎರಡು-ಪಿಸ್ಟನ್ ಕ್ಯಾಲಿಪರ್ ಅನ್ನು ಹೊಂದಿದೆ. ಇದರೊಂದಿಗೆ ಈ ಬೈಕಿನಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಅನ್ನು ಹೊಂದಿದೆ.ಈ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕನ್ನು ಯುರೋ5 ಮತ್ತು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ.

ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ಇನ್ನು ಟ್ರಯಂಫ್ ತನ್ನ ಹೊಸ ಟೈಗರ್ ಸ್ಪೋರ್ಟ್ 660 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.95 ಲಕ್ಷವಾಗಿದೆ. ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕಿನ ಬೆಲೆಯನ್ನು ಟ್ರೈಡೆಂಟ್ 660 ಮಾದರಿಯ ಬೆಲೆಗೆ ಹೋಲಿಸಿದರೆ ರೂ.1.50 ಲಕ್ಷ ದುಬಾರಿಯಾಗಿದೆ. ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಡೀಲರ್‌ಶಿಪ್‌ಗಳಿಗೆ ತಲುಪಲು ಪ್ರಾರಂಭಿಸಿದೆ. ಈ ಹೊಸ ಬೈಕಿನ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು. ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬ್ರ್ಯಾಂಡ್‌ನ ಇತ್ತೀಚಿನ ನೇಕೆಡ್ ಸ್ಟ್ರೀಟ್‌ಫೈಟರ್-ಟ್ರಿಡೆಂಟ್ 660 ನ ಅದೇ ಫ್ರೇಮ್ ಅನ್ನು ಆಧರಿಸಿದೆ.

ಐಷಾರಾಮಿ ಬೈಕ್ ಖರೀದಿಸಿದ ನಟ ಇಶಾನ್‌ಗೆ ಹೆಲ್ಮೆಟ್ ಉಡುಗೊರೆ ನೀಡಿದ ಶಾಹಿದ್ ಕಪೂರ್

ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್ ಬ್ರಷ್ ಮಾಡಿದ ಅಲ್ಯೂಮಿನಿಯಂ ಫಿನಿಶ್ ಅನ್ನು ಪಡೆಯುತ್ತವೆ, ಇತರ ಪ್ರೀಮಿಯಂ ಬಿಟ್‌ಗಳು ಕ್ಲಾಸಿಕ್ ಮೊನ್ಜಾ ಫ್ಯೂಯಲ್ ಕ್ಯಾಪ್ ಮತ್ತು ಕ್ಲಿಯರ್ ಅನೋಡೈಸ್ಡ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಅನ್ನು ಒಳಗೊಂಡಿವೆ. ಒಟ್ಟಿನಲ್ಲಿ ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುವ ಬಹುನಿರೀಕ್ಷಿತ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್ ಆಕರ್ಷಕ ವಿನ್ಯಾಸದೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ.

More from DriveSpark

Article Published On: Wednesday, April 6, 2022, 15:33 [IST]
English summary
Shahid kapoor gifts helmet to ishaan khattar who buys triumph bonneville speed twin details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+