10 ಕೋಟಿ ಬೆಲೆಬಾಳುವ ಬೆಂಝ್ 'ಬಾಂಬ್ ಪ್ರೂಫ್' ಕಾರು ಖರೀದಿಸಿದ ಶಾರೂಕ್
ಸೆಲೆಬ್ರಿಟಿಗಳಿಗೆ ನಮ್ಮ ನಿಮ್ಮಂತಹ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಇನ್ನು ಸಿನೆಮಾ ನಟಮಣಿಗಳಂತೂ ಜನ ಸಾಮಾನ್ಯರ ನಡುವೆ ಗುರುತಿಸಿಕೊಳ್ಳುವುದೇ ಕಷ್ಟಕರ.
ಹಾಗಿರುವಾಗ ದೇಶದ ಸೂಪರ್ ಸ್ಟಾರ್‌ಗಳಲ್ಲಿ ಓರ್ವರಾಗಿರುವ ಶಾರೂಕ್ ಖಾನ್, ಆತ್ಮ ರಕ್ಷಣೆಗಾಗಿ ಬರೋಬ್ಬರಿ 10 ಕೋಟಿ ರುಪಾಯಿ ಖರ್ಚು ಮಾಡಿಕೊಂಡು ಮರ್ಸಿಡಿಸ್ ಬೆಂಝ್‌ನ ಅತ್ಯಂತ ದುಬಾರಿ ಎಸ್600 ಗಾರ್ಡ್ 'ಬಾಂಬ್ ಪ್ರೂಫ್' ಕಾರನ್ನು ಖರೀದಿಸಿದ್ದಾರೆ.

ಸ್ವಲ್ಪ ದಿನಗಳ ಹಿಂದೆಯಷ್ಟೇ 'ಸತ್ಯಮೇವ ಜಯತೇ' ಮೂಲಕ ದೇಶದ ಭ್ರಷ್ಟಾಚಾರ ತೊಳಗಿಸುವ ಪ್ರಯತ್ನ ಮಾಡಿದ್ದ ನಟ ಅಮೀರ್ ಖಾನ್‌ಗೂ ಜೀವ ಬೆದರಿಕೆಯ ಹಿನ್ನಲೆಯಲ್ಲಿ ಬುಲೆಟ್ ಪ್ರೂಫ್ ಕಾರನ್ನು ಖರೀದಿಸಿದ್ದರು.

ಇಲ್ಲಿ ಶಾರೂಕ್ ಅವರ ಮೇಲೆ ಜೀವ ಬೆದರಿಕೆ ಇದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೂ ತಮ್ಮ ಕ್ಯಾರಿಯರ್ ಉದ್ದಕ್ಕೂ ಹಲವಾರು ವಿವಾದಗಳಲ್ಲಿ ಕಾಣಿಸಿಕೊಂಡಿರುವ ಶಾರೂಕ್ ಆತ್ಮ ರಕ್ಷಣೆಗಾಗಿ ಬೆಂಝ್ ಬಾಂಬ್ ಪ್ರೂಫ್ ಕಾರು ಖರೀದಿಸಿದ್ದಾರೆಂಬ ಮಾಹಿತಿಗಳಿವೆ.

ಬಲ್ಲ ಮೂಲಗಳ ಪ್ರಕಾರ ಮಾಫಿಯಾ ಜಗತ್ತಿನಿಂದ ಶಾರೂಕ್ ಮೇಲೆ ಜೀವ ಬೆದರಿಕೆಯಿದೆ. ಇತ್ತೀಚೆಗಷ್ಟೇ ಜುಹುನಲ್ಲಿರುವ ನಿರ್ಮಾಪಕ ಅಲಿ ಮೊರನಿ ಮನೆ ಮೇಲೂ ದಾಳಿಯುಂಟಾಗಿತ್ತು.

ಇದರೊಂದಿಗೆ ಬಾಲಿವುಡ್‌ನಲ್ಲಿ ಬಾಂಬ್ ತಡೆ ಕಾರು ಖರೀದಿಸಿದ ಮೊದಲಿಗರಾಗಿ ಶಾರೂಕ್ ಗುರುತಿಸಿಕೊಂಡಿದ್ದಾರೆ. ಶಾರೂಕ್ ಅವರ ಅಭಿನಯದ 'ಹ್ಯಾಪಿ ನ್ಯೂ ಇಯರ್' ಚಿತ್ರ ಅಕ್ಟೋಬರ್ 24ರಂದು ತೆರೆ ಕಾಣಲಿರುವಂತೆಯೇ ಈ ಸುದ್ದಿ ಕೇಳಿ ಬಂದಿದೆ.

ವರದಿಗಳ ಪ್ರಕಾರ ವಿಶ್ವದ ಅಗ್ರಮಾನ್ಯ ವ್ಯಕ್ತಿಗಳ ಬಳಿ ಮಾತ್ರ ಬುಲೆಟ್ ಪ್ರೂಫ್ ಕಾರುಗಳಿವೆ. ಆದರೆ ಬೆಂಝ್‌ನ ಈ ಕಸ್ಟಮೈಸ್ಡ್ ಕಾರು ವಿಶೇಷವಾಗಿಯೂ ವಿವಿಐಪಿಗಳಿಗಾಗಿ ರಚಿಸಲಾಗಿದೆ. ಇದರ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಗಳನ್ನು ಗೌಪ್ಯವಾಗಿಡಲಾಗುತ್ತದೆ.

ಇ ಗಾರ್ಡ್, ಎಂ ಗಾರ್ಡ್ ಮತ್ತು ಜಿ 500 ಗಾರ್ಡ್ ಶ್ರೇಣಿಯಲ್ಲಿ ಗುರುತಿಸಿಕೊಂಡಿರುವ ಎಸ್600 ಗಾರ್ಡ್ ಅಭೂತಪೂರ್ವ ರಕ್ಷಣೆಯನ್ನು ಒದಗಿಸುತ್ತದೆ. ಇದರಲ್ಲಿ ಗರಿಷ್ಠ ಗುಣಮಟ್ಟದ ಪರಿಕರಗಳನ್ನು ನೀಡಲಾಗಿದೆ.

ವಿಆರ್9 ಪ್ರಮಾಣೀಕರಣ ಮಟ್ಟವನ್ನು ಹೊಂದಿರುವ ಎಸ್600, ಬಂದೂಕು ಹಾಗೂ ಅತ್ಯಂತ ಶಕ್ತಿಶಾಲಿ ಸ್ಫೋಟಕಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ.

ಸಾಮಾನ್ಯ ಬೆಂಝ್ ಐಷಾರಾಮಿ ಕಾರುಗಳಂತೆ ಗುರುತಿಸಿಕೊಳ್ಳಲಿರುವ ಬೆಂಝ್‌ನ ಈ ಕಾರು ಎಚ್ಚರಿಕೆ ವ್ಯವಸ್ಥೆ, ಸ್ವಯಂಚಾಲಿತವಾಗಿ ಅಗ್ನಿ ನಂದಿಸುವ ವ್ಯವಸ್ಥೆ, ತುರ್ತು ಶುದ್ಧ ಗಾಳಿ ಸಂಚರಣೆ, ಹೈಡ್ರಾಲಿಕ್ ವಿದ್ಯುತ್ ಕಿಟಕಿ ಮತ್ತು ಇನ್ನಿತರ ಸುಸ್ಸಜ್ಜಿತ ವ್ಯವಸ್ಥೆಗಳನ್ನು ಹೊಂದಿದೆ.

6.0 ಲೀಟರ್ ಟ್ವಿನ್ ಟರ್ಬೊ ವಿ12 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಎಸ್600 ಬರೋಬ್ಬರಿ 523 ಅಶ್ವಶಕ್ತಿ (612 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಸೆವೆನ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಪಡೆಯಲಿದೆ.


Click it and Unblock the Notifications