ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ ಸಿದ್ದಾರ್ಥ್ ಮಲ್ಹೋತ್ರಾ..!

ಲಗ್ಷುರಿ ಕಾರ್ ಕಲೆಕ್ಷನ್‌ಗೂ ಬಾಲಿವುಡ್ ತಾರೆಯರಿಗೂ ಎಲ್ಲಿಲ್ಲದ ನಂಟು ಅಂದ್ರೆ ತಪ್ಪಾಗುವುದಿಲ್ಲ. ಮಾರುಕಟ್ಟೆಯಲ್ಲಿ ಲಗ್ಗೆಯಿಡುವ ಪ್ರತಿಯೊಂದು ದುಬಾರಿ ಕಾರುಗಳು ಸಹ ಬಾಲಿವುಡ್‌ನ ಬಹುತೇಕ ತಾರೆಗಳ ಕಾರ್ ಕಲೆಕ್ಷನ್‌ನಲ್ಲಿ ಸ್ಥಾನ ಪಡೆದಿದ್ದು, ಇದೀಗ ನಟ ಸಿದ್ದಾರ್ಥ್ ಮಲ್ಹೋತ್ರಾ ಸಹ ತಮ್ಮ ಕನಸಿನ ರೇಂಜ್ ರೋವರ್ ವೊಗ್ ಖರೀದಿಸಿದ್ದಾರೆ.

ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ ಸಿದ್ದಾರ್ಥ್ ಮಲ್ಹೋತ್ರಾ..!

ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ತನ್ನದೆ ಜನಪ್ರಿಯತೆ ಹೊಂದಿರುತ್ತಿರುವ ನಟ ಸಿದ್ದಾರ್ಥ ಮಲ್ಹೋತ್ರಾ ತಮ್ಮ ನಟನೆಯ ಮೂಲಕ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದು, ಕೊನೆಗೂ ತಮ್ಮ ನೆಚ್ಚಿನ ಕಾರು ಮಾದರಿಯಾದ ರೇಂಜ್ ರೋವರ್ ವೊಗ್ ಖರೀದಿಸಿ ಬಾಲಿವುಡ್ ಮಂದಿಗೆ ಬಿಗ್ ಸರ್ಪೈರ್ಸ್ ನೀಡಿದ್ದಾರೆ.

ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ ಸಿದ್ದಾರ್ಥ್ ಮಲ್ಹೋತ್ರಾ..!

ನಟ ಸಿದ್ದಾರ್ಥ್ ರೇಂಜ್ ರೋವರ್‌ನಲ್ಲಿಯೇ ವೊಗ್ ಎನ್ನುವ ಟಾಪ್ ಎಂಡ್ ವೆರಿಯೆಂಟ್ ಖರೀದಿಸಿದ್ದು, ಬಳಿಕ ತಮ್ಮ ಆಪ್ತ ಗೆಳೆಯ ಹಾಗೂ ನಿರ್ದೇಶಕರೂ ಆಗಿರುವ ಕರಣ್ ಜೋಹರ್ ಜೊತೆ ಲಾಂಗ್ ಡ್ರೈವ್‌ನೊಂದಿಗೆ ಕಾರು ಖರೀದಿಯ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ ಸಿದ್ದಾರ್ಥ್ ಮಲ್ಹೋತ್ರಾ..!

ಕಪ್ಪು ಬಣ್ಣದ ಆಯ್ಕೆ ಹೊಂದಿರುವ ಸಿದ್ದಾರ್ಥ್ ಮಲ್ಹೋತ್ರಾ ಹೊಸ ವೊಗ್ ಕಾರು, ಬೆಲೆಯಲ್ಲೂ ಕೂಡಾ ಇತರೆ ಕಾರುಗಳಿಂತಲೂ ತುಸು ದುಬಾರಿ ಎನ್ನಿಸಲಿದ್ದು, ಕಾರಿನ ಆರಂಭಿಕ ಬೆಲೆಯೇ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.08 ಕೋಟಿಗೆ ಮಾರಾಟವಾಗುತ್ತಿದೆ.

ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ ಸಿದ್ದಾರ್ಥ್ ಮಲ್ಹೋತ್ರಾ..!

ಇದರಲ್ಲಿ ನಟ ಸಿದ್ದಾರ್ಥ್ ಮಲ್ಹೋತ್ರಾ 4.4-ಲೀಟರ್ ವೊಗ್ ಎಸ್ಇ ಡಿಸೇಲ್ ಆಟೋಮ್ಯಾಟಿಕ್ ವರ್ಷನ್ ಖರೀದಿ ಮಾಡಿದ್ದು, ಇದರ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.2.34 ಕೋಟಿ ಪಡೆದುಕೊಂಡಿದೆ ಎನ್ನಲಾಗಿದೆ.

ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ ಸಿದ್ದಾರ್ಥ್ ಮಲ್ಹೋತ್ರಾ..!

ಹಲವು ವಿಶೇಷ ತಾಂತ್ರಿಕ ಅಂಶಗಳೊಂದಿಗೆ ಐಷಾರಾಮಿ ಎಸ್‌ಯುವಿ ಪ್ರಿಯರನ್ನು ಸೆಳೆಯುತ್ತಿರುವ ರೇಂಜ್ ರೋವರ್ ಕಾರುಗಳು ಸಾಕಷ್ಟು ಜನಪ್ರಿಯತೆ ಸಾಧಿಸುತ್ತಿದ್ದು, ಬಾಲಿವುಡ್‌ನ ಬಹುತೇಕ ನಟ ನಟಿಯರು ರೇಂಜ್ ರೋವರ್ ಎಸ್‌ಯುವಿಗಳು ಖರೀದಿಸಿದ್ದಾರೆ ಎನ್ನವುದೇ ಮತ್ತೊಂದು ವಿಶೇಷ.

ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ ಸಿದ್ದಾರ್ಥ್ ಮಲ್ಹೋತ್ರಾ..!

ಜಾಗ್ವಾರ್, ಲ್ಯಾಂಡ್ ರೋವರ್ ಮತ್ತು ರೇಂಜ್ ರೋವರ್ ಬ್ರಾಂಡ್ ಒಂದೇ ಆಗಿದ್ದರೂ ಸಹ ರೇಂಜ್ ರೋವರ್ ಎಸ್‌ಯುವಿಗಳಿಗೆ ವಿಶೇಷ ಬೇಡಿಕೆಯಿದ್ದು, ಲಗ್ಷುರಿ ಜೊತೆ ಜೊತೆಗೆ ಪರ್ಫಾಮೆನ್ಸ್ ವಿಚಾರದಲ್ಲೂ ಅತ್ಯುತ್ತಮ ಮಾದರಿಯಾಗಿರುವ ಈ ಕಾರುಗಳು ಸೆಲೆಬ್ರಿಟಿಗಳ ಹಾಟ್ ಫೆವರಿಟ್ ಎಂದೇ ಜನಪ್ರಿಯವಾಗಿವೆ.

ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ ಸಿದ್ದಾರ್ಥ್ ಮಲ್ಹೋತ್ರಾ..!

ಇನ್ನು ರೇಂಜ್ ರೋವರ್ ಸ್ಪೋರ್ಟ್ ಮತ್ತು ರೇಂಜ್ ರೋವರ್ ಫೇಸ್‍‍ಲಿಫ್ಟ್ ಕಾರುಗಳು 3.0 ಲೀಟರ್ ವಿ6 ಮಿಲ್ ಡೀಸೆಲ್ ಎಂಜಿನ್ ಸಹಾಯದಿಂದ 255 ಬಿಹೆಚ್‍ಪಿ ಮತ್ತು 600ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದಲ್ಲಿ 4.4 ಲೀಟರ್ ಮಿಲ್ ಎಂಜಿನ್‍‍ಗಳು 335-ಬಿಹೆಚ್‍ಪಿ ಮತ್ತು 740-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿವೆ.

MOST READ: ಬಿಡುಗಡೆಗೂ ಮುನ್ನವೇ ಹಾರುವ ಕಾರಿನ ಬೆಲೆ ಪಟ್ಟಿ ಬಿಡುಗಡೆ ಮಾಡಿದ ಪಿಎಲ್-ವಿ ಲಿಬರ್ಟಿ

ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ ಸಿದ್ದಾರ್ಥ್ ಮಲ್ಹೋತ್ರಾ..!

ಕಾರಿನ ಹೊರಭಾಗದಲ್ಲಿ ಪಿಕ್ಸೆಲ್ ಲೇಸರ್ ಎಲ್ಇಶಿ ಲೈಟ್ಸ್, ಅಟ್ಲಾಸ್ ಮೆಶ್ ಗ್ರಿಲ್ ಮತ್ತು ನವೀಕರಿಸಲಾದ ಬಂಪರ್‍‍ಗಳನ್ನು ಅಳವಡಿಸಲಾಗಿದ್ದು, ಇನ್ನು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲೈಟ್ಸ್, ಟಾಪರ್ಡ್ ರೇಕ್ ಮತ್ತು ರೀಯರ್ ವಿಂಡ್‍ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ ಸಿದ್ದಾರ್ಥ್ ಮಲ್ಹೋತ್ರಾ..!

ಹಾಗೆಯೇ ಕಾರಿನ ಒಳಭಾಗದಲ್ಲಿ 10 ಇಂಚಿನ ಟಚ್ ಪ್ರೋ ಇನ್ಫೋಟೈನ್ಮೆಂಟ್ ಸಿಸ್ಟಂ, ಹಾಟ್ ಸ್ಟೋನ್ ಮಸಾಜ್ ಮತ್ತು ಹೀಟಿಂಗ್ ಫಂಕ್ಷನ್‍‍ಗಳನ್ನು ಪಡೆದ ಸೀಟ್‍‍ಗಳು, ಸೂಚನೆಯಿಂದ ನಿಯಂತ್ರಿಸಬಹುದಾದ ಸನ್‍‍ಬ್ಲೈಂಡ್ಸ್, ಏರ್ ಕ್ಯಾಬಿನ್ ಐಒನೈಸೇಷನ್, ಮತ್ತು ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

MOST READ: ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ದುಬಾರಿ ಬೆಲೆಯ ವೊಗ್ ಕಾರಿನ ಒಡೆಯನಾದ ನಟ ಸಿದ್ದಾರ್ಥ್ ಮಲ್ಹೋತ್ರಾ..!

ಕೇವಲ ಸಿದ್ದಾರ್ಥ್ ಮಲ್ಹೋತ್ರಾ ಬಳಿಯಷ್ಟೇ ಅಲ್ಲದೇ ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಳಿ 5 ಕೋಟಿ ಮೌಲ್ಯದ ವೊಗ್ ಟಾಪ್ ಎಂಡ್ ಮಾದರಿ ಕೂಡಾಯಿದ್ದು, ಅನುಷ್ಕಾ ಶರ್ಮಾ, ಮಲೈಕಾ ಅರೋರಾ, ಶಾರುಖ್ ಖಾನ್, ಅಕ್ಷಯ್ ಕುಮಾರ್, ಹೃತಿಕ್ ರೋಷನ್, ಆಲಿಯಾ ಭಟ್, ರಣಬೀರ್ ಕಪೂರ್, ಜಾಕ್ವೆಲಿನ್ ಫರ್ನಾಂಡಿಸ್, ಕರೀನಾ ಕಪೂರ್‌, ಅಜಯ್ ದೇವಗನ್ ಬಳಿಯೂ ದುಬಾರಿ ವೊಗ್ ಇದೆ.

More from DriveSpark

Article Published On: Tuesday, January 8, 2019, 14:40 [IST]
English summary
Karan Johar Goes For a Drive In Sidharth Malhotra's New Land Rover Range Rover. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+