ಸ್ಪೀಡ್ ಡ್ರೈವಿಂಗ್ ಅವಾಂತರ- ಸ್ಕೋಡಾ ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವು

ಕಳೆದ ತಿಂಗಳಷ್ಟೇ ಭಾರತದಲ್ಲಿ ಬಿಡುಗಡೆಯಾಗಿದ್ದ ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಕಾರಿನ ಮೊದಲ ಅಪಘಾತ ಪ್ರಕರಣ ದಾಖಲಾಗಿದ್ದು, ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಹಿಂದಿರುವಾಗ ಅಪಘಾತ ಸಂಭವಿಸಿ ದುರಂತವಾಗಿ ಸಾವನ್ನಪ್ಪಿದ್ದಾನೆ.

By Praveen

ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ರೆ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಮೂಲಗಳ ಪ್ರಕಾರ ಹೊಸ ಕಾರನ್ನು ವಾರದ ಹಿಂದಷ್ಟೇ ಹೊಸ ಕಾರು ಖರೀದಿ ಮಾಡಲಾಗಿತ್ತು ಎನ್ನಲಾಗಿದೆ. ಆದ್ರೆ ಈ ಅಪಘಾತ ಹೊಸ ಕಾರಿನಲ್ಲಿ ನೀಡಲಾಗಿರುವ ಸುರಕ್ಷಾ ಸೌಲಭ್ಯಗಳ ಬಗ್ಗೆ ಅನುಮಾನ ಮೂಡಿಸದೇ ಇರಲಾರದು.

ಸ್ಪೀಡ್ ಡ್ರೈವಿಂಗ್ ಅವಾಂತರ- ಸ್ಕೋಡಾ ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವು

ಅಂದಹಾಗೆ ಈ ದುರಂತ ನಡೆದಿರುವುದು ಕೇರಳದ ತಿರವನಂತಪುರದಲ್ಲಿ. ಘಟನೆಯಲ್ಲಿ 21 ವರ್ಷದ ಆದರ್ಶ ಎಂಬಾತ ಸಾವನ್ನಪ್ಪಿದ್ದು, ಕಾರಿನಲ್ಲಿ ಇನ್ನುಳಿದ ಮೂವರು ಸ್ನೇಹಿತರು ಗಂಭೀರವಾಗಿ ಗಾಯಗೊಂಡ ಪರಿಣಾಮ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಪೀಡ್ ಡ್ರೈವಿಂಗ್ ಅವಾಂತರ- ಸ್ಕೋಡಾ ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವು

ಘಟನೆಯಲ್ಲಿ ಸಾವನ್ನಪ್ಪಿದ ಆದರ್ಶ‌ಗೆ ಸೇರಿದ ಕಾರು ಇದಾಗಿದ್ದು, ಕಳೆದ ವಾರವಷ್ಟೇ ಈ ಕಾರನ್ನು ಖರೀದಿ ಮಾಡಿದ್ದರು. ಈ ಹಿನ್ನೆಲೆ ತನ್ನ ಸ್ನೇಹಿತರಿಗೆ ಪಾರ್ಟಿ ನೀಡಿದ್ದ ಆದರ್ಶ, ಮನೆಗೆ ಮರಳುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ.

Recommended Video

2017 Skoda Octavia RS Launched In India | In Kannada - DriveSpark ಕನ್ನಡ
ಸ್ಪೀಡ್ ಡ್ರೈವಿಂಗ್ ಅವಾಂತರ- ಸ್ಕೋಡಾ ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವು

ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ನಂತರ ಪಕ್ಕದಲ್ಲೇ ಇದ್ದ ವಿದ್ಯುತ ಕಂಬಕ್ಕೂ ಡಿಕ್ಕಿ ಹೊಡೆದಿದ್ದು, ವೇಗದಲ್ಲಿ ಪರಿಣಾಮ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ. ಅದರಲ್ಲೂ ಕಾರು ಚಾಲನೆ ಮಾಡುತ್ತಿದ್ದ ಆದರ್ಶ ತಲೆಗೆ ಪೆಟ್ಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಪೀಡ್ ಡ್ರೈವಿಂಗ್ ಅವಾಂತರ- ಸ್ಕೋಡಾ ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವು

ಘಟನೆಯಲ್ಲಿ ಮತ್ತೊಬ್ಬ ಯುವಕನ ಆರೋಗ್ಯ ಸ್ಥಿತಿಯು ಕೂಡಾ ಗಂಭೀರವಾಗಿದ್ದು, ಸಾವು ಬದುಕಿನ ಮಧ್ಯೆ ಹೊರಾಡುತ್ತಿದ್ದಾನೆ. ಆದ್ರೆ ಅದೃಷ್ಟವಶಾತ್ ಆಟೋ ರಿಕ್ಷಾದಲ್ಲಿದ್ದ ಚಾಲಕನಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತು ಪಡಿಸಿ ಯಾವುದೇ ಗಂಭೀರ ಹಾನಿಯಾಗಿಲ್ಲ.

ಸ್ಪೀಡ್ ಡ್ರೈವಿಂಗ್ ಅವಾಂತರ- ಸ್ಕೋಡಾ ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವು

ಇನ್ನು ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಚಾಲನೆ ಮಾಡುತ್ತಿದ್ದ ಆದರ್ಶ ಹೊಸ ಕಾರನ್ನು ಪ್ರತಿ ಗಂಟೆಗೆ 110 ಕಿಮಿ ವೇಗದಲ್ಲಿ ಚಾಲನೆ ಮಾಡುತ್ತಿದ್ದ ಎನ್ನಲಾಗಿದ್ದು, ಈ ವೇಳೆ ಕಾರು ಬರುತ್ತಿರುವುದನ್ನು ಗುರುತಿಸಲಾಗದ ಆಟೋ ರಿಕ್ಷಾ ಚಾಲಕ ಅಡ್ಡ ಬಂದ ಪರಿಣಾಮ ಈ ದುರಂತ ಸಂಭವಿಸಿದೆ.

ಸ್ಪೀಡ್ ಡ್ರೈವಿಂಗ್ ಅವಾಂತರ- ಸ್ಕೋಡಾ ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವು

ಇದಲ್ಲದೇ ಹೊಸ ಕಾರಿನ ಬೆಲೆಯು 25 ಲಕ್ಷಕ್ಕೂ ಹೆಚ್ಚಿದ್ದು, 2.0-ಲೀಟರ್ ಪೆಟ್ರೋಲ್ ಎಂಜಿನ್, 9 ಏರ್‌ಬ್ಯಾಗ್, ಎಬಿಎಸ್ ಸೌಲಭ್ಯವನ್ನು ಹೊಂದಿದೆ. ಹೀಗಿದ್ದರು ಕಾರು ಅಪಘಾತದಲ್ಲಿ ಯುವಕ ಮೃತಪಟ್ಟಿರುವುದು ಕಾರಿನಲ್ಲಿರುವ ತಾಂತ್ರಿಕ ದೋಷಗಳನ್ನು ಎತ್ತಿ ತೊರಿಸುತ್ತವೆ.

Trending on DriveSpark Kannada:

ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಹೆದ್ದಾರಿಯ ಸಂಖ್ಯೆಯನ್ನು ಹೇಗೆ ನಿರ್ಧರಿಸುತ್ತಾರೆ ಗೊತ್ತೆ ? ಈ ವಿಚಾರ ನಿಮಗೆ ಅಚ್ಚರಿ ತರಿಸುತ್ತೆ

More from DriveSpark

Article Published On: Wednesday, November 22, 2017, 18:14 [IST]
English summary
India's First Skoda Octavia RS Crash — Brutal Accident Kills One, Leaves 3 Injured.
Read more on accident ಅಪಘಾತ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+