ಆಂಬ್ಯುಲೆನ್ಸ್ ಸಿಗದೇ ಬೆಂಗಳೂರಿನಿಂದ ಮಂಡ್ಯಕ್ಕೆ ಆಟೋದಲ್ಲೇ ತಾಯಿಯ ಮೃತದೇಹ ಸಾಗಿಸಿದ ಮಗ

ರಾಜ್ಯದಲ್ಲಿ ದಿನ ನಿತ್ಯ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹಲವು ಕೊರೋನಾ ಸೋಂಕಿತರು ಬೆಡ್, ಆಂಬ್ಯುಲೆನ್ಸ್ ಸೇವೆ ಸಿಗದೇ ಪರದಾಡುತ್ತಿದ್ದಾರೆ. ಇದೇ ರೀತಿ ಆಂಬ್ಯುಲೆನ್ಸ್​ ಸಿಗದೇ ಕೊರೊನಾದಿಂದ ಮೃತಪಟ್ಟ ತಾಯಿಯ ಮೃತದೇಹವನ್ನು ಮಗ ಆಟೋ ರಿಕ್ಷಾದಲ್ಲೇ ಬೆಂಗಳೂರಿನಿಂದ ಮಂಡ್ಯಕ್ಕೆ ಪ್ರಯಾಣಿಸಿದ್ದಾನೆ.

ಆಂಬ್ಯುಲೆನ್ಸ್ ಸಿಗದೇ ಬೆಂಗಳೂರಿನಿಂದ ಮಂಡ್ಯಕ್ಕೆ ಆಟೋದಲ್ಲೇ ತಾಯಿಯ ಮೃತದೇಹ ಸಾಗಿಸಿದ ಮಗ

ಇದೊಂದು ಮನಕಲಕುವ ಘಟನೆ, ಶಿವಕುಮಾರ್ ಎಂಬ ಯುವಕ ಅಸ್ವಸ್ಥರಾಗಿದ್ದ ತನ್ನ ತಾಯಿಯನ್ನು ಉಳಿಸಿಕೊಳ್ಳಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿದ್ದಾನೆ. ಎಷ್ಟೇ ಸುತ್ತಿದ್ದರು ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಕೊನೆಗೆ ತನ್ನ ತಾಯಿ ಸಾವನ್ನಪ್ಪಿದ ಮೇಲೆ ಮಂಡ್ಯಕ್ಕೆ ಶವ ಸಾಗಿಸಲು ಶಿವಕುಮಾರ್ ಆ್ಯಂಬುಲೆನ್ಸ್ ಗಾಗಿ ಹುಡುಕಾಡಿದ್ದಾರೆ ಆದರೆ ಯಾವುದೇ ಆ್ಯಂಬುಲೆನ್ಸ್ ಸಿಗಲಿಲ್ಲ.

ಆಂಬ್ಯುಲೆನ್ಸ್ ಸಿಗದೇ ಬೆಂಗಳೂರಿನಿಂದ ಮಂಡ್ಯಕ್ಕೆ ಆಟೋದಲ್ಲೇ ತಾಯಿಯ ಮೃತದೇಹ ಸಾಗಿಸಿದ ಮಗ

ಈ ನಡುವೆ ನಾಯಂಡಹಳ್ಳಿ ಜಂಕ್ಷನ್‌ ಬಳಿ ಕರ್ತವ್ಯದಲ್ಲಿದ್ದ ಪೊಲೀಸರು ಆಟೋ ರಿಕ್ಷಾವನ್ನು ತಡೆದದರು. ಶಿವಕುಮಾರ್‌ ಅವರು ತಮ್ಮ ಸ್ವಗ್ರಾಮಕ್ಕೆ ತಾಯಿಯ ಶವ ಸಾಗಿಸುತ್ತಿರುವ ವಿಷಯವನ್ನು ವಿವರಿಸಿದ್ದರು. ಇದನ್ನು ಕೇಳಿ ಪೊಲೀಸರು ತಾವೇ ಸಹಾಯ ಮಾಡಲು ಮುಂದಾದರು.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಆಂಬ್ಯುಲೆನ್ಸ್ ಸಿಗದೇ ಬೆಂಗಳೂರಿನಿಂದ ಮಂಡ್ಯಕ್ಕೆ ಆಟೋದಲ್ಲೇ ತಾಯಿಯ ಮೃತದೇಹ ಸಾಗಿಸಿದ ಮಗ

ಪೊಲೀಸರು ಕೂಡ ಆಂಬ್ಯುಲೆನ್ಸ್‌ ಗಾಗಿ 45 ನಿಮಿಷ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಪೊಲೀಸರು ಆಟೊದಲ್ಲೇ ಮೃತದೇಹ ಸಾಗಿಸಲು ಅನುಮತಿ ನೀಡಿ ಕಳುಹಿಸಿದರು.

ಆಂಬ್ಯುಲೆನ್ಸ್ ಸಿಗದೇ ಬೆಂಗಳೂರಿನಿಂದ ಮಂಡ್ಯಕ್ಕೆ ಆಟೋದಲ್ಲೇ ತಾಯಿಯ ಮೃತದೇಹ ಸಾಗಿಸಿದ ಮಗ

72 ವರ್ಷದ ಶಾರದಮ್ಮ ಇತ್ತೀಚೆಗೆ ತಮ್ಮ ಮಗ ಶಿವಕುಮಾರ್‌ ಮನೆಗೆ ಬಂದಿದ್ದರು. ಮಧುಮೇಹ ರೋಗದಿಂದ ಬಳಲುತ್ತಿದ್ದ ಅವರಿಗೆ ಸೋಮವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಸಮೀಪದ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಆಂಬ್ಯುಲೆನ್ಸ್ ಸಿಗದೇ ಬೆಂಗಳೂರಿನಿಂದ ಮಂಡ್ಯಕ್ಕೆ ಆಟೋದಲ್ಲೇ ತಾಯಿಯ ಮೃತದೇಹ ಸಾಗಿಸಿದ ಮಗ

ಅಲ್ಲಿ ಆಕ್ಸಿಜನ್ ಸೌಲಭ್ಯದ ಬೆಡ್ ಲಭ್ಯವಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಲಾಯಿತು. ಅಲ್ಲಿಂದ ಸಿಎಂಎಚ್‌ ಆಸ್ಪತ್ರೆಯತ್ತ ಆಟೋದಲ್ಲೇ ಹೊರಟರು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಶಿವಕುಮಾರ್ ತಾಯಿಯ ಉಸಿರು ನಿಂತಿತ್ತು. ಪರೀಕ್ಷಿಸಿದ ಬಳಿಕ ವೈದ್ಯರು, ಆಕೆ ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಆಂಬ್ಯುಲೆನ್ಸ್ ಸಿಗದೇ ಬೆಂಗಳೂರಿನಿಂದ ಮಂಡ್ಯಕ್ಕೆ ಆಟೋದಲ್ಲೇ ತಾಯಿಯ ಮೃತದೇಹ ಸಾಗಿಸಿದ ಮಗ

ಬಳಿಕ ಶಿವಕುಮಾರ್ ತನ್ನ ತಾಯಿ ಶವವನ್ನು ಮಂಡ್ಯದ ಮಳವಳ್ಳಿಯಲ್ಲಿರುವ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸುತ್ತಾನೆ, ಆಂಬ್ಯುಲೆನ್ಸ್‌ಗಾಗಿ ಸತತವಾಗಿ 108 ಸಂಖ್ಯೆಗೆ ಕರೆ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಆಂಬ್ಯುಲೆನ್ಸ್ ಸಿಗದೇ ಬೆಂಗಳೂರಿನಿಂದ ಮಂಡ್ಯಕ್ಕೆ ಆಟೋದಲ್ಲೇ ತಾಯಿಯ ಮೃತದೇಹ ಸಾಗಿಸಿದ ಮಗ

ದಿಕ್ಕು ತೋಚದಂತಾದ ಶಿವಕುಮಾರ್ ತನ್ನ ಸ್ನೇಹಿತ ಉದಯ್ ಆಟೋದಲ್ಲಿ ಸ್ವಗ್ರಾಮಕ್ಕೆ ಶವ ಮುಟ್ಟಿಸಲು ನಿರ್ಧರಿಸಿದ್ದರು. ಇಂತಹ ಕರುಣಾಜನಕ ಘಟನೆಗಳು ಇತ್ತೀಚೆಗೆ ಸಾಮಾನ್ಯ ಎಂಬಂತೆ ಪ್ರತಿದಿನವು ವರದಿಯಾಗುತ್ತಿದೆ.

ಆಂಬ್ಯುಲೆನ್ಸ್ ಸಿಗದೇ ಬೆಂಗಳೂರಿನಿಂದ ಮಂಡ್ಯಕ್ಕೆ ಆಟೋದಲ್ಲೇ ತಾಯಿಯ ಮೃತದೇಹ ಸಾಗಿಸಿದ ಮಗ

ಕೊರೋನಾ ರಣಕೇಕೆ ಹಾಕುತ್ತಿರುವಾಗ ಬೆಡ್​, ಆಕ್ಸಿಜನ್ ಮತ್ತು ಆಂಬ್ಯುಲೆನ್ಸ್​​ ಕೊರತೆ ಉಂಟಾಗಿದೆ. ಅನೇಕ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ಲಭಿಸದೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರಾಣ ಕಳೆದುಕೊಂಡರವರ ಶವಸಂಸ್ಕಾರ ಮಾಡಲು ಶವ ಸಾಗಿಸಲು ಕೂಡ ಬಡವರು ಪರದಾಡುವಂತ ಸ್ಥಿತಿ ಎದುರಾಗಿದೆ.

Most Read Articles

Kannada
English summary
Son Took The Mother Ccorpse Home With An Auto Rickshaw. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X