ವೇಗವಾಗಿ ಬಂದು ಬಾಲಕಿಗೆ ಗುದ್ದಿದ್ದ ಕಾರು

ಜನರು ತಮಗೆ ಇಷ್ಟ ಬಂದ ರೀತಿಯಲ್ಲಿ ಹೇಗೆಂದರೆ ಹಾಗೆ ನಡೆದಾಡುವುದು ಭಾರತದ ರಸ್ತೆಗಳಲ್ಲಿ ಕಂಡುಬರುವ ಸಾಮಾನ್ಯ ಸಂಗತಿಯಾಗಿದೆ. ಪಾದಚಾರಿಗಳು ಅಜಾಗರೂಕತೆಯಿಂದ ರಸ್ತೆಗಳನ್ನು ದಾಟುವುದರ ಜೊತೆಗೆ ವಾಹನಗಳಿಗೆ ಹೆದರದೇ ಬೇಕಾಬಿಟ್ಟಿಯಾಗಿ ರಸ್ತೆ ದಾಟುವುದರಿಂದಲೂ ಸಹ ಪ್ರತಿವರ್ಷ ಭಾರತದ ರಸ್ತೆಗಳಲ್ಲಿ ಸಾವಿರಾರು ಅಪಘಾತಗಳಾಗುತ್ತವೆ.

ವೇಗವಾಗಿ ಬಂದು ಬಾಲಕಿಗೆ ಗುದ್ದಿದ್ದ ಕಾರು

ಇದರ ಜೊತೆಗೆ ಜೀಬ್ರಾ ಕ್ರಾಸ್‍‍ಗಳು ಬಂದಾಗ ವಾಹನಗಳನ್ನು ನಿಧಾನಗೊಳಿಸದಿರುವ ವಾಹನ ಸವಾರರಿಂದಲೂ ಸಹ ಅಪಘಾತಗಳು ಉಂಟಾಗುತ್ತಿವೆ. ಕೇರಳದಲ್ಲಿ ಜೀಬ್ರಾ ಕ್ರಾಸಿಂಗ್‍ ಮೇಲೆ ಬಾಲಕಿಯೊಬ್ಬಳು ರಸ್ತೆ ದಾಟುತ್ತಿದ್ದಾಗ ಕಾರ್ ಒಂದು ಗುದ್ದಿಕೊಂಡು ಹೋದ ಘಟನೆ ನಡೆದಿದೆ.

ವೇಗವಾಗಿ ಬಂದು ಬಾಲಕಿಗೆ ಗುದ್ದಿದ್ದ ಕಾರು

ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯು ಕೇರಳದ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದು ನಿರ್ದಿಷ್ಟವಾಗಿ ತಿಳಿದುಬಂದಿಲ್ಲ. ಸಿಸಿಟಿವಿಯ ದೃಶ್ಯಗಳಲ್ಲಿ ಖಾಲಿ ರಸ್ತೆ ಹಾಗೂ ಅದನ್ನು ದಾಟಲು ರಸ್ತೆಯ ಪಕ್ಕದಲ್ಲಿ ನಿಂತಿರುವ ಬಾಲಕಿಯನ್ನು ಕಾಣಬಹುದು.

ವೇಗವಾಗಿ ಬಂದು ಬಾಲಕಿಗೆ ಗುದ್ದಿದ್ದ ಕಾರು

ಆಕೆ ತನ್ನ ಬಲಗಡೆಗೆ ಯಾವುದಾದರೂ ವಾಹನಗಳು ಬರುತ್ತಿವೆಯೇ ಎಂಬುದನ್ನು ನೋಡುತ್ತಿದ್ದಾಳೆ. ಆಕೆಯ ಎಡಭಾಗದಲ್ಲಿ ಆಟೋ ರಿಕ್ಷಾವನ್ನು ನಿಲ್ಲಿಸಲಾಗಿರುವ ಕಾರಣಕ್ಕೆ ಆಕೆಗೆ ಎಡಗಡೆಯಿಂದ ಬರುತ್ತಿರುವ ವಾಹನಗಳ ಬಗ್ಗೆ ಗಮನಹರಿಸಲು ಸಾಧ್ಯವಾಗಿಲ್ಲ.

ವೇಗವಾಗಿ ಬಂದು ಬಾಲಕಿಗೆ ಗುದ್ದಿದ್ದ ಕಾರು

ಬಾಲಕಿಯು ಬಲಗಡೆಯಲ್ಲಿ ಯಾವುದೇ ವಾಹನಗಳು ಬರುತ್ತಿಲ್ಲವೆಂದು ತಿಳಿದ ನಂತರ ರಸ್ತೆಯನ್ನು ದಾಟಲು ಮುಂದಾಗಿ, ರಸ್ತೆಗೆ ಅಡ್ಡಲಾಗಿ ಓಡಿದ್ದಾಳೆ. ಅನಾಹುತ ಸಂಭವಿಸಿರುವುದು ಇಲ್ಲಿಯೇ.

ವೇಗವಾಗಿ ಬಂದು ಬಾಲಕಿಗೆ ಗುದ್ದಿದ್ದ ಕಾರು

ಆಕೆಯ ಎಡಗಡೆಯಿಂದ ಅತಿ ವೇಗದಲ್ಲಿ ಬಂದ ಹ್ಯಾಚ್‍‍ಬ್ಯಾಕ್ ಕಾರ್ ಅನ್ನು ಸಿಸಿಟಿವಿಯ ದೃಶ್ಯಗಳಲ್ಲಿ ಕಾಣಬಹುದು. ಕಾರಿನ ಚಾಲಕನು ಬಾಲಕಿಗೆ ಗುದಿಯುವುದನ್ನು ತಪ್ಪಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕಾರು ಬಾಲಕಿಯನ್ನು ಸ್ವಲ್ಪ ದೂರ ನೂಕಿಕೊಂಡು ಹೋಗಿದೆ.

ವೇಗವಾಗಿ ಬಂದು ಬಾಲಕಿಗೆ ಗುದ್ದಿದ್ದ ಕಾರು

ಬಾಲಕಿಯು ಕೆಲವು ಮೀಟರ್‍‍ಗಳಷ್ಟು ದೂರ ಬಿದ್ದಿದ್ದಾಳೆ. ಕಾರಿನ ಚಾಲಕನು, ಕಾರ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸಹಾಯಕ್ಕೆ ಧಾವಿಸಿದ್ದಾನೆ. ಅಲ್ಲಿದ್ದ ಜನರೂ ಸಹ ಕೆಳಗೆ ಬಿದ್ದಿರುವ ಬಾಲಕಿಯ ನೆರವಿಗೆ ಮುಂದಾಗಿದ್ದಾರೆ. ಅಪಘಾತದಲ್ಲಿ ಬಾಲಕಿಗೆ ಯಾವ ಪ್ರಮಾಣದ ಗಾಯಗಳಾಗಿವೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ವೇಗವಾಗಿ ಬಂದು ಬಾಲಕಿಗೆ ಗುದ್ದಿದ್ದ ಕಾರು

ರಸ್ತೆ ದಾಟುವಾಗ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಯಾವ ಪ್ರಮಾಣದ ಅನಾಹುತಗಳಾಗ ಬಹುದೆಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಜೀಬ್ರಾ ಕ್ರಾಸಿಂಗ್‍ಗಳು ಕಂಡು ಬಂದಾಗ ವಾಹನಗಳನ್ನು ನಿಧಾನವಾಗಿ ಚಲಾಯಿಸಬೇಕೆಂಬ ನಿಯಮಗಳಿವೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ವೇಗವಾಗಿ ಬಂದು ಬಾಲಕಿಗೆ ಗುದ್ದಿದ್ದ ಕಾರು

ಈ ವೀಡಿಯೊದಲ್ಲಿ ಬಾಲಕಿಯು ರಸ್ತೆ ದಾಟಲು ಜೀಬ್ರಾ ಕ್ರಾಸಿಂಗ್‍ ಮೇಲೆ ನಿಂತಿರುವುದನ್ನು ಕಾಣಬಹುದು. ಬಹುಶಃ ಕಾರ್ ಅನ್ನು ಚಾಲನೆ ಮಾಡುತ್ತಿದ್ದವರು ಬಾಲಕಿಯು ಜೀಬ್ರಾ ಕ್ರಾಸಿನ ಮೇಲೆ ನಿಂತಿರುವುದನ್ನು ಗಮನಿಸಿಲ್ಲ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಇದರ ಜೊತೆಗೆ ಬಾಲಕಿಯ ಎಡಗಡೆಗೆ ನಿಲ್ಲಿಸಲಾಗಿದ್ದ ಆಟೋ ರಿಕ್ಷಾದಿಂದ ಬಾಲಕಿಯನ್ನು ಗಮನಿಸಲು ಕಾರು ಚಾಲಕನಿಗೆ ಸಾಧ್ಯವಾಗಿಲ್ಲ. ಈ ಅಪಘಾತಕ್ಕೆ ಕಾರು ಚಾಲಕ ಹಾಗೂ ರಸ್ತೆ ದಾಟುತ್ತಿದ್ದ ಬಾಲಕಿ ಇಬ್ಬರೂ ಕಾರಣರಾಗಿದ್ದಾರೆ.

ವೇಗವಾಗಿ ಬಂದು ಬಾಲಕಿಗೆ ಗುದ್ದಿದ್ದ ಕಾರು

ಬಾಲಕಿಯು ರಸ್ತೆಯ ಎರಡೂ ಕಡೆ ಗಮನಿಸದೇ ರಸ್ತೆ ದಾಟಲು ಮುಂದಾದರೆ, ಕಾರು ಚಾಲಕನು ಜೀಬ್ರಾ ಕ್ರಾಸಿಂಗ್ ಬಂದರೂ ಕಾರ್ ಅನ್ನು ನಿಧಾನಗೊಳಿಸಿಲ್ಲ. ಈ ರೀತಿಯ ಅಪಘಾತಗಳನ್ನು ತಪ್ಪಿಸಲು ರಸ್ತೆ ದಾಟುವವರು ಹಾಗೂ ವಾಹನ ಚಲಾಯಿಸುವವರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು.

ಓವರ್‌ಟೇಕ್ ಮಾಡುವ ಮುನ್ನ ಹುಷಾರ್..!

ಓವರ್‌ಟೇಕ್ ಮಾಡುವ ಮುನ್ನ ಹುಷಾರ್..!

ವಾಹನ ಚಾಲನೆ ವೇಳೆ ಯಾರೇ ತಪ್ಪು ಮಾಡಿದರೂ ಸಹ ಅಪಘಾತ ತಪ್ಪಿದ್ದಲ್ಲ. ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳೇ ಪ್ರಾಣಕ್ಕೆ ಕುತ್ತು ತರುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ವೇಗದ ವಾಹನ ಸವಾರಿ ವೇಳೆ ಓವರ್‌ಟೇಕ್ ಮಾಡುವ ಮುನ್ನ ತಪ್ಪು ಬಾರಿ ಯೋಚಿಸಿ ಮುಂದೆ ಸಾಗಿ. ಇಲ್ಲವಾದರೆ ಪ್ರಾಣ ಹಾನಿಗೆ ತುತ್ತಾಗಬೇಕಾದ ಪರಿಸ್ಥಿತಿ ಎದುರಾಗಬಹುದು.

ಓವರ್‌ಟೇಕ್ ಮಾಡುವ ಮುನ್ನ ಹುಷಾರ್..!

ದೇಶಾದ್ಯಂತ ದಿನಂಪ್ರತಿ ನೂರಾರು ಅಪಘಾತ ಪ್ರಕರಣಗಳು ನಾನಾ ಕಾರಣಗಳಿಗೆ ಸಂಭವಿಸುತ್ತಲೇ ಇರುತ್ತವೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಓವರ್ ಟೇಕ್ ಮಾಡುವ ಭರಾಟೆಯಲ್ಲಿ ಅದೆಷ್ಟೋ ಜನ ಜೀವ ಕಳೆದುಕೊಳ್ಳತ್ತಲೇ ಇದ್ದಾರೆ. ಇಂತದ್ದೆ ಒಂದು ಘಟನೆಯಲ್ಲಿ ಸಿಲುಕಿ ಸಾವಿನ ದವಡೆಯಿಂದ ಯುವಕನೊಬ್ಬ ಪಾರಾಗಿದ್ದಾನೆ.

ಓವರ್‌ಟೇಕ್ ಮಾಡುವ ಮುನ್ನ ಹುಷಾರ್..!

ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಹುತೇಕ ವಾಹನಗಳು ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲೇ ಚಲಿಸುತ್ತಿರುತ್ತವೆ. ಇದರ ಪರಿಣಾಮವೇ ಅಪಘಾತಗಳ ಪ್ರಕರಣಗಳು ಹೆಚ್ಚುತ್ತಿದ್ದು, ಯುವ ಬೈಕ್ ಸವಾರನೊಬ್ಬ ಕೂಡಾ ಓವರ್ ಟೆಕ್ ಮಾಡಲು ಮುಂದಾಗಿ ಸಾವಿನ ದವಡೆಯಿಂದ ಪಾರಾಗಿದ್ದಾನೆ.

ಓವರ್‌ಟೇಕ್ ಮಾಡುವ ಮುನ್ನ ಹುಷಾರ್..!

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳಿಗೆ ಪ್ರತ್ಯೇಕವಾಗಿ ಲೈನ್ ನೀಡಲಾಗಿದ್ದರೂ ಸಹ ಬೈಕ್ ಸವಾರನೊಬ್ಬ ಓವರ್ ಟೆಕ್ ಮಾಡಲು ಹೋಗಿ ಟಾಟಾ ಸುಮೊ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲವಾದರೂ ಬೈಕ್ ಸವಾರನು ಕೂದಲೆಳೆ ಅಂತರಲ್ಲಿ ಭೀಕರ ಅಪಘಾತದಿಂದ ಪಾರಾಗಿದ್ದಾನೆ.

ಓವರ್‌ಟೇಕ್ ಮಾಡುವ ಮುನ್ನ ಹುಷಾರ್..!

ಈ ಘಟನೆಯಲ್ಲಿ ಹೋಂಡಾ ಬೈಕ್ ಸವಾರನ ಜೊತೆ ಟಾಟಾ ಕಾರು ಮತ್ತು ಬೈಕ್ ಲೈನ್‌ನಲ್ಲಿ ಬಂದ ಜೆಸಿಬಿ ವಾಹನ ಚಾಲಕನದ್ದೂ ಕೂಡಾ ತಪ್ಪಿದ್ದು, ಓವರ್ ಟೆಕ್ ಮಾಡಲು ಹೋದ ಬೈಕ್ ಸವಾರನು ಮುಂಜಾಗ್ರತ ವಹಿಸದೇ ಇದ್ದ ಹಿನ್ನಲೆಯಲ್ಲಿ ಅಪಘಾತಕ್ಕೆ ಸಿಲುಕಬೇಕಾದ ಸನ್ನಿವೇಶ ಎದುರಾಗಿತ್ತು. ಆದರೆ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರನು ಭೀಕರ ಅಪಘಾತದಿಂದ ಪಾರಾಗಿ ಬಂದಿದ್ದೆ ರೋಚಕವಾಗಿತ್ತು.

ಓವರ್‌ಟೇಕ್ ಮಾಡುವ ಮುನ್ನ ಹುಷಾರ್..!

ವಿಡಿಯೋದಲ್ಲಿನ ಮಾಹಿತಿ ಪ್ರಕಾರ, ಬೈಕ್ ಲೈನ್‌ನಲ್ಲಿ ಬರುತ್ತಿದ್ದ ಜೆಬಿಬಿ ವಾಹನದಿಂದಾಗಿ ಓವರ್ ಟೆಕ್ ತೆಗೆದುಕೊಂಡ ಬೈಕ್ ಸವಾರನು ಬಲಭಾಗದಲ್ಲಿ ವೇಗವಾಗಿ ಚಾಲನೆ ಮುಂದಾಗುತ್ತಾನೆ. ಹೀಗಿರುವಾಗ ಬಲಭಾಗದ ಲೈನ್‌ನಲ್ಲಿ ಚಲಿಸುತ್ತಿದ್ದ ಟಾಟಾ ಸುಮೊ ಕಾರು ಯಾವುದೇ ಕಾರಣವೇ ಇಲ್ಲದೆಯೇ ನಿಧಾನವಾಗಿ ಚಲಿಸದ ಪರಿಣಾಮವೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ.

ಓವರ್‌ಟೇಕ್ ಮಾಡುವ ಮುನ್ನ ಹುಷಾರ್..!

ಜೆಸಿಬಿ ವಾಹನವನ್ನು ಓವರ್ ಟೆಕ್ ಮಾಡಿದ ನಂತರ ಎಡಭಾಗದತ್ತ ಚಲಿಸಬೇಕಿದ್ದ ಬೈಕ್ ಸವಾರನು ಸುಮೊ ಕಾರಿನ ಬಲಭಾಗದಲ್ಲಿ ನುಗ್ಗಲು ಯತ್ನಿಸುತ್ತಾನೆ. ಆದರೆ ಹೆದ್ದಾರಿಯಲ್ಲಿ ಯಾವುದೇ ಕಾರಣವೇ ಇಲ್ಲದೆಯೇ ಕಾರು ನಿಧಾನವಾಗಿ ಚಲಿಸಿದ ಪರಿಣಾಮ ಬೈಕ್ ಸವಾರನ ಪ್ರಾಣಕ್ಕೆ ಕುತ್ತು ಎದುರಾಗಿತ್ತು.

ಓವರ್‌ಟೇಕ್ ಮಾಡುವ ಮುನ್ನ ಹುಷಾರ್..!

ಆದರೆ ವಾಹನ ಚಾಲನೆ ವೇಳೆ ಯಾರೇ ತಪ್ಪು ಮಾಡಿದರೂ ಅಪಘಾತವಾಗುವುದು ನಿಶ್ಚಿತ. ಇದರಿಂದ ಹೆದ್ದಾರಿಗಳಲ್ಲಿ ಚಾಲನೆ ಮಾಡುವ ಸದಾ ಎಚ್ಚರಿಕೆಯಿಂದ ಚಾಲನೆ ಮಾಡಬೇಕಲ್ಲದೇ ಲೈನ್‌ಗಳನ್ನು ಬಿಟ್ಟು ಚಲಿಸುವ ಮುನ್ನ ಅಕ್ಕ ಪಕ್ಕದ ಹಾಗೂ ಹಿಂದೆಯಿಂದ ವೇಗವಾಗಿ ಬರುವ ವಾಹನ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಓವರ್‌ಟೇಕ್ ಮಾಡುವ ಮುನ್ನ ಹುಷಾರ್..!

ಇಲ್ಲವಾದ್ರೆ ಒಬ್ಬರುವ ಮಾಡುವ ತಪ್ಪಿನಿಂದ ಅಮಾಯಕರು ಪ್ರಾಣಕಳೆದುಕೊಳ್ಳಬೇಕಾಗುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಸಂಭವಿಸುವ ಶೇ.70ರಷ್ಟು ಅಪಘಾತಗಳಲ್ಲಿ ಮತ್ತೊಬ್ಬರ ತಪ್ಪಿನಿಂದಾಗಿಯೇ ಪ್ರಾಣಕಳೆದಕೊಂಡರೇ ಹೆಚ್ಚು ಎನ್ನುವ ವರದಿ ದಾಖಲಾಗಿದೆ. ಇದರಿಂದ ಯಾವುದೇ ಕಾರಣಕ್ಕೂ ಅವಸರದ ಚಾಲನೆ ಬೇಡವೇ ಬೇಡ....

Article Published On: Wednesday, December 11, 2019, 12:07 [IST]
English summary
Speeding car hits kid without slowing down - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+