ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ..

By Praveen Sannamani
Recommended Video - Watch Now!
[Kannada] Maruti Swift 2018 - Full Specifications, Features, Price, Mileage, Colours - DriveSpark

ಮೋಹಕ ತಾರೆ ಶ್ರೀದೇವಿ ಅವರ ಹಠಾತ್ ನಿರ್ಗಮನ ಚಿತ್ರರಸಿಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ತಮ್ಮ ಸೋದರ ಸಂಬಂಧಿ ಮೋಹಿತ್ ಮದುವೆ ಕಾರ್ಯಕ್ರಮಕ್ಕಾಗಿ ದುಬೈಗೆ ಹೋಗಿದ್ದ ಶ್ರೀದೇವಿ ಹೃದಯಾಘಾತದಿಂದ ನಿಧನರಾಗಿ ಅಪಾರ ಅಭಿಮಾನಿ ಬಳಗವನ್ನೇ ಅಗಲಿದ್ದಾರೆ.

ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ..

ಶ್ರೀದೇವಿಯನ್ನು ಅವರ ಗಂಡ ಬೋನಿ ಕಪೂರ್ ಎಷ್ಟೊಂದು ಪ್ರೀತಿಸುತ್ತಿದ್ದರೆಂದರೆ, ಕ್ಷಣವೂ ಅವರನ್ನು ಬಿಟ್ಟು ಇರುತ್ತಿರಲಿಲ್ಲ ಎಂದ್ರೆ ನೀವು ನಂಬಲೇಬೇಕು. ಸಂಬಂಧಿಯ ಮದುವೆಯ ನಂತರ ದುಬೈನಲ್ಲಿಯೇ ಶಾಪಿಂಗ್ ಮಾಡಲೆಂದು ಉಳಿದುಕೊಂಡಿದ್ದ ಶ್ರೀದೇವಿಗೆ ಸರ್ಪ್ರೈಸ್ ನೀಡಲು ಬಂದ ಬೋನಿ ಕಪೂರ್‌, ಶ್ರೀದೇವಿ ಹಠಾತ್ ಅಗಲಿಕೆಯಿಂದ ಶಾಕ್ ಆಗಿದ್ದಾರೆ.

ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ..

ಈ ಮೂಲಕ ಕಳೆದ ಎರಡು ದಶಕಗಳ ಕಾಲ ಬಾಲಿವುಡ್ ಅಂಗಳದಲ್ಲಿ ಅದೆಷ್ಟೋ ಪ್ರೇಮಕಥೆಗಳಿಗೆ ಕಾರಣವಾಗಿದ್ದ ಬೋನಿ ಕಪೂರ್‌ ಶ್ರೀದೇವಿ ಲವ್‌ಸ್ಟೋರಿ, ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲಾ ಹಾಗೆಯೇ ಬೋನಿ ಕಪೂರ್‌ ಕೂಡಾ ಶ್ರೀದೇವಿಯ ವಶವಾಗಿದ್ದು ಮೆರೆಯಲು ಸಾಧ್ಯವೇ ಇಲ್ಲಾ.

ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ..

ವೃತ್ತಿ ಬದುಕಿನೊಂದಿಗೆ ತಮ್ಮ ವ್ಯಯಕ್ತಿಕ ಬದುಕಿಗೂ ಹೆಚ್ಚಿನ ಗಮನ ನೀಡುತ್ತಿದ್ದ ನಟಿ ಶ್ರೀದೇವಿ ಅವರಿಗೆ ಬೋನಿ ಕಪೂರ್ ಮೇಲೆ ಎಲ್ಲಿಲ್ಲದ ಪ್ರೀತಿ ಇತ್ತು. ಅದೇ ಕಾರಣಕ್ಕೆ ಕಳೆದ 3 ವರ್ಷಗಳ ಹಿಂದಷ್ಟೇ ಬೋನಿ ಕಪೂರ್‌ಗೆ ಬಿಗ್ ಸರ್ಪೈಸ್ ನೀಡಿದ್ದ ಶ್ರೀದೇವಿ, ನಿನ್ನ ಪ್ರೀತಿಗೆ ನಾನು ಚಿರಋಣಿ ಎಂದಿದ್ದರಂತೆ.

ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ..

ಬೋನಿ ಕಪೂರ್ ಹೆಚ್ಚಾಗಿ ಇಷ್ಟಪಡುತ್ತಿದ್ದ ಪೋರ್ಷೆ ಕಾರನ್ನೇ ಗಿಫ್ಟ್ ಮಾಡಿದ್ದ ಶ್ರೀದೇವಿ, ಪತಿ ಬೋನಿ ಕಪೂರ್ ಕನಸಿನ ಕಾರಿನ ಬಗ್ಗೆ ಎಲ್ಲಿಲ್ಲದ ಆಸಕ್ತಿ ಹೊಂದಿದ್ದರು. ಅದೇ ಕಾರಣಕ್ಕೆ ಪ್ರತಿ ಕಾರ್ಯಕ್ರಮಕ್ಕೂ ಬಂದಾಗಲೂ ಪೋರ್ಷೆ ಕಾರಿನಲ್ಲೇ ಬೋನಿ ಬರುತ್ತಿದ್ದು ಬಿಟೌನ್ ಮಂದಿಗೆ ಕುತೂಹಲ ಹುಟ್ಟುಹಾಕಿದ್ದು ಕೂಡಾ ಸುಳ್ಳಲ್ಲ.

ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ..

ಬರೋಬ್ಬರಿ 2 ಕೋಟಿ ಮೌಲ್ಯ ಹೊಂದಿರುವ ಸ್ಪೋರ್ಟಿ ಲಗ್ಷುರಿ ಎಸ್‌ಯುವಿ ಮಾದರಿಯಾದ ಪೋರ್ಷೆ ಕಯೆನಿ, ಬಾಲಿವುಡ್ ನಟರ ನೆಚ್ಚಿನ ಆಯ್ಕೆ ಕೂಡಾ ಆಗಿದೆ. ಇದೇ ಕಾರಣಕ್ಕೆ ಬೋನಿ ಕಪೂರ್ ಕೂಡಾ ಪೋರ್ಷೆ ಕಾರಿನ ಮೇಲೆ ಎಲ್ಲಿಲ್ಲದ ಕ್ರೇಜ್ ಹೊಂದಿದ್ದರು.

ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ..

ಜೊತೆಗೆ ಶ್ರೀದೇವಿ ಅವರು ಕೂಡಾ ಪೋರ್ಷೆ ಕಾರು ಚಾಲನೆ ಬಗ್ಗೆ ಕ್ರೇಜ್ ಹೊಂದಿದ್ದರಲ್ಲದೇ ಹಲವು ಐಷಾರಾಮಿ ಕಾರುನ್ನು ಖರೀದಿಸಿದ್ದರು. ಆದರೂ ಬೋನಿ ಕಪೂರ್‌ಗೆ ಪತ್ನಿ ನೀಡಿದ ಪೋರ್ಷೆ ಮೇಲೆ ಎಲ್ಲಿಲ್ಲದ ಆಕರ್ಷಣೆ.

ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ..

ಪವರ್ ಸ್ಟ್ರೀರಿಂಗ್‌ನೊಂದಿಗೆ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಹೊಂದಿರುವ ಪೋರ್ಷೆ ಕಯೆನಿ, 4134 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದೆ. ಈ ಮೂಲಕ 382 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದೊಂದಿಗೆ 4 ಸೇಕೆಂಡುಗಳಲ್ಲಿ 100 ಕಿಮಿ ವೇಗದಲ್ಲಿ ಚಲಿಸಬಲ್ಲವು.

ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ..

ಆದ್ರೆ ಅದೆನೇ ಇರಲಿ, ಕೋಟ್ಯಂತರ ಅಭಿಮಾನಿಗಳ 'ಚಾಂದನಿ' ಇಡೀ ಚಿತ್ರರಂಗವೇ ಶೋಕಸಾಗರದಲ್ಲಿ ಮುಳುಗಿದೆ. ಸದ್ಯ ದುಬೈನಲ್ಲೇ ಇರುವ ಶ್ರೀದೇಶಿ ಅವರ ಪಾರ್ಥಿವ ಶರೀರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದು, ನಾಳೆ ಅಥವಾ ನಾಡಿದ್ದು ಅಂತಿಮ ಸಂಸ್ಕಾರ ನೆರವೇರುವ ಸಾಧ್ಯತೆಗಳಿವೆ.

Trending On DriveSpark Kannada:

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

Kannada
English summary
Sridevi gifts porsche cayenne her husband boney kapoor.
Story first published: Monday, February 26, 2018, 18:41 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more