ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ತೇಜಸ್ ಎಕ್ಸ್ ಪ್ರೆಸ್ ಭಾರತದ ಮೊದಲ ಸೆಮಿ ಹೈ ಸ್ಪೀಡಿನ ಏರ್ ಕಂಡೀಷನ್ ಹೊಂದಿರುವ ರೈಲು ಆಗಿದೆ. ತೇಜಸ್ ಪದದ ಅರ್ಥವು ವೇಗವಾದ, ಶಾರ್ಪ್ ಆದ ಎಂಬುದಾಗಿದೆ. ಈ ರೈಲಿನಲ್ಲಿ ಆಧುನಿಕವಾದ ಆಟೋಮ್ಯಾಟಿಕ್ ಡೋರ್‍‍ಗಳನ್ನು ಅಳವಡಿಸಲಾಗಿದೆ. ಈ ರೈಲಿನಲ್ಲಿ ಸುರಕ್ಷತೆಗಾಗಿ ಸಿಸಿಟಿವಿ ಹಾಗೂ ಮನರಂಜನೆಗಾಗಿ ಟಿವಿಗಳನ್ನು ಅಳವಡಿಸಲಾಗಿದೆ.

ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ತೇಜಸ್ ಎಕ್ಸ್ ಪ್ರೆಸ್, ಭಾರತದಲ್ಲಿರುವ ಕೆಲವೇ ಕೆಲವು ವೇಗದ ರೈಲುಗಳ ಪೈಕಿ ಒಂದಾಗಿದೆ. ಭಾರತದ ಮೊದಲ ತೇಜಸ್ ಎಕ್ಸ್ ಪ್ರೆಸ್ ರೈಲು 2017ರ ಮೇ 24ರಂದು ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‍‍ನಿಂದ ಗೋವಾದಲ್ಲಿರುವ ಕರ್ಮಾಲಿವರೆಗೆ ಚಲಿಸಿತ್ತು. 552 ಕಿ.ಮೀ ದೂರವನ್ನು 8 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಿತ್ತು. ದೆಹಲಿ ಹಾಗೂ ಲಕ್ನೋ ನಡುವೆ ಸಂಚರಿಸುವ ತೇಜಸ್ ಎಕ್ಸ್ ಪ್ರೆಸ್‍‍ನ ಕಾರ್ಯಾಚರಣೆಯನ್ನು ಐ‍ಆರ್‍‍ಸಿ‍‍ಟಿಸಿಗೆ ವಹಿಸಲು ಭಾರತೀಯ ರೈಲ್ವೆ ನಿರ್ಧರಿಸಿತ್ತು.

ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ಈಗ ಅಹಮದಾಬಾದ್ ಹಾಗೂ ಮುಂಬೈ ಸೆಂಟ್ರಲ್ ತೇಜಸ್ ಎಕ್ಸ್ ಪ್ರೆಸ್ ರೈಲಿನ ಕಾರ್ಯಾಚರಣೆಯನ್ನು ಸಹ ಐ‍ಆರ್‍‍ಸಿ‍‍ಟಿಸಿಗೆ ವಹಿಸಿಕೊಡಲು ನಿರ್ಧರಿಸಿದೆ. ರೈಲ್ವೆ ಇಲಾಖೆಯ ಪ್ರವಾಸೋದ್ಯಮ ಹಾಗೂ ಅಡುಗೆ ವಿಭಾಗವಾದ ಉಸ್ತುವಾರಿಯನ್ನು ನೋಡಿಕೊಳ್ಳುವ ಐಆರ್‌ಸಿಟಿಸಿಯು ಈ ಎಕ್ಸ್ ಪ್ರೆಸ್ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರ ಶುಲ್ಕವನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿರಲಿದೆ.

ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ಈ ಎರಡು ರೈಲುಗಳನ್ನು ಐ‍ಆರ್‍‍ಸಿ‍‍ಟಿಸಿಗೆ ಮೂರು ವರ್ಷಗಳ ಕಾಲ ಪ್ರಾಯೋಗಿಕವಾಗಿ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ರೈಲ್ವೆ ಮಂಡಳಿ ಸಿದ್ಧಪಡಿಸಿದ ನೀಲನಕ್ಷೆಯ ಪ್ರಕಾರ, ಈ ರೈಲುಗಳಲ್ಲಿ ಯಾವುದೇ ರಿಯಾಯಿತಿ ಶುಲ್ಕಗಳು, ಸವಲತ್ತುಗಳು ಅಥವಾ ಡ್ಯೂಟಿ ಪಾಸ್‌ಗಳನ್ನು ನೀಡಲಾಗುವುದಿಲ್ಲ.

ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ಐ‍ಆರ್‍‍ಸಿ‍‍ಟಿಸಿ ರೈಲುಗಳಲ್ಲಿ ಟಿಕೆಟ್ ಪರಿಶೀಲನೆಯನ್ನು ರೈಲ್ವೆ ಸಿಬ್ಬಂದಿ ಮಾಡುವುದಿಲ್ಲ ಎಂದು ರೈಲ್ವೆ ಹೇಳಿದೆ. ಆದರೆ ಈ ರೈಲುಗಳಲ್ಲಿ ರೈಲ್ವೆಯ ಸಿಬ್ಬಂದಿಗಳಾದ ಲೊಕೊ ಪೈಲಟ್‌ಗಳು, ಗಾರ್ಡ್‌ಗಳು ಹಾಗೂ ಸ್ಟೇಷನ್ ಮಾಸ್ಟರ್‌ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ಈ ಎರಡು ರೈಲುಗಳಲ್ಲಿ ನೀಡಲಾಗುವ ಸೇವೆಯ ಶತಾಬ್ಡಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ನೀಡುವ ಸೇವೆಗಳಿಗೆ ಸಮನಾಗಿರುತ್ತದೆ. ಇದೇ ರೀತಿಯ ಆದ್ಯತೆಯನ್ನು ಈ ಎಕ್ಸ್ ಪ್ರೆಸ್ ರೈಲುಗಳಿಗೂ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ಭಾರತೀಯ ರೈಲ್ವೆಯಲ್ಲಿ ವಿಶ್ವ ದರ್ಜೆಯ ಸೇವೆಯನ್ನು ಒದಗಿಸಲು ಖಾಸಗಿಯವರನ್ನು ಕರೆತರುವುದನ್ನು ಭಾರತೀಯ ರೈಲ್ವೆಯ 100 ದಿನಗಳ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಎರಡು ತೇಜಸ್ ಎಕ್ಸ್‌ಪ್ರೆಸ್ ರೈಲುಗಳನ್ನು ಐಆರ್‌ಸಿಟಿಸಿಗೆ ಹಸ್ತಾಂತರಿಸುವುದು ಯೋಜನೆಯ ಮೊದಲ ಹೆಜ್ಜೆಯಾಗಿದೆ ಎಂದು ಮೂಲಗಳು ತಿಳಿಸಿವೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ಈ ರೈಲುಗಳಲ್ಲಿರುವ ಬೋಗಿಗಳ ಒಳಗೆ ಹಾಗೂ ಹೊರಗೆ ಜಾಹೀರಾತುಗಳನ್ನು ಅಳವಡಿಸಿಕೊಳ್ಳುವ ಹಕ್ಕನ್ನು ಐಆರ್‌ಸಿಟಿಸಿ ಹೊಂದಿರಲಿದೆ. ರೈಲಿನ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ರೈಲಿನ ರೇಕ್ ಒಳಗೆ ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ಐಆರ್‌ಸಿಟಿಸಿ ರೈಲ್ವೆಯ ವೆಬ್ ಪೋರ್ಟಲ್ ಅನ್ನು ಬಳಲ್ಲಿ ಒಂದು ವರ್ಷದವರೆಗೆ ಟಿಕೆಟ್ ಮಾರಾಟ ಮಾಡಬಹುದು. ಈ ಎರಡು ರೈಲುಗಳ ಆದಾಯವನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ ತನ್ನದೇ ಆದ ಟಿಕೆಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಕೊಳ್ಳಲು ರೈಲ್ವೆ ಮಂಡಳಿ ಐಆರ್‌ಸಿಟಿಸಿಗೆ ಸೂಚನೆ ನೀಡಿದೆ.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ಈ ಎರಡು ಎಕ್ಸ್ ಪ್ರೆಸ್ ರೈಲುಗಳಲ್ಲಿ ತಲಾ 18 ಬೋಗಿಗಳು ಇರಲಿವೆ. ಐಆರ್‌ಸಿಟಿಸಿಗೆ ಕನಿಷ್ಠ 12 ಬೋಗಿಗಳನ್ನು ಹೊಂದಿರುವ ರೈಲುಗಳನ್ನು ಒಂದು ವರ್ಷದ ಅವಧಿಗೆ ಓಡಿಸಲು ಅವಕಾಶ ನೀಡಲಾಗುತ್ತದೆ. ಪ್ರತಿ ಟ್ರಿಪ್‌ನಲ್ಲಿ ಬಳಸುವ ಬೋಗಿಗಳ ಸಂಖ್ಯೆ ಅಥವಾ 12 ಬೋಗಿಗಳು, ಯಾವುದು ಹೆಚ್ಚಿದೆಯೋ ಅದರ ಆಧಾರದ ಮೇಲೆ ಪ್ರತಿ ಟ್ರಿಪ್‌ನ ಶುಲ್ಕವನ್ನು ಲೆಕ್ಕಹಾಕಲಾಗುತ್ತದೆ.

ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ಬಿಡಿಭಾಗಗಳನ್ನು ಸೇರಿದಂತೆ ರೈಲುಗಳ ಪಾಲನೆಗೆ ಐಆರ್‌ಸಿಟಿಸಿ ಶುಲ್ಕ ಪಾವತಿಸಲಿದೆ. ಯಾವುದೇ ಅಪಘಾತ ಸಂಭವಿಸಿದಲ್ಲಿ, ಐ‍ಆರ್‍‍ಸಿ‍‍ಟಿಸಿ ಸುಪರ್ದಿಯಲ್ಲಿರುವ ಪ್ರಯಾಣಿಕರನ್ನು ರೈಲ್ವೆ ಪ್ರಯಾಣಿಕರೆಂದು ಪರಿಗಣಿಸಲಾಗುತ್ತದೆ. ಹಾಗೂ ಅಪಘಾತ ಸಂಬಂಧಿತ ಪರಿಹಾರಗಳನ್ನು ನೀಡಲಾಗುತ್ತದೆ ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ. ಅಪಘಾತದ ಸಂದರ್ಭದಲ್ಲಿ ಸಹಾಯ ಮತ್ತು ಪುನಃಸ್ಥಾಪನೆಯನ್ನು ಸಹ ಒದಗಿಸುತ್ತದೆ. ರೈಲ್ವೆ ಮಂಡಳಿಯು ರೈಲುಗಳ ನಿರ್ವಹಣೆಯನ್ನೂ ಮಾಡಲಿದೆ. ಈ ಎರಡೂ ಎಕ್ಸ್ ಪ್ರೆಸ್ ರೈಲುಗಳು ವಾರದಲ್ಲಿ ಆರು ದಿನ ಚಲಿಸಲಿವೆ.

More from DriveSpark

Article Published On: Thursday, August 22, 2019, 16:26 [IST]
English summary
Tejas Express to be handed over to IRCTC - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+