ಐಷಾರಾಮಿ ಪೋರ್ಷೆ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಜನಪ್ರಿಯ ಕಿರುತೆರೆ ನಟ

ಹಿಂದಿ ಕಿರುತೆರೆಯ ಜನಪ್ರಿಯ ನಟ ರಾಮ್ ಕಪೂರ್ ಅವರು ಹೊಸ ಪೋರ್ಷೆ 911 ಕ್ಯಾರೆರಾ ಎಸ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ನಟ ರಾಮ್ ಕಪೂರ್ ಅವರು ಖರೀದಿಸಿದ ಪೋರ್ಷೆ 911 ಕ್ಯಾರೆರಾ ಎಸ್ ಸ್ಪೋರ್ಟ್ಸ್ ಕಾರಿನ ಬೆಲೆಯು ಸುಮಾರು ರೂ.1.84 ಕೋಟಿಯಾಗಿದೆ.

ಐಷಾರಾಮಿ ಪೋರ್ಷೆ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಜನಪ್ರಿಯ ಕಿರುತೆರೆ ನಟ

ನಟ ರಾಮ್ ಕಪೂರ್ ಅವರು ತಮ್ಮ ಪತ್ನಿಯೊಂದಿಗೆ ಮುಂಬೈನಲ್ಲಿ ಪೋರ್ಷೆ 911 ಕ್ಯಾರೆರಾ ಎಸ್ ಸ್ಪೋರ್ಟ್ಸ್ ಕಾರನ್ನು ಡೆಲಿವರಿ ಪಡೆದ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಟ ರಾಮ್ ಕಪೂರ್ ಅವರು ಬಿಎಂಡಬ್ಲ್ಯು ಎಕ್ಸ್5 ಮತ್ತು ಮರ್ಸಿಡಿಸ್ ಬೆಂಜ್ ಜಿ 63 ಎಎಂಜಿನಂತಹ ಇತರ ದುಬಾರಿ ಕಾರುಗಳನ್ನು ಸಹ ಹೊಂದಿದ್ದಾರೆ. ಇನ್ನು ನಟ ರಾಮ್ ಕಪೂರ್ ಅವರು ಹಾರ್ಲೆ ಡೇವಿಡ್ಸನ್, ಬಿಎಂಡಬ್ಲ್ಯು ಜಿಎಸ್ ಮತ್ತು ಇಂಡಿಯನ್ ಬೈಕ್ ಗಳನ್ನು ಹೊಂದಿದ್ದಾರೆ.

ಐಷಾರಾಮಿ ಪೋರ್ಷೆ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಜನಪ್ರಿಯ ಕಿರುತೆರೆ ನಟ

ಪೋರ್ಷೆ 911 ಕ್ಯಾರೆರಾ ಎಸ್ ಸ್ಪೋರ್ಟ್ಸ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ 3.0-ಲೀಟರ್ ಫ್ಲಾಟ್-ಆರು ಬಾಕ್ಸರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 450 ಬಿಹೆಚ್‍ಪಿ ಪವರ್ ಮತ್ತು 530 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಐಷಾರಾಮಿ ಪೋರ್ಷೆ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಜನಪ್ರಿಯ ಕಿರುತೆರೆ ನಟ

ಇನ್ನು ಈ ಎಂಜಿನ್ ಅನ್ನು 8-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಪೋರ್ಷೆ ಸ್ಪೋರ್ಟ್ಸ್ ಕಾರು 308 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಸ್ಟೀರಿಂಗ್ ವ್ಹೀಲ್ ಹಿಂದೆ ಪ್ಯಾಡಲ್ ಶಿಫ್ಟರ್‌ಗಳನ್ನು ಅಳವಡಿಸಲಾಗಿದೆ, ಇದರಿಂದಾಗಿ ಚಾಲಕರು ಗೇರ್‌ಗಳನ್ನು ಬದಲಾಯಿಸಬಹುದು.

ಐಷಾರಾಮಿ ಪೋರ್ಷೆ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಜನಪ್ರಿಯ ಕಿರುತೆರೆ ನಟ

ಪೋರ್ಷೆ 911 ಕ್ಯಾರೆರಾ ಎಸ್ ಸ್ಪೋರ್ಟ್ಸ್ ಕಾರಿನಲ್ಲಿ ಮುಂಭಾಗದಲ್ಲಿ 6 ಪಿಸ್ಟನ್ ಕ್ಯಾಲಿಪರ್‌ಗಳು ಮತ್ತು ಹಿಂಭಾಗದಲ್ಲಿ 4 ಪಿಸ್ಟನ್ ಕ್ಯಾಲಿಪರ್‌ಗಳ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಮುಂಭಾಗದಲ್ಲಿ 20-ಇಂಚು ಮತ್ತು ಹಿಂಭಾಗದಲ್ಲಿ 21-ಇಂಚುಗಳನ್ನು ಹೊಂದಿವೆ.

ಐಷಾರಾಮಿ ಪೋರ್ಷೆ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಜನಪ್ರಿಯ ಕಿರುತೆರೆ ನಟ

ಹೊಸ ಪೋರ್ಷೆ 911 ಕ್ಯಾರೆರಾ ಎಸ್ ಸ್ಪೋರ್ಟ್ಸ್ ಕಾರಿನಲ್ಲಿ ನಾಲ್ಕು ಎಲ್‌ಇಡಿ ಸ್ಪಾಟ್‌ಲೈಟ್‌ಗಳೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ. ಇನ್ನು ಈ ಕಾರು ಕ್ರೂಸ್ ಕಂಟ್ರೋಲ್, ಸೆಂಟ್ರಲ್ ಲಾಕಿಂಗ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಕೀ ಲೇಸ್ ಗೋ ಮತ್ತು ಕ್ಯಾಮೆರಾದೊಂದಿಗೆ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸೆರ್ ಗಳನ್ನು ಹೊಂದಿವೆ.

ಐಷಾರಾಮಿ ಪೋರ್ಷೆ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಜನಪ್ರಿಯ ಕಿರುತೆರೆ ನಟ

ಇನ್ನು ಈ ಸ್ಪೋರ್ಟ್ಸ್ ಕಾರಿನಲ್ಲಿ ಮಲ್ಟಿ-ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಪ್ರೀಮಿಯಂ ಸೌಂಡ್ ಸಿಸ್ಟಂ ಹೊಂದಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಇನ್ನು ಹೆಚ್ಚಿನದನ್ನು ಹೊಂದಿದೆ. ಇನ್ನು ಮಧ್ಯದಲ್ಲಿ ಅನಲಾಗ್ ಟ್ಯಾಕೋ ಮೀಟರ್ ಅನ್ನು ಹೊಂದಿದೆ.

ಐಷಾರಾಮಿ ಪೋರ್ಷೆ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಜನಪ್ರಿಯ ಕಿರುತೆರೆ ನಟ

ಭಾರತೀಯ ಮಾರುಕಟ್ಟೆಯಲ್ಲಿ ಪೋರ್ಷೆ ಕಂಪನಿಯು 2021ರ ಪನಾಮೆರಾ ಕಾರನ್ನು ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಈ 2021ರ ಪೋರ್ಷೆ ಪನಾಮೆರಾ ಕಾರು ಪನಾಮೆರಾ ಜಿಟಿಎಸ್, ಪನಾಮೆರಾ ಟರ್ಬೊ ಎಸ್, ಮತ್ತು ಪನಾಮೆರಾ ಟರ್ಬೊ ಎಸ್ ಇ-ಹೈಬ್ರಿಡ್ ಎಂಬ ನಾಲ್ಕು ಮಾದರಿಗಳನ್ನು ಒಳಗೊಂಡಿದೆ.

ಐಷಾರಾಮಿ ಪೋರ್ಷೆ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ ಜನಪ್ರಿಯ ಕಿರುತೆರೆ ನಟ

ಈ 2021ರ ಪೋರ್ಷೆ ಪನಾಮೆರಾ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಲೀಟರ್ ವಿ 6 ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 325 ಬಿಹೆಚ್‌ಪಿ ಪವರ್ ಮತ್ತು 450 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಟಾಪ್-ಸ್ಪೆಕ್ ಪನಾಮೆರಾ ಜಿಟಿಎಸ್ ಮಾದರಿಯು ವಿ8 ಎಂಜಿನ್ ಅನ್ನು ಪಡೆದುಕೊಂಡಿದೆ.

Most Read Articles

Kannada
English summary
Actor Ram Kapoor buys A Porsche 911 Carrera . Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X