ಭವಿಷ್ಯ ಭಾರತದ ಬೆನ್ನೆಲುಬು; 10 ಶಸ್ತ್ರಾಸ್ತ್ರಗಳು

By Nagaraja

ಭಾರತವನ್ನು ಹೊಂದಿಕೊಂಡಿರುವ ನೆರೆಯ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನ ಸದಾ ಒಳಸಂಚು ರೂಪಿಸುತ್ತಲೇ ಇವೆ. 'ಶತ್ರುವಿನ ಶತ್ರು ಮಿತ್ರ' ಎಂಬ ನಾಣ್ಣುಡಿಯಂತೆ ಚೀನಾ ಭಾರತದ ಏಳಿಗೆಯನ್ನು ತಡೆಗಟ್ಟುವ ಪ್ರಯತ್ನ ಮಾಡುತ್ತಿದೆ. ಇದರಿಂದ ಗಡಿಯಾಚೆಗಿನ ಶೀತಲ ಸಮರ ಮುಂದುವರಿದಿದೆ.

Also Read: ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

ಚೀನಾ ಹಾಗೂ ಪಾಕಿಸ್ತಾನ ಸಹ ಪರಮಾಣು ಅಣ್ವಸ್ತ್ರಗಳನ್ನು ಹೊಂದಿರುವುದರಿಂದ ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಲು ಭಾರತ ಕೂಡಾ ತನ್ನ ರಕ್ಷಣೆಯನ್ನು ಸುಭದ್ರಪಡಿಸಬೇಕಾದ ಅಗತ್ಯವಿದೆ. ಇದೇ ಕಾರಣಕ್ಕಾಗಿ ಪ್ರತಿ ವರ್ಷವೂ ಕೇಂದ್ರ ಬಜೆಟ್‌ನಲ್ಲಿ ಅತಿ ಹೆಚ್ಚು ವೆಚ್ಚವನ್ನು ರಕ್ಷಣಾ ವ್ಯವಸ್ಥೆಗಾಗಿ ಮೀಸಲಿಡಲಾಗುತ್ತಿದೆ. ಭಾರತದಲ್ಲಿ ಪ್ರಮುಖವಾಗಿಯೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ರಷ್ಯಾದಂತಹ ತನ್ನ ಮಿತ್ರ ರಾಷ್ಟ್ರಗಳ ಜೊತೆಗೂಡಿ ರಕ್ಷಣಾ ವ್ಯವಸ್ಥೆಯಲ್ಲಿ ನಾವೀನ್ಯ ತಂತ್ರಗಾರಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಹೀಗೆ ಭವಿಷ್ಯದಲ್ಲಿ ಭಾರತವನ್ನು ಅಶ್ವಶಕ್ತಿಯಾಗಿಸಬಲ್ಲ 10 ಶಸ್ತ್ರಾಸ್ತ್ರಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ.

01. ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆ

01. ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆ

ಭಾರತೀಯ ಬ್ಯಾಲ್ಲಿಸ್ಟಿಕ್ ಮಿಸೈಲ್ ಡಿಫೆನ್ಸ್ ಪ್ರೋಗ್ರಾಂ ಒಂದು ಬಹು ಪದರಿನ ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. ಇದು ಎರಡು ಶ್ರೇಣೀಕೃತ ವ್ಯವಸ್ಥೆಯನ್ನು ಹೊಂದಿದ್ದು, ಅತಿ ಎತ್ತರದ ವಾಯುವಲಯ ಹಾಗೂ ಅತಿ ಕಡಿಮೆ ವಾಯುವಲಯದಲ್ಲಿ ರಕ್ಷಣೆ ಒದಗಿಸಲಾಗಿದೆ. ಅತಿ ಎತ್ತರದಲ್ಲಿ ಪೃಥ್ವಿ ಏರ್ ಡಿಫೆನ್ಸ್ (ಪಿಎಡಿ) ಹಾಗೂ ಕಡಿಮೆ ಎತ್ತರದಲ್ಲಿ ಅಡ್ವಾನ್ಸ್ಡ್ ಏರ್ ಡಿಫೆನ್ಸ್ (ಎಎಡಿ) ಕಾರ್ಯಾಚರಣೆಯನ್ನು ನಡೆಸಲಿದೆ. ಇದರಂತೆ 5,000 ಕೀ.ಮೀ. ದೂರದಿಂದ ಹಾರಿ ಬಿಡಲಾಗುವ ಯಾವುದೇ ಕ್ಷಿಪಣಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಈ ಪೈಕಿ ಪಿಎಡಿ ಹಾಗೂ ಎಎಡಿ ಮಿಸೈಲ್ ಗಳನ್ನು ಅನುಕ್ರಮವಾಗಿ 2006 ಹಾಗೂ 2007ರಲ್ಲಿ ಪರೀಕ್ಷಾರ್ಥ ನಡೆಸಲಾಗಿತ್ತು. ಈ ಮೂಲಕ ಅಮೆರಿಕ, ರಷ್ಯಾ, ಇಸ್ರೇಲ್ ಬಳಿಕ ಖಂಡಾಂತರ ಕ್ಷಿಪಣಿ ತಡೆಯುವ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಪಡಿಸಿದ ನಾಲ್ಕನೇ ರಾಷ್ಟ್ರವೆನಿಸಿತ್ತು.

02. 5ನೇ ತಲೆಮಾರಿನ ಸುಖೋಯ್ ಯುದ್ಧ ವಿಮಾನ

02. 5ನೇ ತಲೆಮಾರಿನ ಸುಖೋಯ್ ಯುದ್ಧ ವಿಮಾನ

ಐದನೇ ತಲೆಮಾರಿನ ಸುಖೋಯ್ ಪಿಎಕೆ ಎಫ್‌ಎ ಯುದ್ಧ ವಿಮಾನವು ಮಿಗ್-29 ಫಾಲ್ಕ್ರುಮ್ ಮತ್ತು ಸು-27 ಫ್ಲಾಂಕರ್ ಸ್ಥಾನವನ್ನು ತುಂಬಲಿದೆ. ಇದನ್ನು ರಷ್ಯಾ ಜೊತೆಗಿನ ಸುಖೋಯ್/ಎಚ್‌ಎಎಲ್ ಎಫ್‌ಜಿಎಫ್‌ಎ ಯೋಜನೆಯ ಮುಖಾಂತರ ಅಭಿವೃದ್ಧಿಪಡಿಸಲಾಗಿದ್ದು, ಮಾರ್ಟಿನ್ ಎಫ್-22 ರಾಪ್ಟರ್ ಹಾಗೂ ಎಫ್-35 ಲೈಟ್ನಿಂಗ್ II ಜೊತೆ ನೇರ ಸ್ಪರ್ಧೆಯನ್ನು ನಡೆಸಲಿದೆ.

03. ಐಎನ್‌ಎಸ್ ಅರಿಹಂತ್ ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ

03. ಐಎನ್‌ಎಸ್ ಅರಿಹಂತ್ ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ

ಭಾರತದ ಅರಿಹಂತ್ ( Arihant) ಶ್ರೇಣಿಯ ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ಯುದ್ಧ ನೌಕೆ ಇದಾಗಿದ್ದು, ಅಡ್ವಾನ್ಸ್ಡ್ ಟೆಕ್ನಾಲಜಿ ವೆಸ್ಸೆಲ್ (ಎಟಿವಿ) ಯೋಜನೆಯಡಿಯಲ್ಲಿ ವಿಶಾಖಪಟ್ಟದ ಹಡಗು ನಿರ್ಮಾಣ ಕೇಂದ್ರದಲ್ಲಿ ತಯಾರುಗೊಂಡಿದೆ.

04. ಐಎನ್‌ಎಸ್ ವಿಕ್ರಮಾದಿತ್ಯ

04. ಐಎನ್‌ಎಸ್ ವಿಕ್ರಮಾದಿತ್ಯ

ಐಎನ್‌ಎಸ್ ವಿಕ್ರಮಾದಿತ್ಯ ಸೋವಿಯತ್ ಒಕ್ಕೂಟದಿಂದ ಭಾರತ ಖರೀದಿಸಿದ ಯುದ್ಧ ನೌಕೆಯಾಗಿದೆ. ರಷ್ಯಾದ ಅಡ್ಮಿರಲ್ ಗೋರ್ಶ್ಕೊವ್ ಯುದ್ಧ ನೌಕೆಯನ್ನು ಭಾರತ ಮಾರ್ಪಾಡುಗೊಳಿಸಿತ್ತು.

05. ದಸ್ಸಾಲ್ಟ್ ರಫೇಲ್

05. ದಸ್ಸಾಲ್ಟ್ ರಫೇಲ್

ಫ್ರಾನ್ಸ್‌ನ ದಸ್ಸಾಲ್ಟ್ ಎವಿಯೇಷನ್ ನಿರ್ಮಾಣ ಹಾಗೂ ಅಭಿವೃದ್ಧಿ ಮಾಡಿರುವ ದಸ್ಸಾಲ್ಟ್ ರಫೇಲ್, ಟ್ವಿನ್ ಎಂಜಿನ್ ಚಾಲಿತ ಡೆಲ್ಟಾ ರೆಕ್ಕೆಗಳ ಬಹು ಪಾತ್ರಧಾರಿ ಫೈಟರ್ ಜೆಟ್ ವಿಮಾನವಾಗಿದೆ.

06. ಫಾಲ್ಕನ್ ಮತ್ತು ಡಿಆರ್‌ಡಿಒ ಎಡಬ್ಲ್ಯುಎಸಿಎಸ್

06. ಫಾಲ್ಕನ್ ಮತ್ತು ಡಿಆರ್‌ಡಿಒ ಎಡಬ್ಲ್ಯುಎಸಿಎಸ್

ಭವಿಷ್ಯದಲ್ಲಿ ಭಾರತದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬಹುದಾದ ಯೋಜನೆ ಇದಾಗಿದೆ. ಯುದ್ಧ ಪರಿಸ್ಥಿತಿಯಲ್ಲಿ ಭೂತಲದಿಂದ 100 ಕೀ.ಮೀ. ಎತ್ತರದಲ್ಲೂ ವಾಯುವಲಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

07. ಶೌರ್ಯ ಮತ್ತು ಅಗ್ನಿ ವಿ ಮಿಸೈಲ್

07. ಶೌರ್ಯ ಮತ್ತು ಅಗ್ನಿ ವಿ ಮಿಸೈಲ್

ನಿಸ್ಸಂಶಯವಾಗಿಯೂ ಭವಿಷ್ಯದಲ್ಲಿ ಭಾರತ ಪ್ರಬಲ ರಕ್ಷಣಾ ವ್ಯವಸ್ಥೆ ಹೊಂದಿರುವ ದೇಶವಾಗಿ ಮಾರ್ಪಾಡುಗೊಳ್ಳಲಿದೆ. ಈ ನಿಟ್ಟಿನಲ್ಲಿ ಶೌರ್ಯ ಹಾಗೂ ಅಗ್ನಿ ಕ್ಷಿಪಣಿಗಳು ನಿರ್ಣಾಯಕ ಪಾತ್ರ ವಹಿಸಲಿದೆ.

08. ಬ್ರಹ್ಮೋಸ್ ಮತ್ತು ಹೈಪರ್ ಸೋನಿಕ್ ಬ್ರಹ್ಮೋಸ್ II

08. ಬ್ರಹ್ಮೋಸ್ ಮತ್ತು ಹೈಪರ್ ಸೋನಿಕ್ ಬ್ರಹ್ಮೋಸ್ II

ಇಂಡಿಯನ್ ಲ್ಯಾಬೋರೇಟರಿ ರಿಸರ್ಚ್ ಪ್ರಾಯೋಗಲಯದಲ್ಲಿ ನಿರಂತರ ಸಂಶೋಧನೆ ಜಾರಿಯಲಿದ್ದು, ಏರ್ ಲಾಂಚ್ಡ್ ಬ್ರಹ್ಮೋಸ್ ಮತ್ತು ಹೈಪರ್ ಸೋನಿಕ್ ಬ್ರಹ್ಮೋಸ್ II ಭವಿಷ್ಯ ಭಾರತದ ಮಿಲಿಟರಿ ಅಗತ್ಯಗಳನ್ನು ಈಡೇರಿಸಲಿದೆ. ಇದು ಅತಿ ವೇಗದಲ್ಲಿ ಶತ್ರು ಪಾಳೇಯವನ್ನು ಧ್ವಂಸ ಮಾಡುವ ಸಾಮರ್ಥ್ಯ ಪಡೆದಿದೆ.

09. ಸ್ಪೈಡರ್ ಮತ್ತು ಬರಕ್ 8 ಎಸ್‌ಎಎಂ

09. ಸ್ಪೈಡರ್ ಮತ್ತು ಬರಕ್ 8 ಎಸ್‌ಎಎಂ

ಯುದ್ದ ವಿಮಾನ, ಡ್ರಾನ್ ಅಥವಾ ಹೆಲಿಕಾಪ್ಟರ್ ನಲ್ಲಿ ಸುಲಭವಾಗಿ ಹೊತ್ತೊಯ್ಯಬಲ್ಲ ಸ್ಪೈಡರ್ ಹಾಗೂ ಬರಕ್ 8 ಎಸ್‌ಎಎಂ ಮಿಲಿಟರಿ ಆಯುಧಗಳು ಭವಿಷ್ಯದಲ್ಲಿ ವಾಯು ವಲಯದ ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.

10. ಪಿ8ಐ ಪೊಸಿಡಾನ್

10. ಪಿ8ಐ ಪೊಸಿಡಾನ್

ಪಿ-8ಎ ಮುಂದುವರಿಯದ ಆವೃತ್ತಿಯಾಗಿರುವ ಪಿ8ಐ ಪೊಸಿಡಾನ್ (P8i Poseidon) ಭವಿಷ್ಯದಲ್ಲಿ ಭಾರತ ನೌಕಾ ಪಡೆಯನ್ನು ಬಲಿಷ್ಠವಾಗಿಸಲಿದೆ. ಇದು ಕೂಡಾ ವಾಯು ವಲಯದಲ್ಲಿ ನಿಯಂತ್ರಣ ಸಾಧಿಸುವ ಅಪಾರ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇವನ್ನೂ ಓದಿ

ಚೀನಾ ಮಿಸೈಲ್ ಪರೀಕ್ಷೆ; ಭಾರತದಲ್ಲೂ ಮಡುಗಟ್ಟಿದ ಆತಂಕ


Most Read Articles

Kannada
Read more on ಭಾರತ india
English summary
Ten future weapons of India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X