ಜಗತ್ತಿನ ಅತಿದೊಡ್ಡ 10 ವಾಹನ ತಯಾರಕ ಸಂಸ್ಥೆಗಳು

Written By:

ನಾವು ಯಾವುದೇ ವಸ್ತುವನ್ನು ಖರೀದಿಸುವಾಗಲೂ ಆ ನಿರ್ದಿಷ್ಟ ಉತ್ಪನ್ನವನ್ನು ತಯಾರಿಸಿದ ಸಂಸ್ಥೆಯ ಬ್ರಾಂಡ್ ಮೌಲ್ಯದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇವೆ. ಉದಾಹರಣೆಗೆ ನೀವು ಹೊಸ ಮೊಬೈಲ್‌ವೊಂದನ್ನು ಖರೀದಿಸುವೀರಿ ಎಂದಿಟ್ಟುಕೊಳ್ಳಿ. ಮೊದಲು ಆ ಮೊಬೈಲ್‌ನ ಬ್ರಾಂಡ್ ಯಾವುದೆಂಬುದನ್ನು ತಿಳಿದುಕೊಳ್ಳಲು ಬಯಸುತ್ತೇವೆ. ಇದಾದ ಬಳಿಕವಷ್ಟೇ ಅದರಲ್ಲಿರುವ ವೈಶಿಷ್ಟ್ಯಗಳ ಬಗ್ಗೆ ಗಮನ ಕೇಂದ್ರಿಕರಿಸುತ್ತೇವೆ.

ವಾಹನ ಜಗತ್ತು ಸಹ ಇದರಿಂದ ಹೊರತೇನಲ್ಲ. ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ವಾಹನ ತಯಾರಕ ಸಂಸ್ಥೆಗಳಿರುವುದರಿಂದ ಬ್ರಾಂಡ್ ಮೌಲ್ಯ ಗುರುತಿಸುವುದು ಸ್ವಲ್ಪ ಕಷ್ಟಕರ. ಇಂದಿನ ಈ ಲೇಖನದ ಮೂಲಕದ ಜಗತ್ತಿನ 10 ಅತಿದೊಡ್ಡ ವಾಹನ ತಯಾರಕ ಸಂಸ್ಥೆಗಳ ಕುರಿತು ಮಾಹಿತಿ ನೀಡುವ ಪ್ರಯತ್ನ ಮಾಡಲಿದ್ದೇವೆ.

To Follow DriveSpark On Facebook, Click The Like Button
ಜಗತ್ತಿನ ಅತಿದೊಡ್ಡ 10 ವಾಹನ ತಯಾರಕ ಸಂಸ್ಥೆಗಳು

ಮುಂದಿನ ಒಂದೊಂದೇ ಪುಟ ಕ್ಲಿಕ್ಕಿಸುತ್ತಾ ಜಗತ್ತಿನ ಅಗ್ರ 10 ಅತಿದೊಡ್ಡ ವಾಹನ ತಯಾರಕ ಸಂಸ್ಥೆಗಳ ಕುರಿತು ಮಾಹಿತಿ ಪಡೆಯಿರಿ...

10. ಬಿಎಂಡಬ್ಲ್ಯು ಸಂಸ್ಥೆ

10. ಬಿಎಂಡಬ್ಲ್ಯು ಸಂಸ್ಥೆ

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಕುರಿತಾಗಿ ಹೆಚ್ಚೇನು ಹೇಳುವ ಅಗತ್ಯವಿಲ್ಲ. ಮಿನಿ, ರೋಲ್ಸ್ ರಾಯ್ಸ್‌ಗಳಂತಹ ಐಕಾನಿಕ್ ಬ್ರಾಂಡ್‌ಗಳನ್ನು ಬಿಎಂಡಬ್ಲ್ಯು ಸಂಸ್ಥೆ, 2012ನೇ ಸಾಲಿನಲ್ಲಿ 1.9 ದಶಲಕ್ಷ ಯುನಿಟ್‌ಗಳನ್ನು ಮಾರಾಟಗೈದಿತ್ತು.

09. ಪಿಎಸ್‌ಎ ಪ್ಯೂಜೊ ಸಿಟ್ರಾನ್

09. ಪಿಎಸ್‌ಎ ಪ್ಯೂಜೊ ಸಿಟ್ರಾನ್

ಫ್ರಾನ್ಸ್‌ನ ಬಹುರಾಷ್ಟ್ರೀಯ ವಾಹನ ತಯಾರಕ ಸಂಸ್ಥೆಯಾಗಿರುವ ಪಿಎಸ್‌ಎ ಪ್ಯೂಜೊ ಸಿಟ್ರಾನ್, ಕೇಂದ್ರ ಕಚೇರಿ ಪ್ಯಾರಿಸ್‌ನಲ್ಲಿದೆ. 2013ನೇ ಸಾಲಿನಲ್ಲಿ ಅನೇಕ ವಾಹನ ತಯಾರಕ ಸಂಸ್ಥೆಗಳು ಏರುಗತಿ ಸಾಧಿಸಿದಾಗ ಫ್ರಾನ್ಸ್‌ ಮೂಲದ ಈ ವಾಹನ ತಯಾರಕ ಸಂಸ್ಥೆಯು ಹಿನ್ನಡೆ ಸಾಧಿಸಿತ್ತು. ಇದರಿಂದಾಗಿ ವಿಶೇಷ ಮಾರುಕಟ್ಟೆಗಳತ್ತ ಹೆಚ್ಚು ಗಮನ ಕೇಂದ್ರಿಕರಿಸಿತ್ತು.

8. ಹೋಂಡಾ ಮೋಟಾರ್

8. ಹೋಂಡಾ ಮೋಟಾರ್

ಎಂಟನೇ ಸ್ಥಾನದಲ್ಲಿ ಜಪಾನ್ ಮೂಲದ ಹೋಂಡಾ ಮೋಟಾರ್ ಸಂಸ್ಥೆಯಿದೆ. ಜಾಗತಿಕವಾಗಿ ಶೇಕಡಾ 7ರಷ್ಟು ಮಾರಾಟ ವೃದ್ಧಿಸಿಕೊಂಡಿರುವ ಹೋಂಡಾ 4 ದಶಲಕ್ಷಗಿಂತಲೂ ಹೆಚ್ಚು ಕಾರು ಹಾಗೂ ಟ್ರಕ್‌ಗಳನ್ನು ಮಾರಾಟ ಮಾಡುತ್ತಿವೆ. ಹೋಂಡಾ ಸಿಆರ್-ವಿ ಸಂಸ್ಥೆಯ ಅತ್ಯುತ್ತಮ ಮಾರಾಟ ಕಾರಾಗಿದ್ದು, ಅಮೆರಿಕದಲ್ಲಿ ಅತಿ ಹೆಚ್ಚು ಸಾನಿಧ್ಯವನ್ನು ಹೊಂದಿದೆ.

7. ಫಿಯೆಟ್ ಕ್ರೈಸ್ಲರ್

7. ಫಿಯೆಟ್ ಕ್ರೈಸ್ಲರ್

ಅಮೆರಿಕದ ಕ್ಲೈಸ್ಲರ್ ಜೊತೆ ಲಯನವಾಗಿದ್ದ ಇಟಲಿಯ ಫಿಯೆಟ್ ಬ್ರಾಂಡ್ 2013ನೇ ಸಾಲಿನಲ್ಲಿ 4.3 ಮಿಲಿಯರ್ ಕಾರು ಹಾಗೂ ಬಸ್‌ಗಳ ಮಾರಾಟಗೈದಿತ್ತು. ಜಾಗತಿಕವಾಗಿ ಕ್ಲೈಸ್ಲರ್ 2.6 ಮಿಲಿಯನ್ ಹಾಗೂ ಫಿಯೆಟ್ 1.7 ಮಿಲಿಯನ್ ವಾಹನಗಳನ್ನು ಮಾರಾಟ ನಡೆಸಿದೆ.

6. ಫೋರ್ಡ್ ಮೋಟಾರ್

6. ಫೋರ್ಡ್ ಮೋಟಾರ್

ಅಮೆರಿಕದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಡ್ ಮೋಟಾರ್ 2013ನೇ ಸಾಲಿನಲ್ಲಿ 6.3 ಮಿಲಿಯನ್ ಕಾರು ಹಾಗೂ ಟ್ರಕ್ಕುಗಳನ್ನು ಮಾರಾಟಗೈದಿತ್ತು. ಉತ್ತಮ ಅಮೆರಿಕ ಇದರ ಪ್ರಮುಖ ಮಾರಾಟ ಕೇಂದ್ರವಾಗಿದೆ. ಇದರ ಎಫ್ ಸಿರೀಸ್ ಪಿಕಪ್, ಅಮೆರಿಕ ಹಾಗೂ ಕೆನಡಾದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿದೆ.

5. ಹ್ಯುಂಡೈ-ಕಿಯಾ

5. ಹ್ಯುಂಡೈ-ಕಿಯಾ

ದಕ್ಷಿಣ ಕೊರಿಯೊ ಮೂಲದ ಹ್ಯುಂಡೈ-ಕಿಯಾ ಸಂಸ್ಥೆಯು ಐಧನೇ ಸ್ಥಾನದಲ್ಲಿದ್ದು, 2013ನೇ ಸಾಲಿನಲ್ಲಿ ಜಾಗತಿಕವಾಗಿ 7.5 ಮಿಲಿಯನ್ ವಾಹನಗಳನ್ನು ಮಾರಾಟ ಕಂಡಿದೆ. ಹ್ಯುಂಡೈ-ಕಿಯಾ ಪಾಲಿಗೆ ಅತಿ ಹೆಚ್ಚು ಯಶಸ್ಸು ತಂದುಕೊಂಡಿರುವ ಎಲಂಟ್ರಾ/ಅವಂತಿ 8,66,000 ಯುನಿಟ್‌ಗಿಂತಲೂ ಹೆಚ್ಚು ಮಾರಾಟ ದಾಖಲಿಸಿತ್ತು.

4. ನಿಸ್ಸಾನ್-ರೆನೊ ಸಂಸ್ಥೆ

4. ನಿಸ್ಸಾನ್-ರೆನೊ ಸಂಸ್ಥೆ

ಫ್ರಾನ್ಸ್ ಹಾಗೂ ಜಪಾನ್ ಜೊತೆಗಾರಿಕೆಯು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆಗೆ ಸಾಕ್ಷಿಯಾಗಿದೆ. 2013ನೇ ಸಾಲಿನಲ್ಲಿ ನಿಸ್ಸಾನ್ ಹಾಗೂ ರೆನೊ ಸಂಸ್ಥೆಯು ಒಟ್ಟು 8.2 ಮಿಲಿಯನ್ ವಾಹನಗಳನ್ನು ಮಾರಾಟಗೈದಿತ್ತು. ಈ ಪೈಕಿ ನಿಸ್ಸಾನ್ ಮಾತ್ರವಾಗಿ 5.1 ಮಿಲಿಯನ್ ಯುನಿಟ್‌ಗಳ ಮಾರಾಟ ದಾಖಲಿಸಿತ್ತು. ಚೀನಾ ಇದರ ಪ್ರಮುಖ ವಹಿವಾಟು ಕೇಂದ್ರವಾಗಿದೆ.

3. ಫೋಕ್ಸ್‌ವ್ಯಾಗನ್ ಸಂಸ್ಥೆ

3. ಫೋಕ್ಸ್‌ವ್ಯಾಗನ್ ಸಂಸ್ಥೆ

ಮೂರನೇ ಸ್ಥಾನದಲ್ಲಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು 2013ನೇ ಸಾಲಿನಲ್ಲಿ 9.7 ಯುನಿಟ್‌ಗಳ ಮಾರಾಟ ದಾಖಲಿಸಿದೆ. ಆಂಡಿ, ಬೆಂಟ್ಲಿ, ಲಂಬೋರ್ಗಿನಿ ಮತ್ತು ಪೋರ್ಷೆಗಳಂತಹ ಐಕಾನಿಕ್ ಬ್ರಾಂಡ್‌ಗಳನ್ನು ಹೊಂದಿರುವ ಫೋಕ್ಸ್‌ವ್ಯಾಗನ್ ಪಾಲಿಗೂ ಚೀನಾ ಅತಿದೊಡ್ಡ ಮಾರುಕಟ್ಟೆಯಾಗಿದೆ.

2. ಜನರಲ್ ಮೋಟಾರ್ಸ್

2. ಜನರಲ್ ಮೋಟಾರ್ಸ್

ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಭಾರತದಲ್ಲಿ ಹೆಚ್ಚಿನ ಸದ್ದು ಮಾಡದೇ ಇರಬಹುದು. ಆದರೆ ಜಾಗತಿಕವಾಗಿ 9.7 ದಶಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿರುವ ಜನರಲ್ ಮೋಟಾರ್ಸ್, ಷೆವರ್ಲೆ ಮುಖಾಂತರ ಅತಿ ಹೆಚ್ಚಿನ ಯಶಸ್ಸನ್ನು ಆಚರಿಸಿಕೊಂಡಿದೆ. ಅಲ್ಲದೆ 5 ದಶಲಕ್ಷ ಷೆವರ್ಲೆ ಮಾದರಿಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. 2013ನೇ ಸಾಲಿನಲ್ಲಿ ಷೆವರ್ಲೆ ಕ್ರೂಝ್ 729,000 ಯುನಿಟ್‌ಗಿಂತಲೂ ಹೆಚ್ಚು ಮಾರಾಟ ದಾಖಲಿಸಿತ್ತು.

1. ಟೊಯೊಟಾ ಮೋಟಾರ್

1. ಟೊಯೊಟಾ ಮೋಟಾರ್

ಜಾಗತಿಕವಾಗಿ 9.98 ದಶಲಕ್ಷಗಿಂತಲೂ ಹೆಚ್ಚಿನ ಸಂಖ್ಯೆಯ ಮಾರಾಟ ಕಂಡುಕೊಂಡಿರುವ ಟೊಯೊಟಾ ಮೋಟಾರ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಮೂಲಕ ಜಾಗತಿಕವಾಗಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಟೊಯೊಟಾ ಕರೊಲ್ಲಾ ಸಂಸ್ಥೆಯ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಕಾರಾಗಿದೆ.

English summary
With people from rural areas moving to urban settlements in the modern world, cars have become more of a necessity these days than a luxury need. These in turn give the automobile industry a big turnover.
Story first published: Wednesday, August 20, 2014, 10:33 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark