ವಿಶ್ವದ ಅತಿ ದೊಡ್ಡ ವಾಹನ ನಿಲುಗಡೆ ಪ್ರದೇಶ ಎಲ್ಲಿದೆ?

By Nagaraja

ನಗರದ್ಯಾಂತ ಕಿಕ್ಕಿರಿದು ತುಂಬಿದ ಜನಸಾಗರ. ಇದರ ಜೊತೆಗೆ ವಾಹನಗಳ ಜಂಜಾಟ ಬೇರೆ. ಇಂತಹ ಪರಿಸ್ಥಿತಿಯಲ್ಲಿ ಸಿಕ್ಕ ಜಾಗಲೆಲ್ಲ ವಾಹನಗಳ ನಿಲುಗಡೆಗಾಗಿ ಸಯಮವನ್ನೆಲ್ಲ ವ್ಯರ್ಥ ಮಾಡುತ್ತೇವೆ. ಒಂದು ಸಣ್ಣ ಶಾಪಿಂಗ್ ಮಾಡಬೇಕಾದರೂ ಪಾರ್ಕಿಂಗ್ ಸಮಸ್ಯೆ?

ಹಾಗಿರುವಾಗ ಜಗತ್ತಿನ ಅತಿ ದೊಡ್ಡ ವಾಹನ ನಿಲುಗಡೆ ಪ್ರದೇಶ ಎಲ್ಲಿದೆ ಗೊತ್ತಾ? ಇಂದಿನ ಈ ಲೇಖನದಲ್ಲಿ ಜಗತ್ತಿನ ಟಾಪ್ 10 ಪಾರ್ಕಿಂಗ್ ಪ್ರದೇಶದ ಬಗ್ಗೆ ವಿವರವಾಗಿ ಮಾಹಿತಿ ಕೊಡುವ ಪ್ರಯತ್ನ ಮಾಡಲಿದ್ದೇವೆ.

10. ಡಲ್ಲಾಸ್ ವಿಮಾನ ನಿಲ್ದಾಣ

10. ಡಲ್ಲಾಸ್ ವಿಮಾನ ನಿಲ್ದಾಣ

ಅಮೆರಿದಲ್ಲಿರುವ ಡಲ್ಲಾಸ್ ವಿಮಾನ ನಿಲ್ದಾಣದಲ್ಲಿ ಎಷ್ಟು ಕಾರುಗಳಿಗೆ ಪಾರ್ಕಿಂಗ್ ಮಾಡಬಹುದೆಂಬುದನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಹೌದು, 8,100 ಕಾರುಗಳಿಗೆ ಇಲ್ಲಿ ಪಾರ್ಕಿಂಗ್ ಗಾಗಿ ಅನುವು ಮಾಡಿಕೊಡಲಾಗಿದೆ. ಅಬ್ಬಬ್ಬಾ ಇದೇ ದೊಡ್ಡದು ಅಂದುಕೊಂಡರೆ ಸ್ವಲ್ಪ ತಡೀರಿ ಇನ್ನು ಮುಂದಕ್ಕೆ ಸಾಗಿ...

09. ಬಾಲ್ಟಿಮೋರ್ ವಿಮಾನ ನಿಲ್ದಾಣ

09. ಬಾಲ್ಟಿಮೋರ್ ವಿಮಾನ ನಿಲ್ದಾಣ

ಅಮೆರಿಕ ಸಂಯುಕ್ತ ಸಂಸ್ಥಾನದ ಅತಿ ದೊಡ್ಡ ಸ್ವತಂತ್ರ ನಗರವಾಗಿರುವ ಬಾಲ್ಟಿಮೋರ್ ವಿಮಾನ ನಿಲ್ದಾಣದಲ್ಲಿ 8,400 ಕಾರುಗಳನ್ನು ಪಾರ್ಕಿಂಗ್ ಮಾಡಬಹುದು. ಹಾಗಿದ್ದರೆ ಇಷ್ಟು ವಿಸ್ತಾರವಾಗಿ ಹರಡಿರುವ ವಾನಹ ನಿಲುಗಡೆ ಪ್ರದೇಶದಲ್ಲಿ ಖಾಲಿ ಜಾಗ ಕಂಡು ಹಿಡಿಯುವುದು ಹೇಗೆ ? ಇದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದ್ದು, 'ಸ್ಮಾರ್ಟ್ ಪಾರ್ಕ್' ಮುಖಾಂತರ ಚಾಲಕ ಸುಲಭವಾಗಿ ಖಾಲಿ ಜಾಗ ಪತ್ತೆ ಹಚ್ಚಬಹುದಾಗಿದೆ.

08. ಟೊರಂಟೊ ವಿಮಾನ ನಿಲ್ದಾಣ

08. ಟೊರಂಟೊ ವಿಮಾನ ನಿಲ್ದಾಣ

ಕೆನಾಡಾದ ಟೊರಂಟೊ ವಿಮಾನ ನಿಲ್ದಾಣದಲ್ಲಿ 9,000 ಕಾರುಗಳನ್ನು ಹಾಯಾಗಿ ನಿಲ್ಲಿಸಬಹುದಾಗಿದೆ.

07. ಚಿಕಾಗೊ ವಿಮಾನ ನಿಲ್ದಾಣ

07. ಚಿಕಾಗೊ ವಿಮಾನ ನಿಲ್ದಾಣ

ಭಾರತಕ್ಕೆ ಹತ್ತಿರವಾಗಿರುವ ಚಿಕಾಗೊ ವಿಮಾನ ಕೂಡಾ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿ 9,266 ಕಾರುಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ.

06. ಡಿಸ್ನಿ ಲ್ಯಾಂಡ್

06. ಡಿಸ್ನಿ ಲ್ಯಾಂಡ್

ವಿಮಾನ ನಿಲ್ಧಾಣಗಳ ನಡುವ ಮೋಜಿನ ಪಾರ್ಕ್ ಹೇಗೆ ಸ್ಥಾನ ಗಿಟ್ಟಿಸಿಕೊಂಡಿತ್ತು ಎಂಬ ಗೊಂದಲದ್ದೀರಾ? ಹೌದು ಕ್ಯಾಲಿಫೋರ್ನಿಯಾದಲ್ಲಿರುವ ಡಿಸ್ನಿ ಲ್ಯಾಂಡ್ ನಲ್ಲಿ 10,000ಗಳಷ್ಟು ಕಾರು ಪಾರ್ಕಿಂಗ್ ಗೆ ಅನುವು ಮಾಡಿ ಕೊಡಲಾಗಿದೆ.

05. ಯುನಿವರ್ಸಲ್ ಸ್ಟುಡಿಯೋಸ್

05. ಯುನಿವರ್ಸಲ್ ಸ್ಟುಡಿಯೋಸ್

ಅಷ್ಟೇ ಯಾಕೆ ಐದನೇ ಸ್ಥಾನದಲ್ಲಿರುವ ಯುನಿವರ್ಸಲ್ ಸ್ಟುಡಿಯೋಸ್ ನಲ್ಲಿ ಆರಾಮವಾಗಿ 10,200 ಕಾರುಗಳನ್ನು ನಿಲ್ಲಿಸಬಹುದಾಗಿದೆ. ಅಂದ ಹಾಗೆ ಯುನಿವರ್ಸಲ್ ಸ್ಟುಡಿಯೋಸ್ ಫ್ಲೋರಿಡಾದಲ್ಲಿ ಸ್ಥಿತಗೊಂಡಿದೆ.

04. ಡಿಸ್ನಿ ವಲ್ಡ್

04. ಡಿಸ್ನಿ ವಲ್ಡ್

ಇನ್ನು ಫ್ಲೋರಿಡಾದಲ್ಲೇ ಸ್ಥಿತಗೊಂಡಿರುವ ಡಿಸ್ನಿ ವರ್ಲ್ಡ್ ನಲ್ಲಿ 11,000 ಕಾರುಗಳ್ನು ಅನಾಯಾಸವಾಗಿ ಪಾರ್ಕಿಂಗ್ ಮಾಡಬಹುದಾಗಿದೆ.

 03. ಡೆಟ್ರಾಯ್ಟ್ ವಿಮಾನ ನಿಲ್ಧಾಣ

03. ಡೆಟ್ರಾಯ್ಟ್ ವಿಮಾನ ನಿಲ್ಧಾಣ

ಜಗತ್ತಿನ ಅತ್ಯಂತ ಪ್ರಖ್ಯಾತ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಡೆಟ್ರಾಯ್ಟ್ ನಲ್ಲಿ ಬೆವರಿಸಲದೆಯೇ ಏಕ ಕಾಲದಲ್ಲಿ 11,500 ಕಾರುಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ.

02. ಸೀಟ್ಲ್-ಟಕೊಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

02. ಸೀಟ್ಲ್-ಟಕೊಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಉತ್ತರ ಅಮೆರಿಕದಲ್ಲಿ ಅತ್ಯಂತ ದೊಡ್ಡ ವಾಹನ ನಿಲುಗಡೆ ಪ್ರದೇಶವನ್ನು ಹೊಂದಿರುವ ಸೀಟ್ಲ್-ಟಕೋಮಾ (Seattle-Tacoma International Airport) ಅಂತರಾಷ್ಟ್ರೀಯ ವಿಮಾನ ನಿಲ್ಧಾನದಲ್ಲಿ 13,000 ಕಾರುಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ.

01. ಪಶ್ಮಿಮ ಎಡ್ಮಂಟನ್ ಮಾಲ್

01. ಪಶ್ಮಿಮ ಎಡ್ಮಂಟನ್ ಮಾಲ್

ನಂ.1 ಸ್ಥಾನದಲ್ಲಿ ವಿಮಾನ ನಿಲ್ದಾಣವಾಗಲಿ ಅಥವಾ ಯಾವುದೇ ಥೀಮ್ ಪಾರ್ಕ್ ಕಾಣಿಸಿಕೊಂಡಿಲ್ಲ. ಬದಲಾಗಿ ಇದರ ಗೌರವ ಮಾಲ್ ವೊಂದಕ್ಕೆ ಸೇರುತ್ತದೆ. ಕೆನಡಾದ ಅಲ್ಬೆರ್ಟಾದಲ್ಲಿ ಸ್ಥಿತಗೊಂಡಿರುವ ಪಶ್ಮಿಮ ಎಡ್ಮಂಟನ್ ಮಾಲ್ ನಲ್ಲಿ ಬರೋಬ್ಬರಿ 20,000 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದೆ.

Most Read Articles

Kannada
English summary
So, where in the world do they have big parking lots? Here is a list of top 10 biggest parking lots in the world:
Story first published: Tuesday, April 7, 2015, 10:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X