ಐಸೊಲೇಷನ್ ವಾರ್ಡ್‌ಗಳಾಗಿ ಬದಲಾದ ರೈಲು ಬೋಗಿಗಳು
ಕರೋನಾ ವೈರಸ್ ವಿಶ್ವದ ಎಲ್ಲಾ ದೇಶಗಳನ್ನು ಭಾದಿಸಿದೆ. ಕರೋನಾ ವೈರಸ್ ನಿಂದಾಗಿ ಇದುವರೆಗೂ 24,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ಈ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

ದಿನದಿಂದ ದಿನಕ್ಕೆ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಭಾರತದಲ್ಲಿಯೂ ಕರೋನಾ ವೈರಸ್ ವೇಗವಾಗಿ ಹರಡುತ್ತಿದೆ. ಈ ಸಾಂಕ್ರಾಮಿಕ ರೋಗದ ಚಿಕಿತ್ಸೆಗಾಗಿ ಐಸಿಯು ಹಾಗೂ ಐಸೊಲೇಷನ್ ವಾರ್ಡ್‌ಗಳ ಅಗತ್ಯವಿದೆ. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯು ರೈಲು ಬೋಗಿಗಳನ್ನು ಐಸೊಲೇಷನ್ ವಾರ್ಡ್‌ಗಳನ್ನಾಗಿ ಬದಲಿಸಿದೆ.

ರೈಲ್ವೆ ಇಲಾಖೆಯು ಪ್ರತಿ ಬೋಗಿಯನ್ನು ವಾರ್ಡ್‌ಗಳಾಗಿ ಬದಲಿಸಿದೆ. ಬೋಗಿಗಳಲ್ಲಿರುವ ಪ್ರತಿಯೊಂದು ಎಲ್ಲಾ ಸೀಟುಗಳನ್ನು ತೆಗೆದುಹಾಕಲಾಗಿದೆ. ಕೆಳಗಿನ ಸೀಟುಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ಬೋಗಿಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಈ ಬೋಗಿಗಳಲ್ಲಿ ನರ್ಸ್ ಹಾಗೂ ಇತರ ಆರೋಗ್ಯ ಕಾರ್ಯಕರ್ತರಿಗೆ ಸ್ಥಳಗಳನ್ನು ನೀಡಲಾಗಿದೆ. ಜೊತೆಗೆ ಪ್ರತಿ ವಾರ್ಡ್‌ನಲ್ಲಿ ಕರ್ಟೆನ್ ಗಳ ಜೊತೆಗೆ ಭದ್ರತಾ ಸಾಧನಗಳನ್ನು ನೀಡಲಾಗಿದೆ. ಬೋಗಿಗಳಲ್ಲಿರುವ ಸ್ನಾನಗೃಹಗಳನ್ನು ಮಾರ್ಪಡು ಮಾಡಿ, ಐಸೊಲೇಷನ್ ವಾರ್ಡ್‌ಗಳನ್ನಾಗಿ ಬದಲಿಸಲಾಗಿದೆ.

ಐಸೊಲೇಷನ್ ವಾರ್ಡ್‌ಗಳಾಗಿ ಬದಲಾಗಿರುವ ರೈಲಿನ ಚಿತ್ರಗಳು ಇತ್ತೀಚಿಗೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದವು. ರೈಲುಗಳು ಚಾಲನೆಯಲ್ಲಿಲ್ಲದಿದ್ದಾಗ, ಅವುಗಳನ್ನು ಐಸೊಲೇಷನ್ ವಾರ್ಡ್‌ಗಳನ್ನಾಗಿ ಬದಲಿಸಲು ಜನ ಒತ್ತಾಯಿಸಿದ್ದರು.

ಮಾರ್ಚ್ 31ರವರೆಗೆ ದೇಶಾದ್ಯಂತ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆಯು ಘೋಷಿಸಿದೆ. ಈ ಅವಧಿಯನ್ನು ಏಪ್ರಿಲ್ 14ರವರೆಗೆ ವಿಸ್ತರಿಸುವ ಸಾಧ್ಯತೆಗಳಿವೆ.
MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಈಗ ದೇಶದಾದ್ಯಂತ ವಿವಿಧ ರೈಲು ನಿಲ್ದಾಣಗಳಲ್ಲಿ ರೈಲುಗಳು ಚಲಿಸದೇ ನಿಂತಿವೆ. ಆ ರೈಲುಗಳನ್ನು ಸಹ ಈ ರೀತಿ ಬಳಸಬಹುದು. ಬುಕ್ಕಿಂಗ್ ಮಾಡಿರುವ ಜನರು ತಮ್ಮ ರೈಲು ಟಿಕೆಟ್‌ಗಳನ್ನು ರದ್ದುಗೊಳಿಸಬೇಕೆಂದು ಐಆರ್‌ಸಿಟಿಸಿ ಇತ್ತೀಚೆಗೆ ಹೇಳಿತ್ತು.
MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಬುಕ್ಕಿಂಗ್ ಗಳನ್ನು ರದ್ದುಗೊಳಿಸುವ ಜನರಿಗೆ ಸಂಪೂರ್ಣ ಹಣವನ್ನು ವಾಪಸ್ ಮಾಡಲಾಗುವುದು. ಜೊತೆಗೆ ಕೌಂಟರ್‌ಗಳಿಂದ ಖರೀದಿಸಿರುವ ಟಿಕೆಟ್‌ಗಳನ್ನು ಜೂನ್ ವೇಳೆಗೆ ರದ್ದುಗೊಳಿಸಿಕೊಳ್ಳಬಹುದು.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ವಿರುದ್ಧ ಹೋರಾಡಲು ಆಟೋ ಮೊಬೈಲ್ ಕಂಪನಿಗಳು ಸರ್ಕಾರದೊಂದಿಗೆ ಕೈ ಜೋಡಿಸಿವೆ. ಮಹೀಂದ್ರಾ, ಮಾರುತಿ, ಬಜಾಜ್ ಮುಂತಾದ ಕಂಪನಿಗಳು ವೆಂಟಿಲೇಟರ್ ಉತ್ಪಾದನೆಯನ್ನು ಆರಂಭಿಸುವುದಾಗಿ ಹೇಳಿವೆ.


Click it and Unblock the Notifications