'1' ನಂಬರ್ ಪ್ಲೇಟ್ ಗಾಗಿ 33.11 ಕೋಟಿ ತೆತ್ತ ಅತಿ ಬುದ್ಧಿವಂತ!

By Nagaraja

ಇತ್ತೀಚೆಗಿನ ದಿನಗಳಲ್ಲಿ ಫ್ಯಾನ್ಸಿ ನಂಬರ್ ಗಳಿಗೆ ತೀವ್ರ ಬೇಡಿಕೆ ಸೃಷ್ಟಿಯಾಗುತ್ತಿದೆ. ನಿರ್ದಿಷ್ಟ ಸಂಖ್ಯೆ ಬಯಸಿ ಹಲವರ ಮಧ್ಯೆ ಪೈಪೋಟಿಯು ಏರ್ಪಡುತ್ತದೆ. ತಮ್ಮ ಮೆಚ್ಚಿನ ನಂಬರ್ ಗಾಗಿ ಲಕ್ಷಗಟ್ಟಲೆ ರುಪಾಯಿಗಳನ್ನು ಖರ್ಚು ಮಾಡುವ ಶ್ರೀಮಂತರ ಕಥೆಯನ್ನು ನಾವು ಕೇಳಿರುತ್ತೇವೆ.

ಜ್ಯೋತಿಷ್ಯ ಅಥವಾ ಸಂಖ್ಯಾಶಾಸ್ತ್ರದ ಮೊರೆ ಹೋಗುವ ಬಹುತೇಕರು ತಮ್ಮ ಅದೃಷ್ಟ ಸಂಖ್ಯೆಗಾಗಿ ಎಷ್ಟೇ ರುಪಾಯಿಗಳನ್ನು ಬೇಕಾದರೂ ಖರ್ಚು ಮಾಡಲು ತಯಾರಾಗಿರುತ್ತಾರೆ. ಆಧುನಿಕ ಕಾಲದಲ್ಲಿ ಇದು ಒಂಥರ ಕ್ರೇಜ್ ಆಗಿ ಬಿಟ್ಟಿದ್ದು, ಹರಾಜಿನ ಮುಖಾಂತರ ಫ್ಯಾನ್ಸಿ ನಂಬರನ್ನು ನೀಡಲಾಗುತ್ತದೆ. ಇಂತಹದೊಂದು ಸುದ್ದಿಯು ಅರಬ್ ರಾಷ್ಟ್ರದಿಂದ ಬೆಳಕಿಗೆ ಬಂದಿದೆ.

'1' ನಂಬರ್ ಪ್ಲೇಟ್ ಗಾಗಿ 33.11 ಕೋಟಿ ತೆತ್ತ ಅತಿ ಬುದ್ಧಿವಂತ!

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಉದ್ಯಮಿಯಾಗಿರುವ ಅರಿಫ್ ಅಹ್ಮದ್ ಅಲ್ ಝರೌನಿ ಎಂಬವರೇ '1' ಫ್ಯಾನ್ಸಿ ನಂಬರ್ ಪ್ಲೇಟ್ ಗಾಗಿ ಬರೋಬ್ಬರಿ 33 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದ್ದಾರೆ.

'1' ನಂಬರ್ ಪ್ಲೇಟ್ ಗಾಗಿ 33.11 ಕೋಟಿ ತೆತ್ತ ಅತಿ ಬುದ್ಧಿವಂತ!

33 ಕೋಟಿ ರುಪಾಯಿಗಳನ್ನು ಖರ್ಚು ಮಾಡಿರುವ ಇಲ್ಲಿನ ಅರಬ್ ಉದ್ಯಮಿ ಅತಿ ಬುದ್ಧಿಶಾಲಿ ಅಥವಾ ಶುದ್ಧ ಭೂಪ ಎಂದು ಕರೆಯಬೇಕೇ ಎಂಬುದು ನಮ್ಮಲ್ಲಿ ಗೊಂದಲಕ್ಕೀಡು ಮಾಡಿದೆ.

'1' ನಂಬರ್ ಪ್ಲೇಟ್ ಗಾಗಿ 33.11 ಕೋಟಿ ತೆತ್ತ ಅತಿ ಬುದ್ಧಿವಂತ!

'ಯಾವತ್ತೂ ನಂಬರ್ ವನ್ ಎನಿಸಿಕೊಳ್ಳುವುದು ನನ್ನ ಅಭಿಲಾಷೆಯಾಗಿದ್ದು', ಇದಕ್ಕಾಗಿ ನಂಬರ್ 1 ಪ್ಲೇಟ್ ಖರೀದಿಸಿಕೊಂಡಿರುವುದಾಗಿ ಸ್ವತ: ಅರಿಫ್ ಜಂಭ ಕೊಚ್ಚಿಕೊಂಡಿದ್ದಾರೆ.

'1' ನಂಬರ್ ಪ್ಲೇಟ್ ಗಾಗಿ 33.11 ಕೋಟಿ ತೆತ್ತ ಅತಿ ಬುದ್ಧಿವಂತ!

ಇದು ಹರಾಜು ಮೊತ್ತಕ್ಕಿಂತಲೂ 18 ಪಟ್ಟುಗಳಷ್ಟು ಹೆಚ್ಚಾಗಿದೆ. ಹಾಗೆಂದು ಇದು ದಾಖಲೆ ಮೊತ್ತವೇನಲ್ಲ. ಇದಕ್ಕೂ ಮೊದಲು 2008ರಲ್ಲಿ ಉದ್ಯಮಿಯೋರ್ವರು ದಾಖಲೆ ಮೊತ್ತ ನೀಡಿ ಫ್ಯಾನ್ಸಿ ನಂಬರ್ ಖರೀದಿಸಿದ್ದರು.

'1' ನಂಬರ್ ಪ್ಲೇಟ್ ಗಾಗಿ 33.11 ಕೋಟಿ ತೆತ್ತ ಅತಿ ಬುದ್ಧಿವಂತ!

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಇದುವರೆಗೆ ನಡೆದಿರುವ ಹರಾಜುಗಳ ಪೈಕಿ ಮೂರನೇ ಅತಿ ದೊಡ್ಡ ಮೊತ್ತಕ್ಕೆ ಅರಿಫ್ ಖರೀದಿಸಿರುವ ಶಾರ್ಜಾ ನಂಬರ್ ಪ್ಲೇಟ್ ಹರಾಜಾಗಿದೆ.

'1' ನಂಬರ್ ಪ್ಲೇಟ್ ಗಾಗಿ 33.11 ಕೋಟಿ ತೆತ್ತ ಅತಿ ಬುದ್ಧಿವಂತ!

ಇದಲ್ಲದೆ ಇತರೆ ಜನಪ್ರಿಯ ನಂಬರ್ ಗಳಾದ 12, 22, 50, 100, 333, 777, 1000, 2016, 2020 ಮತ್ತು 99999 ನಂಬರ್ ಗಳ ಸಹ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿದೆ.

More from DriveSpark

Article Published On: Tuesday, June 7, 2016, 17:29 [IST]
English summary
UAE Businessman pays 33 crore for Number Plate '1'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+