ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಪ್ರಪಂಚದಲ್ಲಿರುವ ವಾಹನ ತಯಾರಕ ಕಂಪನಿಗಳು ಸೆಮಿ ಕಂಡಕ್ಟರ್ ಗಳ ಕೊರತೆ ಎದುರಿಸುತ್ತಿವೆ. ಸೆಮಿ ಕಂಡಕ್ಟರ್ ಗಳ ಜಾಗತಿಕ ಕೊರತೆಯಿಂದಾಗಿ ಕೆಲವು ವಾಹನ ತಯಾರಕ ಕಂಪನಿಗಳು ತಮ್ಮ ವಾಹನ ಉತ್ಪಾದನೆಯ ಗುರಿಯನ್ನು ಪರಿಷ್ಕರಿಸುವಂತಾಗಿದೆ.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಮುಂಬರುವ ದಿನಗಳಲ್ಲಿ ಸೆಮಿ ಕಂಡಕ್ಟರ್ ಗಳ ಕೊರತೆಯು ಆಟೋ ಮೊಬೈಲ್ ಉದ್ಯಮದಲ್ಲಿ ಭಾರೀ ಬಿಕ್ಕಟ್ಟು ಉಂಟು ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕನಿಷ್ಠ ಪಕ್ಷ ಭಾರತೀಯ ಕಾರು ಹಾಗೂ ದ್ವಿಚಕ್ರ ವಾಹನ ತಯಾರಕ ಕಂಪನಿಗಳಿಗಾಗಿ ಈ ಸಮಸ್ಯೆಗೆ ಪರಿಹಾರವನ್ನು ಕಂಡು ಕೊಳ್ಳಲು ಮುಂದಾಗಿದೆ. ಚಿಪ್ ಕೊರತೆಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಭಾರತದಲ್ಲಿ ಸೆಮಿ ಕಂಡಕ್ಟರ್ ಉತ್ಪಾದನಾ ಘಟಕವನ್ನು ತೆರೆಯಲು ನಿರ್ಧರಿಸಿದೆ.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಈಗ ಬಹುತೇಕ ವಾಹನ ತಯಾರಕ ಕಂಪನಿಗಳು ಸೆಮಿ ಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿವೆ. ಆಟೋ ಮೊಬೈಲ್ ಕಂಪನಿಗಳು ವಾಹನ ಉತ್ಪಾದನೆಗೆ ಆಮದುಮಾಡಿಕೊಳ್ಳುವ ಆಟೋ ಬಿಡಿ ಘಟಕಗಳನ್ನು ಅವಲಂಬಿಸಿರುವುದು ಇದಕ್ಕೆ ಪ್ರಮುಖ ಕಾರಣ. ವಾಹನ ಉತ್ಪಾದನೆಗೆ ಆಮದು ಮಾಡಿ ಕೊಳ್ಳುವ ಆಟೋ ಬಿಡಿ ಭಾಗಗಳನ್ನು ಪಡೆಯಲು ವಿಳಂಬವಾಗುತ್ತಿರುವುದರಿಂದ ಗ್ರಾಹಕರು ಹೊಸ ವಾಹನಗಳ ವಿತರಣೆ ಪಡೆಯಲು ಹೆಚ್ಚು ಅವಧಿ ಕಾಯುವಂತಾಗಿದೆ.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಸ್ಥಳೀಯವಾಗಿ ಸೆಮಿ ಕಂಡಕ್ಟರ್ ಉತ್ಪಾದನಾ ಘಟಕವನ್ನು ತೆರೆಯುವುದರಿಂದ ಚಿಪ್ ಕೊರತೆಯನ್ನು ನೀಗಿಸಲು ಸಹಾಯವಾಗುತ್ತದೆ. ಜೊತೆಗೆ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಲು ಸರ್ಕಾರಕ್ಕೆ ಹಾಗೂ ವಾಹನ ತಯಾರಕ ಕಂಪನಿಗಳಿಗೆ ಸಾಧ್ಯವಾಗುತ್ತದೆ.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಈ ಬಗ್ಗೆ ಮಾತನಾಡಿರುವ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವರಾದ ಪಿಯೂಷ್ ಗೋಯಲ್, ವಿಶ್ವದಾದ್ಯಂತ ಸೆಮಿ ಕಂಡಕ್ಟರ್‌ಗಳಿಗೆ ಕೊರತೆ ಎದುರಾಗಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಸೆಮಿ ಕಂಡಕ್ಟರ್ ಉದ್ಯಮವನ್ನು ಭಾರತದಲ್ಲಿ ತೆರೆಯಲು ಹೆಚ್ಚಿನ ಗಮನ ಹರಿಸಿದೆ. ಈ ಎರಡೂ ಕ್ಷೇತ್ರಗಳನ್ನು ಬೆಂಬಲಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ ಎಂದು ಹೇಳಿದರು.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಪಿಯೂಷ್ ಗೋಯಲ್ ರವರ ಹೇಳಿಕೆಯು ಜಾಗತಿಕ ಚಿಪ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಟಾಟಾ ಗ್ರೂಪ್ ಸೆಮಿ ಕಂಡಕ್ಟರ್ ವಿಭಾಗವನ್ನು ಪ್ರವೇಶಿಸಲು ನೋಡುತ್ತಿರುವುದಾಗಿ ಹೇಳಿದ ಕೆಲವು ದಿನಗಳ ನಂತರ ಬಂದಿದೆ. ಸೆಮಿಕಂಡಕ್ಟರ್ ಉದ್ಯಮದಲ್ಲಿ ನಿರ್ಣಾಯಕ ಘಟಕಗಳನ್ನು ಉತ್ಪಾದಿಸಲು ಟಾಟಾ ಗ್ರೂಪ್ ನಿರ್ಧರಿಸಿದೆ.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಭಾರತದ ಪ್ರಮುಖ ಪ್ರಯಾಣಿಕ ಹಾಗೂ ವಾಣಿಜ್ಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಇತ್ತೀಚೆಗೆ ಚಿಪ್ ಕೊರತೆಯ ಬಿಕ್ಕಟ್ಟನ್ನು ಪರಿಹರಿಸುವ ತನ್ನ ಯೋಜನೆಯನ್ನು ಬಹಿರಂಗಪಡಿಸಿದೆ. ಈ ಯೋಜನೆಯು ಟಾಟಾ ಮೋಟಾರ್ಸ್ ಕಂಪನಿಯ ಉತ್ಪನ್ನ ಸಂರಚನೆಯನ್ನು ಬದಲಾಯಿಸುವುದು ಹಾಗೂ ಸ್ಟಾಕ್‌ಗಳಿಂದ ನೇರವಾಗಿ ಚಿಪ್‌ಗಳನ್ನು ಖರೀದಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಹೊಂದಿದೆ.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಪೂರೈಕೆಯು ಹೆಚ್ಚು ಪರಿಣಾಮ ಬೀರುವ ಘಟಕಗಳಲ್ಲಿ ವಿವಿಧ ರೀತಿಯ ಚಿಪ್‌ಗಳನ್ನು ಪೂರೈಸುವುದು ಇದರಲ್ಲಿ ಸೇರಿದೆ. ಸಚಿವ ಪಿಯೂಷ್ ಗೋಯಲ್ ರವರು ಸೆಮಿಕಂಡಕ್ಟರ್ ಉದ್ಯಮವನ್ನು ರಚಿಸುವುದು, ಹಡಗು ಉದ್ಯಮವನ್ನು ಬಲಪಡಿಸುವುದು ಸರ್ಕಾರದ ಆತ್ಮನಿರ್ಭರ್ ಅಥವಾ ಸ್ವಾವಲಂಬನೆ ಯೋಜನೆಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಹಡಗು ಉದ್ಯಮದಲ್ಲಿ ದೊಡ್ಡ ದೊಡ್ಡ ಕಾರ್ಪೊರೇಟ್‌ ಕಂಪನಿಗಳು ಆಸಕ್ತಿ ವಹಿಸಲಿವೆ ಎಂದು ಅವರು ಆಶಿಸಿದ್ದಾರೆ. ಇದು ದೇಶದ ವಿದೇಶಿ ವ್ಯಾಪಾರಕ್ಕೆ ಪ್ರಮುಖವಾದ ವಲಯಕ್ಕೆ ಸರಿಯಾದ ಪ್ರಚೋದನೆಯನ್ನು ನೀಡುತ್ತದೆ. ಜಾಗತಿಕ ಸಮಸ್ಯೆಗಳಿಂದಾಗಿ ರಫ್ತು- ಆಮದು ವ್ಯಾಪಾರವು ಕಂಟೇನರ್ ಮುಂಭಾಗದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನು ಪಿಯೂಷ್ ಗೋಯಲ್ ಒಪ್ಪಿಕೊಂಡರು.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಸರ್ಕಾರವು ಹೊಸ ಕಂಟೇನರ್‌ಗಳ ತಯಾರಿಕೆಯಲ್ಲಿ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತದೆ ಹಾಗೂ ಸರ್ಕಾರಿ ಸ್ವಾಮ್ಯದ ಕಂಪನಿಗಳು ಅದಕ್ಕಾಗಿ ಒಂದು ನೀತಿಯನ್ನು ರೂಪಿಸುತ್ತವೆ ಎಂದು ಪಿಯೂಷ್ ಗೋಯಲ್ ಭರವಸೆ ನೀಡಿದರು.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಕರೋನಾ ವೈರಸ್ ಕಾರಣಕ್ಕೆ ಬಹುತೇಕ ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ನೀಡಿವೆ. ಜೊತೆಗೆ ಶಾಲಾ ಕಾಲೇಜುಗಳು ಸಹ ಆನ್ ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ. ಈ ಕಾರಣದಿಂದಾಗಿ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದು ಸಹಜವಾಗಿಯೇ ಸೆಮಿ ಕಂಡಕ್ಟರ್ ಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಇದು ಮಾತ್ರವಲ್ಲದೇ ಕೋವಿಡ್ 19 ಹರಡಬಹುದು ಎಂಬ ಕಾರಣಕ್ಕೆ ಬಹುತೇಕ ಎಲ್ಲಾ ಉತ್ಪಾದನಾ ಘಟಕಗಳ ರೀತಿಯಲ್ಲಿಯೇ ಸೆಮಿ ಕಂಡಕ್ಟರ್ ಉತ್ಪಾದನಾ ಘಟಕಗಳನ್ನು ಸಹ ಮುಚ್ಚಲಾಗಿತ್ತು. ಇದರಿಂದ ಬೇಡಿಕೆಗೆ ತಕ್ಕಂತೆ ಸೆಮಿ ಕಂಡಕ್ಟರ್ ಗಳನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ. ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಬಹುತೇಕ ದ್ವಿ ಚಕ್ರ ವಾಹನ ಹಾಗೂ ಕಾರುಗಳಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೀಡಲಾಗುತ್ತದೆ.

ಸೆಮಿ ಕಂಡಕ್ಟರ್‌ಗಳ ಕೊರತೆ ನೀಗಿಸಲು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಇವುಗಳ ತಯಾರಿಕೆಗೆ ಸೆಮಿ ಕಂಡಕ್ಟರ್ ಗಳ ಅಗತ್ಯವಿದೆ. ಸಕಾಲಕ್ಕೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಸೆಮಿ ಕಂಡಕ್ಟರ್ ಗಳ ಪೂರೈಕೆಯಾಗದ ಕಾರಣ ವಾಹನಗಳ ಉತ್ಪಾದನೆಯಲ್ಲಿ ವಿಳಂಬವಾಗುತ್ತಿದೆ. ಇದರಿಂದ ವಾಹನಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರು ವಿತರಣೆಯನ್ನು ಪಡೆಯಲು ಹಲವಾರು ತಿಂಗಳುಗಳ ಕಾಲ ಕಾಯುವಂತಾಗಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Union government to set up semi conductor plant in india details
Story first published: Saturday, August 21, 2021, 18:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X