ಕರೋನಾ ವೈರಸ್‌ ಭೀತಿ: ಗಗನಕ್ಕೇರಿದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ

ಕರೋನಾ ವೈರಸ್ ಹರಡ ಬಹುದೆಂಬ ಭೀತಿಯಿಂದ ಜನರು ಬಸ್, ಆಟೋ, ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕೆ ಬಹುತೇಕ ಬಸ್ಸುಗಳು ಖಾಲಿಯಾಗಿವೆ. ಪ್ರಯಾಣಿಕರಿಲ್ಲದ ಹಿನ್ನೆಲೆಯಲ್ಲಿ ಬಸ್ಸುಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.

ಕರೋನಾ ವೈರಸ್‌ ಭೀತಿ: ಗಗನಕ್ಕೇರಿದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ

ಸಾಕಷ್ಟು ಸಂಖ್ಯೆಯ ಗ್ರಾಹಕರು ಬಾರದ ಕಾರಣಕ್ಕೆ ಆಟೋ, ಟ್ಯಾಕ್ಸಿ ಚಾಲಕರು ಸಹ ಆದಾಯವಿಲ್ಲದೇ ಪರದಾಡುತ್ತಿದ್ದಾರೆ. ಕೆಲ ಆಟೋ, ಟ್ಯಾಕ್ಸಿ ಚಾಲಕರು ಆದಾಯವಿಲ್ಲದ ಕಾರಣಕ್ಕೆ ಬೇರೆ ವೃತ್ತಿಗಳತ್ತ ಮುಖ ಮಾಡಿದ್ದಾರೆ. ಕರೋನಾ ವೈರಸ್ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಮಾತ್ರವಲ್ಲದೇ ವಾಹನಗಳ ಮಾರಾಟದ ಮೇಲೂ ತೀವ್ರ ಪರಿಣಾಮ ಬೀರಿದೆ.

ಕರೋನಾ ವೈರಸ್‌ ಭೀತಿ: ಗಗನಕ್ಕೇರಿದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ

ಕರೋನಾ ವೈರಸ್‌ ಭೀತಿಯಿಂದಾಗಿ ಜನರು ಸಾರ್ವಜನಿಕ ಸಾರಿಗೆಗೆ ಬದಲು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸುತ್ತಿರುವುದು ಹೆಚ್ಚಿದೆ. ಇದರಿಂದಾಗಿ ವಾಹನಗಳ ಮಾರಾಟವು ಹೆಚ್ಚಾಗಿದೆ. ಆದರೆ ಕರೋನಾದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಅನೇಕ ಜನರಿಗೆ ಹೊಸ ವಾಹನ ಖರೀದಿಸಲು ಸಾಧ್ಯವಾಗುತ್ತಿಲ್ಲ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕರೋನಾ ವೈರಸ್‌ ಭೀತಿ: ಗಗನಕ್ಕೇರಿದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ

ಈ ಕಾರಣಕ್ಕೆ ಬಹುತೇಕ ಜನರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಿದ್ದಾರೆ. ಕರೋನಾ ವೈರಸ್ ಹರಡುವುದಕ್ಕೆ ಮುನ್ನ ಹೊಸ ಕಾರು ಖರೀದಿಸಲು ನಿರ್ಧರಿಸಿದ್ದ ಜನರು ಈಗ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಸದ್ಯಕ್ಕೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟವು ಗಗನಕ್ಕೇರಿದೆ. ಅದರಲ್ಲೂ ಈ ಪ್ರಮಾಣವು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಹೆಚ್ಚಾಗಿದೆ.

ಕರೋನಾ ವೈರಸ್‌ ಭೀತಿ: ಗಗನಕ್ಕೇರಿದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ

ಜನರು ಕಡಿಮೆ ಬೆಲೆಗೆ ಲಭ್ಯವಿರುವ ಸಣ್ಣ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಸಾರ್ವಜನಿಕ ಸಾರಿಗೆ ಬಳಸಿದರೆ ಕರೋನಾ ವೈರಸ್ ಹರಡ ಬಹುದೆಂಬ ಸಾರ್ವಜನಿಕರ ಆತಂಕವು ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟವು ಹೆಚ್ಚಾಗುವಂತೆ ಮಾಡಿದೆ ಎಂದು ಕಾರು ಡೀಲರ್ ಗಳು ಹೇಳಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕರೋನಾ ವೈರಸ್‌ ಭೀತಿ: ಗಗನಕ್ಕೇರಿದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ

ಕಳೆದ ಎರಡೂವರೆ ತಿಂಗಳುಗಳಿಂದ ಉಪಯೋಗಿಸಿದ ಕಾರುಗಳ ಮಾರಾಟವು ಹೆಚ್ಚಾಗಿದೆ ಎಂದು ಅನೇಕ ಕಾರು ವಿತರಕರು ಹೇಳಿದ್ದಾರೆ. ಪ್ರಯಾಗರಾಜ್‌ನಲ್ಲಿ ಉಪಯೋಗಿಸಿದ ಕಾರುಗಳ ಮಾರಾಟವು 30%ನಿಂದ 40%ನಷ್ಟು ಹೆಚ್ಚಾಗಿದೆ ಎಂದು ಪ್ರಯಾಗರಾಜ್ ಆಟೋಮೊಬೈಲ್ ಅಸೋಸಿಯೇಶನ್ ಅಧ್ಯಕ್ಷ ಸುಶೀಲ್ ಕರ್ಬಂಡಾ ಹೇಳಿದ್ದಾರೆ.

ಕರೋನಾ ವೈರಸ್‌ ಭೀತಿ: ಗಗನಕ್ಕೇರಿದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ

ಕರೋನಾ ವೈರಸ್‌ ಹರಡಬಹುದೆಂಬ ಭಯದಿಂದಾಗಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಜನರು ಹಿಂಜರಿಯುತ್ತಿರುವುದರಿಂದ ಸಣ್ಣ ಹಾಗೂ ಕೈಗೆಟುಕುವ ಬೆಲೆಯ ಕಾರುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕರೋನಾ ವೈರಸ್‌ ಭೀತಿ: ಗಗನಕ್ಕೇರಿದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ

ಅನೇಕ ಜನರು ಈಗ ಸಣ್ಣ ಕಾರುಗಳನ್ನು ಖರೀದಿಸುತ್ತಿದ್ದಾರೆ. ಮಾರಾಟವಾದ ಕಾರುಗಳಲ್ಲಿ40%ನಷ್ಟು ಕಾರುಗಳು ರೂ.2 ಲಕ್ಷದಿಂದ ರೂ.5 ಲಕ್ಷ ಬೆಲೆಯನ್ನು ಹೊಂದಿವೆ ಎಂದು ಅವರು ಹೇಳಿದರು. ಪ್ರಯಾಗರಾಜ್‌ ಮಾತ್ರವಲ್ಲದೇ ಬೆಂಗಳೂರು, ಹೈದರಾಬಾದ್, ಮುಂಬೈ, ಪುಣೆ, ದೆಹಲಿಯಂತಹ ನಗರಗಳಲ್ಲೂ ಕಳೆದ ಮೂರು ತಿಂಗಳಿನಿಂದ ಉಪಯೋಗಿಸಿದ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಕರೋನಾ ವೈರಸ್‌ ಭೀತಿ: ಗಗನಕ್ಕೇರಿದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ

ಈ ಬಗ್ಗೆ ಮಾತನಾಡಿರುವ ದೆಹಲಿಯ ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯಾಪಾರಿಯೊಬ್ಬರು ಮೊದಲ ಬಾರಿಗೆ ಕಾರು ಖರೀದಿಸುತ್ತಿರುವವರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಬಸ್ಸು ಹಾಗೂ ಟ್ಯಾಕ್ಸಿಗಳನ್ನು ಅವಲಂಬಿಸಿದ್ದರು. ಈಗ ಉಪಯೋಗಿಸಿದ ಕಾರುಗಳನ್ನು ಖರೀದಿಸುತ್ತಿದ್ದಾರೆ ಎಂದು ಹೇಳಿದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕರೋನಾ ವೈರಸ್‌ ಭೀತಿ: ಗಗನಕ್ಕೇರಿದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ

ರೂ.2 ಲಕ್ಷದಿಂದ ರೂ.5 ಲಕ್ಷಗಳ ಬೆಲೆಯ ಕಾರನ್ನು ಖರೀದಿಸುವುದು ಅವರ ಆಯ್ಕೆಯಾಗಿದೆ. ಪ್ರತಿ ದಿನ 5 - 7 ಜನರು ಉಪಯೋಗಿಸಿದ ಕಾರುಗಳ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಈಗಾಗಲೇ ಕಾರುಗಳನ್ನು ಹೊಂದಿರುವವರು ಸಹ ತಮ್ಮ ಕುಟುಂಬ ಸದಸ್ಯರಿಗಾಗಿ ಪ್ರತ್ಯೇಕವಾಗಿ ಉಪಯೋಗಿಸಿದ ಕಾರುಗಳನ್ನು ಖರೀದಿಸುತ್ತಿದ್ದಾರೆಂದು ಹೇಳಲಾಗಿದೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Used cars gets more demand in Indian cities. Read in Kannada.
Story first published: Saturday, September 12, 2020, 11:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X