Vande Bharat: ವಂದೇ ಭಾರತ್ ಸ್ಲೀಪರ್ ಹೀಗಿದೆ ನೋಡಿ... ಅಂತರಾಷ್ಟ್ರೀಯ ಮಟ್ಟದ ಇಂಟೀರಿಯರ್!

Vande Bharat ರೈಲುಗಳು ಭಾರತದಲ್ಲಿ ಯಶಸ್ವಿಯಾಗಿವೆ, ಈಗ ಭಾರತೀಯ ರೈಲ್ವೆಯು ಸ್ಲೀಪರ್ ಕೋಚ್‌ಗಳ ಮೇಲೆ ಕೆಲಸ ಮಾಡುತ್ತಿದೆ. ಸದ್ಯ ಭಾರತದಲ್ಲಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಹೆಸರು ಮಾಡಿರುವ ರಾಜಧಾನಿ ಎಕ್ಸ್‌ಪ್ರೆಸ್ ಹಾಗೂ ತೇಜಸ್ ಎಕ್ಸ್‌ಪ್ರೆಸ್‌ ರೈಲುಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳ್ಳಲಿವೆ. ರಾತ್ರಿ ಪ್ರಯಾಣಕ್ಕಾಗಿ ಪ್ರೀಮಿಯಂ ಸೇವೆ ಒದಗಿಸಲು ಇವುಗಳನ್ನು ನಿರ್ಮಿಸಲಾಗುತ್ತಿದೆ.

ಸದ್ಯ ಈ ಸ್ಲೀಪರ್ ಕೋಚ್‌ಗಳ ಮೂಲ ಮಾದರಿಯನ್ನು BEML ತೈಯಾರಿಸುತ್ತಿದ್ದು, ಶೀಘ್ರದಲ್ಲೇ ಪ್ರಾಯೋಗಿಕವಾಗಿ ಹೊರತರುವ ಸಾಧ್ಯತೆ ಇದೆ. ಲಭ್ಯವಿರುವ ಮೂಲಗಳ ಪ್ರಕಾರ ಹೊಸ ವಂದೇ ಭಾರತ್ ಸ್ಲೀಪರ್ ಕೋಚ್ ವಿನ್ಯಾಸ, ವೈಶಿಷ್ಟ್ಯಗಳು, ಬಾಹ್ಯ ವಿನ್ಯಾಸ ಹಾಗೂ ರೈಲಿನೊಳಗೆ ಏನೆಲ್ಲಾ ಸೌಲಭ್ಯಗಳು ಸಿಗಬಹುದು ಎಂಬುದರ ಬಗ್ಗೆ ಒಂದು ನೋಟ ಇಲ್ಲಿದೆ. (ಕಾನ್ಸೆಪ್ಟ್ ಚಿತ್ರ)

vande-bharat-sleeper-train-interior-design-features-details

ಹೊಸ ರೈಲು ವಂದೇ ಭಾರತ್ ಚೇರ್ ಕಾರ್ ರೈಲುಗಳಂತೆಯೇ ಬೋಗಿಗಳ ನಡುವೆ ಸುಗಮ ಸಂಚಾರ, ಉತ್ತಮ ಹವಾನಿಯಂತ್ರಣ ಮತ್ತು ಧೂಳು ಮುಕ್ತ ವಾತಾವರಣಕ್ಕಾಗಿ ಸಂಪೂರ್ಣವಾಗಿ ಮುಚ್ಚಿದ ಗ್ಯಾಂಗ್ವೇಗಳನ್ನು ಹೊಂದಿರುತ್ತವೆ. ಗಂಟೆಗೆ 160 ಕಿ.ಮೀ ವೇಗದಲ್ಲಿ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಮೂಲಮಾದರಿಯನ್ನು ಗಂಟೆಗೆ 180 ಕಿ.ಮೀ ವೇಗದಲ್ಲಿ ಪರೀಕ್ಷಿಸಲಾಗುವುದು.

ವಂದೇ ಭಾರತ್ ವಿನ್ಯಾಸ: ಹೊಸ ವಂದೇ ಭಾರತ್ ಸ್ಲೀಪರ್ ರೈಲಿನ ಮುಂಭಾಗವು ಏರೋಡೈನಮಿಕ್ ವಿನ್ಯಾಸದೊಂದಿಗೆ ಚೂಪಾದ ಮುಂಭಾಗವನ್ನು ಹೊಂದಿದೆ. ಹದ್ದಿನ ಪರಾಕ್ರಮದಿಂದ ಸ್ಪೂರ್ತಿ ಪಡೆದು ವಿನ್ಯಾಸಗೊಳಿಸಲಾಗಿದ್ದು, ಮಸ್ಕುಲರ್ ಡಿಸೈನ್‌ನೊಂದಿಗೆ ಹೆಚ್ಚಿನ ರಗಡ್ ಲುಕ್ ಅನ್ನು ಪಡೆದುಕೊಂಡಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ವಿಶೇಷವಾಗಿ ವರದಿ ಮಾಡಲಾಗಿದೆ. (ಕಾನ್ಸೆಪ್ಟ್ ಚಿತ್ರ)

vande-bharat-sleeper-train-interior-design-features-details

ಹೇಗಿರಲಿದೆ ಇಂಟೀರಿಯರ್: 16 ಬೋಗಿಗಳನ್ನು ಒಳಗೊಂಡಿರಲಿರುವ ವಂದೇ ಭಾರತ್ ಸ್ಲೀಪರ್ ಮೂಲಮಾದರಿಯು, ಒಂದು ಎಸಿ 1ನೇ ಬೋಗಿ, 4 ಎಸಿ 2 ಟೈರ್ ಬೋಗಿಗಳು, 11 ಎಸಿ 3 ಟೈರ್ ಬೋಗಿಗಳನ್ನು ಹೊಂದಿರುತ್ತದೆ. ಈ ರೈಲು ಒಟ್ಟು 823 ಪ್ರಯಾಣಿಕರನ್ನು ಸಾಗಿಸಲು ಅನುಕೂಲವಾಗುವಂತೆ ಆಸನಗಳು/ಬೆರ್ತ್ ಸಾಮರ್ಥ್ಯವನ್ನು ಹೊಂದಿರುತ್ತದೆ. (ಕಾನ್ಸೆಪ್ಟ್ ಚಿತ್ರ)

ಎಸಿ 3 ಶ್ರೇಣಿಯಲ್ಲಿ 611 ಬೆರ್ತ್ಗಳು, ಎಸಿ 2 ಶ್ರೇಣಿಯಲ್ಲಿ 188 ಬೆರ್ತ್‌ಗಳು ಮತ್ತು ಎಸಿ 1ನೇ ಶ್ರೇಣಿಯಲ್ಲಿ 24 ಬೆರ್ತ್‌ಗಳು ಇರಲಿವೆ. ಇನ್ನು ವಂದೇ ಭಾರತ್ ಸ್ಲೀಪರ್ ಎಸಿ 3 ಟೈರ್ ಕೋಚ್‌ನಲ್ಲಿ, ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳಿಗಿಂತಲೂ ಉತ್ತಮವಾದ ಕುಶನ್ ಒದಗಿಸಲು ನೋಡುತ್ತಿದೆ. ಹಾಗಾಗಿ ಪ್ರತಿ ಬೆರ್ತ್‌ನ ಬದಿಯಲ್ಲಿ ಹೆಚ್ಚುವರಿ ಕುಶನ್ ಒದಗಿಸಲಿದೆ.

vande-bharat-sleeper-train-interior-design-features-details

ವೈಶಿಷ್ಟ್ಯಗಳು: ವಂದೇ ಭಾರತ್ ಸ್ಲೀಪರ್ ರೈಲು ಸೆನ್ಸಾರ್‌ಗಳನ್ನು ಒಳಗೊಂಡಿರುವ ಅಂತರ ಸಂವಹನ ಬಾಗಿಲುಗಳು, ವಿಶೇಷ ಬೆರ್ತ್‌ಗಳು ಮತ್ತು ವಿಕಲಚೇತನರಿಗೆ ಶೌಚಾಲಯಗಳು, ಸೈಲೆಂಟ್ ಸಲೂನ್ ಸ್ಥಳಕ್ಕಾಗಿ ಸೌಂಡ್ ಇನ್ಸುಲೇಷನ್ ಮತ್ತು ತಗ್ಗಿಸುವ ಕ್ರಮಗಳು, ಸ್ವಯಂಚಾಲಿತ ಬಾಹ್ಯ ಪ್ರಯಾಣಿಕರ ಬಾಗಿಲುಗಳು ಸೇರಿದಂತೆ ಇತರ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. (ಕಾನ್ಸೆಪ್ಟ್ ಚಿತ್ರ)

ಶೌಚಾಲಯ: ವಿಮಾನ ಶೈಲಿಯ ಜೈವಿಕ ನಿರ್ವಾತ (Biological vacuum) ಶೌಚಾಲಯವು ಮಾಡ್ಯುಲರ್ ಫಿಟ್ಟಿಂಗ್‌ಗಳನ್ನು ಹೊಂದಿರುತ್ತದೆ. ವಾಶ್ ಬೇಸಿನ್‌ಗಳನ್ನು ಸೋರಿಕೆ ವಿರೋಧಿ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗುತ್ತಿದೆ. 1ನೇ ಎಸಿ ಕಾರ್‌ನಲ್ಲಿ ಬಿಸಿ ನೀರಿನ ಶವರ್ ಸೌಲಭ್ಯವಿರುತ್ತದೆ. ಒಟ್ಟಾರೆ ಈ ರೈಲು ದುರ್ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆಯನ್ನು ಹೊಂದಿರುತ್ತದೆ. (ಕಾನ್ಸೆಪ್ಟ್ ಚಿತ್ರ)

vande-bharat-sleeper-train-interior-design-features-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: TOI
Link: https://timesofindia.indiatimes.com/business/india-business/vande-bharat-sleeper-exclusive-what-will-indian-railways-new-train-ac-3-tier-ac-2-first-ac-coaches-look-like-sneak-peek-first-look-of-exterior/photostory/108595047.cms?picid=108595324

More from DriveSpark

Article Published On: Thursday, March 21, 2024, 11:54 [IST]
English summary
Vande bharat sleeper train interior design features details
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+