ನಿಮ್ಮ ಕಾರಿನ ವಾಸ್ತು ಶಾಸ್ತ್ರ ಸರಿಯಿದೆಯೇ? ಕಾರು ನಿಲುಗಡೆ ಎತ್ತ?
ವಾಸ್ತುಶಾಸ್ತ್ರವು ಪ್ರಮುಖವಾದ ಹಿಂದೂ ನಿರ್ಮಾಣ ವಿಧಾನವಾಗಿದೆ. ಇದನ್ನು ದೇವಸ್ಥಾನ ಹಾಗೂ ಮನುಷ್ಯಾಲಯ ನಿರ್ಮಾಣದಲ್ಲಿ ಬಹಳವಾಗಿ ಬಳಸಲಾಗುತ್ತದೆ. ಇನ್ನು ವಾಹನ, ಆಸನ ಇತ್ಯಾದಿಗಳ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಪಾರಂಪರಿಕವಾಗಿ ಆಗಮ ಶಾಸ್ತ್ರ ಕೇಂದ್ರಿತವಾಗಿಯೇ ವಾಸ್ತು ಬೆಳೆದು ಬಂದಿದೆ.

ಕಾರು ನಿಲುಗಡೆಗಾಗಿ ವಾಸ್ತು ಶಾಸ್ತ್ರ...
ವಿದ್ಯಾರ್ಥಿಯೊಬ್ಬ ನಾಲ್ಕನೇ ಒಂದರಷ್ಟನ್ನು ಶಿಕ್ಷಕರಿಂದ, ಮಗದೊಂದು ನಾಲ್ಕನೇ ಒಂದರಷ್ಟನ್ನು ಸ್ವಂತ ಬುದ್ಧಿವಂತಿಕೆಯಿಂದ, ಇನ್ನೊಂದು ನಾಲ್ಕನೇ ಒಂದಷ್ಟು ಅಂಶವನ್ನು ಸಮಯ ಕಳೆದಂತೆ ಹಾಗೂ ಕೊನೆಯ ನಾಲ್ಕನೇ ಒಂದಷ್ಟನ್ನು ತನ್ನ ಸಹಪಾಠಿಗಳಿಂದ ಕಲಿತುಕೊಳ್ಳುತ್ತಾನೆ.

ಜ್ಯೋತಿಶಾಸ್ತ್ರದ ಪ್ರಕಾರ, ಜಾತಕದ ನಾಲ್ಕನೇ ಮನೆಯು ನಿಮ್ಮ ನಿವಾಸ, ವಾಸಿಸುವ ಪ್ರದೇಶ ಮತ್ತು ವಾಹನಗಳನ್ನು ಪ್ರತಿನಿಧಿಸುತ್ತದೆ. ವಾಹನಗಳ ದೀರ್ಘಾಯುಷ್ಯಕ್ಕಾಗಿ ವಾಹನಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ಜಾಗದಲ್ಲಿ ಪಾರ್ಕ್ ಮಾಡಬೇಕು.

ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಕಾರು ಗ್ಯಾರೇಜ್ ನಿರ್ಮಿಸಿದರೆ ಹೆಚ್ಚು ಸೂಕ್ತವೆನಿಸುವುದು. ಈ ಪೈಕಿ ವಾಯುವ್ಯ ದಿಕ್ಕಿನಲ್ಲಿ ಕಾರು ನಿಲುಗಡೆಗೊಳಿಸುವುದು ಅತ್ಯುತ್ತಮ.

ಕಾಲು ಪಾರ್ಕಿಂಗ್ ಜಾಗವನ್ನು ವಾಸ್ತು ಶಾಸ್ತ್ರ ನಿಯಂತ್ರಿಸುವುದರಿಂದ ಈ ಎರಡು ಸ್ಥಳಗಳನ್ನು ಆರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಲಿಮೊಸಿನ್ ಗಳಂತಹ ಉದ್ದವಾದ ವಾಹನಗಳನ್ನು ಹೆಚ್ಚಾಗಿ ದೈನಂದಿನ ಬಳಕೆಗೆ ಬಳಸಲಾಗುತ್ತಿಲ್ಲ. ಹಾಗಾಗಿ ಇಂತಹ ಕಾರುಗಳ್ನು ನೈಋತ್ಯ ದಿಕ್ಕಿನಲ್ಲಿ ನಿಲುಗಡೆಗೊಳಿಸುವುದು ಉತ್ತಮ.

ಕೆಲವರು ಐಷಾರಾಮಿ ಕಾರುಗಳಲ್ಲಿ ಜಾಲಿ ರೈಡ್ ಹೊಡೆಯುವುದನ್ನು ಇಷ್ಟಪಡುವುದಾದ್ದಲ್ಲಿ ಇನ್ನು ಕೆಲವು ಗ್ಯಾರೇಜ್ ನಲ್ಲೇ ಇಟ್ಟುಕೊಳ್ಳಲು ಬಯಸುತ್ತಾರೆ. ಹಾಗೊಂದು ವೇಳೆ ಕಾರು ಗ್ಯಾರೇಜ್ ವಾಯುವ್ಯ ಪಶ್ಚಿಮ ದಿಕ್ಕಿನಲ್ಲಿದ್ದರೆ ಹೆಚ್ಚು ಪ್ರವಾಸ ಕೈಗೊಳ್ಳುವ ಅದೃಷ್ಟವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಾರು ಗ್ಯಾರೇಜ್ ನಲ್ಲಿರುವ ಸಾಧ್ಯತೆ ವಿರಳವಾಗಿರುತ್ತದೆ.

ಆಗ್ನೇಯ ದಿಕ್ಕಿನಲ್ಲಿ ನಿಲುಗಡೆಗೊಳಿಸಿದ ಕಾರಿಗೆ ಸಣ್ಣ ಪುಟ್ಟ ದುರಸ್ತಿ ಕೆಲಸಗಳು ಎದುರಾಗಬಹುದು. ಗ್ಯಾರೇಜ್ ಮಹಡಿಯ ಮಟ್ಟವು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಳಿಜಾರಿನಂತಿರಬೇಕು. ಕಾರು ಶೆಡ್ ಗಳು ಪ್ರಮುಖ ಕಟ್ಟಡ ಅಥವಾ ಸಂಯುಕ್ತ ಗೋಡೆಯನ್ನು ತಾಗಿಕೊಂಡಿರಬಾರದು.

ಗ್ಯಾರೇಜ್ ಸುತ್ತಲೂ ಕನಿಷ್ಠ ಎರಡರಿಂದ ಮೂರಡಿ ಪ್ರದೇಶವಿರಬೇಕು. ಓರ್ವ ವ್ಯಕ್ತಿಗೆ ಯಾವುದೇ ಅಡಚಣೆಯಿಲ್ಲದೆ ಸುತ್ತಲೂ ಸಾಧ್ಯವಾಗಬೇಕು. ಈ ಅಂತರವು ಗ್ಯಾರೇಜ್ ಆವರಣ ಸುತ್ತಲೂ ಬೆಳಕು ಹಾಗೂ ಗಾಳಿ ಪ್ರವಹಿಸುವುದನ್ನು ಖಚಿತಪಡಿಸಲಿದೆ.

ನೇರವಾಗಿ ಈಶಾನ್ಯಕ್ಕೆ ಕಾರನ್ನು ಯಾವತ್ತೂ ಪಾರ್ಕ್ ಮಾಡದಿರಿ. ಯಾಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕು ಸ್ವರ್ಗಕ್ಕೆ ನೇರ ಹಾದಿಯಾಗಿರುತ್ತದೆ. ಇಂತಹ ಶಕ್ತಿಗಳಿಗೆ ಈಶಾನ್ಯ ದಿಕ್ಕಿನಲ್ಲಿರುವ ಗಾರು ಗ್ಯಾರೇಜ್ ತಡೆಯೊಡ್ಡಲಿದೆ.

ಬೇಸ್ ಮೆಂಟ್ ಪ್ರದೇಶದಲ್ಲಿ ಮಾತ್ರ ಈಶಾನ್ಯ ದಿಕ್ಕಿನತ್ತ ವಾಹನ ನಿಲುಗಡೆಗೊಳಿಸಿದೆ ಯಾವುದೇ ಅಭ್ಯಂತರವಿಲ್ಲ.

ನೈಋತ್ಯ ದಿಕ್ಕು ಪೂರ್ಣವಾಗಿಯೂ ತಮಸ್ಸು ಶಕ್ತಿಯಿಂದ ಆವರಿಸ್ಪಟ್ಟಿರುತ್ತದೆ. ಈ ದಿಕ್ಕಿನಿಂದ ಕಾರು ಹೊರಬರಲು ಸಾಧ್ಯವಿಲ್ಲ. ಸಮಯ ಕಳೆದಂತೆ ಕಾರಿನ ಘಟಕಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ.

ಪೂರ್ವ ಅಥವಾ ಉತ್ತರ ದಿಕ್ಕಿನತ್ತ ಮುಖಾ ಮಾಡಿ ಕಾರು ಮಾಡಿಡಿ. ಇವೆರಡೂ ಅತ್ಯುತ್ತಮ ದಿಕ್ಕಿಗಳಾಗಿರುತ್ತದೆ. ಇದರಿಂದ ಕಾರಿನ ಎಂಜಿನ್ ಗೆ ಯಾವುದೇ ತೊಂದರೆ ಎದುರಾಗದು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳಿಂದ ಬರುವ ಕಿರಣಗಳು ಕಾರಿಗೆ ದೋಷವನ್ನುಂಟು ಮಾಡಬಲ್ಲದು.

ಕಾರು ಗ್ಯಾರೇಜ್ ನ ಗೇಟ್ ಉತ್ತರ ಅಥವಾ ಪೂರ್ವ ದಿಕ್ಕಿನತ್ತ ಇರಬೇಕು. ಇದು ಮುಖ್ಯದ್ವಾರಕ್ಕಿಂತಲೂ ಕಡಿಮೆ ಎತ್ತರವಾಗಿರಬೇಕು. ಅಲ್ಲದೆ ಯಾವುದೇ ಅಡೆತಡೆಗಳಿಲ್ಲದೆ ತೆರೆಯಬೇಕು.

ಕಾರು ಗ್ಯಾರೇಜ್ ಗೆ ಬಳಿ, ಹಳದಿ ಮತ್ತು ಇತರೆ ಯಾವುದೇ ತಿಳಿ ಬಣ್ಣಗಳು ಹೆಚ್ಚು ಸೂಕ್ತವೆನಿಸುವುದು. ಯಾವುದೇ ತ್ಯಾಜ್ಯ ಅಥವಾ ಬೆಂಕಿಗೆ ಬೇಗನೇ ಹೊತ್ತಿಕೊಳ್ಳುವ ವಸ್ತುಗಳನ್ನು ಗ್ಯಾರೇಜ್ ನಲ್ಲಿಡದಿರಲು ಎಚ್ಚರವಹಿಸಬೇಕು.

ಗ್ಯಾರೇಜ್ ಮುಂಭಾಗದಲ್ಲಿ ಕಾರು ಚಲನೆಗಾಗಿ ಮುಕ್ತವಾಗಿರಬೇಕು. ಕಾರು ಪಾರ್ಕಿಂಗ್ ಬೇಕಾದಷ್ಟು ಜಾಗವಿಲ್ಲದಿದ್ದಲ್ಲಿ ಮುಂಭಾಗದಲ್ಲಿ ಮುಖಮಂಟಪವನ್ನು ಕಟ್ಟಿಸಿಕೊಳ್ಳಬಹುದು. ಇದು ಸಹ ಮುಖ್ಯ ಕಟ್ಟಡಕ್ಕೆ ತಾಗಿಕೊಂಡಿರಬಾರದು.

ಉತ್ತರ ದಿಕ್ಕಿನತ್ತ ಮುಖ ಮಾಡಿ ಕಾರು ಪಾರ್ಕ್ ಮಾಡುವುದು ಉದ್ಯಮಿಗಳಿಗೆ ಶುಭದಾಯಕವಾದರೆ ಪೂರ್ಣ ದಿಕ್ಕಿನತ್ತ ರಾಜಕಾರಣಿಗಳು ಮತ್ತು ಆಡಳಿತಗಾರರಿಗೆ ಮಂಗಳಕರವಾಗಲಿದೆ.

ನೀರು ಸಂಗ್ರಹ ಮಾಡಿರುವ ಗುಂಡಿಯ ಮೇಲ್ಗಡೆಯಲ್ಲಿ ಕಾರು ಪಾರ್ಕಿಂಗ್ ಮಾಡಬಾರದು. ಯಾಕೆಂದರೆ ನೀರು ಜೀವನವಾಗಿದ್ದು, ಕಾರು ಮೇಲ್ಗಡೆ ಪಾರ್ಕ್ ಮಾಡುವುದರಿಂದ ಧೂಳಿನ ಕಣಗಳು ನೀರಿಗೆ ಬಿದ್ದು ಕಲುಷಿತಗೊಳ್ಳುವ ಸಾಧ್ಯತೆಯಿದೆ.

21ನೇ ಶತಮಾನದಲ್ಲಿ ವಾಹನಗಳಿಗೆ ಬೇಡಿಕೆ ಹೆಚ್ಚಿದಂತೆ ನಗರ ಪ್ರದೇಶದಲ್ಲಂತೂ ವಾಹನ ನಿಲುಗಡೆ ಮಾಡಲು ಜಾಗವೇ ಇಲ್ಲ. ಹಾಗಿರುವಾಗ ವಾಸ್ತು ಶಾಸ್ತ್ರ ನಿಯಮವನ್ನು ಪಾಲಿಸುವುದು ಕಷ್ಟಸಾಧ್ಯವಾಗಿದೆ.

ನಿಮ್ಮ ಜನ್ಮ ರಾಶಿಗೆ ತಕ್ಕ ಕಾರು ಯಾವುದು ?


Click it and Unblock the Notifications








