ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?

ಹೊಸ ಬಗೆಯ ತಂತ್ರಜ್ಞಾನಗಳಿಂದ ಜಗತ್ತು ಭಾರೀ ವೇಗದಲ್ಲಿ ಮುನ್ನುಗುತ್ತಿದ್ದು, ನಮ್ಮ ಭಾರತವು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿದೆ. ಅದಕ್ಕೆ ಬೇಕಾಗಿರುವ ಸಾರಿಗೆ ಮೂಲಸೌಕರ್ಯವು ಬಹಳಷ್ಟು ಸುಧಾರಿಸಿದ್ದು, ಪೆಟ್ರೋಲ್, ಡೀಸೆಲ್ ಹಾಗೂ ಎಲೆಕ್ಟ್ರಿಕ್ ಸೇರಿದಂತೆ ಹಲವು ನೂತನ ವಾಹನಗಳು ರಸ್ತೆಗಿಳಿಯುತ್ತಿವೆ. ಸದ್ಯ ಇಂತಹದ್ದೇ ವಾಹನದ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿದೆ.

ಅಷ್ಟಕ್ಕೂ ಹೊಸ ರೀತಿಯ ವಾಹನ ಕಾಣಿಸಿಕೊಂಡಿರುವುದು ಬೇರೆ ಯಾವುದೋ ರಾಜ್ಯದಲ್ಲ. ಅದು ನಮ್ಮ ಕರ್ನಾಟಕದಲ್ಲಿಯೇ.. ರಾಜಧಾನಿ ಬೆಂಗಳೂರಿನ ಜೆಪಿ ನಗರದಲ್ಲಿ ಈ ವಾಹನ ಓಡಾಡಿರುವ ದೃಶ್ಯಗಳು ಸೆರೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದಂತೆ ಹಲವು ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದು, ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಇಂತಹ ವಾಹನಗಳು ದೇಶದಲ್ಲಿ ಕಂಡು ಬರುವುದು ತೀರಾ ವಿರಳ ಎಂದು ಹೇಳಬಹುದು. ಇದು ಮೂರು ವೀಲ್ ಹೊಂದಿರುವ ಪೆಟ್ಟಿಗೆ ಆಕಾರದ ಪುಟ್ಟ ವಾಹನವಾಗಿದೆ. ಒಬ್ಬರು ಕುಳಿತುಕೊಂಡು ಪ್ರಯಾಣಿಸಬಹುದಾಗಿದ್ದು, ನೋಡುಗರನ್ನು ಸೆಳೆದಿದೆ.

ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಈ ವಾಹನದ ಬಗ್ಗೆ ಹೆಚ್ಚಿನ ಮಾಹಿತಿ ದೊರೆತ್ತಿಲ್ಲ. ಆದರೆ ವಿಭಿನ್ನವಾಗಿದ್ದು, ಮುಂಭಾಗ ಎರಡು ಹಾಗೂ ಹಿಂಭಾಗ ಒಂದು ವೀಲ್ ಹೊಂದಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ರೇವಂತ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಇದರ ಫೋಟೋ ಹಾಗೂ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ವಾಹನ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಒಂದು ಕ್ಷಣ, ಇತರೆ ವಾಹನ ಸವಾರರನ್ನು ತನ್ನತ್ತ ಆಕರ್ಷಿಸಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ.

'ವೆಲೊಮೊಬೈಲ್ ವೆಹಿಕಲ್' ಎಂಬ ಹೆಸರಿಂದ ಕರೆಯುವ ಈ ವಾಹನಗಳನ್ನು ನಮ್ಮ ದೇಶದಲ್ಲಿ ಬಳಕೆ ಮಾಡುವುದಿಲ್ಲ. ಆದರೆ, ಐರೋಪ್ಯ ದೇಶವಾದ ನೆದರ್‌ಲ್ಯಾಂಡ್‌ನಲ್ಲಿ ಇವುಗಳು ಬಳಕೆಯಲ್ಲಿವೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ರಾಜಧಾನಿಯಲ್ಲಿ ಕಾಣಿಸಿಕೊಂಡ ಈ ವಾಹನವನ್ನು ಸವಾರನು ನೆದರ್‌ಲ್ಯಾಂಡ್‌ನಿಂದ ಆಮದು ಮಾಡಿಕೊಂಡಿರಬಹುದು ಎಂದು ಸದ್ಯ ಹೇಳಲಾಗಿದೆ. ಇದು ಕೇವಲ ಒಂದು ಆಸನವನ್ನು ಹೊಂದಿದ್ದು, ಒಬ್ಬರು ಸುಲಭವಾಗಿ ಪ್ರಯಾಣಿಸಬಹುದು. ಸಾಕಷ್ಟು ಸಂಚಾರ ದಟ್ಟಣೆಯಿರುವ ಬೆಂಗಳೂರಿಗೆ ಇದು ಅಡ್ಜಸ್ಟ್ ಆಗಬಹುದು.

ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?

ವೈರಲ್ ಆಗಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿರುವ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. 'ನಾನು ಧನ್ಯ.. ಭಾರತದಲ್ಲಿ ಎಂದಿಗೂ ಇಂತಹ ವಾಹನವನ್ನು ನೋಡುತ್ತೇನೆ ಎಂದು ಯೋಚಿಸಲಿಲ್ಲ' ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದರೆ, ಮತ್ತೊಬ್ಬ, 'ಈ ಮಾನವ ಚಾಲಿತ ಸೈಕಲ್.. ಬೆಂಗಳೂರಿನಲ್ಲಿ ನೋಡಲು ಸಂತೋಷವಾಗಿದೆ. ಇದರಲ್ಲಿ ಸಂಚರಿಸುವುದು ತುಂಬಾ ಸುರಕ್ಷಿತ' ಎಂದು ಹೇಳಿದ್ದಾರೆ. ಕೆಲವರಿಗೆ ಈ ವಾಹನವು ಎಲ್ಲಿಲ್ಲದ ರೀತಿಯಲ್ಲಿ ಇಷ್ಟವಾಗಿದ್ದು, ಅದರ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ಪೋಸ್ಟ್ ಮಾಡುತ್ತಿದ್ದಾರೆ.

ಇದಕ್ಕೆ ನಕಾರಾತ್ಮಕ ಪ್ರತಿಕ್ರಿಯೆಗಳೇನೂ ಹೊರತಾಗಿಲ್ಲ. ಅನೇಕರು ಟೀಕಿಸಿದ್ದಾರೆ. 'ಇದು ಸುರಕ್ಷಿತ ಸಂಚಾರಕ್ಕೆ ಅಷ್ಟೊಂದು ಯೋಗ್ಯವಲ್ಲ. ಜೊತೆಗೆ ನಮ್ಮ ಭಾರತದಂತಹ ರಸ್ತೆಗಳಿಗೆ ಸೂಕ್ತವೇ ಅಲ್ಲ' ಎಂದು ಹೇಳಿದ್ದಾರೆ. ಮತ್ತೆ ಕೆಲವರು ಇದಕ್ಕೇ 'ನಂಬರ್ ಪ್ಲೇಟ್ ಬೇಡವಾ ಗುರೂ...' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಾಹನವನ್ನು ನೋಡಿ, ಬಹುತೇಕ ಖುಷಿಪಟ್ಟರೆ, ಕೆಲವರು ಸಂಚಾರ ದಟ್ಟಣೆ ಇರುವಂತಹ ಕಡೆ ಇದರಲ್ಲಿ ಪ್ರಯಾಣಿಸುವುದು ತುಂಬಾ ಅಪಾಯಕಾರಿ ಎಂದು ಹೇಳುತ್ತಿದ್ದಾರೆ.

ಭಾರತದಲ್ಲಿ ಇಂತಹ ವಾಹನಗಳ ಬಳಕೆಗೆ ಸೂಕ್ತವಾದ ರಸ್ತೆಗಳಿಲ್ಲ. ಇದರಿಂದಾಗಿ ನಮ್ಮ ದೇಶದಲ್ಲಿ ಈ ವಾಹನಗಳ ಉಪಯೋಗ ತುಂಬಾ ಕಡಿಮೆ. ಆದರೂ ನೆದರ್‌ಲ್ಯಾಂಡ್‌ನಲ್ಲಿ ಜನರು ಈ ರೀತಿಯ ವಾಹನಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ, ಈ ಹೊಸ ವಾಹನವನ್ನು ವೀಡಿಯೋದಲ್ಲಿ ಕಂಡಿರುವ ಕೆಲವು ನೆಟ್ಟಿಗರು ಮುಂದೊಂದು ದಿನ ಖಂಡಿತ ಇಂತಹ ವಾಹನಗಳಲ್ಲಿ ಸಂಚರಿಸುವುದು ಪಕ್ಕಾ ಎಂದು ಹೇಳಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?

'ವೆಲೊಮೊಬೈಲ್ ವೆಹಿಕಲ್' ನಮಗೆ ಹೊಸದಾಗಿ ಕಂಡಿರಬಹುದು. ಆದರೆ, ಚಾರ್ಲ್ಸ್ ಮೊಚೆಟ್ ಎಂಬ ವಿಜ್ಞಾನಿಯು ಇದನ್ನು 1930ರಲ್ಲಿಯೇ ಆವಿಷ್ಕಾರಿಸಿದ್ದನು. ಬೈಸಿಕಲ್ ಕಾರ್ ಎಂದು ಕೂಡ ಕರೆಯಬಹುದು. ಮಾನವ ಹಾಗೂ ವಿದ್ಯುತ್ ಶಕ್ತಿಯಿಂದ ಚಲಿಸುವ ವಾಹನವಾಗಿದ್ದು, ಐರೋಪ್ಯ ದೇಶಗಳಲ್ಲಿ ಹೆಚ್ಚಿನ ಜನರು ಬಳಕೆ ಮಾಡುತ್ತಾರೆ. ಒಟ್ಟಾರೆಯಾಗಿ ಇವು ಕೊಂಚ ದೊಡ್ಡದಾಗಿ ಮಾರುಕಟ್ಟೆಗೆ ಬಂದರೆ, ಭಾರತದಂತಹ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸಲು ಸಾದ್ಯವಾಗಲಿದೆ. ಜೊತೆಗೆ ಹೊಸ ರೀತಿಯ ವಾಹನಗಳನ್ನು ಹುಡುಕುವ ಖರೀದಿದಾರರನ್ನು ಆಕರ್ಷಿಸಬಹುದು.

Most Read Articles

Kannada
English summary
Viral new vehicle appeared in bangalore details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X