Just In
- 21 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Movies
ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಿಢೀರನೇ ಹೆಚ್ಚಿದ ಬೇಡಿಕೆ, ಹೊಸ ನಂಬರ್ ಪ್ಲೇಟ್ ಪಡೆಯಲು ನಾಲ್ಕು ತಿಂಗಳು ಕಾಯುವುದು ಅನಿವಾರ್ಯ
ದೆಹಲಿಯಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಗಾಗಿ ಅರ್ಜಿ ಸಲ್ಲಿಸುವವರು ಹೊಸ ನಂಬರ್ ಪ್ಲೇಟ್ ಪಡೆಯಲು 4 ತಿಂಗಳು ಕಾಯಬೇಕಾಗುತ್ತದೆ. ದೆಹಲಿ ಸಾರಿಗೆ ಇಲಾಖೆಯ ಪ್ರಕಾರ, ಪ್ರತಿದಿನ ಹೊಸ ನಂಬರ್ ಪ್ಲೇಟ್‌ಗಾಗಿ ಸುಮಾರು 30,000 ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ.

ಈ ಪೈಕಿ ಪ್ರತಿದಿನ 10,000 ಹೊಸ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲಾಗುತ್ತಿದೆ. ಹೆಚ್‌ಎಸ್‌ಆರ್‌ಪಿಗಾಗಿ ಅರ್ಜಿ ಸ್ವೀಕರಿಸುತ್ತಿರುವ ರೋಸ್‌ಮೆತ್ರಾ ಕಂಪನಿಯು ಹೊಸ ನಂಬರ್ ಪ್ಲೇಟ್‌ಗಳನ್ನು ಪಡೆಯಲು ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದೆ. ನಂಬರ್ ಪ್ಲೇಟ್ ಬುಕ್ಕಿಂಗ್ ಮಾಡಿದ ನಂತರ ಪಡೆಯುವ ಸ್ಲಿಪ್ 15 ದಿನಗಳವರೆಗೆ ಮಾನ್ಯವಾಗಿರುತ್ತದೆ.

ಈ ಅವಧಿಯಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಈ ಸ್ಲಿಪ್ ತೋರಿಸಿದರೆ ಪೊಲೀಸರು ವಾಹನ ಸವಾರರಿಗೆ ದಂಡ ವಿಧಿಸುವಂತಿಲ್ಲ. ನಂಬರ್ ಪ್ಲೇಟ್‌ಗಳಿಗಾಗಿ ಕಾಯುತ್ತಿರುವವರು ದಂಡದಿಂದ ಪಾರಾಗಲು ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹಳೆಯ ಸಂಖ್ಯೆಯನ್ನು ಹೊಂದಿರುವ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳು ಲಭ್ಯವಿಲ್ಲದಿರುವ ಕಾರಣಕ್ಕೆ ಹೊಸ ನಂಬರ್ ಪ್ಲೇಟ್ ನೋಂದಣಿಯನ್ನು ನಿಲ್ಲಿಸಿದ ಕೆಲವು ಘಟನೆಗಳು ವರದಿಯಾಗಿವೆ.

ದೆಹಲಿ ಸಾರಿಗೆ ಇಲಾಖೆಯಲ್ಲಿ ಹಲವು ಹಳೆಯ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳಿಲ್ಲ. ಇದರಿಂದ ಸಮಸ್ಯೆ ಉಂಟಾಗುತ್ತಿದೆ. ಅಂತಹ ವಾಹನಗಳು ಸಾರಿಗೆ ಪೋರ್ಟಲ್‌ನ ವಾಹನ್ 4 ಪೋರ್ಟಲ್‌ನಲ್ಲಿ ವಾಹನಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಪ್ ಡೇಟ್ ಮಾಡಬೇಕಾಗುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಾರಿಗೆ ಇಲಾಖೆಯು ಹೆಚ್‌ಎಸ್‌ಆರ್‌ಪಿಯನ್ನು ತಮ್ಮ ವಾಹನಗಳಲ್ಲಿ ಅಳವಡಿಸಿಕೊಳ್ಳುವಂತೆ ಜನರಿಗೆ ಮನವಿ ಮಾಡುತ್ತಿದೆ. ಹೆಚ್‌ಎಸ್‌ಆರ್‌ಪಿ ಹೊಂದಿಲ್ಲದ ವಾಹನಗಳ ಮೇಲೆ ದೆಹಲಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದು, ಮೊದಲ ದಿನವೇ ಹೆಚ್‌ಎಸ್‌ಆರ್‌ಪಿ ಹೊಂದಿಲ್ಲದ 239 ವಾಹನಗಳಿಗೆ ದಂಡ ವಿಧಿಸಿದ್ದಾರೆ.

ದೆಹಲಿ ಪೊಲೀಸರು ಮಂಗಳವಾರ ರಚಿಸಿರುವ ತಂಡವು ಹೆಚ್‌ಎಸ್‌ಆರ್‌ಪಿ ಇಲ್ಲದೇ ಚಲಿಸುತ್ತಿರುವ ವಾಹನಗಳ ತಪಾಸಣೆ ನಡೆಸಿ ದಂಡ ವಿಧಿಸಿದೆ. ವಜೀರ್‌ಪುರ, ಸಾಕೇತ್, ಶಾಸ್ತ್ರಿ ಪಾರ್ಕ್, ಅಕ್ಷರ್ಧಮ್, ದೆಹಲಿ ಕೋರ್ಟ್, ದ್ವಾರಕಾ ಹಾಗೂ ದೆಹಲಿಯ ಇನ್ನಿತರ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿದ ವಾಹನಗಳಿಗೆ ರೂ.5,500 ದಂಡ ವಿಧಿಸಲಾಗಿದೆ ಎಂದು ದೆಹಲಿ ಸಾರಿಗೆ ಆಯುಕ್ತರು ತಿಳಿಸಿದ್ದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಅಭಿಯಾನದಲ್ಲಿ ಹೊಸ ನಂಬರ್ ಪ್ಲೇಟ್‌ಗಳಿಗೆ ಅರ್ಜಿ ಸಲ್ಲಿಸಿದ ವಾಹನಗಳಿಗೆ ದಂಡ ವಿಧಿಸಲಾಗಿಲ್ಲ. ಅಂತಹ ವಾಹನ ಮಾಲೀಕರು ನಂಬರ್ ಪ್ಲೇಟ್‌ಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಿದ ನಂತರ ದಂಡ ವಿಧಿಸದೇ ಬಿಡಲಾಗುತ್ತಿದೆ.

ಈ ಕಾರ್ಯಾಚರಣೆಯನ್ನು ಸದ್ಯಕ್ಕೆ ನಾಲ್ಕು ಚಕ್ರ ವಾಹನಗಳ ವಿರುದ್ಧ ಮಾತ್ರ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಈ ನಿಯಮವನ್ನು ಎಲ್ಲಾ ವಾಹನಗಳಿಗೂ ಜಾರಿಗೆ ತರಲಾಗುವುದು ಎಂದು ಸಾರಿಗೆ ಆಯುಕ್ತರು ತಿಳಿಸಿದ್ದಾರೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, 2019ರ ಏಪ್ರಿಲ್ 1ಕ್ಕೂ ಮುನ್ನ ಖರೀದಿಸಿದ ವಾಹನಗಳು ಹೆಚ್‌ಎಸ್‌ಆರ್‌ಪಿಯನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಾದ ನಂತರ ಖರೀದಿಸಿದ ವಾಹನಗಳು ಹೆಚ್‌ಎಸ್‌ಆರ್‌ಪಿನೊಂದಿಗೆ ಬರುತ್ತಿವೆ.

ಹೆಚ್‌ಎಸ್‌ಆರ್‌ಪಿ ಸಾಮಾನ್ಯ ನಂಬರ್ ಪ್ಲೇಟ್ ನಂತೆಯೇ ಕಂಡು ಬಂದರೂ ವಿಭಿನ್ನ ತಾಂತ್ರಿಕ ಲಕ್ಷಣಗಳನ್ನು ಹೊಂದಿದೆ. ಹೆಚ್‌ಎಸ್‌ಆರ್‌ಪಿಯಲ್ಲಿ ಹೊಲೊಗ್ರಾಮ್ ಸ್ಟಿಕ್ಕರ್ ವಾಹನದ ರಿಜಿಸ್ಟ್ರೇಷನ್ ನಂಬರ್, ಎಂಜಿನ್ ನಂಬರ್, ಚಾಸಿಸ್ ನಂಬರ್'ಗಳನ್ನು ಹೊಂದಿರುತ್ತದೆ.