ಕಳಪೆ ಹೆಲ್ಮೆಟ್ ಧರಿಸುವ ಸವಾರರೇ ಈ ಪೊಲೀಸಪ್ಪ ಮಾಡಿದ್ದೇನು ನೋಡಿ..!

ಪ್ರಪಂಚದಲ್ಲಿ ಹೆಚ್ಚು ಪ್ರಮಾಣದ ಅಪಘಾತವಾಗುವ ದೇಶಗಳಲ್ಲಿ ಭಾರತವೂ ಸಹ ಒಂದು. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಚಲಾಯಿಸುವುದು ಇದಕ್ಕೆ ಮುಖ್ಯ ಕಾರಣ.

ಕಳಪೆ ಹೆಲ್ಮೆಟ್ ಧರಿಸುವ ಸವಾರರೇ ಈ ಪೊಲೀಸಪ್ಪ ಮಾಡಿದ್ದೇನು ನೋಡಿ..!

ಭಾರತದಲ್ಲಿ ಪ್ರತಿದಿನವೂ ಲಕ್ಷಾಂತರ ಸಂಖ್ಯೆಯಲ್ಲಿ ಹೊಸ ವಾಹನಗಳು ರಸ್ತೆಗಿಳಿಯುತ್ತವೆ. ಇದೂ ಸಹ ರಸ್ತೆ ಅಪಘಾತಕ್ಕೆ ಕಾರಣವಾಗುವ ಅಂಶಗಳಲ್ಲಿ ಒಂದು. ಇದರ ಜೊತೆಗೆ ಕುಡಿದು ವಾಹನ ಚಲಾಯಿಸುವವರೂ ಸಹ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ.

ಕಳಪೆ ಹೆಲ್ಮೆಟ್ ಧರಿಸುವ ಸವಾರರೇ ಈ ಪೊಲೀಸಪ್ಪ ಮಾಡಿದ್ದೇನು ನೋಡಿ..!

ಇವುಗಳಿಗೆ ಕಡಿವಾಣ ಹಾಕುವ ಕಾರಣಕ್ಕೆ ಕಳೆದ ಸೆಪ್ಟೆಂಬರ್‍‍ನಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಹೊಸ ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಯಿತು.

ಕಳಪೆ ಹೆಲ್ಮೆಟ್ ಧರಿಸುವ ಸವಾರರೇ ಈ ಪೊಲೀಸಪ್ಪ ಮಾಡಿದ್ದೇನು ನೋಡಿ..!

ಕೆಲವರು ಭಾರೀ ಪ್ರಮಾಣದ ದಂಡ ವಿಧಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದರು. ಹಲ್ಲೆ ನಡೆಸಿದವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಕೆಲವು ಕಡೆಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ಲಕ್ಷಕ್ಕೂ ಹೆಚ್ಚು ದಂಡ ವಿಧಿಸಲಾಯಿತು.

ಕಳಪೆ ಹೆಲ್ಮೆಟ್ ಧರಿಸುವ ಸವಾರರೇ ಈ ಪೊಲೀಸಪ್ಪ ಮಾಡಿದ್ದೇನು ನೋಡಿ..!

ಕೆಲವರು ಈ ದಂಡವನ್ನು ಬೆಂಬಲಿಸಿದರೆ, ಹಲವರು ಈ ಭಾರೀ ಪ್ರಮಾಣದ ದಂಡವನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಿದರು. ಭಾರೀ ಪ್ರಮಾಣದ ದಂಡಕ್ಕೆ ಹೆದರಿ ಜನರು ನಿಯಮಗಳನ್ನು ಉಲ್ಲಂಘಿಸುವುದನ್ನು ಕಡಿಮೆ ಮಾಡಿದರು. ಇದರ ಜೊತೆಗೆ ವಾಹನಗಳ ಮೇಲೆ ಜಾತಿಗಳ ಹೆಸರುಗಳನ್ನು ಬರೆದವರಿಗೂ ದಂಡ ವಿಧಿಸಲಾಯಿತು.

ಕಳಪೆ ಹೆಲ್ಮೆಟ್ ಧರಿಸುವ ಸವಾರರೇ ಈ ಪೊಲೀಸಪ್ಪ ಮಾಡಿದ್ದೇನು ನೋಡಿ..!

ಸಂಚಾರಿ ನಿಯಮಗಳನ್ನು ಪಾಲಿಸುವ ಹೆಸರಿನಲ್ಲಿ ಪೊಲೀಸರು ಹಲವು ವಾಹನ ಸವಾರರ ಮೇಲೆ ಹಲ್ಲೆ ನಡೆಸಿರುವ ಘಟನೆಗಳೂ ಸಹ ವರದಿಯಾಗಿವೆ. ಪೊಲೀಸರ ಈ ವರ್ತನೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಕಳಪೆ ಹೆಲ್ಮೆಟ್ ಧರಿಸುವ ಸವಾರರೇ ಈ ಪೊಲೀಸಪ್ಪ ಮಾಡಿದ್ದೇನು ನೋಡಿ..!

ಇದರ ಜೊತೆಗೆ ಗುಣಮಟ್ಟದ ಹೆಲ್ಮೆಟ್ ಧರಿಸದ ಹಾಗೂ ಅರ್ಧ ಹೆಲ್ಮೆಟ್ ಧರಿಸುವ ಸವಾರರಿಗೂ ದಂಡ ವಿಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೂ ಸಾರ್ವಜನಿಕರು ಇದಕ್ಕೆ ಕ್ಯಾರೇ ಎನ್ನದೇ ಕಳಪೆ ಗುಣಮಟ್ಟದ ಹಾಗೂ ಅರ್ಧ ಹೆಲ್ಮೆಟ್‍‍ಗಳನ್ನು ಈಗಲೂ ವಾಹನ ಸವಾರಿ ವೇಳೆಯಲ್ಲಿ ಬಳಸುತ್ತಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಳಪೆ ಹೆಲ್ಮೆಟ್ ಧರಿಸುವ ಸವಾರರೇ ಈ ಪೊಲೀಸಪ್ಪ ಮಾಡಿದ್ದೇನು ನೋಡಿ..!

ಕೆಲವರು ಕಾಟಾಚಾರಕ್ಕೆ ಎಂಬಂತೆ ಟೋಪಿಯ ರೀತಿಯಲ್ಲಿರುವ ಹೆಲ್ಮೆಟ್‍‍ಗಳನ್ನು ಕೈಯಲ್ಲಿಡಿದು ವಾಹನ ಚಲಾಯಿಸುತ್ತಾರೆ. ಪೊಲೀಸರನ್ನು ಕಂಡ ತಕ್ಷಣ ಅವುಗಳನ್ನು ತಲೆಯ ಮೇಲೆ ಇಟ್ಟುಕೊಳ್ಳುತ್ತಾರೆ. ಈಗ ಈ ರೀತಿಯ ಹೆಲ್ಮೆಟ್‍‍ಗಳನ್ನು ಧರಿಸಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಕಳಪೆ ಹೆಲ್ಮೆಟ್ ಧರಿಸುವ ಸವಾರರೇ ಈ ಪೊಲೀಸಪ್ಪ ಮಾಡಿದ್ದೇನು ನೋಡಿ..!

ಸಂಚಾರಿ ಪೊಲೀಸರು ಕಳಪೆ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕಾರ್ಯಾಚರಣೆಯ ವೀಡಿಯೊವೊಂದು ವೈರಲ್ ಆಗಿದೆ. ಆ ವೀಡಿಯೊದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರೊಬ್ಬರು ಕಳಪೆ ಹೆಲ್ಮೆಟ್‍‍ಗಳನ್ನು ಕಳಚಿ ತೆಂಗಿನಕಾಯಿ ಒಡೆಯುವಂತೆ ಹೊಡೆದು ಹಾಕುತ್ತಾರೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಕಳಪೆ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಆ ಪೊಲೀಸ್ ಅಧಿಕಾರಿ ಯಾವ ಮಟ್ಟಿಗೆ ರೋಸಿ ಹೋಗಿದ್ದರೆಂದರೆ ಆ ದಾರಿಯಲ್ಲಿ ಅರ್ಧ ಹೆಲ್ಮೆಟ್ ಧರಿಸಿ ಬರುವ ಪ್ರತಿಯೊಬ್ಬ ಸವಾರನ ತಲೆಯ ಮೇಲಿರುವ ಹೆಲ್ಮೆಟ್ ಅನ್ನು ಬಲವಂತವಾಗಿ ತೆಗೆದು ಹೊಡೆದು ಹಾಕುತ್ತಾರೆ.

ಕಳಪೆ ಹೆಲ್ಮೆಟ್ ಧರಿಸುವ ಸವಾರರೇ ಈ ಪೊಲೀಸಪ್ಪ ಮಾಡಿದ್ದೇನು ನೋಡಿ..!

ಬೇರೆ ವಾಹನಗಳಲ್ಲಿ ಸಂಚರಿಸುವವರಿಗಿಂತ ದ್ವಿಚಕ್ರವಾಹನಗಳಲ್ಲಿ ಸಂಚರಿಸುವವರ ತಲೆಗೆ ಹೆಚ್ಚು ಪೆಟ್ಟು ಬೀಳುತ್ತದೆ. ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್‍‍ನಿಂದ ಜೀವ ಉಳಿಯಲಿ ಎಂಬ ಕಾರಣಕ್ಕಾಗಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಅದರಲ್ಲೂ ಗುಣಮಟ್ಟದ ಹೆಲ್ಮೆಟ್‍‍ಗಳನ್ನು ಧರಿಸುವುದು ಹೆಚ್ಚು ಸುರಕ್ಷಿತ.

Article Published On: Thursday, November 14, 2019, 14:10 [IST]
English summary
Wearing half face helmet will now be a trouble - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+