ಬೆಂಗಳೂರಿನಲ್ಲಿ ಏಳು ವರ್ಷದ ಹುಡುಗಿಯ ಬಲಿ ಪಡೆದ ಯುವಕನ ಬೈಕ್ ಸ್ಟಂಟ್!
ಬೆಂಗಳೂರಿನ ಚಿಕ್ಕಜಾಲದಲ್ಲಿ ಯುವಕನೊಬ್ಬನ ಬೈಕ್ ಸ್ಟಂಟ್ ಏಳು ವರ್ಷದ ಹುಡುಗಿಯ ಬಲಿ ಪಡೆದಿದೆ.
ಬೆಂಗಳೂರಿನ ಚಿಕ್ಕಜಾಲದಲ್ಲಿ ಯುವಕನೊಬ್ಬನ ಬೈಕ್ ಸ್ಟಂಟ್ ಏಳು ವರ್ಷದ ಹುಡುಗಿಯ ಬಲಿ ಪಡೆದಿದೆ. ದೀಪಾವಳಿಯ ಸಂಭ್ರಮದಲ್ಲಿದ್ದ ಕುಟುಂಬದಲ್ಲೀಗ ಕತ್ತಲು ಆವರಿಸಿದೆ.

ವರದಿಗಳ ಪ್ರಕಾರ ಏಳು ವರ್ಷದ ಸಹನ ತನ್ನ ಮನೆ ಆವರಣದಲ್ಲಿ ಪಟಾಕಿ ಸುಡುವುದನ್ನು ನೋಡುತ್ತಿರುವಾಗ ಈ ಅವಘಡ ಸಂಭವಿಸಿದೆ . ಬೆಂಗಳೂರಿನ ಹೊರವಲಯದ ಚಿಕ್ಕಜಾಲದಲ್ಲಿ ಯುವಕನೊಬ್ಬನ ಸ್ಟಂಟ್ ರೈಡಿಂಗ್ ಮುಗ್ಧ ಬಾಲಕಿಯ ಬಲಿ ಪಡೆದಿದೆ.

ಸ್ಟಂಟ್ ರೈಡಿಂಗ್ ಮಾಡುತ್ತಿದ್ದ ಯುವಕನನ್ನು ರಾಜು ಎಂದು ಗುರುತಿಸಲಾಗಿದೆ. ಆ ಯುವಕನು ಕಿರಿದಾದ ರಸ್ತೆಯಲ್ಲಿ ಅತಿ ವೇಗದಿಂದ ಬೈಕನ್ನು ಚೆಲಾಯಿಸುತ್ತಿದ್ದನು. ಆ ಸಮಯದಲ್ಲಿ ಯುವಕನು ವೀಲಿ ಸ್ಟಂಟ್ ಮಾಡಲು ಯತ್ನಿಸಿದಾಗ ಈ ಪ್ರಮಾದ ಸಂಭವಿಸಿದೆ.
Recommended Video


ಯುವಕನು ಬೈಕಿನಲ್ಲಿ ವೀಲಿ ಮಾಡಲು ಯತ್ನಿಸಿದಾಗ ನಿಯಂತ್ರಣ ಕಳೆದುಕೊಂಡು ಹುಡುಗಿಯ ಮೇಲೆ ಬಂದೆರಗಿದನು. ಅಕ್ಕಪಕ್ಕದವರುಕೂಡುವುದಕ್ಕಿಂತ ಮುಂಚೆ ಯುವಕನು ಬೈಕಿನಲ್ಲಿ ಪರಾರಿಯಾಗದ್ದಾನೆ.

ಗಂಭೀರವಾಗಿ ಗಾಯಗೊಂಡ ಸಹಾನಳನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀರ್ವ ಸ್ವರೂಪದ ಗಾಯಗಳಿಂದ ಸಹನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಅನಂತರ ಪೋಲೀಸರು ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೋಲೀಸರು ಯುವಕನ ವಯಸ್ಸನ್ನು ಪತ್ತೆಹಚ್ಚಲು ವೈದ್ಯಕೀಯ ಪರೀಕ್ಷೆ ಮಾಡುತಿದ್ದಾರೆ ಮತ್ತು ಆತನ ಶಾಲಾ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ ಸ್ಥಳೀಯರು ಆತನನ್ನು ಅಪ್ರಾಪ್ತ ವಯಸ್ಕನೆಂದು ಹೋಳುತ್ತಿದ್ದಾರೆ.

ರಸ್ತೆಯಲ್ಲಿ ವೇಗವಾಗಿ ಬೈಕ್ ಚೆಲಾಯಿಸುವುದು ಮತ್ತು ಸ್ಟಂಟ್ ಮಾಡುವುದು ಎಷ್ಟು ಅಪಾಯಕಾರಿ ಎಂದು ಈ ಘಟನೆಯಿಂದ ಸಾಬೀತಾಗಿದೆ. ನೀವು ಕೂಡಾ ಸ್ಟಂಟ್ ಪ್ರಿಯರಾಗಿದ್ದರೆ ಇಂಥಾ ಸಾಹಸವನ್ನು ರಸ್ತೆಗಳಲ್ಲಿ ಮಾಡಬೇಡಿ.
ಸ್ಟಂಟ್ ಮಾಡುವುದಕ್ಕೂ ಮುನ್ನ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲೇಬೇಕು. ಮತ್ತು ಪ್ರಮುಖವಾಗಿ ಇಂಥಾ ಸಾಹಸಗಳಿಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಬೇಕು. ಇದರ ಬದಲಾಗಿ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುವುದು ಕಾನೂನು ಬಾಹಿರ ಮತ್ತು ಇದರಿಂದ ಇತರರ ಪ್ರಾಣಕ್ಕೂ ಅಪಾಯ.

Trending On DriveSpark Kannada:
ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!
ನೀವು ನಂಬಲೇಬೇಕು! ಈ ಟಾಪ್ 10 ಬೈಕ್‌ಗಳು ಐಫೋನ್ 10 ಬೆಲೆಗಿಂತಲೂ ಅಗ್ಗ..!!
ಭೀಕರ ಅಪಘಾತದಲ್ಲಿ ಫಾರ್ಚೂನರ್ ಪುಡಿ ಪುಡಿ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!


Click it and Unblock the Notifications








